Madhubalas 86th Birthday Google Doodle: ಖ್ಯಾತ ಬಾಲಿವುಡ್ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

Today’s Google Doodle, Madhubalas 86th Birthday: ಇಂದು ಅವರ 86ನೇ ಜನ್ಮ ದಿನ. 1930 ಫೆ.14ರಂದು ಜನಿಸಿದ್ದ ಮಧುಬಾಲಾ ತಮ್ಮ 36ರನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದರು.  ಇಷ್ಟು ಕಡಿಮೆ ಅವಧಿಯಲ್ಲಿ ಅವರು ತುಂಬಾನೇ ಪ್ರಖ್ಯಾತಿ ಪಡೆದುಕೊಂಡರು.

Rajesh Duggumane | news18
Updated:February 14, 2019, 9:59 AM IST
Madhubalas 86th Birthday Google Doodle: ಖ್ಯಾತ ಬಾಲಿವುಡ್ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ
ಮಧುಬಾಲಾ
  • News18
  • Last Updated: February 14, 2019, 9:59 AM IST
  • Share this:
ಮುಂಬೈ (ಫೆ.14): ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮಧುಬಾಲಾ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಗೂಗಲ್​ ಡೂಡಲ್​ ಗೌರವ ಸಮರ್ಪಣೆ ಮಾಡಿದೆ.

ಇಂದು ಮಧುಬಾಲಾ 86ನೇ ಜನ್ಮ ದಿನ. 1933 ಫೆ.14ರಂದು ಜನಿಸಿದ್ದ ಮಧುಬಾಲಾ ತಮ್ಮ 36ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದರು. ಇಷ್ಟು ಕಡಿಮೆ ಅವಧಿಯಲ್ಲಿ ಅವರು ತುಂಬಾನೇ ಪ್ರಖ್ಯಾತಿ ಪಡೆದುಕೊಂಡರು. ತಮ್ಮ 12ನೇ ವಯಸ್ಸಿಗೆ ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, 1947ರಲ್ಲಿ ತೆರೆಕಂಡ ‘ನೀಲ್​ ಕಮಲ್​’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದರು. 24 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಧುಬಾಲಾ ಹಾಲಿವುಡ್​ ಸಿನಿಮಾಗಳ ಬಗ್ಗೆಯೂ ಅಪಾರ ಆಸಕ್ತಿ ಹೊಂದಿದ್ದರು. ಅವರ ಸಾಧನೆ ಪರಿಗಣಿಸಿ ಗೂಗಲ್​ ಡೂಡಲ್​ನಲ್ಲಿ ಅವರ ಸುಂದರ ಫೋಟೋ ಹಾಕಿ ಗೌರವ ಸಲ್ಲಿಸಿದೆ.

ಬಾಲಿವುಡ್​ನ ಖ್ಯಾತ ಹೀರೋ ಕಿಶೋರ್​ ಕುಮಾರ್​ ಜೊತೆ ಮಧುಬಾಲಾ ವಿವಾಹವಾದರು. ಮಧುಬಾಲಾ ಮುಸ್ಲಿಂ ಸಮುದಾಯದವರು. ಕಿಶೋರ್​ ಹಿಂದು ಸಮುದಾಯಕ್ಕೆ ಸೇರಿದವರು. ವಿವಾಹದ ವೇಳೆ ಇಬ್ಬರೂ ಧರ್ಮ ಬದಲಾಯಿಸಿಕೊಂಡಿರಲಿಲ್ಲವಂತೆ. ಆದರೆ, ಕಿಶೋರ್​ ಕುಮಾರ್​ ಮದುವೆಗೂ ಮೊದಲು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಕರೀಮ್​ ಅಬ್ದುಲ್​ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು ಎನ್ನುವ ಮಾತಿದೆ.

ಇದನ್ನೂ ಓದಿ: ಕನ್ನಡದ ಹಿರಿಯ ನಿರ್ಮಾಪಕಿ ಜಯಶ್ರೀದೇವಿ ನಿಧನ

ಗೂಗಲ್​ ಡೂಡಲ್​


ಇದರ ಜೊತೆಗೆ ಸಾಕಷ್ಟು ವಿವಾದಗಳಿಗೂ ಮಧುಬಾಲಾ ಒಳಗಾಗಿದ್ದರು. ಮಧುಬಾಲಾ ಹೃದಯದಲ್ಲಿ ರಂಧ್ರ ಇತ್ತು. 1954ರ ವೇಳೆ ಈ ವಿಚಾರ ತಿಳಿದು ಬಂದಿತ್ತು. 1969 ಫೆ.23ರಂದು ಅವರು ಕೊನೆ ಉಸಿರೆಳೆದರು. ಅವರ ಹೆಸರಿನಲ್ಲಿ ಸ್ಟಾಂಪ್​ಗಳು ಬಿಡುಗಡೆಗೊಂಡಿದ್ದವು.

First published:February 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ