Viral Video: ರೈಲು ಬರಲು ಇನ್ನು ಕೆಲವೇ ಕ್ಷಣಗಳಿದ್ದಾಗ, ವೀಲ್‌ ಚೇರ್ ಸಮೇತ ರೈಲ್ವೆ ಹಳಿಗೆ ಬಿದ್ದ ವ್ಯಕ್ತಿ..! ಮುಂದೇನಾಯ್ತು?

ಈ ಘಟನೆಯನ್ನು ಅಲ್ಲೇ ಇದ್ದಂತಹ ವರದಿಗಾರರಾದ ಲೌರೆನ್ ಮೆನ್ನೆನ್ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಈ ವಿಡಿಯೋ ಟ್ವಿಟ್ಟರ್ ಖಾತೆಯಲ್ಲಿರುವ ಸಬ್ವೆ ಕ್ರಿಯೇಚರ್ಸ್ ಎನ್ನುವ ಪುಟದಲ್ಲಿ ಹಂಚಿಕೊಂಡಿದ್ದಾರೆ.

ವೀಲ್​ ಚೇರ್​ ಸಮೇತ ರೈಲ್ವೆ ಹಳಿಗೆ ಬಿದ್ದಿರುವ ವ್ಯಕ್ತಿಯನ್ನು ಮೇಲಕ್ಕೆ ಎತ್ತುತ್ತಿರುವ ದೃಶ್ಯ

ವೀಲ್​ ಚೇರ್​ ಸಮೇತ ರೈಲ್ವೆ ಹಳಿಗೆ ಬಿದ್ದಿರುವ ವ್ಯಕ್ತಿಯನ್ನು ಮೇಲಕ್ಕೆ ಎತ್ತುತ್ತಿರುವ ದೃಶ್ಯ

  • Share this:
ನಾವೆಲ್ಲಾ ಚಲನಚಿತ್ರಗಳಲ್ಲಿ ನಾಯಕ ನಟನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಂತಹ ನಾಯಕಿಯನ್ನು ಎದುರುಗಡೆ ಬರುವಂತಹ ರೈಲಿನಿಂದ ಕ್ಷಣಾರ್ಧದಲ್ಲಿ ಕಾಪಾಡಿರುವಂತಹ ಅನೇಕ ಸನ್ನಿವೇಶಗಳನ್ನು ನೋಡಿರುತ್ತೀರಿ, ಆದರೆ ನಿಜ ಜೀವನದಲ್ಲಿ ಈ ರೀತಿಯ ಘಟನೆಗಳಲ್ಲಿ ರೈಲ್ವೆ ಹಳಿಯಲ್ಲಿ ಅಡ್ಡಲಾಗಿ ಮಲಗಿರುವವರನ್ನು ಅಥವಾ ಕಾಲು ಜಾರಿ ಪ್ಲಾಟ್ ಫಾರ್ಮ್‌ನಿಂದ ಹಳಿಗೆ ಬಿದ್ದಿರುವವರನ್ನು ಕೈ ಹಿಡಿದು ಮೇಲಕ್ಕೆ ಎತ್ತುವಂತಹ ಧೈರ್ಯ ಹೊಂದಿರುವವರು ತುಂಬಾ ಅಪರೂಪ ಮತ್ತು ಯಾರೂ ಇಂತವರ ಸಹಾಯಕ್ಕೆ ಧಾವಿಸದೆ ಪ್ರಾಣ ಕಳೆದುಕೊಂಡಿದ್ದನ್ನು ನೋಡಿರುತ್ತೇವೆ. ಆದರೆ, ನ್ಯೂಯಾರ್ಕ್‌ನಲ್ಲಿ ನಡೆದಂತಹ ಒಂದು ನೈಜ ಘಟನೆಯಲ್ಲಿ, ರೈಲ್ವೆ ಹಳಿಗೆ ಜಾರಿ ಬಿದ್ದಂತಹ ವ್ಯಕ್ತಿಯನ್ನು ಆತನ ವೀಲ್‌ಚೇರ್ ಸಹಿತವಾಗಿ ಮೇಲಕ್ಕೆ ಎತ್ತಿ, ತಮ್ಮ ಪ್ರಾಣದ ಬಗ್ಗೆಯೂ ಲೆಕ್ಕಿಸದೆ ಇನ್ನೇನು ರೈಲು ಬಂದೇ ಬಿಡ್ತು ಅನ್ನುವಷ್ಟರಲ್ಲಿ ಅವರನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯು ಆಗಸ್ಟ್ 4ರಂದು ನ್ಯೂಯಾರ್ಕ್‌ನ ಸಬ್‌ವೇ ನಿಲ್ದಾಣವಾದ ಯೂನಿಯನ್ ಸ್ಕ್ವೇರ್ ನಿಲ್ದಾಣದಲ್ಲಿ ನಡೆದಿದ್ದು, ಹಳಿಗೆ ಬಿದ್ದಂತಹ ವ್ಯಕ್ತಿಯನ್ನು ಅನೇಕರು ನೋಡಿದ್ದು ಯಾರೂ ಸಹ ಪ್ಲಾಟ್ ಫಾರ್ಮ್‌ನಿಂದ ಹಳಿಗೆ ಬಿದ್ದಂತಹ ವ್ಯಕ್ತಿಯನ್ನು ಮೇಲಕ್ಕೆ ಎತ್ತಲು ಬರಲಿಲ್ಲ.

ಆಗ ಅಲ್ಲೇ ಇದ್ದಂತಹ ಒಬ್ಬ ವ್ಯಕ್ತಿ ಅದೇ ಪ್ಲಾಟ್‌ ಫಾರ್ಮ್ ಮೇಲೆ ಬರುತ್ತಿರುವ ರೈಲಿನ ಬಗ್ಗೆ ಮಾಹಿತಿ ಕೇಳಿದ ತಕ್ಷಣವೇ ಹಳಿಗೆ ಜಿಗಿದಿದ್ದಾರೆ. ಒಂದು ಕ್ಷಣವೂ ತನ್ನ ಪ್ರಾಣದ ಬಗ್ಗೆ ಚಿಂತಿಸದೆ, ಕೂಡಲೇ ಮೊದಲು ವೀಲ್‌ಚೇರ್ ಅನ್ನು ಮೇಲಕ್ಕೆ ನೀಡಿದ್ದಾರೆ. ಬಳಿಕ ಬಿದ್ದಿದ್ದ ಆ ವ್ಯಕ್ತಿಯನ್ನು ಹಿಡಿದುಕೊಂಡು ಪ್ಲಾಟ್ ಫಾರ್ಮ್ ಮೇಲಿದ್ದವರ ಸಹಾಯದಿಂದ ಮೇಲಕ್ಕೆ ಕರೆದು ಕೊಂಡುಬಂದಿದ್ದಾರೆ. ಅವರು ಇನ್ನೇನು ಪ್ಲಾಟ್ ಫಾರ್ಮ್ ಮೇಲೆ ಬಂದು ಸುಧಾರಿಸಿಕೊಳ್ಳಬೇಕು. ಅಷ್ಟರಲ್ಲಿಯೇ ರೈಲು ಬಂದಿತು. ಯಾರೂ ಸಹಾಯಕ್ಕೆ ಮುಂದೆ ಬಾರದಿದ್ದರೆ ಆ ವ್ಯಕ್ತಿಯ ಜೀವ ಉಳಿಯುವುದು ಸಹ ತುಂಬಾ ಕಷ್ಟಕರವಾಗಿತ್ತು.

ಇದನ್ನೂ ಓದಿ:Gold Price Today: ಇಂದೂ ಸಹ ಇಳಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ರೇಟು?

ಈ ಘಟನೆಯನ್ನು ಅಲ್ಲೇ ಇದ್ದಂತಹ ವರದಿಗಾರರಾದ ಲೌರೆನ್ ಮೆನ್ನೆನ್ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಈ ವಿಡಿಯೋ ಟ್ವಿಟ್ಟರ್ ಖಾತೆಯಲ್ಲಿರುವ ಸಬ್ವೆ ಕ್ರಿಯೇಚರ್ಸ್ ಎನ್ನುವ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಘಟನೆಯ ಹಿನ್ನಲೆಯಲ್ಲಿ ಸ್ಪೀಕರ್‌ನಲ್ಲಿ "ಬ್ರೂಕ್ಲಿನ್ ಬ್ರಿಡ್ಜ್ ಮತ್ತು ಸಿಟಿ ಹಾಲ್‌ಗೆ ತೆರಳಲಿರುವ ಡೌನ್ ಟೌನ್ ಲೋಕಲ್ 6 ರೈಲು ಇದೀಗ ನಿಲ್ದಾಣಕ್ಕೆ ಬರಲಿದೆ. ಪ್ರಯಾಣಿಕರು ದಯವಿಟ್ಟು ಪ್ಲಾಟ್ ಫಾರ್ಮ್‌ನಲ್ಲಿ ಸ್ವಲ್ಪ ಹಿಂದೆ ಸರಿದು ನಿಂತುಕೊಳ್ಳಿ" ಎಂದು ಸೂಚನೆ ಬರುತ್ತಿರುವುದನ್ನು ಕೇಳಬಹುದಾಗಿದೆ.


ಈ ಘಟನೆಯು ಮಧ್ಯಾಹ್ನ 1.30ಕ್ಕೆ ನಡೆದಿದ್ದು, ತಕ್ಷಣವೇ ಆ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆಂದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ಸಂಪೂರ್ಣವಾಗಿ ವೀಕ್ಷಿಸಿದ ಲೌರೆನ್ "ವ್ಯಕ್ತಿಯು ಎರಡು ಬಾರಿಯೂ ತನ್ನ ಪ್ರಾಣದ ಬಗ್ಗೆ ಯೋಚಿಸದೆ ರೈಲ್ವೆ ಹಳಿಗೆ ಇಳಿದು ಹಳಿಯಲ್ಲಿ ಬಿದ್ದಂತಹ ವ್ಯಕ್ತಿಯನ್ನು ವೀಲ್‌ಚೇರ್ ಸಮೇತವಾಗಿ ಮೇಲಕ್ಕೆ ಎತ್ತಿದ್ದಾರೆ, ನಂತರ ಬೇಗನೆ ಪ್ಲಾಟ್ ಫಾರ್ಮ್ ಮೇಲೆ ಹತ್ತಿದ್ದು, ನಿಜಕ್ಕೂ ಒಂದು ಸಾಹಸವೇ ಆಗಿದೆ. ಜನರು ಇಂತಹ ಘಟನೆಗಳಿಂದ ಕಲಿತುಕೊಳ್ಳಬೇಕು" ಎಂದು ಹೇಳಿದ್ದಾರೆ.

ಇದನ್ನೂ ಓದಿ:14 ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಹೆಸರಲ್ಲಿ ಆಧಾರ್ ಕಾರ್ಡ್, ಓಟರ್ ಐಡಿ; ಈಗ ಆಸ್ತಿ ಮಾರಾಟ!

ಈ ವಿಡಿಯೋವನ್ನು ತುಂಬಾ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಿದ್ದಾರೆ, ತನ್ನ ಪ್ರಾಣವನ್ನು ಲೆಕ್ಕಿಸದೆ ಕೆಳಗೆ ಬಿದ್ದಂತಹ ವ್ಯಕ್ತಿಯನ್ನು ಕಾಪಾಡಿ ಮಾನವೀಯತೆ ಮೆರೆದ ಆ ವ್ಯಕ್ತಿಯ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ, ನಿಜವಾದ ನಾಯಕ ಎಂದು ಬರೆದುಕೊಂಡಿದ್ದಾರೆ.
Published by:Latha CG
First published: