Google: ಗೂಗಲ್​​ನಿಂದ 39 ಸಲ ರಿಜೆಕ್ಟ್ ಆದ್ರೂ, 40ನೇ ಸಲ ಸೆಲೆಕ್ಟ್ ಆದ! ಏನ್ ಛಲ ಗುರು ಇವನದ್ದು

ಇಲ್ಲಿ ಒಬ್ಬ ವ್ಯಕ್ತಿ ತನ್ನ ಡ್ರೀಮ್‌ ಜಾಬ್‌ ಪಡೆಯಲು ಬರೋಬ್ಬರಿ 39 ಸಲ ಪ್ರಯತ್ನ ಪಟ್ಟು 40 ನೇ ಸಲ ತನ್ನ ಇಷ್ಟವಾದ ಕೆಲಸ ಗಿಟ್ಟಿಸಿಕೊಳ್ಳುವುದರಲ್ಲಿ ಆತ ಯಶಸ್ವಿಯಾಗಿದ್ದಾನೆ. ಯಾರಪ್ಪ ಆ ವ್ಯಕ್ತಿ ? ಎಂದು ನಿಮಗೆ ಕುತೂಹಲ ಹೆಚ್ಚಾಗುತ್ತಿರಬೇಕಲ್ವಾ, ಬನ್ನಿ ಈ ಲೇಖನದಲ್ಲಿ ಆ ವ್ಯಕ್ತಿಯ ಪರಿಚಯ ಮಾಡಿಕೊಡ್ತಿವಿ.

ಟೈಲರ್‌ ಕೋಹೆನ್‌

ಟೈಲರ್‌ ಕೋಹೆನ್‌

  • Share this:
“ಕಾಯಕವೇ ಕೈಲಾಸ” ಎಂದು ವಚನಕಾರ ಬಸವಣ್ಣನವರು ಹೇಳಿದ್ದಾರೆ. ಇದರರ್ಥ ಇಷ್ಟೆ ಯಾವುದೇ ಕೆಲಸ (Work) ಮಾಡಿದರೂ ಅದರಲ್ಲಿ ದೇವರನ್ನು ಕಾಣು. ಇವರು ಹೇಳ್ತಿರೋದು ನಿಜ ಇರಬಹುದು ಆದರೆ ಎಲ್ಲರಿಗೂ ಒಂದು ಡ್ರೀಮ್‌ ಜಾಬ್‌ (Dream Job) ಪಡೆಯಬೇಕೆಂಬ ಬಯಕೆ ಇದ್ದೆ ಇರುತ್ತದೆ. ಆ ಕೆಲಸ ಪಡೆಯಲು ಹರಸಾಹಸ ಪಡುವ ಮಂದಿಯೂ ನಮ್ಮ-ನಿಮ್ಮ ನಡುವೆ ಇದ್ದೇ ಇರುತ್ತಾರೆ. ಆದರೆ ಒಂದು ಸಲ ಆ ಕೆಲಸಕ್ಕೆ ಪ್ರಯತ್ನ ಪಟ್ಟು ಸಿಗದೇ ಹೋದರೆ , ಇನ್ನೊಂದು ಸಲ ಪ್ರಯತ್ನ ಪಡ್ತಾರೆ. ಆದರೆ ಮತ್ತೆ ಮತ್ತೆ ಅದೇ ಸೋಲು (Loss) ನಿಮ್ಮನ್ನು ಕಾಯುತ್ತಾ ಕುಳಿತಾಗ ನೀವು ಏನು ಮಾಡಬಹುದು ಹೇಳಿ. ಅದಕ್ಕೆ ಉತ್ತರ ತುಂಬಾ ಸರಳ, ಬೇರೆ ಕೆಲಸ ನೋಡ್ಕೊಂಡು ಸಿಕ್ಕಿದ್ದ ಕೆಲಸವನ್ನೆ ಮಾಡ್ತಾ ಹೋಗ್ತಿರಿ ಅಲ್ವಾ.

39 ಸಲ ಪ್ರಯತ್ನ ಪಟ್ಟು 40ನೇ ಸಲ ತನಗೆ ಬೇಕಾದ ಕೆಲಸ ಗಿಟ್ಟಿಸಿಕೊಂಡ ಯುವಕ 
ಇಲ್ಲಿ ಒಬ್ಬ ವ್ಯಕ್ತಿ ತನ್ನ ಡ್ರೀಮ್‌ ಜಾಬ್‌ ಪಡೆಯಲು ಬರೋಬ್ಬರಿ 39 ಸಲ ಪ್ರಯತ್ನ ಪಟ್ಟು 40 ನೇ ಸಲ ತನ್ನ ಇಷ್ಟವಾದ ಕೆಲಸ ಗಿಟ್ಟಿಸಿಕೊಳ್ಳುವುದರಲ್ಲಿ ಆತ ಯಶಸ್ವಿಯಾಗಿದ್ದಾನೆ. ಯಾರಪ್ಪ ಆ ವ್ಯಕ್ತಿ ? ಎಂದು ನಿಮಗೆ ಕುತೂಹಲ ಹೆಚ್ಚಾಗುತ್ತಿರಬೇಕಲ್ವಾ, ಬನ್ನಿ ಈ ಲೇಖನದಲ್ಲಿ ಆ ವ್ಯಕ್ತಿಯ ಪರಿಚಯ ಮಾಡಿಕೊಡ್ತಿವಿ.

ಇದನ್ನೂ ಓದಿ: Plane: ಲಾಕ್‌ಡೌನ್​ನಲ್ಲಿ ಸ್ವಂತ ವಿಮಾನವನ್ನೇ ತಯಾರಿಸಿ ಯುರೋಪ್‌ ಪ್ರವಾಸ ಮಾಡಿದ ಕೇರಳದ ವ್ಯಕ್ತಿ

ಈ ವ್ಯಕ್ತಿ ಸ್ಯಾನ್ ಫ್ರಾನ್ಸಿಸ್ಕೋದ ನಿವಾಸಿಯಾಗಿದ್ದಾರೆ. ಈತನ ಹೆಸರು ಟೈಲರ್‌ ಕೋಹೆನ್‌ .ಈತನು 39 ಬಾರಿ ಗೂಗಲ್‌ ನಿಂದ ತಿರಸ್ಕರಿಸಿದಾಗ ಮತ್ತೆ ಮತ್ತೆ ಪ್ರಯತ್ನಿಸುವುದನ್ನು ನಿಲ್ಲಿಸಲಿಲ್ಲ. ಜೀವನದಲ್ಲಿ ಇದ್ದರೆ ಇಂತಹ ಸಂಕಲ್ಪ ಮತ್ತು ಧೈರ್ಯ ಇರಬೇಕು. ಇವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಗೂಗಲ್ ಜೊತೆಗಿನ ಸಂವಹನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಡೋರ್‌ಡ್ಯಾಶ್‌ನಲ್ಲಿ ಕೆಲಸ ಪಡೆಯುವ ಮೊದಲು ಟೈಲರ್ ಕೋಹೆನ್ ಅವರು ಡೋರ್‌ಡ್ಯಾಶ್‌ನಲ್ಲಿ ಸ್ಟ್ರಾಟಜಿ ಮತ್ತು ಆಪ್ಸ್ - ಅಸೋಸಿಯೇಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು.

ಫೋಟೋವೊಂದನ್ನು ಶೇರ್ ಮಾಡಿ ಏನು ಹೇಳಿದ್ದಾರೆ 
"ಪರಿಶ್ರಮ ಮತ್ತು ಹುಚ್ಚು ಕನಸಿನ ನಡುವೆ ಒಂದು ಬಲಿಷ್ಟವಾದ ಗೆರೆ ಇದೆ. ಇದರಲ್ಲಿ ನಾನು ಯಾವ ಗುಣವನ್ನು ಹೊಂದಿದ್ದೇನೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇನೆ. 39 ಸಲ ತಿರಸ್ಕಾರಗಳು ಸುಮ್ಮನೆ ಏನಲ್ಲ, ಆದರೆ ಇವೆಲ್ಲದಕ್ಕೂ 1 ಸಲ ನನ್ನ ಕೆಲಸದ ಸ್ವೀಕೃತಿ ಸ್ವೀಕಾರ ಆಗಿದೆ. ಇದು ನನಗೆ ಅತ್ಯಂತ ಸಂತಸದ ಕ್ಷಣ ” ಎಂದು ಕೊಹೆನ್ ಅವರು ಒಂದು ಸ್ಕ್ರೀನ್‌ ಶಾಟ್‌ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇವರ ಈ ಛಲಕ್ಕೆ ನೆಟ್ಟಿಗರು ಹೇಳಿದ್ದು ಹೀಗೆ 
ಕೋಹೆನ್ ಅವರ ಸ್ಕ್ರೀನ್‌ಶಾಟ್ ನೋಡಿದಾಗ ಅವರು ಮೊದಲು 2019 ರಲ್ಲಿ ಗೂಗಲ್‌ಗೆ ಅರ್ಜಿ ಸಲ್ಲಿಸಿದರು ಮತ್ತು ಕೊನೆಯದಾಗಿ ಮೂರು ವರ್ಷಗಳ ನಂತರ ಅನೇಕ ಪ್ರಯತ್ನಗಳ ನಂತರ ಕೆಲಸವನ್ನು ಪಡೆದಿದ್ದಾರೆ ಎಂಬುದು ಅದರಲ್ಲಿ ಕಾಣಿಸುತ್ತದೆ. ಲಿಂಕ್ಡ್‌ಇನ್ ಬಳಕೆದಾರರು ಈ ಅವಕಾಶವನ್ನು ಗಳಿಸಿದ್ದಕ್ಕಾಗಿ ಕೊಹೆನ್ ಅವರಿಗೆ ಖಾತೆಯಲ್ಲಿ ಕಮೆಂಟ್‌ ಮಾಡುವ ಮೂಲಕ ಅಭಿನಂದಿಸಿದ್ದಾರೆ ಮತ್ತು ಕೆಲವರು ದೊಡ್ಡ ಟೆಕ್ ಕಂಪನಿಗಳೊಂದಿಗೆ ತಮ್ಮ ಸ್ವಂತ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಅಮೆಜಾನ್‌ಗೆ ನಾನು 120+ ಬಾರಿ ಅರ್ಜಿ ಸಲ್ಲಿಸಿದ್ದೆ ಮತ್ತು ಅದರ ನಂತರ ನನಗೆ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು ಎಂದು ಬರೆದುಕೊಂಡಿದ್ದಾರೆ.

ಕೊಹೆನ್ ಲಿಂಕ್ಡ್‌ಇನ್‌ನಲ್ಲಿ ಅನೇಕ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿದ ನಂತರವು ಕೆಲವು ಬಳಕೆದಾರರು ಇವರ ಹುಚ್ಚುತನಕ್ಕೆ ಕೆಲವು ಟೀಕೆಗಳನ್ನು ಹರಿ ಬಿಟ್ಟಿದ್ದಾರೆ. ನೀವು ನಿಮ್ಮನ್ನು ಸ್ವಯಂ-ಮೌಲ್ಯವನ್ನು ಮಾಡಿಕೊಂಡು ನಿಮ್ಮ ಸಾಮರ್ಥ್ಯಕ್ಕೆ ಇನ್ನು ಉತ್ತಮ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. ಅದು ಬಿಟ್ಟು ಆ ಕಂಪನಿಯೇ ಬೇಕೆಂದು ಅದರ ಬೆನ್ನಟ್ಟಿದ್ದು ಸರಿಯಲ್ಲ ಎಂದು ವಿಮರ್ಶೆಯ ಕಮೆಂಟ್‌ಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:  Bengaluru: ವೀಕೆಂಡ್​ನಲ್ಲಿ ರ್‍ಯಾಪಿಡೋ ಓಡಿಸುವ ಎಂಜಿನಿಯರ್! ಹೀಗೇಕೆ ಮಾಡ್ತಾರೆ ಗೊತ್ತಾ?

ಕೊನೆಯದಾಗಿ, ಅವರ ಅವರ ಇಷ್ಟದ ಕೆಲಸ ಅವರಿಗೆ ಬಿಟ್ಟಿದ್ದು, ಬೇರೆಯವರು ಆಗಿದ್ದರೆ ಒಂದೆರಡು ಪ್ರಯತ್ನದಲ್ಲಿ ಆ ಕೆಲಸ ನಮ್ಮಿಂದ ಆಗಲ್ಲ ಎಂದು ಕೈಬಿಡುತ್ತಿದ್ದರು. ಆದರೆ ಈ ವ್ಯಕ್ತಿ ಬರೋಬ್ಬರಿ 39 ಸಲ ಸೋತಾಗಲೂ ಮತ್ತೊಮ್ಮೆ 40 ನೇ ಸಲ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ನಿಜಕ್ಕೂ ಒಂದು ದೊಡ್ಡ ಆತ್ಮಸ್ಥೈರ್ಯ ಬೇಕೆ ಬೇಕು.
Published by:Ashwini Prabhu
First published: