29 ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದ ಗೂಗಲ್​; ಯಾಕೆ ಗೊತ್ತಾ?

ಈ ಆ್ಯಪ್​ಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳು ಕೆಲವೇ ಸೆಕೆಂಡು ಮಧ್ಯಂತರದಲ್ಲಿ ಪ್ರಸಾರವಾಗಲಿದ್ದು, ಇವುಗಳಲ್ಲಿ ದೋಷ ಕಂಡುಬಂದಿದೆ. ಹೀಗೆ  ದುರುದ್ದೇಶ ಹೊಂದಿದೆ 29 ಆ್ಯಪ್​ಗಳನ್ನು ಸದ್ಯ ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದೆ.  

ಗೂಗಲ್ ಪ್ಲೇ ಸ್ಟೋರ್.

ಗೂಗಲ್ ಪ್ಲೇ ಸ್ಟೋರ್.

 • Share this:
  ದುರುದ್ದೇಶಪೂರಿತ 29 ಆ್ಯಪ್​ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದೆ ಎಂದು ವೈಟ್ ಒಪ್ಸ್ ಸಟೋರಿ ಗುಪ್ತಚರ ಮತ್ತು ಸಂಶೋಧನಾ ತಂಡ ತಿಳಿಸಿದೆ. 

  ವೈಟ್ ಓಪ್ಸ್ 29 ಅಪ್ಲಿಕೇಶನ್‌ ಜಾಹೀರಾತು ಕೋಡ್‌ನೊಂದಿಗೆ ಸಂದರ್ಭಕ್ಕೆ ಹೊರತಾಗಿದೆ. ಜೊತೆಗೆ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಬುದ್ಧಿವಂತ ಮಾರ್ಗವನ್ನು ಪತ್ತೆ ಮಾಡಲಾಗಿದೆ. ಈ ಸಂಶೋಧನೆಯ ಸಂದರ್ಭದಲ್ಲಿ ನಾವು ತನಿಖೆ ಮಾಡಿದ ಅಪ್ಲಿಕೇಶನ್‌ಗಳು ಜಾಹೀರಾತಿನಂತೆ ಕಾರ್ಯನಿರ್ವಹಿಸಲಿಲ್ಲ ಮತ್ತು ಅವುಗಳನ್ನು 35 ಲಕ್ಷಕ್ಕಿಂತಲೂ ಅಧಿಕ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು ಎಂದು ಸಾಟೋರಿ ತಂಡ ಹೇಳಿದೆ.

  ಚಾರ್ಟರ್​ಯೂಸ್​ಬ್ಲರ್ ತನಿಖೆಯಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳಲ್ಲಿ  ತೆಗೆದುಹಾಕಿದೆ. ಬ್ಲರ್  ಫೀಚರ್ ಹೊಂದಿರುವ ಹೊಂದಿರುವ ಫೋಟೋ ಎಡಿಟಿಂಗ್ ಅಪ್ಲಿಕೇಷನ್​ಗಳು ಇದರಲ್ಲಿ ಸೇರಿಕೊಂಡಿವೆ. ಇನ್ನು ಈ ಆ್ಯಂಡ್ರಾಯ್ಡ್ ಅಪ್ಲಿಕೇಷನ್​ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತನಿಖೆಯ ಜಾಡನ್ನು ತಪ್ಪಿಸುವ ಚಾಲಾಕಿತನ ಕಂಡುಬಂದಿದೆ. ಇದರಲ್ಲಿ ಒಒಸಿ (ಔಟ್​ ಅಫ್ ಕಂಟೆಕ್ಸ್ಟ್) ಜಾಹೀರಾತುಗಳು ಲಭ್ಯವಿದೆ. ಬಳಕೆದಾರರು ಈ ಯಾವುದೇ ಅಪ್ಲಿಕೇಷನ್​ಗಳನ್ನು ಇನ್​​ಸ್ಟಾಲ್​ ಮಾಡಿದ ನಂತರ ಲಾಂಚ್ ಐಕಾನ್​ಗಳು ಫೋನ್​ನಿಂದ ತಕ್ಷಣ ಮಾಯವಾಗುತ್ತವೆ. ಬಳಿಕ ಈ ದುರುದ್ದೇಶಪೂರಿತ ಆ್ಯಪ್​ಗಳನ್ನು ತೆಗೆದುಹಾಕುವುದು ಕಷ್ಟಕರವಾಗಲಿದೆ ಎನ್ನಲಾಗುತ್ತಿದೆ.

  ಇದನ್ನು ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆಗೈದ ಹೆಂಡತಿ; ಪತ್ನಿ ಸೇರಿ ಏಳು ಮಂದಿ ಬಂಧನ

  ಈಗ ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದ ಆ್ಯಪ್​ಗಳಲ್ಲಿ ಸ್ಕ್ವೇರ್ ಫೋಟೋ ಬ್ಲರ್ ಅಪ್ಲಿಕೇಷನ್ ಕೂಡ ಒಂದು. ಈ ಅಪ್ಲಿಕೇಷನ್ ಜಾಹೀರಾತಿನಿಂತೆ ಕಾರ್ಯನಿರ್ವಹಿಸುವುದಿಲ್ಲ. ಮತ್ತು ಫೋನ್​ಗಳಲ್ಲಿ ಒಒಸಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಈ ಆ್ಯಪ್​ಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳು ಕೆಲವೇ ಸೆಕೆಂಡು ಮಧ್ಯಂತರದಲ್ಲಿ ಪ್ರಸಾರವಾಗಲಿದ್ದು, ಇವುಗಳಲ್ಲಿ ದೋಷ ಕಂಡುಬಂದಿದೆ. ಹೀಗೆ  ದುರುದ್ದೇಶ ಹೊಂದಿದೆ 29 ಆ್ಯಪ್​ಗಳನ್ನು ಸದ್ಯ ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದೆ.
  Published by:HR Ramesh
  First published: