• Home
  • »
  • News
  • »
  • trend
  • »
  • ಡಾಜ್‌ ಕಾಯಿನ್‌ ಮಾರಾಟದ ಬಳಿಕ ಮಿಲಿಯನ್‌ಗಟ್ಟಲೆ ಹಣ ಮಾಡಿಕೊಂಡು ಕೆಲಸ ತೊರೆದ ಗೋಲ್ಡ್‌ಮನ್‌ ಸ್ಯಾಚ್ಸ್‌ ಎಂಡಿ..!

ಡಾಜ್‌ ಕಾಯಿನ್‌ ಮಾರಾಟದ ಬಳಿಕ ಮಿಲಿಯನ್‌ಗಟ್ಟಲೆ ಹಣ ಮಾಡಿಕೊಂಡು ಕೆಲಸ ತೊರೆದ ಗೋಲ್ಡ್‌ಮನ್‌ ಸ್ಯಾಚ್ಸ್‌ ಎಂಡಿ..!

ಡಾಜ್‌ ಕಾಯಿನ್

ಡಾಜ್‌ ಕಾಯಿನ್

DOGE COIN: ಗೋಲ್ಡ್‌ಮನ್‌ ಸ್ಯಾಚ್ಸ್‌ ವ್ಯವಸ್ಥಾಪಕ ನಿರ್ದೇಶಕರೊಬ್ಬರು ಡಾಜ್‌ ಕಾಯಿನ್‌ನಲ್ಲಿ ಮಿಲಿಯನ್‌ಗಟ್ಟಲೆ ಹಣದ ವ್ಯವಹಾರಗಳನ್ನು ಮಾಡಿದ ನಂತರ ತಮ್ಮ ಕೆಲಸ ತ್ಯಜಿಸಿದ್ದಾರೆ.

  • Share this:

'ಸ್ಯಾಟರ್ಡೇ ನೈಟ್ ಲೈವ್' ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಇತ್ತೀಚೆಗೆ ಕಾಣಿಸಿಕೊಂಡ ಸಂದರ್ಭದಲ್ಲಿ ಡಾಜ್‌ ಕಾಯಿನ್‌ ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾತನಾಡಿದ್ದ ಬಳಿಕ ಅದರ ಮೌಲ್ಯ ಕಡಿಮೆಯಾಗಿತ್ತು. ಆದರೆ, ಗೋಲ್ಡ್‌ಮನ್‌ ಸ್ಯಾಚ್ಸ್‌ ವ್ಯವಸ್ಥಾಪಕ ನಿರ್ದೇಶಕರೊಬ್ಬರು ಡಾಜ್‌ ಕಾಯಿನ್‌ನಲ್ಲಿ ಮಿಲಿಯನ್‌ಗಟ್ಟಲೆ ಹಣದ ವ್ಯವಹಾರಗಳನ್ನು ಮಾಡಿದ ನಂತರ ತಮ್ಮ ಕೆಲಸ ತ್ಯಜಿಸಿದ್ದಾರೆ. ಈ ಹಿನ್ನೆಲೆ ಕ್ರಿಪ್ಟೋ ಜಗತ್ತಿನಲ್ಲಿ ಹೊಸ ಅಲೆ ಎದ್ದಿದೆ. ಡಾಜ್‌ ಕಾಯಿನ್‌ ಕ್ರಿಪ್ಟೋಕರೆನ್ಸಿ ಬಹುತೇಕ ತಮಾಷೆಯಾಗಿ ಪ್ರಾರಂಭವಾಯಿತು ಮತ್ತು ಇದನ್ನು 'ಮೀಮ್ - ಕ್ರಿಪ್ಟೋ’ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇದರ ಮೌಲ್ಯ ಇತ್ತೀಚೆಗೆ ಎರಿಕೆಯಾಗಿದ್ದು, ಮತ್ತು ಕಳೆದ ಶನಿವಾರ ಮೌಲ್ಯ ಕುಸಿಯುವ ಮೊದಲು 70 ಸೆಂಟ್‌ಗಳನ್ನು ತಲುಪಿದೆ.


ಅದೇನೇ ಇದ್ದರೂ, ಕಳೆದ ಕೆಲವು ತಿಂಗಳುಗಳಲ್ಲಿ ಡಾಜ್‌ ಕಾಯಿನ್ ಘಾತೀಯವಾಗಿ ಬೆಳೆದಿದೆ ಮತ್ತು ಕ್ರಿಪ್ಟೋದಲ್ಲಿ ವ್ಯವಹರಿಸುವ ಮೂಲಕ ಅನೇಕ ಜನರು ಈಗಾಗಲೇ ಶ್ರೀಮಂತರಾಗಿದ್ದಾರೆಂದು ತೋರುತ್ತದೆ.


ವರದಿಗಳ ಪ್ರಕಾರ, ಹಿರಿಯ ಎಂಡಿ ಆಗಿ ಕೆಲಸ ಮಾಡುತ್ತಿದ್ದ ಮತ್ತು ಲಂಡನ್‌ನ ಗೋಲ್ಡ್‌ಮನ್‌ ಸ್ಯಾಚ್ಸ್‌ ವ್ಯವಸ್ಥಾಪಕರಲ್ಲಿ ಉದಯೋನ್ಮುಖ ಮಾರುಕಟ್ಟೆ ಮಾರಾಟದ ಮುಖ್ಯಸ್ಥರಾಗಿದ್ದ ಅಜೀಜ್ ಮೆಕ್ ಮೋಹನ್ ಅವರು ಇತ್ತೀಚೆಗೆ ಡಾಜ್‌ ಕಾಯಿನ್‌ಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ಹಣವನ್ನು ಸಂಪಾದಿಸಿದ್ದಾರೆಂದು ಹೇಳಲಾಗಿದ್ದು, ನಂತರ ಅವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ.


ಟೆಸ್ಲಾ ಸಿಇಒ ಎಲೋನ್ ಮಸ್ಕ್‌ ಡಾಜ್‌ ಕಾಯಿನ್‌ ಬಗ್ಗೆ ಹೇಳಿಕೆ ನೀಡಿದ ನಂತರ ಅದರ ಮೌಲ್ಯದಲ್ಲಿ ಇತ್ತೀಚಿನ ಕುಸಿತದ ಹೊರತಾಗಿಯೂ, ಕ್ರಿಪ್ಟೋ ಕಾಯಿನ್‌ನ ಮೌಲ್ಯ ಈ ವರ್ಷದ ಜನವರಿಯಿಂದ ಶೇಕಡಾ 1000 ರಷ್ಟು ಹೆಚ್ಚಾಗಿದೆ. ಎಲೋನ್ ಮಸ್ಕ್ ಅವರಂತಹ ಪ್ರಬಲ ಉದ್ಯಮಿಗಳು ಇದಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಮಸ್ಕ್‌ ಅವರ ಟ್ವಿಟ್‌ಗಲಿಂದಲೇ ಡಾಜ್‌ ಕಾಯಿನ್‌ನ ಮೌಲ್ಯ ಒಮ್ಮೆಲೇ ಏರಿಕೆಯಾಗುತ್ತದೆ ಹಾಗೂ ಕೆಲ ಬಾರಿ ಇಳಿಕೆಯಾಗಲು ಕಾರಣವಾಗುತ್ತದೆ.


ಇನ್ನೊಂದೆಡೆ, ಇತ್ತೀಚೆಗೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್‌, ಎಲೆಕ್ಟ್ರಿಕ್ ಕಾರು ತಯಾರಕರು ಡಾಜ್‌ ಕಾಯಿನ್‌ ಕರೆನ್ಸಿಯನ್ನು ಟೆಸ್ಲಾ ಕಾರಿನ ಪಾವತಿ ವಿಧಾನವಾಗಿ ಸ್ವೀಕರಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದರು. ತನ್ನ 53.8 ಮಿಲಿಯನ್ ಟ್ವಿಟ್ಟರ್‌ ಅನುಯಾಯಿಗಳಿಗೆ ಟೆಸ್ಲಾ ಕಾರು ಖರೀದಿಸಲು ಡಾಜ್‌ ಕಾಯಿನ್‌ ಅನ್ನು ಪಾವತಿ ವಿಧಾನವಾಗಿ ಸ್ವೀಕರಿಸಬೇಕೆಂದು ಬಯಸುತ್ತೀರಾ ಎಂದು ಕೇಳಲು ಅವರು ಮಂಗಳವಾರ ಟ್ವಿಟ್ಟರ್‌ನಲ್ಲಿ ಸಮೀಕ್ಷೆ ನಡೆಸಿದರು. ಅವರು ಪೋಲ್‌ ಪೋಸ್ಟ್ ಮಾಡಿದ 20 ನಿಮಿಷಗಳಲ್ಲಿ ಅವರು ಸುಮಾರು ಐದು ಲಕ್ಷ ಮತಗಳನ್ನು ಪಡೆದರು. ಈ ಪೈಕಿ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿರುವ ಬಹುತೇಕರು ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಉತ್ತರಿಸಿದ್ದಾರೆ.

First published: