ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತನ್ನು ಕೇಳಿರುತ್ತೀರಿ. ಅಮ್ಮನ ಪ್ರೀತಿ ಸಿಕ್ಕಿದವರಿಗೆ ತಾಯಿಯ ಬೆಲೆ ಏನೆಂದು ಗೊತ್ತಿರುತ್ತದೆ. ಮಕ್ಕಳಿಗೆ ಏನೇ ಕಷ್ಟಬಂದರು ಆಕೆ ಸಹಿಸುವುದಿಲ್ಲ. ಅದನ್ನು ಮೆಟ್ಟಿ ನಿಲ್ಲುತ್ತಾಳೆ. ಗಂಡ, ಮಕ್ಕಳು ಯಾವುದೇ ತೊಂದರೆಯಲ್ಲಿದ್ದರೆ ಸಾಕು ತಾಯಿ ತನ್ನ ಎಲ್ಲಾ ಪ್ರಯತ್ನವನ್ನ ಪ್ರಯೋಗಿಸಿ ಸಂಕಷ್ಟದಿಂದ ಪಾರು ಮಾಡುತ್ತಾಳೆ. ಹಾಗಾಗಿ ತಾಯಿಯನ್ನು ದೇವರು ಎಂದು ಕರೆಯುವುದು. ಅದರಂತೆ ಇಲ್ಲೊಬ್ಬರು ತಾಯಿ ತನ್ನ ಮಗಳಿಗೆ ದೇವರಾಗಿದ್ದಾರೆ.
ಹೌದು. ತಾಯಿಯೊಬ್ಬಳು ಮಗಳ ಕಷ್ಟವನ್ನು ಅರಿತು ಆಕೆಗೆ ಮಗುವನ್ನು ಹೆತ್ತು ಕೊಟ್ಟಿದ್ದಾರೆ. ಅಂದರೆ ಅಜ್ಜಿ ಮೊಮ್ಮಗಳಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ವಿಚಿತ್ರ ಎನಿಸಿದರು ಬ್ರೆಜಿಲ್ನಲ್ಲಿ ಈ ಘಟನೆ ನಡೆದಿದೆ.
ದಕ್ಷಿಣ ಬ್ರೆಜಿಲ್ನ ಸಾಂತಾ ಕ್ಯಾಟರೀನಾ ರಾಜ್ಯದ ಫ್ಲೋರಿಯಾನೊಪೊಲಿಸ್ ನಗರದಲ್ಲಿ ವಾಸಿಸುವ 53 ವರ್ಷದ ಶಿಕ್ಷಕಿ ರೋಸಿಕ್ಲಿಯಾ ಡಿ ಅಬ್ರೆ ಕಾರ್ಲ್ಸೆಮ್ ಎಂಬಾಕೆ ಪುಟಾಣಿ ಮರಿಯಾ ಕ್ಲಾರಾ ಮಗುವಿಗೆ ಜನ್ಮ ನೀಡಿದ್ದಾರೆ.
ರೋಸಿಕ್ಲಿಯಾ ಡಿ ಅಬ್ರೆ ಕಾರ್ಲ್ಸೆಮ್ಗೆ 29 ವರ್ಷದ ಇನ್ಗ್ರಿಡ್ ಎಂಬ ಮಗಳಿದ್ದಾಳೆ. ಆಕೆಗೆ ಆರೋಗ್ಯ ಸಮಸ್ಯೆಯಿರುವ ಕಾರಣ ವೈದ್ಯರು ನೀವು ಗರ್ಭಾವ್ಯವಸ್ಥೆಗೆ ಒಳಗಾಗಬೇಡಿ ಎಂದು ಸಲಹೆ ನೀಡುತ್ತಾರೆ. ಇದರಿಂದ ಇನ್ಗ್ರಿಡ್ಗೆ ಗರ್ಭಿಣಿ ಆಗಲು ಆಸೆಯಿದ್ದರು. ಆಕೆಗೆ ಆರೋಗ್ಯ ದೃಷ್ಟಿಯಿಂದ ಸಾಧ್ಯವಾಗದ ಮಾತು. ಹೀಗಾಗಿ ಮಗಳ ಆಸೆಯನ್ನು ರೋಸಿಕ್ಲಿಯಾ ಡಿ ಅಬ್ರೆ ಕಾರ್ಲ್ಸೆಮ್ ಈಡೇರಿಸಿದ್ದಾರೆ. ಇನ್ಗ್ರಿಡ್ಗಾಗಿ ರೋಸಿಕ್ಲಿಯಾ ಡಿ ಅಬ್ರೆ ತಾಯಿಯಾಗಿ ಮೊಮ್ಮಳಿಗೆ ಜನ್ಮ ನೀಡುತ್ತಾರೆ.
![]()
ಮರಿಯಾ ಕ್ಲಾರಾ
ಇನ್ಗ್ರಿಡ್ಗೆ 2014ರಲ್ಲಿ ಎಂಬಾಲಿಸಮ್ ಮತ್ತು ರಕ್ತನಾಳದಲ್ಲಿ ಸಮಸ್ಯೆಯೊಂದು ಕಾಣಿಸಿಕೊಂಡಿತು. ಗರ್ಭಾವ್ಯವ ಸ್ಥೆಗೆ ಒಳಗಾಗದ ಇದರಿಂದ ತೊಂದರೆ ಆಗಬಹುದು ಎಂಬ ಕಾರಣಕ್ಕಾಗಿ. ಆಕೆಯ ತಾಯಿ ರೋಸಿಕ್ಲಿಯಾ ಡಿ ಅಬ್ರೆ ಕಾರ್ಲ್ಸೆಮ್ ಅವರು ಐವಿಏಫ್ ಮೂಲಕ ತಾನೇ ಗರ್ಭ ಧರಿಸಿ ಮೊಮ್ಮಗಳಿಗೆ ಜನ್ಮ ನೀಡಿದ್ದಾರೆ.
ಆಗಸ್ಟ್ 19 ರಂದು ಬೇಬಿ ಮಾರಿಯಾ ಕ್ಲಾರಾಗೆ ಅಜ್ಜಿ ಜನ್ಮ ನೀಡಿದ್ದು, ಹುಟ್ಟುವಾಗ ಮಗು 7.30 ಪೌಂಡ್ ತೂಕವಿತ್ತು. ಖಾಸಗಿ ಹೆರಿಗೆ ಆಸ್ಪತ್ರೆಯಲ್ಲಿ ಜನ್ಮ ನೀಡಿದರು ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ