Google: ಆಲ್​ವೇಸ್ ಡಿಫ್ರೆಂಟ್​ ಈ ಗೂಗಲ್ ಡೂಡಲ್! ಪ್ರತಿದಿನ ಒಂದಲ್ಲ ಒಂದು ಸಂದೇಶ ಸಾರುತ್ತೆ

ಜಗತ್ತಿನ ದೈತ್ಯ ಸರ್ಚ್ ಎಂಜಿನ್ (Search Engine) ಗೂಗಲ್ (Google) ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಇದು ಆಗಾಗ ಜಗತ್ತಿನ ಅತಿ ವಿಶಿಷ್ಟ ಪ್ರಸಂಗಗಳನ್ನು, ಗಣ್ಯರ ಜನ್ಮದಿನ (Birthday of the Elite) ಗಳನ್ನು ತನ್ನದೇ ಶೈಲಿಯಲ್ಲಿ ತೋರಿಸುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಗತ್ತಿನ ದೈತ್ಯ ಸರ್ಚ್ ಎಂಜಿನ್ (Search Engine) ಗೂಗಲ್ (Google) ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಇದು ಆಗಾಗ ಜಗತ್ತಿನ ಅತಿ ವಿಶಿಷ್ಟ ಪ್ರಸಂಗಗಳನ್ನು, ಗಣ್ಯರ ಜನ್ಮದಿನ (Birthday of the Elite) ಗಳನ್ನು ಅಥವಾ ಇನ್ನ್ಯಾವುದೋ ಅತಿ ವಿಶಿಷ್ಟ ಅಂಶಗಳ ಸಮರ್ಪಣೆಯಲ್ಲಿ ತನ್ನ ಸರ್ಚ್ ಎಂಜಿನ್ ಪುಟವನ್ನು ತನ್ನದೆ ಆದ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸುತ್ತದೆ. ಸಾಮಾನ್ಯವಾಗಿ ದನ್ನು ಗೂಗಲ್ ಡೂಡಲ್ (Google Doodle) ಎಂದು ಕರೆಯಲಾಗುತ್ತದೆ.

ಭೂ ದಿನಕ್ಕೆ ಡಿಫ್ರೆಂಟ್​ ಡೂಡಲ್​ ತೋರಿಸಿದ್ದ ಗೂಗಲ್​!

ಈ ಬಾರಿಯು ಗೂಗಲ್ ಭೂದಿನಾಚರಣೆಯ ಅಂಗವಾಗಿ ವಿಶಿಷ್ಟ ಡೂಡಲ್ ಒಂದನ್ನು ತೋರಿಸುತ್ತಿದೆ. ಗೂಗಲ್ ಸರ್ಚ್ ಇಂಜಿನ್‌ನ  ಡೂಡಲ್ ಕಲಾಕೃತಿಯು ವಾರ್ಷಿಕವಾಗಿ ಆಚರಿಸಲಾಗುವ ಭೂದಿನಕ್ಕೆ ಸಮರ್ಪಿತವಾಗಿದೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯು ಇಂದು ನಮ್ಮ ಕಾಲದ ಬಗೆಹರಿಸಬೇಕಾದ ಅತ್ಯಂತ ಪ್ರಮುಖ ವಿಷಯಗಳಲ್ಲಿ ಹೇಗೆ ಒಂದಾಗಿದೆ ಎಂಬುದನ್ನು ತಿಳಿಯಪಡಿಸುತ್ತ ಅದರ ಪ್ರಭಾವ ಎಷ್ಟಿದೆ ಎಂಬುದನ್ನು ತೋರಿಸುವುದಕ್ಕೆ ಡೂಡಲ್ ಮುಡಿಪಾಗಿತ್ತು.

ಪರಿಸರದ ಬಗ್ಗೆ ಕಾಳಜಿ ತೋರಿದ್ದ ಗೂಗಲ್​ ಡೂಡಲ್​!

ಪರಿಸರದಲ್ಲಾಗುತ್ತಿರುವ ಬದಲಾವಣೆಗಳು ಹಾಗೂ ಇದರ ಪರಿಣಾಮವಾಗಿ ಮುಂದೆ ಆಗಬಹುದಾದ ಸಮಸ್ಯೆಗಳ ಕುರಿತಂತೆ ಆಧುನಿಕ ಪರಿಸರ ಚಳುವಳಿಯು ಈ ಹಿಂದೆ ಅಂದರೆ 1970 ರಲ್ಲೇ ಪ್ರಾರಂಭವಾಗಿತ್ತು. ಇಂದಿಗೂ ಆ ಚಳುವಳಿಯನ್ನು ಗುರುತಿಸುವ ಮೂಲಕ ಆ ಬಗ್ಗೆ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಉಂಟಾಗಲೆಂದು ಪ್ರತಿ ವರ್ಷ ಏಪ್ರಿಲ್ 22 ಅನು ಭೂದಿನ ಎಂದು ಆಚರಿಸುತ್ತ ಬರಲಾಗಿದೆ. ಹಾಗಾಗಿ ಗೂಗಲ್ ತನ್ನ ಸಾಮರ್ಥ್ಯಾನುಸಾರ ರಿಯಲ್ ಟೈಮ್ ಮ್ಯಾಪ್ ಬಳಸುವ ಮೂಲಕ ಡೂಡಲ್ ಒಂದನ್ನು ವಿನ್ಯಾಸ ಮಾಡಿದ್ದು ಆ ಮೂಲಕ ಪರಿಸರದ ಬಗ್ಗೆ ತನಗಿರುವ ಕಾಳಜಿಯನ್ನು ಹೊರ ಹಾಕಿದೆ ಎಂದು ಹೇಳಬಹುದು.

ಇದನ್ನೂ ಓದಿ: ಚಿಕಿತ್ಸೆ ಪಡೆಯುತ್ತಿದ್ದ ಬೆಡ್​ನಿಂದಲೇ ಕೆಲಸದ ಇಂಟರ್​ವ್ಯೂ ನೀಡಿದ ಕ್ಯಾನ್ಸರ್ ರೋಗಿ, ಕೆಲಸ ಸಿಕ್ಕಿತಾ?

ಭೂಮಿಯ ಸುತ್ತಲಿನ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ತೋರಿಸಲು Google Doodle ನೈಜ ಸಮಯ-ನಡೆಯ ಚಿತ್ರಣವನ್ನು ಬಿಡುಗಡೆ ಮಾಡಿದೆ. ಪ್ರತಿ ಸ್ಥಳದ ಚಿತ್ರಣವನ್ನು ಗೂಗಲ್ ಹುಡುಕಾಟ ಎಂಜಿನ್‌ನ ಮುಖಪುಟದಲ್ಲಿ ಬಿತ್ತರಿಸಲಾಗುತ್ತಿದ್ದು ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಾಗಿರುವ ಪ್ರಭಾವಗಳನ್ನು ಪ್ರದರ್ಶಿಸಲಾಗುತ್ತಿದೆ.

ಮೊದಲ ಡೂಡಲ್ ತಾಂಜಾನಿಯಾದ ಕಿಲಿಮಂಜಾರೋ ಪರ್ವತದ ಶಿಖರದಲ್ಲಿ ಹಿಮನದಿಯ ಹಿಮ್ಮೆಟ್ಟುವಿಕೆ ಹಾಗೂ ಬರಿದಾಗುವಿಕೆಯ ನೈಜ ಚಿತ್ರಣವನ್ನು ಒಳಗೊಂಡಿದೆ. ಇದರಲ್ಲಿ ಟೈಮ್ ಲ್ಯಾಪ್ಸ್‌ನಲ್ಲಿ ಸೆರೆಹಿಡಿಯಲಾದ ಚಿತ್ರಗಳನ್ನು ಪ್ರತಿ ಡಿಸೆಂಬರ್‌ನಲ್ಲಿ 1986 ರಿಂದ 2020 ರವರೆಗೆ ತೆಗೆದುಕೊಳ್ಳಲಾಗಿದೆ.

ಹಿಮನದಿ ಬರಿದಾಗುತ್ತಿರುವುದನ್ನು ತೋರಿಸಿದ್ದ ಗೂಗಲ್​!

ಮತ್ತೊಂದು ಚಿತ್ರಣವು 2000 ರಿಂದ 2020 ರವರೆಗೆ ಪ್ರತಿ ಡಿಸೆಂಬರ್‌ನಲ್ಲಿ ತೆಗೆದ ಚಿತ್ರಗಳನ್ನು ಬಳಸಿಕೊಂಡಿದ್ದು ಇದರಲ್ಲಿ ಗ್ರೀನ್‌ಲ್ಯಾಂಡ್‌ನ ಸೆರ್ಮರ್‌ ಸೂಕ್‌ನಲ್ಲಿ ಹಿಮನದಿ ಬರಿದಾಗುತ್ತಿರುವುದನ್ನು ತೋರಿಸುತ್ತದೆ. ಗೂಗಲ್ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂರನೇ ಚಿತ್ರಣವು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಗಳ ಚಿತ್ರಣ ಆಗಿದ್ದು, ಲಿಜಾರ್ಡ್ ಐಲ್ಯಾಂಡ್‌ನಲ್ಲಿ ಹವಳದ ಬ್ಲೀಚಿಂಗ್ ಅನ್ನು ತೋರಿಸುತ್ತದೆ. ಇದಕ್ಕೆ ಸಂಬಂಧಿಸಿದ ಡೂಡಲ್‌ನಲ್ಲಿ ಬಳಸಲಾದ ಚಿತ್ರಗಳನ್ನು ಮಾರ್ಚ್‌ನಿಂದ ಮೇ 2016 ರವರೆಗೆ ಪ್ರತಿ ತಿಂಗಳು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಅಮೆರಿಕಾದ ಹೆಲ್ ಪಟ್ಟಣದ ಮೇಯರ್ ಈ ಬೆಕ್ಕು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ಮುಂದಿನ ಪೀಳಿಗೆಗೆ ಸಂದೇಶ ಸಾರುತ್ತೆ ಗೂಗಲ್​!

"ಗೂಗಲ್ ಅರ್ಥ್ ಟೈಮ್‌ಲ್ಯಾಪ್ಸ್ ಮತ್ತು ಇತರ ಮೂಲಗಳಿಂದ ನೈಜ ಸಮಯಗಳ ಕಳೆದ ಚಿತ್ರಣವನ್ನು ಬಳಸಿಕೊಂಡು, ಡೂಡಲ್ ನಮ್ಮ ಗ್ರಹದ ಸುತ್ತಲಿನ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ತೋರಿಸುತ್ತದೆ. ಈ ದೃಶ್ಯಗಳನ್ನು ವೀಕ್ಷಿಸಲು ದಿನವಿಡೀ ಟ್ಯೂನ್ ಆಗಿರಿ, ಹಾಗೂ ಪ್ರತಿಯೊಬ್ಬರೂ ಈ ಸಂಬಂಧ ಪರಿಸರದ ಮಹತ್ವ ಅರಿತು ಅದನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡಲು ಇಂದಿನಿಂದಲೇ ನಮ್ಮ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಕಾರ್ಯತತ್ಪರರಾಗಿ ಎಂದಷ್ಟೇ ಹೇಳಬಹುದು.
Published by:Vasudeva M
First published: