Marsha P Johnson: ತೃತೀಯ ಲಿಂಗಿ ಹೋರಾಟದ ಮುಂದಾಳು ಮಾರ್ಷ ಪಿ. ಜಾನ್ಸನ್​ಗೆ ಗೂಗಲ್​ನಿಂದ ವಿಶೇಷ ಗೌರವ

Pride Month: ಅಮೆರಿಕಾದಲ್ಲಿ ತೃತೀಯ ಲಿಂಗಿಗಳ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಷ ಪಿ. ಜಾನ್ಸನ್ ಅವರ ಗೌರವಾರ್ಥವಾಗಿ ಗೂಗಲ್ ಡೂಡಲ್ ಮೂಲಕ ಇಂದು ವಿಶೇಷ ಗೌರವ ಸಲ್ಲಿಸಿದೆ.

ಮಾರ್ಷ ಪಿ. ಜಾನ್ಸನ್ ಅವರ ಗೂಗಲ್ ಡೂಡಲ್

ಮಾರ್ಷ ಪಿ. ಜಾನ್ಸನ್ ಅವರ ಗೂಗಲ್ ಡೂಡಲ್

 • Share this:
  ಅಮೆರಿಕಾದ ಖ್ಯಾತ ತೃತೀಯ ಲಿಂಗಿ ಹೋರಾಟದ ಮುಂದಾಳು ಮಾರ್ಷ ಪಿ. ಜಾನ್ಸನ್ ಅವರ ಗೌರವಾರ್ಥವಾಗಿ ಗೂಗಲ್ ತನ್ನ ಡೂಡಲ್ ಮೂಲಕ ಇಂದು ವಿಶೇಷ ಸಂಭ್ರಮಾಚರಣೆ ಮಾಡಿದೆ. ಅಮೆರಿಕಾದಲ್ಲಿ ತೃತೀಯ ಲಿಂಗಿಗಳ ಹೋರಾಟ ಮತ್ತು ಚಳುವಳಿಯಲ್ಲಿ ಇವರ ಪಾತ್ರ ಪ್ರಮುಖವಾದೂದು. 2019 ರ ಈ ದಿನದಂದು ಮಾರ್ಷ ಅವರನ್ನು ನ್ಯೂಯಾರ್ಕ್ ಸಿಟಿ ಪ್ರೈಡ್ ಮಾರ್ಚ್‌ನ ಗ್ರ್ಯಾಂಡ್ ಮಾರ್ಷಲ್ ಆಗಿ ಗೌರವಿಸಿತು.

  ಮಾರ್ಷ ಅವರು ಆಗಸ್ಟ್ 24, 1945 ರಂದು ಜನಿಸಿದರು. 1963 ರಲ್ಲಿ ಪ್ರೌಡ  ಶಾಲಾ ಪದವಿ ಪಡೆದ ನಂತರ ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ಗ್ರಾಮಕ್ಕೆ ತೆರಳಿದರು. ಗ್ರೀನ್‌ವಿಚ್ ಗ್ರಾಮ ತೃತೀಯ ಲಿಂಗಿಗಳ ಕೇಂದ್ರವಾಗಿದೆ. ಇಲ್ಲಿ, ಅವರು ಕಾನೂನು ಬದ್ಧವಾಗಿ ತನ್ನ ಹೆಸರನ್ನು ಮಾರ್ಷ ಪಿ. ಜಾನ್ಸನ್ ಎಂದು ಬದಲಾಯಿಸಿಕೊಂಡರು.

  ಪಶ್ಚಿಮ ಬಂಗಾಳದ ಸಮುದ್ರ ದಂಡೆಗೆ ತೇಲಿ ಬಂತು 35 ಅಡಿ ಉದ್ದದ ತಿಮಿಂಗಿಲದ ಶವ!

  ತೃತೀಯ ಲಿಂಗಿಗಳಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ಜಾನ್ಸನ್ 1969ರ ಸ್ಟೋನ್ವಾಲ್ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇದನ್ನು ಅಂತರರಾಷ್ಟ್ರೀಯ ಎಲ್ಜಿಬಿಟಿಕ್ಯೂ ಮತ್ತು ಹಕ್ಕುಗಳ ಆಂದೋಲನದ ನಿರ್ಣಾಯಕ ತಿರುವು ಎಂದು ಪರಿಗಣಿಸಲಾಯಿತು.

  ಹೀಗೆ ಅಮೆರಿಕಾದಲ್ಲಿ ತೃತೀಯ ಲಿಂಗಿಗಳ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಷ ಪಿ. ಜಾನ್ಸನ್ ಅವರ ಗೌರವಾರ್ಥವಾಗಿ ಗೂಗಲ್ ಡೂಡಲ್ ಮೂಲಕ ಇಂದು ವಿಶೇಷ ಗೌರವ ಸಲ್ಲಿಸಿದೆ.

  India-China Conflict: ಗಾಲ್ವಾನ್​ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್​ಗಳ ಮಾತುಕತೆ
  First published: