ವಯಸ್ಸು ಕೇವಲ ಸಂಖ್ಯೆ ಎಂದು ವೃದ್ಧರ ವಿಚಾರದಲ್ಲಿ ಸಾಬೀತಾಗುತ್ತಲೇ ಇದೆ. ಏಕೆಂದರೆ ಅವರ ಜೀವನೋತ್ಸಾಹ, ಅವರು ಸಂಭ್ರಮಿಸುವ ರೀತಿ, ಅನುಭವ, ಪ್ರೀತಿ, ಮಕ್ಕಳೊಂದಿಗೆ ಮಕ್ಕಳಾಗುವ ಪರಿ ಹೀಗೆ ಒಂದಲ್ಲಾ ಒಂದು ಕಾರಣದಿಂದ ವೃದ್ಧರ ಜೊತೆಗಿನ ಒಡನಾಟ ಒಂದು ಗ್ರಂಥಕ್ಕೆ ಸಮ ಎಂದೇ ಭಾವಿಸಲಾಗುತ್ತದೆ.
ಅಜ್ಜಿಯೊಬ್ಬರು ನೇರವಾಗಿ ಚೆಂಡನ್ನು ಎಸೆದು ಎಲ್ಲಾ ಸ್ಟ್ರೈಕ್ಗಳನ್ನು ಹೊಡೆದುರುಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಜ್ಜಿಯ ಉತ್ಸಾಹಕ್ಕೆ ನೆಟ್ಟಿಗರು ಭೇಷ್ ಎಂದಿದ್ದು, ಅವರಿಗೆ ಮೆಚ್ಚುಗೆಯ ಮಳೆಯೇ ಸುರಿಯುತ್ತಿದೆ. ಅಜ್ಜಿ ಸ್ಟ್ರೈಕ್ ಉರುಳಿಸಿದ ವಿಡಿಯೋವನ್ನು ಸುದರ್ಶನ್ ಕೃಷ್ಣಮೂರ್ತಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಹಾಯ್ ಟ್ವಿಟರ್, ಸೀರೆ ಧರಿಸಿ ಸ್ಟ್ರೈಕ್ಗಳನ್ನು ಹೊಡೆದುರುಳಿಸಿದ ನಮ್ಮ ಅಜ್ಜಿಗೆ ಪ್ರಶಂಸೆಗಳಿರಲಿ. ಸ್ಟ್ರೈಕ್ ಉರುಳಿಸಿದ ಅಜ್ಜಿ ಮಾಸ್ಕ್ನ್ನು ತನ್ನ ಮೂಗಿಗೆ ಏರಿಸಿಕೊಂಡಿದ್ದಾರೆ.
Hi Twitter, please appreciate my grandma bowling a strike in her saree, and then proceeding to ensure her mask covers her nose#QueenShit, if you ask me! 👸🏽 pic.twitter.com/T3g4x5dpbk
— Sudarshan Krishnamurthy (@sudkrish) May 17, 2021
ಹಳದಿ ಬಣ್ಣದ ಸೀರೆ ಧರಿಸಿರುವ ಅಜ್ಜಿ, ಸುಮ್ಮನೇ ಸ್ಟ್ರೈಕ್ ಆಟದ ಮುಂದೆ ಬಂದು ನಿಂತು ಸಾವಧಾನದಿಂದ ನಿಧಾನವಾಗಿ ಸ್ಟ್ರೇಕ್ಗೆ ಎಸೆಯುತ್ತಾರೆ. ಅವರ ಗುರಿ ತಪ್ಪದೇ ಎಲ್ಲಾ ಸ್ಟ್ರೈಕ್ಗಳು ಉರುಳುತ್ತದೆ. ಇದನ್ನು ನೋಡಿದ ಅಜ್ಜಿ ನಗುತ್ತಲೇ ತಾನು ಗೆದ್ದಂತೆ ಎಂಬ ರೀತಿಯಲ್ಲಿ ಖುಷಿಯಿಂದ ಮೂಗಿನ ಮೇಲೆ ತನ್ನ ಮಾಸ್ಕ್ನ್ನು ಎಳೆದುಕೊಳ್ಳುತ್ತಾರೆ. ನಿಜವಾಗಿಯೂ ಈ ಅಜ್ಜಿಯ ಆಟ, ಅವರ ನಗು, ಚಟುವಟಿಕೆಯಿಂದ ಪಾಲ್ಗೊಂಡ ರೀತಿ ನೆಟ್ಟಿಗರನ್ನು ಸೆಳೆದಿದೆ.
ಸುದರ್ಶನ್ ಅವರ ಟ್ವೀಟ್ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದು, 41 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 9 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, 1,400ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ.
ಇನ್ನು ಅಲ್ಮಾಸ್ ಎಂಬುವವರು ಯಾವುದೇ ಮಕ್ಕಳಿಗೆ ಅಜ್ಜಿ ಯಾವಾಗಲೂ ಬಲು ಪ್ರಿಯರು. ನಿಜವಾಗಿಯೂ ಇವರು ಮತ್ತೊಬ್ಬರಿಗೆ ಮಾದರಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀವು ನಿಜವಾಗಿಯೂ ಒಂದು ದಂತಕಥೆ. ಇದು ನಿಜವಾದ ಪ್ರತಿಭೆ. ಪ್ರತಿಯೊಬ್ಬರು ಗೌರವಿಸಲೇ ಬೇಕು. ಇದು ಶಕ್ತಿ. ಸತ್ಯವಾಗಿಯೂ ಇವರು ರಾಣಿಯೇ, ಸೂಪರ್ ಅಜ್ಜಿ, ರಾಕ್ ಸ್ಟಾರ್, ಇದು ರಾಣಿಯ ಬಲ, ಈ ವಿಡಿಯೋ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ಅಜ್ಜಿ ಬೌಲಿಂಗ್ ರಂಗವೇ ಹುಬ್ಬೇರುವಂತೆ ಮಾಡಿದೆ. ಹೀಗೆ ನೂರಾರು ಕಮೆಂಟ್ಗಳು ಸಾಲುಸಾಲಾಗಿ ಹರಿದು ಬರುತ್ತಿದ್ದು, ಅವರ ಈ ಆಟ ನೆಟ್ಟಿಗರನ್ನು ಹುರಿದುಂಬಿಸುವುದರ ಜೊತೆಗೆ ಬದುಕು ಇರುವವರೆಗೆ ಉತ್ಸಾಹವೇ ಉಸಿರಾಗಲಿ ಎಂದು ತೋರಿಸಿಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ