ಇವತ್ತು ಗೂಗಲ್​ ಡೂಡಲ್​ ಚೆಕ್​ ಮಾಡಿದ್ರಾ? ಇಲ್ಲಾಂದ್ರೆ ಫಸ್ಟ್​ ನೋಡಿ ಸಖತ್​ ಮಜಾ ಇದೆ..!

ಸಂಜೆಯಾದರೆ ಅಥವಾ ವೀಕೆಂಡ್‌(Weekend) ಆದರೆ ಏನಾದ್ರೂ ತಿನ್ನಬೇಕು ಅನ್ನಿಸಿದಾಗಲೆಲ್ಲ ಅಥವಾ ಮನೆಗೆ ಯಾರಾದ್ರೂ ಬಂದರೆ ಹಾಗೂ ಗೆಳೆಯರೊಡನೆ, ಕುಟುಂಬದವರೊಟ್ಟಿಗೆ ಹೊರಗೆ ಹೋಗಲು ಸಹ ಹಲವರಿಗೆ ಪಿಜ್ಜಾ ನೆನಪಾಗುತ್ತೆ.

ಇಂದಿನಿ ಗೂಗಲ್​ ಡೂಡಲ್​ನಲ್ಲಿ ಪಿಜ್ಜಾ ಗೇಮ್​

ಇಂದಿನಿ ಗೂಗಲ್​ ಡೂಡಲ್​ನಲ್ಲಿ ಪಿಜ್ಜಾ ಗೇಮ್​

  • Share this:
Google Doodle Today India: ಪಿಜ್ಜಾ(Pizza) ಎಂದರೆ ಯುವಕ, ಯುವತಿ, ಮಕ್ಕಳಿಗಂತೂ ಬಹುತೇಕರಿಗೆ ಇಷ್ಟ. ಸಂಜೆಯಾದರೆ ಅಥವಾ ವೀಕೆಂಡ್‌(Weekend) ಆದರೆ ಏನಾದ್ರೂ ತಿನ್ನಬೇಕು ಅನ್ನಿಸಿದಾಗಲೆಲ್ಲ ಅಥವಾ ಮನೆಗೆ ಯಾರಾದ್ರೂ ಬಂದರೆ ಹಾಗೂ ಗೆಳೆಯರೊಡನೆ, ಕುಟುಂಬದವರೊಟ್ಟಿಗೆ ಹೊರಗೆ ಹೋಗಲು ಸಹ ಹಲವರಿಗೆ ಪಿಜ್ಜಾ ನೆನಪಾಗುತ್ತೆ. ಇದರಲ್ಲಿ ವೆಜ್‌(Veg) ಆದರೂ ಸರಿ, ನಾನ್‌ ವೆಜ್‌(Non-Veg) ಆದರೂ ಸರಿಯೇ. ಪಿಜ್ಜಾ ಅಂದ ಕೂಡಲೇ ನಿಮ್ಮ ಬಾಯಲ್ಲಿ ನೀರು ಬಂತಾ..? ಈಗ್ಯಾಕಪ್ಪಾ ಪಿಜ್ಜಾ ಅಂದ್ರೆ ಗೂಗಲ್‌ ಇಂಡಿಯಾ(Google India) ಇಂದು ಗೂಗಲ್‌ ಡೂಡಲ್‌(Google Doodle)ನಲ್ಲಿ ಪಿಜ್ಜಾವನ್ನು ಸೆಲೆಬ್ರೇಟ್‌ ಮಾಡುತ್ತಿದೆ. ಪಿಜ್ಜಾದ ಇತಿಹಾಸ, ಈ ದಿನ ಸೆಲೆಬ್ರೇಟ್‌ ಮಾಡಲು ಕಾರಣ ಹೀಗಿದೆ ನೋಡಿ. ಇಂತಹ ನೆಚ್ಚಿನ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾದ ಪಿಜ್ಜಾವನ್ನು ಇಂಟರ್‌ಆ್ಯಕ್ಟೀವ್‌ ಗೂಗಲ್ ಡೂಡಲ್ ಮೂಲಕ ಸೆಲೆಬ್ರೇಟ್‌ ಮಾಡಲಾಗುತ್ತಿದೆ. 2007ರಲ್ಲಿ ಈ ದಿನದಂದು, ನಿಯಾಪೊಲಿಟನ್ "ಪಿಜ್ಜೈಯುಲೊ"(“Pizzaiuolo”) ಪಾಕಶಾಲೆಯ ಕಲೆಯನ್ನು ಇಂಟ್ಯಾಜಿಬಲ್‌ ಕಲ್ಚರಲ್‌ ಹೆರಿಟೇಜ್‌ ಆಫ್‌ ಹ್ಯೂಮ್ಯಾನಿಟಿ ಎಂಬ ಯುನೆಸ್ಕೋ ಪ್ರತಿನಿಧಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಗೂಗಲ್​ ಡೂಡಲ್​ನಲ್ಲಿ ಪಿಜ್ಜಾ ಗೇಮ್​!

ಈ ಗೂಗಲ್‌ ಡೂಡಲ್‌ನ ಪಿಜ್ಜಾ ಪಝಲ್ ಗೇಮ್‌ನಲ್ಲಿ ಪ್ರಪಂಚದಾದ್ಯಂತದ 11 ಅತ್ಯಂತ ಪ್ರೀತಿಯ ಪಿಜ್ಜಾ ಟಾಪಿಂಗ್ಸ್‌ಗಳನ್ನು ಹೊಂದಿದೆ ಮತ್ತು ನಿಮ್ಮ ನೆಚ್ಚಿನ ಪಿಜ್ಜಾ ಪ್ರಕಾರ ಆಧರಿಸಿ ಪಿಜ್ಜಾವನ್ನು ಕಟ್‌ ಮಾಡಲು ಬಳಕೆದಾರರಿಗೆ ಸವಾಲು ಹಾಕುತ್ತದೆ. ಈ ಪಜಲ್‌ ಗೇಮ್‌ ಆಡುವವರು ಗೇಮ್‌ನಲ್ಲಿ ಕೇಳಿದ ಟಾಪಿಂಗ್ಸ್ ಮತ್ತು ಸ್ಲೈಸ್‌ಗಳ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ನೀವು ಹೆಚ್ಚು ನಿಖರವಾಗಿ ಆರ್ಡರ್‌ ಮಾಡಿದರೆ, ನೀವು ಹೆಚ್ಚು ಸ್ಟಾರ್‌ಗಳನ್ನು ಗಳಿಸುತ್ತೀರಿ. ಡಿಫ್ರೆಂಟ್ ಡಿಫ್ರೆಂಟ್​ ಪಿಜ್ಜಾಗಳನ್ನು ಕಟ್​ ಮಾಡಲು ಈ ಗೇಮ್ ಕೇಳುತ್ತೆ.

ಪಿಜ್ಜಾ ಬಂದಿದ್ದು ಎಲ್ಲಿಂದ ಗೊತ್ತಾ?

ಈಜಿಪ್ಟ್‌ನಿಂದ ರೋಮ್‌ವರೆಗಿನ ಪ್ರಾಚೀನ ನಾಗರಿಕತೆಗಳಲ್ಲಿ ಫ್ಲ್ಯಾಟ್‌ಬ್ರೆಡ್ ಅನ್ನು ಶತಮಾನಗಳ ಕಾಲ ಸೇವಿಸಲಾಗುತ್ತಿತ್ತು. ಆದರೆ, ನೈಋತ್ಯ ಇಟಲಿಯ ನಗರವಾದ ನೇಪಲ್ಸ್‌ನಲ್ಲಿ ಪಿಜ್ಜಾ ಪ್ರಾರಂಭವಾಯಿತು. 1700ರ ದಶಕದ ಉತ್ತರಾರ್ಧದಲ್ಲಿ ನಾವು ಇಂದು ತಿಳಿದಿರುವ ಪಿಜ್ಜಾದ ಜನ್ಮಸ್ಥಳವೆಂದು ವ್ಯಾಪಕವಾಗಿ ಮನ್ನಣೆ ಪಡೆದಿದೆ. ಶತಮಾನಗಳ ಕಾಲ ಜಾಗತಿಕ ವಲಸೆ, ಆರ್ಥಿಕ ಅಭಿವೃದ್ಧಿ ಮತ್ತು ತಾಂತ್ರಿಕ ವಿಕಾಸ ಮುಂದುವರಿದಂತೆ ಪಿಜ್ಜಾವನ್ನು ಸಹ ಶತಮಾನಗಳಿಂದಲೂ ತಯಾರಿಸಲಾಗುತ್ತಿದೆ. 3 ಶತಮಾನಗಳು ದಾಟಿದ್ರೂ ಪಿಜ್ಜಾ ಇನ್ನೂ ಮುಂದುವರಿದಿದ್ದು, ಇನ್ನೂ ಹಲವು ಶತಮಾನಗಳ ಕಾಲ ಮುಂದುವರಿಯುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಇದನ್ನು ಓದಿ : ಮಹಿಳೆಯ ಖಾತೆಗೆ 7 ಕೋಟಿ ಜಮೆ: ಹಣ ಹಿಂಪಡೆದುಕೊಳ್ಳಿ ಎಂದು 15 ತಿಂಗಳು ಬ್ಯಾಂಕ್ ಸುತ್ತಾಡಿದ ಮಹಿಳೆ

ಪ್ರತಿ ಸೆಕೆಂಡ್​ಗೆ 350 ಸ್ಲೈಸ್​ ಫಿಜ್ಜಾ ಖಾಲಿ!

ಯಾಕೆಂದರೆ, ವಿಶ್ವದಲ್ಲಿ ಇಂದು ಅಂದಾಜು ಐದು ಬಿಲಿಯನ್ ಪಿಜ್ಜಾಗಳನ್ನು ಸೇವಿಸಲಾಗುತ್ತಿದೆ. ಈ ಪೈಕಿ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಪ್ರತಿ ಸೆಕೆಂಡಿಗೆ 350 ಸ್ಲೈಸ್‌ ಪಿಜ್ಜಾಗಳನ್ನು ತಿನ್ನಲಾಗುತ್ತಿದೆಯಂತೆ

ಇದನ್ನು ಓದಿ :  ಯಾರಿಗೂ ಬೇಡದ ಚಿತ್ರಕ್ಕೆ ಎರಡೂವರೆ ಸಾವಿರ ಕೊಟ್ಟು ಕೊಂಡ ವ್ಯಕ್ತಿ, ಈಗ ಅದರ ಬೆಲೆ 375 ಕೋಟಿ! ಅದೃಷ್ಟ ಅಂದ್ರೆ ಇದು!

'ಪಿಝೈಯುಲೋ' ಪಾಕಶಾಲೆಯ ಕಲೆ ಯಾವುದು..?

"ನಿಯಾಪೊಲಿಟನ್ 'ಪಿಜ್ಜೈಯುಲೊ' ಕಲೆಯು 4 ವಿಭಿನ್ನ ಹಂತಗಳನ್ನು ಒಳಗೊಂಡಿರುವ ಒಂದು ಪಾಕಶಾಲೆಯ ಅಭ್ಯಾಸವಾಗಿದೆ. ಇಲ್ಲಿ ಪಿಜ್ಜಾದ ಹಿಟ್ಟನ್ನು ತಯಾರಿಸುವುದು ಮತ್ತು ಅದನ್ನು ಕಟ್ಟಿಗೆ ಒಲೆಯಲ್ಲಿ ಬೇಯಿಸುವುದು" ಎಂದು ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ) ಹೇಳುತ್ತದೆ.ಈ ಪಿಜ್ಜಾ ಕ್ಯಾಂಪನಿಯಾ ಪ್ರದೇಶದ ರಾಜಧಾನಿ ನೇಪಲ್ಸ್‌ನಲ್ಲಿ ಹುಟ್ಟಿಕೊಂಡಿದೆ ಎಂದು ಸಹ ಯಿನೆಸ್ಕೋ ಹೇಳುತ್ತದೆ. ಅಲ್ಲಿ ಸುಮಾರು 3,000 ಪಿಜ್ಜೈಯುಲಿ ಜನರು ಈಗ ವಾಸಿಸುತ್ತಿದ್ದಾರೆ ಮತ್ತು ಅದನ್ನು ಮಾಡುತ್ತಾರೆ.. Pizzaiuoliಗೆ ಸಂಬಂಧಿಸಿದ ಸಮುದಾಯಗಳಿಗೆ ಇದು ಜೀವಂತ ಕೊಂಡಿಯಾಗಿದೆ ಎಂದೂ ಯುನೆಸ್ಕೋ ತಿಳಿಸಿದೆ.
Published by:Vasudeva M
First published: