News18 India World Cup 2019

ಬಾಲಿವುಡ್​ ದುರಂತ ನಾಯಕಿಯ 85ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಗೂಗಲ್​


Updated:August 1, 2018, 12:39 PM IST
ಬಾಲಿವುಡ್​ ದುರಂತ ನಾಯಕಿಯ 85ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಗೂಗಲ್​

Updated: August 1, 2018, 12:39 PM IST
ನ್ಯೂಸ್​18 ಕನ್ನಡ

ಪರದೆ ಮೇಲೆ ರಾಣಿಯಂತೆ ಮೆರೆದು ದುರಂತ ಅಂತ್ಯ ಕಂಡ ನಾಯಕಿಯರಲ್ಲಿ ಮೀನಾ ಕುಮಾರಿ  ಸಹ ಒಬ್ಬರು. ಇಂದು ಅವರ 85ನೇ ಹುಟ್ಟು ಹಬ್ಬ. ಅದರ ಸ್ಮರಣಾರ್ಥ ಗೂಗಲ್​ ತನ್ನ ಡೂಡಲ್ಸ್​ನಲ್ಲಿ ಮೀನಾ ಕುಮಾರಿ ಡೂಡಲ್​ ಬಿಡಿಸಿ ಗೌರವ ಸಲ್ಲಿಸಿದೆ.

ಗೂಗಲ್​ ಡೂಡಲ್​ ಪುಟದಲ್ಲೇ ಬರೆದಿರುವಂತೆ ಮೀನಾ ಕುಮಾರಿ ತನ್ನ ಮಾದಕ ನೋಟದಿಂದಲೇ ಹೆಸರು ಮಾಡಿದ್ದ ನಟಿ. 1933ರ ಆಗಸ್ಟ್​ 1ರಂದು ಪಂಜಾಬ್​ನ ಬಡಕುಟುಂಬದಲ್ಲಿ ಜನಿಸಿ, ಕೇವಲ ನಾಲ್ಕು ವರ್ಷವಿರುವಾಗಲೇ ಸಿನಿಮಾ ರಂಗ ಪ್ರವೇಶಿಸಿದ ಕಲಾವಿದೆ. ತಮ್ಮ ಅತ್ಯಾಕರ್ಷಕ ನಟನೆಯಿಂದ ಬೇಬಿ ಮೀನಾ ಎಂದೇ ಗುರುತಿಸಿಕೊಂಡಿದ್ದರು.

ಬಳಿಕ ಭಾರತೀಯ ಸಿನಿಮಾ ರಂಗದಲ್ಲೇ ಅತ್ಯಂತ ಜನಪ್ರಿಯ ನಟಿಯಾಗಿ ಬೆಳೆದರು. ತಮ್ಮ 38 ವರ್ಷಗಳ ಸಿನಿ ಪಯಣದಲ್ಲಿ 90ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿ, ಕಪ್ಪು ಬಿಳುಪಿನ ಸಿನಿ ಪ್ರೇಕ್ಷಕರ ಮನೆ ಮಾತಾಗಿದ್ದರು. ಆದರೆ ಬಣ್ಣದ ಬದುಕಿನಿಂದ ಹೊರತಾಗಿ ಅವರ ಜೀವನ ಅಕ್ಷರಶಃ ಕಗ್ಗತ್ತಲೆಯಿಂದ ಕೂಡಿತ್ತು. ಹೀಗಾಗಿಯೇ ಮೀನಾರನ್ನು ಬಾಲಿವುಡ್​ನ ದುರಂತ ನಾಯಕಿ ಎಂದೇ ಕರೆಯಲಾಗುತ್ತದೆ.

ತಮ್ಮ ಸ್ವಪ್ರಯತ್ನದಿಂದಲೇ ಯಶಸ್ಸಿನ ಉತ್ತುಂಗಕ್ಕೇರಿದ್ದರೂ ಮೀನಾ, ಎರಡು ಮಕ್ಕಳ ತಂದೆಯಾಗಿದ್ದ ನಿರ್ದೇಶಕ ಕಮಲ್​ ಅಮ್ರೋಹಿಯನ್ನು ಪ್ರೀತಿಸಿದ್ದರು. ನಂತರ 1952ರಲ್ಲಿ ಗುಟ್ಟಾಗಿ ಪ್ರೀತಿಸಿದ್ದ ಅವರನ್ನೇ ಮದುವೆಯೂ ಆದರು. ಆದರೆ 1963ರಲ್ಲಿ ಬಿಡುಗಡೆಯಾದ ಬ್ಲಾಕ್​ ಬಾಸ್ಟರ್ ಸಿನಿಮಾ 'ಸಾಹೇಬ್​ ಬಿಬಿ ಔರ್ ಗುಲಾಮ್'​ ಅತ್ಯಂತ ಶ್ರೇಷ್ಠ ಚಿತ್ರವಾಗಿತ್ತು. ಆದರೆ ಈ ಸಿನಿಮಾ ಹಿಟ್​ ಆದ ಬಳಿಕ ನಡೆದ ಘಟನೆ ಮೀನಾ ಅವರ ಜೀವನವನ್ನೇ ಬದಲಿಸಿ ಬಿಟ್ಟಿತ್ತು. ಇದಿರಂದಾಗಿ ಅಂದುಕೊಂಡಂತೆ ಜೀವನ ಸಾಗಿಸಲು ವಿಫಲರಾದ ಮೀನಾ, 1964ರಲ್ಲಿ ಗಂಡನಿಂದ ದೂರಾಗಿ ಮದ್ಯವ್ಯಸನಿಯಾಗಿ ಜೀವನ ಸಾಗಿಸುತ್ತಾರೆ.

ಇದರಿಂದಾಗಿ ಮೀನಾ ನಿದ್ದೆ ಮಾಡಲು ಸದಾ ಮಾತ್ರೆಗಳ ಮೊರೆ ಹೋಗುತ್ತಿದ್ದರು. ಅವರಿಗೆ   1968ರಲ್ಲಿ ಯಕೃತ್​ (ಲಿವರ್)​ ಸಂಬಂಧಿತ ರೋಗವಿದೆ ಎಂದು ವೈದ್ಯರು ದೃಢಪಡಿಸುತ್ತಾರೆ. ಹೀಗಾಗಿ ಯಕೃತ್​ ಚಿಕಿತ್ಸೆಗೆಂದು ಸ್ವಿಟ್ಜರ್​ಲೆಂಡ್​ಗೆ ತೆರಳಿದ ಮೀನಾ, ಚಿಕಿತ್ಸೆ ಫಲಕಾರಿಯಾಗದೆ 1972 ಮಾರ್ಚ್​ 28ರಂದು ಭಾರತದಲ್ಲೇ ಕೊನೆ ಉಸಿರೆಳೆದರು.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...