Farming: ನಗರ ಕೃಷಿ ಉತ್ತೇಜನಕ್ಕೆ Vertical Garden structure ವಿತರಿಸಿದ ಕೇರಳ ಸರ್ಕಾರ

ವರ್ಟಿಕಲ್ ಗಾರ್ಡನ್ ರಚನೆಯ ಬೆಲೆ 20,000 ರೂ. ಆರಂಭಿಕ ಹಂತದಲ್ಲಿ ರಾಜ್ಯ ತೋಟಗಾರಿಕ ಮಿಷನ್ ಶೇಕಡಾ 75ರಷ್ಟು ಸಹಾಯ ಧನ ನೀಡಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ (Kerala) ರಾಜ್ಯದಲ್ಲಿ ನಗರ ಕೃಷಿ ಉತ್ತೇಜಿಸುವ ಉದ್ದೇಶದಿಂದ, ಅಲ್ಲಿನ ಕೇರಳ ರಾಜ್ಯ ತೋಟಗಾರಿಕಾ ಮಿಷನ್ (Horticultural Mission) ಸುತ್ತಮುತ್ತಲಿನ ನಗರ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಿಗೆ ನೀಡಲು ಅರ್ಕಾ ವರ್ಟಿಕಲ್ ಗಾರ್ಡನ್ ರಚನೆಗಳನ್ನು ಖರೀದಿಸುವ ಮತ್ತು ವಿತರಿಸುವ ಯೋಜನೆ ರೂಪಿಸಿದೆ. ಆರಂಭದಲ್ಲಿ ಈ ಪ್ರಯತ್ನ ಉತ್ತೇಜಿಸಲು, ಎರ್ನಾಕುಲಂ ಮತ್ತು ತಿರುವನಂತಪುರಂನ (Thiruvananthapuram) ಜನರನ್ನು ಆಯ್ಕೆ ಮಾಡಲಾಗಿತ್ತು. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ (ಐಐಹೆಚ್‍ಆರ್) ಅರ್ಕಾ ವರ್ಟಿಕಲ್ ಗಾರ್ಡನ್ (Arka Vertical Garden) ರಚನೆಯನ್ನು ಸೃಷ್ಟಿಸಿದೆ.

300 ಘಟಕಗಳ ಪೂರೈಕೆ
ಈ ತಂತ್ರಜ್ಞಾನವನ್ನು ರಾಜ್ಯ ಸರಕಾರಕ್ಕೆ ನೀಡಲು ಸಿದ್ಧ ಎಂದು ಐಐಹೆಚ್‍ಆರ್ ಹೇಳಿದೆ. ಒಮ್ಮೆ ಈ ತಂತ್ರಜ್ಞಾನವನ್ನು ವರ್ಗಾಯಿಸಿದ ಬಳಿಕ, ಕೇರಳ ರಾಜ್ಯ ತೋಟಗಾರಿಕಾ ಮಿಷನ್, ಸಹಕಾರಿ ವ್ಯವಹಾರಗಳ ಬೆಂಬಲದೊಂದಿಗೆ ಸ್ಥಳೀಯವಾಗಿ ಆ ರಚನೆಗಳನ್ನು ತಯಾರಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ, ಮಿಷನ್ ಎರ್ನಾಕುಲಂ ಮತ್ತು ತಿರುವನಂತಪುರಂನಲ್ಲಿರುವ ನಗರದ ಕುಟುಂಬಗಳಿಗೆ 300 ಘಟಕಗಳನ್ನು ಪೂರೈಕೆ ಮಾಡುವ ಉದ್ದೇಶ ಹೊಂದಿದೆ.

ನಗರದಲ್ಲಿ ವಾಸಿಸುವ ಜನರಿಗೆ ಕೃಷಿ ಮಾಡಲು ಸ್ಥಳಾವಕಾಶದ ಕೊರತೆಯಿದೆ ಮತ್ತು ಆ ಸಮಸ್ಯೆ ಪರಿಹರಿಸಲು ಈ ವರ್ಟಿಕಲ್ ಗಾರ್ಡನ್ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ. ಕುಟುಂಬಗಳ ಅಗತ್ಯಗಳಿಗೆ ಅನುಸಾರವಾಗಿ, ಸುರಕ್ಷಿತ ಮತ್ತು ಅನುಕೂಲಕರ ರೀತಿಯಲ್ಲಿ ತರಕಾರಿಗಳನ್ನು ಉತ್ಪಾದಿಸಲು ಈ ರಚನೆಗಳು ಪ್ರಯೋಜನಕಾರಿ. ಅವುಗಳನ್ನು , ಬಾಲ್ಕಿನಿ ಅಥವಾ ತೆರೆದ ಒಳಾಂಗಣಗಳಲ್ಲಿ , ಸಾಕಷ್ಟು ಬಿಸಿಲು ಬೀಳುವ ಜಾಗದಲ್ಲಿ ಇಡಬಹುದಾಗಿದೆ.

ಇದನ್ನೂ ಓದಿ: Agritourism: ರೈತರ ಬಾಳು ಬೆಳಗಿದ ಕೃಷಿ ಪ್ರವಾಸೋದ್ಯಮದ ಪಿತಾಮಹ ಇವರೇ..! ಇವ್ರ ಪ್ಲ್ಯಾನ್‌ಗೆ ಹಾಟ್ಸ್‌ಆಫ್

ಗ್ರೋ ಬ್ಯಾಗ್‍ ಘಟಕ
ಈ ರಚನೆಗಳಲ್ಲಿ ತರಕಾರಿ, ಔಷಧೀಯ ಸಸ್ಯಗಳು ಮತ್ತು ಹೂವಿನ ಗಿಡಗಳನ್ನು ಬೆಳೆಸಬಹುದು. ಇದು ಮೂಲ ಚೌಕಟ್ಟು, ಪ್ರಾಥಮಿಕ ನಡುವಣ ಬೆಂಬಲ ಮತ್ತು ಮಡಕೆಗಳು ಅಥವಾ ಗ್ರೋ ಬ್ಯಾಗ್‍ಗಳನ್ನು ಹೊಂದಿರುವ ಮೂರು ಮೂಲಭೂತ ಘಟಕಗಳನ್ನು ಹೊಂದಿದೆ. ಬೆಳವಣಿಗೆಯ ಮಾಧ್ಯಮವಾಗಿ ಕುಂಡಗಳಲ್ಲಿ ಮಣ್ಣು ಅಥವಾ ಕೋಕೋಪೀಟ್ ಬಳಸಬಹುದು. ಈ ರಚನೆ ಅತ್ಯಂತ ಕಡಿಮೆ ಜಾಗಕ್ಕೆ, ಅಂದರೆ ಒಂದು ಚದರ ಮೀಟರ್ ಜಾಗಕ್ಕೆ ಹೊಂದಿಕೊಳ್ಳುತ್ತದೆ. ಹೆಚ್ಚು ಉದ್ದ ಬೆಳೆಯುವ ಟೊಮ್ಯಾಟೋ, ಮೆಣಸಿನಕಾಯಿ , ಬದನೆಯಂತಹ ಗಿಡಗಳನ್ನು ರಚನೆಯ ತಳದಲ್ಲಿ ಮತ್ತು ಮೇಲಿನ ಘಟಕಗಳಲ್ಲಿ ಎಲೆ ತರಕಾರಿಗಳು, ಬ್ರಾಹ್ಮಿ, ಪುದೀನ ಮುಂತಾದ ಔಷಧೀಯ ಸಸ್ಯಗಳನ್ನು ಬೆಳೆಸಬಹುದು.

ರಚನೆಯ ಮೇಲ್ಭಾಗದಲ್ಲಿ, ಸಣ್ಣ ಟ್ಯೂಬ್‍ಗಳು ಮತ್ತು ಡ್ರಿಪ್ಪರ್‌ಗಳ ಮೂಲಕ 25 ಲೀಟರ್ ಪ್ಲಾಸ್ಟಿಕ್ ಕಂಟೇನರ್ ಅನ್ನು ಬಳಸಿ ಗಿಡಗಳಿಗೆ ನೀರುಣಿಸಲಾಗುತ್ತದೆ. ಇದರಲ್ಲಿ ಒಂದು ಋತುವಿನಲ್ಲಿ ಐದು ಕೆಜಿಯಷ್ಟು ಬೆಳೆ ಬೆಳೆಯಬಹುದು ( ನಾವು ನೆಡುವ ಬೆಳೆಯನ್ನು ಅವಲಂಬಿಸಿ).

ನಗರ ಕೃಷಿಗೆ ಸಹಾಯ ಧನ
ವರ್ಟಿಕಲ್ ಗಾರ್ಡನ್ ರಚನೆಯ ಬೆಲೆ 20,000 ರೂ. ಆರಂಭಿಕ ಹಂತದಲ್ಲಿ ರಾಜ್ಯ ತೋಟಗಾರಿಕ ಮಿಷನ್ ಶೇಕಡಾ 75ರಷ್ಟು ಸಹಾಯ ಧನ ನೀಡಲಿದೆ. ಒಂದು ಘಟಕವು 16 ಮಡಕೆಗಳನ್ನು ಒಳಗೊಂಡಿರುತ್ತದೆ, ಗ್ರಾಹಕರು ರಚನೆಯನ್ನು ಖರೀದಿಸಿದಾಗ ಅವರಿಗೆ ಅದರ ಜೊತೆ ರಸಗೊಬ್ಬರ ಹಾಗೂ ಬೀಜಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ.

ಸಹಾಯಧನ ವಿತರಣೆ
ಒಂದು ಪ್ರಾಯೋಗಿಕ ಆಧಾರದಲ್ಲಿ ಐಐಎಚ್‌ಆರ್‌ನಿಂದ ನಾವು 10 ಘಟಕಗಳನ್ನು ಖರೀದಿಸಿದ್ದೇವೆ ಮತ್ತು ಅವುಗಳಲ್ಲಿ ಎರಡನ್ನು ನಮ್ಮ ತಿರುವನಂತಪುರಂ ಕಚೇರಿಯ ಮೇಲೆ ಇರಿಸಿದ್ದೇವೆ. ಸಾಗಣೆಯ ಸಂದರ್ಭದಲ್ಲಿ ರಚನೆಯ ಕೆಲವು ಟ್ಯೂಬ್‍ಗಳು ಮುರಿದು ಹೋಗಿವೆ. ಆ ಕಾರಣದಿಂದಾಗಿಯೇ ನಾವು ಕೇರಳ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿಮಿಟೆಡ್ , ರೈಡ್ಕೋ ಮತ್ತು ಇತರ ಸಹಕಾರಿ ಸಂಸ್ಥೆಗಳ ಸಹಾಯದೊಂದಿಗೆ ಸ್ಥಳೀಯವಾಗಿ ಅವುಗಳನ್ನು ತಯಾರಿಸಲು ನಿರ್ಧರಿಸಿದ್ದೇವೆ. ನಾವು ಐಐಹೆಚ್‍ಆರ್‍ನಿಂದ ಘಟಕಕ್ಕೆ 19,400 ರೂ, ನೀಡಿ ಖರೀಸಬಹುದು. ಸಾಗಾಣೆ ವೆಚ್ಚ 1,000 ರೂ. ಆಗುತ್ತದೆ. ಒಂದು ಘಟಕ ಖರೀದಿಸಲು ಒಟ್ಟು 20,400 ರೂ. ಬೇಕಾಗುತ್ತದೆ.

ಇದನ್ನೂ ಓದಿ: Success Story: ಕೇವಲ 20 ಗುಂಟೆಯಲ್ಲಿ 72 ರಾಗಿ ತಳಿ: ಸಿರಿ ಧಾನ್ಯಗಳ ಸಂರಕ್ಷಣೆಗೆ ಟೊಂಕಕಟ್ಟಿ ನಿಂತ ಮತ್ತಿಗಟ್ಟಿ ರೈತ

ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಹಾಯಧನದ ವೆಚ್ಚವನ್ನು 40:60 ಅನುಪಾತದಲ್ಲಿ ವಿಭಜಿಸುವುದರಿಂದ, ಗ್ರಾಹಕರು ಅದನ್ನು 5,000 ರೂ.ಗೆ ಖರೀದಿಸಬಹುದು” ಎಂದು ಕೃಷಿ ಜಂಟಿ ನಿರ್ದೇಶಕಿ (ರಾಜ್ಯ ತೋಟಗಾರಿಕಾ ಮಿಷನ್ ) ಸಿಂಧು ಎನ್ ಪಣಿಕರ್ ಹೇಳಿದ್ದಾರೆ. ಕೇರಳದ ಹಲವಾರು ನಿವಾಸಿಗಳ ಕಲ್ಯಾಣ ಗುಂಪುಗಳು ಈ ನಡೆಯನ್ನು ಶ್ಲಾಘಿಸಿದ್ದು, ರಾಜ್ಯ ತೋಟಗಾರಿಕಾ ಮಿಷನ್ ಜೊತೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿವೆ.
Published by:vanithasanjevani vanithasanjevani
First published: