Viral Video: ಝೂಗೆ ಬಂದ ಜನರಿಗೆ ತನ್ನ ಮಗುವನ್ನು ಎತ್ತಿ ತೋರಿಸಿದ ಗೊರಿಲ್ಲಾ; ಮುದ್ದಾದ ವೀಡಿಯೋ ನೋಡಿ ನೆಟ್ಟಿಗರು ಫಿದಾ

ಕೆನಡಾದ ಮೃಗಲಾಯದಲ್ಲಿರುವ ತಾಯಿ ಗೋರಿಲ್ಲಾ ಝೂಗೆ ಭೇಟಿ ನೀಡಿದ ಜನರಿಗೆ ತನ್ನ ಸಣ್ಣ ಕಂದಮನ್ನನ್ನು ಎತ್ತಿ ತೋರಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿದ ನೆಟ್ಟಿಗರು ಈ ಮುದ್ದಾದ ದೃಶ್ಯಕ್ಕೆ ಕರಗಿ ಹೋಗಿದ್ದಾರೆ.

ಗೊರಿಲ್ಲಾ

ಗೊರಿಲ್ಲಾ

  • Share this:
ನಾಯಿಯಾದರೇನು ತಾಯಿಯಲ್ಲವೇ ಅನ್ನುವ ಮಾತೊಂದಿದೆ. ಈ ಮಾತು ತಾಯಿಯ ಪ್ರೀತಿ, ಮಮತೆ, ಕಾಳಜಿಯನ್ನು ಪ್ರತಿನಿಧಿಸುತ್ತದೆ. ತಾಯಿಯಾಗುವುದೇ ಜಗತ್ತಿನ ಅತಿ ದೊಡ್ಡ ಸಂತೋಷವಾಗಿದೆ. ಅಂತಹ ತಾಯಿ (Mother) ಪ್ರೀತಿ (Love) ಎಂಬುದು ಪ್ರತಿಯೊಂದು ಜೀವಿಗೆ ಸರ್ವಸ್ವವೇ ಆಗಿರುತ್ತದೆ. ಅದು ಮನುಷ್ಯನಾದರೂ ಸರಿ ಪ್ರಾಣಿಯಾದರೂ (Animals) ಸರಿ. ಏಕೆಂದರೆ ತಾಯಿ ಪ್ರೀತಿಗೆ ಯಾರೂ ಸರಿಸಾಟಿಯಿಲ್ಲ. ಈಗ ಅಂತಹದೇ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗುತ್ತಿದೆ. ಮೃಗಾಲಯದಲ್ಲಿ (Zoo) ಗೊರಿಲ್ಲಾ (Gorilla) ಒಂದು ಮೃಗಾಲಯಕ್ಕೆ ಭೇಟಿ ನೀಡಿದ ಜನತೆಗೆ ತನ್ನ ಮಗುವನ್ನು ಎತ್ತಿ ತೋರಿಸುತ್ತಿರುವ ದೃಶ್ಯವನ್ನು ಈ ವೀಡಿಯೋದಲ್ಲಿ ಗಮನಿಸಬಹುದು. ಈ ತಾಯಿ ಪ್ರೀತಿಗೆ ನೆಟ್ಟಿಗರು (Netizens) ಮನಸೋತಿದ್ದಾರೆ.

ಕೆನಡಾದ (Canada) ಮೃಗಲಾಯದಲ್ಲಿರುವ ತಾಯಿ ಗೋರಿಲ್ಲಾ ಝೂಗೆ ಭೇಟಿ ನೀಡಿದ ಜನರಿಗೆ ತನ್ನ ಸಣ್ಣ ಕಂದಮನ್ನನ್ನು ಎತ್ತಿ ತೋರಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿದ ನೆಟ್ಟಿಗರು ಈ ಮುದ್ದಾದ ದೃಶ್ಯಕ್ಕೆ ಕರಗಿ ಹೋಗಿದ್ದಾರೆ.

ಇದನ್ನೂ ಓದಿ: Elephant: ಆನೆಯ ಸೊಂಡಿಲಿನಲ್ಲಿ ಎಷ್ಟು ಶಕ್ತಿ ಇದೆ ಗೊತ್ತಾ? ಇದಕ್ಕೆ ಪುಷ್ಟಿ ನೀಡೋದು ಸ್ನಾಯು ಮತ್ತು ಚರ್ಮವಂತೆ!

ಕ್ಯಾಲ್ಗರಿ ಮೃಗಾಲಯದ ದೃಶ್ಯ

ತಾಯಿ ಗೋರಿಲ್ಲಾ ತನ್ನ ಮಗುವನ್ನು ಜನರಿಗೆ ಎತ್ತಿ ತೋರಿಸಿ ಮುದ್ದಾಡುತ್ತಿರುವ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ. ಈ ಅದ್ಭುತವಾದ ಮನಮೋಹಕ ದೃಶ್ಯ ಕೆನಡಾದ ಕ್ಯಾಲ್ಗರಿ ಮೃಗಾಲಯದ್ದಾಗಿದೆ.

ಹೆಮ್ಮೆಯಿಂದ ಮಗುವನ್ನು ಜನರಿಗೆ ತೋರಿಸುತ್ತಿರುವ ಗೊರಿಲ್ಲಾ

ವೀಡಿಯೋವನ್ನು ಗಮನಿಸಿದಂತೆ, ಗೊರಿಲ್ಲಾ ತಾಯಿಯು ತನ್ನ ಮಗುವನ್ನು ಹೆಮ್ಮೆಯಿಂದ ಎತ್ತಿ ಅಲ್ಲಿ ಭೇಟಿ ನೀಡಿರುವ ಜನತೆಗೆ ತೋರಿಸುತ್ತಿದೆ. ಅಲ್ಲದೆ ಆ ಮಗುವಿಗೆ ಚುಂಬನ ಮಾಡುವ ದೃಶ್ಯವನ್ನು ಕಾಣಬಹುದಾಗಿದೆ. ಗೊರಿಲ್ಲಾ ತನ್ನ ತಾಯ್ತನದ ಪ್ರೀತಿಯನ್ನು ಇಲ್ಲಿ ತೋರಿಸುತ್ತಿರುವುದ ಗಮನಾರ್ಹವಗಿದೆ.


View this post on Instagram


A post shared by ViralHog (@viralhog)


ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೀಡಿಯೋ

ಈ ವೀಡಿಯೋ ವೈರಲ್ ಹಾಗ್ ಎಂಬ ಇನ್ಸ್ಟ್ರಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಹಂಚಿಕೊಂಡ ಇಪ್ಪತ್ನಾಲ್ಕು ಗಂಟೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ವಿಕ್ಷಣೆಯನ್ನು ಪಡೆದಿದೆ. ಅಲ್ಲದೆ 15 ಸಾವಿರಕ್ಕೂ ಅಧಿಕ ಲೈಕ್ ಗಳನ್ನು ಪಡೆದಿದೆ. ಇದೀಗ ಈ ವೀಡಿಯೋ ಸಖತ್ತಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನ ಆಶ್ಚರ್ಯಚಕಿತರಾಗಿದ್ದಾರೆ.

ವೀಡಿಯೋ "ಎ ಪ್ರೌಡ್ ಮಮ್ಮ ಶೋಸ್ ಆಫ್ ಹರ್ ಬೇಬಿ ಅಟ್ ದಿ ಗ್ಯಾಲರಿ ಝೂ" ಎಂದು ಶೀಷೀಕೆಯನ್ನು ಹೊಂದಿದೆ.

ದಿ ಲಯನ್ ಕಿಂಗ್ ಸಿನಿಮಾವನ್ನು ನೆನಪಿಸಿಕೊಂಡ ನೆಟ್ಟಿಗರು

ಈ ವೀಡಿಯೋವನ್ನು ವೀಕ್ಷಿಸಿದ ಜನ 1994 ರ ಅನಿಮೇಟೆಡ್ ಸಿನಿಮಾ ದಿ ಲಯನ್ ಕಿಂಗ್ ನ ದೃಶ್ಯವನ್ನು ನೆನಪಿಸಿಕೊಡರು. ಅಲ್ಲಿ ರಫಿಕಿ ಮ್ಯಾಂಡ್ರಿಲ್ ಸಿಂಬಾವನ್ನು ಜನರಿಗೆ ಹೆಮ್ಮೆಯ ಸಂಕೇತವಾಗಿ ತೋರಿಸಿದ್ದರು.

ಕೆಲವು ಜನರು ಈ ವೀಡಿಯೋವನ್ನು ಕಂಡು ಗೋರಿಲ್ಲಾದ ತಾಯಿ ಪ್ರೀತಿಗೆ ಅಭಿಮಾನ ವ್ಯಕ್ತ ಪಡಿಸಿದರೆ ಇನ್ನೂ ಕೆಲವರು ಗೊರಿಲ್ಲಾವನ್ನು ಮೃಗಾಲಯದಲ್ಲಿ ಬಂಧಿಸಿಟ್ಟ ಬಗ್ಗೆ ವಿರೋಧ ವ್ಯಕ್ತ ಪಡಿಸಿದರು. ಆದಷ್ಟು ಬೇಗನೆ ಈ ಜೈಲಿನಿಂದ ಗೊರಿಲ್ಲಾ ಸ್ವತಂತ್ರವಾಗಲಿ ಎಂದು ಹಾರೈಸುತ್ತೇನೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಹೀಗೆ ಅನೇಕ ಮಂಧಿ ಪ್ರಾಣಿಗಳನ್ನು ಪಂಜರದಲ್ಲಿ ಬಂಂಧಿಸಿಡುವ ಕಲ್ಪನೆಯ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: Biggest Shark: ಜಗತ್ತಿನ ಅತಿ ದೊಡ್ಡ ಶಾರ್ಕ್ ಮಾಂಸಹಾರಿಯಲ್ಲ! ಹಾಗಿದ್ದರೆ ಇದು ತಿನ್ನೋದೆನನ್ನು?

ಈ ರೀತಿಯಾದ ಪ್ರಾಣಿಗಳ ಮುಗ್ಧತೆಗೆ ಮನ ಸೋಲದೆ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ತಾಯಿಯ ಪ್ರೀತಿಯನ್ನು ಪ್ರತಿನಿಧಿಸುವ ಇಂತಹ ವೀಡಿಯೋಗಳು ಒಂದೆಡೆ ಪ್ರಾಣಿಗಳ ಮುಗ್ಧತೆಯನ್ನು ತೋರಿಸಿದರೆ ಇನ್ನೊಂದೆಡೆ ತಾಯಿ ಪ್ರೀತಿಯನ್ನು ತೋರಿಸುತ್ತಿದೆ.
Published by:Nalini Suvarna
First published: