Teacher: ಶಾಲೆಯಲ್ಲಿ ಪಾಠ ಮಾಡುವುದಷ್ಟೇ ಅಲ್ಲ, ಈ ಶಿಕ್ಷಕಿ ಮಾಡುವ ಕೆಲಸ ಎಂಥದ್ದು ನೋಡಿ

ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ, ಪ್ರಾಮಾಣಿಕವಾಗಿ ಮಕ್ಕಳ ಅಭಿವೃದ್ಧಿಗೆ ಕೆಲಸ ಮಾಡುವ , ಅವರ ಜೀವನ ಸುಧಾರಣೆಗಾಗಿ ತಮ್ಮ ಎಂದಿನ ಕರ್ತವ್ಯಕ್ಕೂ ಮೀರಿದ ಸೇವೆಗಳಲ್ಲಿ ತೊಡಗಿಕೊಂಡಿರುವ ಅಪರೂಪದ ಶಿಕ್ಷಕರ ಬಗ್ಗೆ ನಾವು ಆಗೊಮ್ಮೆ ಈಗೊಮ್ಮೆ ಕೇಳಿರುತ್ತೇವೆ. ಅಂತಹ ಶಿಕ್ಷಕರಲ್ಲಿ, ಪಾಟ್ನಾ ಜಿಲ್ಲೆಯ ಸಿಪಾರದ ಸರ್ಕಾರಿ ಶಾಲೆಯಲ್ಲಿ ಪರಿಸರ ಮತ್ತು ಸಾಮಾಜಿಕ ವಿಜ್ಞಾನ ಶಿಕ್ಷಕಿಯಾಗಿರುವ ನಮ್ರತಾ ಆನಂದ್ ಕೂಡ ಒಬ್ಬರು.

ಬೋಧನೆಯ ಕೆಲಸ ಮತ್ತು ಸಮಾಜ ಸೇವೆ ಮಾಡುವ ಶಿಕ್ಷಕಿ

ಬೋಧನೆಯ ಕೆಲಸ ಮತ್ತು ಸಮಾಜ ಸೇವೆ ಮಾಡುವ ಶಿಕ್ಷಕಿ

  • Share this:
ಬಿಹಾರ : ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ, ಪ್ರಾಮಾಣಿಕವಾಗಿ ಮಕ್ಕಳ ಅಭಿವೃದ್ಧಿಗೆ ಕೆಲಸ (Work) ಮಾಡುವ , ಅವರ ಜೀವನ ಸುಧಾರಣೆಗಾಗಿ ತಮ್ಮ ಎಂದಿನ ಕರ್ತವ್ಯಕ್ಕೂ ಮೀರಿದ ಸೇವೆಗಳಲ್ಲಿ ತೊಡಗಿಕೊಂಡಿರುವ ಅಪರೂಪದ ಶಿಕ್ಷಕರ (Teacher) ಬಗ್ಗೆ ನಾವು ಆಗೊಮ್ಮೆ ಈಗೊಮ್ಮೆ ಕೇಳಿರುತ್ತೇವೆ. ಅಂತಹ ಶಿಕ್ಷಕರಲ್ಲಿ, ಪಾಟ್ನಾ ಜಿಲ್ಲೆಯ ಸಿಪಾರದ ಸರ್ಕಾರಿ ಶಾಲೆಯಲ್ಲಿ (Government School) ಪರಿಸರ ಮತ್ತು ಸಾಮಾಜಿಕ ವಿಜ್ಞಾನ ಶಿಕ್ಷಕಿಯಾಗಿರುವ ನಮ್ರತಾ ಆನಂದ್ ಕೂಡ ಒಬ್ಬರು. ಅವರು ತಮ್ಮ ಇತರ ಸಹುದ್ಯೋಗಿಗಳಂತೆ ಶಾಲೆ ಮುಗಿಸಿಕೊಂಡು ನೇರವಾಗಿ ಮನೆಗೆ ಹೋಗುವುದಿಲ್ಲ. ಬದಲಿಗೆ, ತಮ್ಮ ಸಮಯವನ್ನು ತೃತೀಯ ಲಿಂಗಿ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಬಳಸುತ್ತಾರೆ. ಅವರು ನ್ಯಾಟ್ ಮತ್ತು ಇತರ ಕೆಳಜಾತಿಗಳ ಮಕ್ಕಳಿಗೆ (Children) ಪಾಠ ಹೇಳಿ ಕೊಡಲು, ಚಿತ್ಕೋಹ್ರಾ ಪ್ರದೇಶದ ಕೊಳಗೇರಿಗೆ ಹೋಗುತ್ತಾರೆ.

ಬೋಧನೆಯ ಕೆಲಸ ಮತ್ತು ಸಮಾಜ ಸೇವೆ ಮಾಡುವ ಶಿಕ್ಷಕಿ
ನಮ್ರತಾ ಅವರು ಸರಕಾರಿ ಕೆಲಸಕ್ಕೆ ಸೇರಿಕೊಂಡದ್ದು 2007ರಲ್ಲಿ. ಸರ್ಕಾರಿ ಕೆಲಸ ಸಿಕ್ಕರೂ, ಅವರು ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರೆಸಿದ್ದಾರೆ. “ಬೋಧನೆಯ ಕೆಲಸ ಮತ್ತು ಸಮಾಜ ಸೇವೆ ನನ್ನ ಪ್ಯಾಶನ್ ಆಗಿಬಿಟ್ಟಿದೆ.

ಬಡ ಕುಟುಂಬದಿಂದ ಬಂದಿರುವ ಮಕ್ಕಳಿಗೆ ಶಿಕ್ಷಣ ನೀಡಲು , ಕಮಲ ನೆಹರು ಶಾಲೆಯಲ್ಲಿ ಕೊಠಡಿ ನಿರ್ಮಿಸಲಾಗಿದೆ” ಎಂದು ಹೇಳುತ್ತಾರೆ ನಮ್ರತಾ. ಅವರು ಪಿಹೆಚ್‍ಡಿ ಪದವಿ ಪಡೆದಿದ್ದಾರೆ. ಇದೊಂದೇ ಅಲ್ಲ, ಅಗತ್ಯ ಇರುವ ಮಕ್ಕಳಿಗೆ ಶಿಕ್ಷಣ ನೀಡಲು ಇನ್ನೂ 4-5 ಇತರ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ ಎಂದು ಹೇಳುತ್ತಾರೆ ಅವರು.

ಸಮಾಜ ಸೇವಾ ಕಾರ್ಯಕ್ಕೆ ಭಾರತೀಯ ವಿಕಾಸ್ ಪರಿಷತ್ ಬೆಂಬಲ
ನಮ್ರತಾ ಅವರ ಈ ಸಮಾಜ ಸೇವಾ ಕಾರ್ಯಕ್ಕೆ ಭಾರತೀಯ ವಿಕಾಸ್ ಪರಿಷತ್ ಬೆಂಬಲವನ್ನು ನೀಡುತ್ತಿದೆ. ಅದರ ಸಹಯೋಗದೊಂದಿಗೆ, ವಿಕಲಾಂಗರಿಗೆ ಕ್ಯಾಲಿಪರ್‍ಗಳು, ಕೃತಕ ಕಾಲುಗಳು ಮತ್ತು ತ್ರಿಚಕ್ರ ವಾಹನಗಳನ್ನು ಒದಗಿಸಿದ್ದಾರೆ ನಮ್ರತಾ.

ಇದನ್ನೂ ಓದಿ : Veena-Vani Twins: ಅಪರೂಪದ ಸಾಧನೆ ಮಾಡಿದ ಹೈದ್ರಾಬಾದ್​​ನ ಸಯಾಮಿ ಅವಳಿ ಸೋದರಿಯರು

ಇದೇ ರೀತಿ, ಕೋವಿಡ್ -19 ಸಾಂಕ್ರಾಮಿಕದ ಸಮಸ್ಯೆ ಮಿತಿಮೀರಿದ್ದ ದಿನಗಳಲ್ಲಿ ತೃತೀಯ ಲಿಂಗೀಯರಿಗೆ ಉಚಿತ ಪಡಿತರವನ್ನು ಕೂಡ ಒದಗಿಸಿದ್ದಾರೆ. ಅವರುಗಳಿಗೆ ಚಳಿಗಾಲದಲ್ಲಿ ಹೊದಿಕೆಗಳನ್ನು ಕೂಡ ನೀಡಲಾಗುತ್ತದೆ ಎಂದು ತಾವು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ ಅವರು.

2020 ರಲ್ಲಿ ಸಂಸ್ಕಾರ ಶಾಲೆ ಸ್ಥಾಪನೆ
2020 ರಲ್ಲಿ ನಮ್ರತಾ ಅವರು, ಕುರ್ತೋಲ್‍ನ ಫುಲ್ಜಾರಿ ಗಾರ್ಡನ್‍ನಲ್ಲಿ ಸಂಸ್ಕಾರ ಶಾಲೆಯನ್ನು ಸ್ಥಾಪಿಸಿದ್ದಾರೆ. ಸಮಾಜ ಸೇವಕರಾದ ಮಿಥಿಲೇಶ್ ಸಿಂಗ್ ಅವರು ಈ ಸಂಸ್ಕಾರ ಶಾಲೆ ತೆರೆಯಲು ಜಾಗವನ್ನು ಒದಗಿಸಿದ್ದಾರೆ. ಅಲ್ಲಿ ಕೊಳಗೇರಿಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಅವರು ಸಂಗೀತ ಮತ್ತು ಹೊಲಿಗೆ ಹಾಗೂ ನೇಯ್ಗೆ, ಹಪ್ಪಳ ತಯಾರಿಕೆ, ಚಿತ್ರ ಕಲೆ ಹಾಗೂ ನೃತ್ಯ ತರಬೇತಿ ನೀಡುತ್ತಾರೆ.

ನಮ್ರತಾ ಅವರ ಈ ಕೆಲಸದ ಫಲಾನುಭವಿಗಳಾದ ಗುಡಿಯಾ ಮತ್ತು ಪ್ರೀತಿಯನ್ನು ಮಾತನಾಡಿಸಿದಾಗ, ತಾವು ಮಕ್ಕಳಿಗೆ ಬಟ್ಟೆ ಮತ್ತು ಸಮವಸ್ತ್ರ ಹೊಲಿದು ಕೊಡುವುದರಿಂದ ಸಿಗುವ ಆದಾಯದಿಂದ ತಮ್ಮ ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ಈ ಶಾಲೆಯಲ್ಲಿ ಕಲಿತು ವೃತ್ತಿಜೀವನ ರೂಪಿಸಿಕೊಂಡ ಜನ
ಈ ಶಾಲೆಯಲ್ಲಿ ತರಬೇತಿ ಪಡೆದ ಕೆಲವರು, ಕರಕುಶಲ ಕಲೆ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಸುಲೇಖಾ ಕುಮಾರಿ ಎಂಬವರು ಬ್ಯೂಟಿಶಿಯನ್ ಕೋರ್ಸ್ ಮಾಡಿಕೊಂಡಿದ್ದು, ಅಗತ್ಯ ತಕ್ಕಷ್ಟು ಆದಾಯ ಗಳಿಸುತ್ತಿದ್ದಾರೆ. ಅದೇ ರೀತಿ ರಾಧಾ ಮತ್ತು ಮಮತಾ ಕುಮಾರಿ ಅವರಿಗೆ ಸ್ಟೇಜ್ ಡಾನ್ಸ್ ಮತ್ತು ಮದುವೆ ಸಮಾರಂಭ ಹಾಗೂ ಸಾಂಸ್ಕøತಿಕ ಸಮಾರಂಭಗಳಲ್ಲಿ ನೃತ್ಯ ಮಾಡುವ ಅವಕಾಶಗಳು ಸಿಗುತ್ತಿವೆ. ಜನಪ್ರಿಯ ಗಿಟಾರ್ ವಾದಕ ಪ್ರವೀಣ್ ಕುಮಾರ್ ಬಾದಲ್ ಮಕ್ಕಳಿಗೆ ತರಬೇತಿ ನೀಡುತ್ತಾರೆ.

ಇದನ್ನೂ ಓದಿ: Viral Video: ಮೊದಲ ಬಾರಿಗೆ ಟಿವಿಯಲ್ಲಿ ಸೊಸೆಯನ್ನು ನೋಡಿ ಖುಷಿ ಪಟ್ಟ ಅತ್ತೆ-ಮಾವ! ಈಕೆಯ ಸಾಧನೆಗೆ ಹೇಗೆ ಹುರಿದುಂಬಿಸಿದ್ದಾರೆ ನೋಡಿ

ಜಿಲ್ಲಾ ನ್ಯಾಯಾಧೀಶರ ಪುತ್ರಿಯಾಗಿರುವ ನಮ್ರತಾ ಅವರು, ಶಾಲೆಗಳ ಸಂಯೋಜಕಿಯಾಗಿ ನೇಮಕಗೊಂಡಾಗ , ಬಹಳಷ್ಟು ವಿಷಯಗಳನ್ನು ಕಲಿತರು. 2014 ರಿಂದ 2018 ರ ನಡುವೆ ಅವರು 15 ಸರಕಾರಿ ಶಾಲೆಗಳಿಗೆ ಸೇರಿದ 2,500 ಮಕ್ಕಳ ಜೊತೆ ಕೆಲಸ ಮಾಡಿದ್ದಾರೆ. “ಅದು ನನ್ನ ವ್ಯವಸ್ಥಾಪಕ ಕೌಶಲವನ್ನು ಸುಧಾರಣೆ ಮಾಡಿಕೊಳ್ಳಲು ಸಹಾಯ ಮಾಡಿತು” ಎನ್ನುತ್ತಾರೆ ಅವರು. ದೀದಿ ಜೀ ಫೌಂಡೇಶನ್‍ನ ಬ್ಯಾನರ್ ಅಡಿಯಲ್ಲಿ, ಜಲ್ ಜೀವನ್ ಹರಿಯಾಲಿ ಮಿಶನ್ , ಭೇಟಿ ಪಡಾವೋ ಭೇಟಿ ಬಚಾವೋ , ಪರಿಸರ ಮತ್ತು ನೈರ್ಮಲ್ಯ ಅಭಿಯಾನಗಳು, ತಂಬಾಕು ವಿರೋಧಿ ಅಭಿಯಾನ ಮತ್ತು ಸಾಕ್ಷರತಾ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ.
Published by:Ashwini Prabhu
First published: