Google Meet: ಗಂಟೆಗಟ್ಟಲೇ ಗೂಗಲ್ ಮೀಟ್​ ಮಾಡಲು ಇನ್ಮುಂದೆ ಹಣ ಪಾವತಿಸಬೇಕು..!

ಮೂರು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರೊಂದಿಗಿನ ವಿಡಿಯೋ ಕರೆಗಳಿಗೆ ಸಮಯದ ಮಿತಿಯನ್ನು ಜಾರಿಗೊಳಿಸಲಾಗುತ್ತದೆ. ಅಲ್ಲದೇ ಒಬ್ಬರು ಮತ್ತು ಇಬ್ಬರು ಸೇರಿ ನಡೆಸುವ ವಿಡಿಯೋ ಕಾಲ್​ಗಳ ಮಿತಿ 60 ನಿಮಿಷವಾಗಿರುತ್ತದೆ

ಗೂಗಲ್ ಮೀಟ್

ಗೂಗಲ್ ಮೀಟ್

  • Share this:

ನೀವು ಗೂಗಲ್​ ಮೀಟ್ ಉಚಿತ ಬಳಕೆದಾರರೇ..? ಹಾಗಾದ್ರೆ ಇನ್ಮುಂದೆ ಗ್ರೂಪ್ ವಿಡಿಯೋ ಕಾಲ್​ಗಳ ಮಿತಿ ಕೇವಲ 60 ನಿಮಿಷ ಮಾತ್ರ ಎನ್ನುವುದು ನಿಮಗೆ ನೆನಪಿರಲಿ. ಗೂಗಲ್ ಮೀಟ್​​ ಕಳೆದ ವರ್ಷ ಎಲ್ಲಾ ಬಳಕೆದಾರರಿಗೆ ಲಭ್ಯವಾದಾಗ ವಿಡಿಯೋ ಕಾನ್ಫರೆನ್ಸಿಂಗ್ ಸೇವೆಗೆ ಯಾವುದೇ ಸಮಯದ ಮಿತಿ ಮತ್ತು ಸದಸ್ಯರ ಮಿತಿ ಇರಲಿಲ್ಲ. ಆದರೆ ಈಗ ಗೂಗಲ್ ಮೀಟ್​​ ತನ್ನ ಗ್ರೂಪ್​ ವಿಡಿಯೋ ಕಾಲ್ ಮಿತಿಯನ್ನು 60 ನಿಮಿಷಗಳಿಗೆ ಸೀಮಿತಗೊಳಿಸುವುದಾಗಿ ಹೇಳಿದೆ. ಆದರೆ ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ತನ್ನ ಗಡುವನ್ನು ವಿಸ್ತರಿಸಿದೆ.


ಮೂರು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರೊಂದಿಗಿನ ವಿಡಿಯೋ ಕರೆಗಳಿಗೆ ಸಮಯದ ಮಿತಿಯನ್ನು ಜಾರಿಗೊಳಿಸಲಾಗುತ್ತದೆ. ಅಲ್ಲದೇ ಒಬ್ಬರು ಮತ್ತು ಇಬ್ಬರು ಸೇರಿ ನಡೆಸುವ ವಿಡಿಯೋ ಕಾಲ್​ಗಳ ಮಿತಿ 60 ನಿಮಿಷವಾಗಿರುತ್ತದೆ. ಒಂದು ವೇಳೆ ನೀವೇನಾದರೂ 60 ನಿಮಿಷಕ್ಕಿಂತಲೂ ಹೆಚ್ಚಿನ ವಿಡಿಯೋ ಗ್ರೂಪ್ ಕಾಲ್ ಮಾಡಲು ಬಯಸಿದರೆ ಇದಕ್ಕೆ ಹಣವನ್ನು ಪಾವತಿಸಿ ಅಪ್​ಗ್ರೇಡ್ ಆಗಬೇಕು. ಆ ಮೂಲಕ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನಿಯಮಿತ ವಿಡಿಯೋ ಕಾಲ್​ಗಳನ್ನು ಮಾಡಲು ಈ ಹೊಸ ಪಾವತಿಸಿದ ಖಾತೆಯನ್ನು ಹೊಂದುವುದು ಅನಿವಾರ್ಯವಾಗುತ್ತದೆ.


ಇದನ್ನೂ ಓದಿ:ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ; ಫೇಕ್ ಐಡಿ ಕಾರ್ಡ್ ಇಟ್ಕೊಂಡು ಇಷ್ಟೆಲ್ಲಾ ಆಟ ಆಡಿದ್ರಾ ಅರುಣಾ ಕುಮಾರಿ?

ಗೂಗಲ್​​ ಮೀಟ್​ ತನ್ನ ಮಾರ್ಗಸೂಚಿಗಳನ್ನು ನವೀಕರಿಸಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಸಮಯದ ಮಿತಿಯ ಬಗ್ಗೆ ನಮೂದಿಸಿದೆ. ಉಚಿತ - ಜಿ ಮೇಲ್ ಬಳಕೆದಾರರು ಮೂರು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರೊಂದಿಗೆ ಏಕಕಾಲದಲ್ಲಿ ಕೇವಲ 60 ನಿಮಿಷಗಳ ಕಾಲ ಗ್ರೂಪ್ ಕಾಲ್ ಹೋಸ್ಟ್ ಮಾಡಬಹುದು. 9 ಟೂ 5 ಗೂಗಲ್​ನಲ್ಲಿ ಕಂಡುಬಂದಂತೆ ಗೂಗಲ್​ ಮೀಟ್​ ಹೆಲ್ಪ್​​ ವೆಬ್​ಸೈಟ್​​ನಲ್ಲಿ ನವೀಕರಿಸಿದ ಮಾರ್ಗಸೂಚಿಯನ್ನು ತಿಳಿಸಿದೆ.


ಗೂಗಲ್​ ಹೇಳುವ ಪ್ರಕಾರ ಮೀಟಿಂಗ್ 55 ನಿಮಿಷಗಳಿಗೆ ಬಂದಾಗ ಬಳಕೆದಾರರಿಗೆ ನೋಟಿಫಿಕೇಷನ್ ತಲುಪಲಿದ್ದು, 'ನಿಮ್ಮ ಕರೆ ಇನ್ನೇನು ಮುಕ್ತಾಯವಾಗಲಿದೆ. ಈ ಕರೆಯನ್ನು ನೀವು ವಿಸ್ತರಿಸಲು ಹೋಸ್ಟ್ ಗೂಗಲ್​ ಖಾತೆಯನ್ನು ಅಪ್​ಗ್ರೇಡ್​ ಮಾಡಬಹುದು. ಇಲ್ಲವೇ ಕರೆ 60 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ' ಎಂದು ಮಾರ್ಗಸೂಚಿಗಳು ತಿಳಿಸಿವೆ.


ಗೂಗಲ್ ಮೊದಲು ಗ್ರೂಪ್​ ಕಾಲ್​ಗೆ 60 ನಿಮಿಷಗಳ ಮಿತಿಯನ್ನು ಇಡಲು ಚಿಂತನೆ ನಡೆಸಿತ್ತು. ಏಪ್ರಿಲ್ 2020ರಲ್ಲಿ ಎಲ್ಲಾ ಬಳಕೆದಾರರಿಗಾಗಿ ಗೂಗಲ್ ಮೀಟ್ ಪ್ರಾರಂಭಿಸಿದಾಗ, ಸೆಪ್ಟೆಂಬರ್ 2020ರಲ್ಲಿ 60 ನಿಮಿಷಗಳ ಕಾಲಮಿತಿಯನ್ನು ವಿಧಿಸುವುದಾಗಿ ಗೂಗಲ್ ಹೇಳಿತ್ತು. ಆದರೂ ಕಂಪನಿಯೂ ಉಚಿತ ಕರೆಗಳ ಗಡುವನ್ನು ಮಾರ್ಚ್ವರೆಗೆ ವಿಸ್ತರಿಸಿತ್ತು. ಆನಂತರ ಜೂನ್ 30ರವರಗೆ ಇತ್ತು.


ಅನಿಯಮಿತ ಗೂಗಲ್ ಮೀಟ್ ಕಾಲಿಂಗ್ ಇರಿಸಿಕೊಳ್ಳಲು ಬಯಸುವವರಿಗೆ ಗೂಗಲ್ ಮೀಟ್ ಹೆಲ್ಪ್ ವೆಬ್​ಸೈಟ್​​ ಮಾಹಿತಿ ನೀಡಿದೆ. ಗೂಗಲ್ ಕಾರ್ಯಕ್ಷೇತ್ರದ ಚಂದಾದಾರಿಕೆಗಾಗಿ ಬಳಕೆದಾರರು ಅಪ್​ಗ್ರೇಡ್​ ಮಾಡಲು ಸೈನ್ ಅಪ್​ ಮಾಡಿದರೆ ಮಾಹಿತಿ ಹೀಗಿದೆ.


ಇದನ್ನೂ ಓದಿ:Karnataka Rains: ಕರಾವಳಿಯಲ್ಲಿ ಭಾರೀ ಮಳೆ; ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ

ಇದೀಗ ಗೂಗಲ್ ಕಾರ್ಯಕ್ಷೇತ್ರದ ವೈಯಕ್ತಿಕ ಶ್ರೇಣಿಯನ್ನು ಅಪ್​ಗ್ರೇಡ್​ ಮಾಡಲು ತಿಂಗಳಿಗೆ 9.99 ಡಾಲರ್ (ಸರಿಸುಮಾರು 750 ರೂ.) ಎಂದು ತಿಳಿಸಿದೆ. ಒಂದು ವೇಳೆ ಹೋಸ್ಟ್ ಈ ತಿಂಗಳಿನ ಚಂದದಾರಿಕೆಗೆ ಅಪ್​ಗ್ರೇಡ್ ಆದರೆ 60 ನಿಮಿಷಕ್ಕಿಂತಲೂ ಹೆಚ್ಚು ಅನಿಯಮಿತ ಗ್ರೂಪ್ ಕಾಲ್​ಗಳನ್ನು ಮಾಡಬಹುದು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Published by:Latha CG
First published: