ಸಾಮಾನ್ಯವಾಗಿ ವ್ಯಕ್ತಿಗಳು ತಮ್ಮದಲ್ಲದ ವಸ್ತುಗಳು ಅಕಸ್ಮಾತಾಗಿ (Accidentally) ಸಿಕ್ಕಿದರೆ ಅದನ್ನು ಮರಳಿಸುವುದಿಲ್ಲ,(Return) ಅದೇ ಆ ವಸ್ತುಗಳು ತಮಗೆ ತೊಂದರೆ ನೀಡುವಂತದ್ದು ಅಥವಾ ಕಾನೂನು ಬಾಹಿರವಾದದ್ದೋ (Illegal) ಆಗಿದ್ದರೆ, ಅದರ ಗೋಜಿಗೆ ಹೋಗದೆ ತಿಳಿಯದಂತೆ ಇದ್ದು ಬಿಡುತ್ತಾರೆ. ಆದರೆ ಪ್ಲೋರಿಡಾದ ಸಹೃದಯಿ (Samaritan) ಒಬ್ಬರು ಅದಕ್ಕಿಂತ ಭಿನ್ನವಾದ ಕೆಲಸ ಮಾಡಿ , ಭೇಷ್ ಎನಿಸಿಕೊಂಡಿದ್ದಾರೆ. ಫ್ಲೊರಿಡಾದ ಕಿಸ್ ಸಾಗರದಲ್ಲಿ ತೇಲುತ್ತಿದ್ದ ಬೃಹತ್ ಡ್ರಗ್ಸ್ ಚೀಲಗಳನ್ನ ( large drug) ಆ ವ್ಯಕ್ತಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಆತನ ಉಪಕಾರಶೀಲ ಗುಣವನ್ನು ಅಲ್ಲಿನ ಪೊಲೀಸರು ಶ್ಲಾಘಿಸಿದರು.
ನೀರಿನಲ್ಲಿ ತೇಲಿ ಬಂದ ಪೊಟ್ಟಣ:
ಆ ವ್ಯಕ್ತಿಯು ಸಮುದ್ರದಲ್ಲಿ ಹಾಯಾಗಿ ವಿರಾಮದ ದಿನವನ್ನು ಕಳೆಯುತ್ತಿದ್ದನಂತೆ. ಆಗ ನೀರಿನಲ್ಲಿ ತೇಲಿ ಬರುತ್ತಿದ್ದ ಕೆಲವು ಪೊಟ್ಟಣಗಳು ಆತನ ಕಣ್ಣಿಗೆ ಬಿತ್ತು. ಅಸಲಿಗೆ 30 ಕಿಲೋ ಗ್ರಾಂ ನಷ್ಟು ಕೊಕೇನ್ ಇದ್ದ ಪೊಟ್ಟಣಗಳವು. ಕೂಡಲೇ ಆತ ಅವುಗಳ ಕುರಿತು ಯುಎಸ್ ಬಾರ್ಡರ್ ಪ್ಯಾಟ್ರೋಲ್ಗೆ ಮಾಹಿತಿ ನೀಡಿದರು.
Over the weekend, a Good Samaritan discovered over 1 million dollars in cocaine floating at sea near the Florida Keys. The package contained nearly 69 lbs. of cocaine. #BorderPatrol agents with support from @USCGSoutheast recovered the drugs.
#breakingnews #breaking #monday pic.twitter.com/cC7EKa9lDx
— Chief Patrol Agent Thomas G. Martin (@USBPChiefMIP) December 6, 2021
ಯುಎಸ್ ಕೋಸ್ಟ್ ಗಾರ್ಡ್ ಆ ಮಾದಕ ವಸ್ತುಗಳ ಪೊಟ್ಟಣವನ್ನು ವಶಕ್ಕೆ ಪಡೆಯಲು ಸಹಯೋಗ ನೀಡಿದರು. ಮುಖ್ಯ ಗಸ್ತು ಏಜೆಂಟ್ ಥೋಮಸ್ ಜಿ ಮಾರ್ಟಿನ್ , 24 ಇಟ್ಟಿಗೆಗಳಂತೆ ಕಂಡು ಬರುವ ಆ ವಸ್ತುಗಳ ಪೋಟೋವನ್ನು ಟ್ವೀಟ್ ಮಾಡಿದ್ದು, “ವಾರಾಂತ್ಯದಲ್ಲಿ , ಪ್ಲೋರಿಡಾದ ಕಿಸ್ ಬಳಿ ಸಮುದ್ರದಲ್ಲಿ ಒಂದು ಮಿಲಿಯನ್ಗೂ (10 ಲಕ್ಷ) ಹೆಚ್ಚು ಡಾಲರ್ ಹಣ ಮೌಲ್ಯದ ಕೋಕೇನ್ ಇದ್ದ ಚೀಲ ಒಬ್ಬ ಪ್ರಾಮಾಣಿಕನ ಕೈಗೆ ಸಿಕ್ಕಿದೆ. ಪ್ಯಾಕೆಜ್ ಸುಮಾರು 69 ಪೌಂಡು ಕೊಕೇನನ್ನು ಒಳಗೊಂಡಿತ್ತು. #BorderPatrol ನ ಬೆಂಬಲದೊಂದಿಗೆ @USCGSoutheast ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ” ಎಂದು ಬರೆದಿದ್ದಾರೆ.
ವಾರಸುದಾರರಿಲ್ಲದ ಡ್ರಗ್ಸ್ ಪ್ಯಾಕ್ (Drug Shipment) ಅಕಸ್ಮಾತಾಗಿ ಕಣ್ಣಿಗೆ ಬಿದ್ದ ಪ್ರಕರಣ ಫ್ಲೊರಿಡಾದಲ್ಲಿ ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಫ್ಲೊರಿಡಾದ ಕಿಸ್ ಸಾಗರದಲ್ಲಿ ಉಸಿರು ಕೊಳವೆ ಕಟ್ಟಿಕೊಂಡು ಈಜುತ್ತಿದ್ದ ವ್ಯಕ್ತಿಯೊಬ್ಬ 1.5 ಮಿಲಿಯನ್ ಡಾಲರ್ ಮೌಲ್ಯದ ಕೊಕೇನನ್ನು ಕಂಡು ಹಿಡಿದಿದ್ದನು. ಕ್ರೆಗ್ ಕೀ ಸಮೀಪ ಆ ವ್ಯಕ್ತಿ ಉಸಿರು ಕೊಳವೆ ಕಟ್ಟಿಕೊಂಡು ಈಜುತ್ತಿದ್ದಾಗ ಟೇಪ್ನಲ್ಲಿ ಸುತ್ತಿದ ಒಂದು ಕಪ್ಪು ಬಂಡಲ್ ತೇಲುತ್ತಿರುವುದನ್ನು ಗಮನಿಸಿದರು. ಅದು ಮಾದಕ ವಸ್ತುಗಳನ್ನು ಹೊಂದಿದ್ದ ಬಂಡಲ್ ಆಗಿತ್ತು. ಆತ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿದರು. ಬಳಿಕ ಆ ಮಾದಕ ವಸ್ತುಗಳಿದ್ದ ಬಂಡಲ್ ಅನ್ನು ಯೂಎಸ್ ಬಾರ್ಡರ್ ಪೆಟ್ರೋಲ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಆ ಬಂಡಲ್ನಲ್ಲಿ ಒಟ್ಟು 25 ಕೊಕೇನ್ ಗಟ್ಟಿಗಳು ಇದ್ದವು. ಅವುಗಳ ಮೌಲ್ಯ ಸುಮಾರು 1.5 ಮಿಲಿಯನ್ ಡಾಲರ್ ಎಂದು ಯೂ ಎಸ್ ಬಾರ್ಡರ್ ಪೆಟ್ರೋಲ್ ಅಧಿಕಾರಿಗಳು ತಿಳಿಸಿದ್ದರು.ಇಂತದ್ದೇ ಮತ್ತೊಂದು ಪ್ರಕರಣವು ಕಳೆದ ವರ್ಷ ಆಗಸ್ಟ್ನಲ್ಲಿ ನಡೆದಿತ್ತು. ವ್ಯಕ್ತಿಯೊಬ್ಬರು ಫ್ಲೋರಿಡಾದ ಬೀಚ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬಿಗಿಯಾಗಿ ಸುತ್ತಿದ 30 ಚೀಲಗಳನ್ನು ಕಂಡರು. ಆ ಚೀಲಗಳಲ್ಲಿ ಏನಿದೆ ಎಂಬುವುದು ಗೊತ್ತಿಲ್ಲದೇ ಇದ್ದರೂ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಮಾದಕ ವಸ್ತುಗಳಿದ್ದ ಆ ಚೀಲಗಳನ್ನು ಪೋಲಿಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ