Queen Elizabeth II: ಕಪ್ಪು ಬಣ್ಣದ ಡೂಡಲ್​ ರಚಿಸಿ ರಾಣಿ ಎಲಿಜಬೆತ್​ಗೆ ಭಾವನಾತ್ಮಕ ಗೌರವ ಸೂಚಿಸಿದ ಗೂಗಲ್​

ರಾಣಿ ಎಲಿಜಬೆತ್ II 1947 ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಅವರು ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

ರಾಣಿ ಎಲಿಜಬೆತ್ II

ರಾಣಿ ಎಲಿಜಬೆತ್ II

  • Share this:
    ಇದೇ ಗುರುವಾರದಂದು ಬ್ರಿಟನ್ ರಾಣಿ ಎಲಿಜಬೆತ್ II (Britain Queen Elizabeth Death) ನಿಧನರಾಗಿದ್ದಾರೆ . ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಖ್ಯಾತಿ ಪಡೆದಿದ್ದ ಅವರು ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರ ಸಾವಿನ ಸುದ್ದಿ ಅನೇಕರಿಗೆ ನೋವು ತಂದಿದೆ. ಜನಪ್ರಿಯ ಗೂಗಲ್​ (Google) ಕೂಡ ರಾಣಿ ಎಲಿಜಬೆತ್ II ಸಾವಿನ ಬಗ್ಗೆ ಸಂತಾಪ ಸೂಚಿಸಿದೆ. ವಿಶೇಷ ಡೂಡಲ್ (Doodle)​ ಮೂಲಕ ಮೂಲಕ ಬೇಸರ ತೋಡಿಕೊಂಡಿದೆ.

    ಗೂಗಲ್​ ಕಪ್ಪು ಮತ್ತು ಬೂದು ಬಣ್ಣದ ಡೂಡಲ್​ ರಚಿಸಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ರಾಣಿ ಎಲಿಜಬೆತ್ II 1926 -2022 ಎಂದು ತೋರಿಸುತ್ತಿದೆ. ಅಂದಹಾಗೆಯೇ, ರಾಣಿ ಎಲಿಜಬೆತ್ II ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ (Britain Queen Elizabeth ) ಖ್ಯಾತಿ ಗಳಿಸಿದ್ದರು. ಅಲ್ಲದೇ 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಮ್ ಆಡಳಿತದ ಪತನ ಮತ್ತು ಅಂತರ್ಜಾಲ ಯುಗದ ಆರಂಭ ಉನ್ನತಿಗಳಂತಹ ಮಹತ್ವದ ಜಾಗತಿಕ ಬದಲಾವಣೆಗಳಿಗೆ ಅವರು ಸಾಕ್ಷಿಯಾಗಿದ್ದರು.

    ರಾಣಿ ಎಲಿಜಬೆತ್ II 1947 ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಅವರು ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

    ಇದನ್ನೂ ಓದಿ: Celeb Education: ಭಾರತದಲ್ಲಿ ಅತಿ ಹೆಚ್ಚು ಓದಿದ ನಟಿ ಇವರಂತೆ, ಗೆಸ್ ಮಾಡಿ ನೋಡೋಣ

    ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳ ತುಂಬು ಕುಟುಂಬ

    ರಾಣಿ ಎಲಿಜಬೆತ್ II ಬ್ರಿಟಿಷರ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳಿದ ರಾಣಿ ಎಂಬ ಕಾರಣಕ್ಕೆ ಇನ್ನಷ್ಟು ಮಹತ್ವ ಗಳಿಸಿದ್ದರು. ಅವರಿಗೆ ನಾಲ್ಕು ಮಕ್ಕಳು, ಎಂಟು ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳು ಇದ್ದರು.  ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸೆಸ್ ಅನ್ನಿ, ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್ರಾಣಿ ಎಲಿಜಬೆತ್ ಅವರ ಮಕ್ಕಳು.

    ಇದನ್ನೂ ಓದಿ: Success Story: ದಿನಕ್ಕೆ 16 ಗಂಟೆಗಳ ಕಾಲ ಓದಿ IAS ಆದ ಪುಟ್ಟ ಹಳ್ಳಿಯ ವಂದನಾ ಮೀನಾ 

    ರಾಣಿ ಎಲಿಜಬೆತ್ 500 ಮಿಲಿಯನ್ ಡಾಲರ್ (ಸುಮಾರು 4,000 ಕೋಟಿ ರೂಪಾಯಿ) ವೈಯಕ್ತಿಕ ಸಂಪತ್ತನ್ನು ಹೊಂದಿದ್ದಾರೆ.  ಅವರು ಕಳೆದ 70 ವರ್ಷಗಳಲ್ಲಿ ರಾಣಿಯಾಗಿ ಈ ಮೊತ್ತವನ್ನು ಗಳಿಸಿದ್ದಾರೆ. ಇದಲ್ಲದೆ, ಈ ಬ್ರಿಟಿಷ್ ರಾಜಮನೆತನದ ಒಟ್ಟು ವ್ಯವಹಾರವು ಸುಮಾರು $ 28 ಬಿಲಿಯನ್ ಆಗಿದೆ, ಇದನ್ನು ರಾಯಲ್ ಫರ್ಮ್ ಎಂದು ಕರೆಯಲಾಗುತ್ತದೆ. ಕಿಂಗ್ ಜಾರ್ಜ್ VI ಮತ್ತು ಪ್ರಿನ್ಸ್ ಫಿಲಿಪ್ ಇದನ್ನು ಕುಟುಂಬ ವ್ಯವಹಾರ ಎಂದು ಕರೆಯುತ್ತಾರೆ.








    Published by:Harshith AS
    First published: