Viral Video: ನಿಜ್ವಾಗ್ಲೂ ಈ ನಾಯಿಯ ಧೈರ್ಯಕ್ಕೆ ಮೆಚ್ಚಲೇಬೇಕು! ಅಷ್ಟಕ್ಕೂ ಏನು ಮಾಡಿದೆ ಅಂತ ನೀವೇ ನೋಡಿ

ದೈತ್ಯ ಪ್ರಾಣಿಗಳ ಮತ್ತು ಚಿಕ್ಕ ಪ್ರಾಣಿಗಳ ಬಗ್ಗೆ ಏಕೆ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೇವೆ ಎಂದು ನಿಮಗೆ ಅನ್ನಿಸುವುದು ಗ್ಯಾರಂಟಿ. ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೋ ಜೋರಾಗಿಯೇ ಹರಿದಾಡುತ್ತಿದೆ ನೋಡಿ, ಅದರಲ್ಲಿ ಒಂದು ಗೋಲ್ಡನ್ ರಿಟ್ರೈವರ್ ನಾಯಿ ಧೈರ್ಯದಿಂದ ಅಂತಿಂತ ಪ್ರಾಣಿಗಳ ನಡುವೆ ಅಡ್ಡಾಡುತ್ತಿಲ್ಲ, ದೈತ್ಯ ಹುಲಿಗಳ ಗುಂಪಿನ ಮಧ್ಯದಲ್ಲಿ ನಿರ್ಭಯವಾಗಿ ಅಡ್ಡಾಡುತ್ತಿದೆ ನೋಡಿ.

ಹುಲಿಗಳ ನಡುವೆ ಭಯವಿಲ್ಲದೆ ತಿರುಗಾಡುತ್ತಿರುವ ನಾಯಿ

ಹುಲಿಗಳ ನಡುವೆ ಭಯವಿಲ್ಲದೆ ತಿರುಗಾಡುತ್ತಿರುವ ನಾಯಿ

  • Share this:
ಸಾಮಾನ್ಯವಾಗಿ ಮನೆಯಲ್ಲಿ ಇರುವಂತಹ ಬೆಕ್ಕುಗಳು (Cat) ನಾಯಿಗಳ (Dog) ಮುಂದೆ ಓಡಾಡುವುದನ್ನು ನಾವು ನೋಡಿರುತ್ತೇವೆ. ನಾಯಿಗಳು ಬೆಕ್ಕುಗಳ ಮೇಲೆ ದಾಳಿ ಮಾಡಬಹುದು ಎಂಬುದು ನಮಗೆ ತಿಳಿದಿರುತ್ತದೆ ಮತ್ತು ಬೆಕ್ಕುಗಳಿಗೂ ತಿಳಿದಿರುತ್ತದೆ. ಆದರೂ ನಿರ್ಭಯವಾಗಿ ಕೆಲವು ಬೆಕ್ಕುಗಳು ನಾಯಿಗಳ ಹಿಂದೆ ಮುಂದೆ ತಿರುಗಾಡುತ್ತಿರುತ್ತವೆ, ಅದೇನೋ ಮೊಂಡು ಧೈರ್ಯ ಅಂತ ಹೇಳಬಹುದು ಮತ್ತು ಅದನ್ನು ಒಂದು ರೀತಿಯಲ್ಲಿ ನಾಯಿಗಳು ದಾಳಿ ಮಾಡಿದರೂ ತಾನು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಬಿಡುತ್ತೇನೆ ಎನ್ನುವ ಆತ್ಮವಿಶ್ವಾಸ ಸಹ ಇರಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ಪ್ರಾಣಿಗಳ ವೀಡಿಯೋಗಳನ್ನು (Video) ನಾವು ಪ್ರತಿದಿನ ನೋಡುತ್ತಲೇ ಇರುತ್ತೇವೆ ಮತ್ತು ಮೊನ್ನೆ ತಾನೇ ಹೇಗೆ ಒಂದು ಬಾತುಕೋಳಿ ನೀರಿನಲ್ಲಿ ತನ್ನ ಮೇಲೆ ಇನ್ನೇನು ದಾಳಿ ಮಾಡುತ್ತೆ ಎನ್ನುವಾಗ ಹುಲಿಯ (Tiger) ಮುಂದೆ ನೀರಿನಲ್ಲಿ ಮುಳುಗಿ ಹುಲಿಯ ಹಿಂದೆ ಅದೇ ನೀರಿನಲ್ಲಿ ಮೇಲೆ ಎದ್ದ ವೀಡಿಯೋ ನೋಡಿದ್ದೆವು.

ಹೀಗೆ ಕೆಲವೊಮ್ಮೆ ಈ ದೈತ್ಯ ಪ್ರಾಣಿಗಳ ಆಟ, ದರ್ಪ ಚಿಕ್ಕ ಪ್ರಾಣಿಗಳ ಮುಂದೆ ನಡೆಯುವುದೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ದೈತ್ಯ ಪ್ರಾಣಿಗಳಲ್ಲಿ ಶಕ್ತಿ ಇರುತ್ತದೆ, ಚಿಕ್ಕ ಪ್ರಾಣಿಗಳಲ್ಲಿ ತನ್ನನ್ನು ದೊಡ್ಡ ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಚಾಣಾಕ್ಷತನ, ಬುದ್ದಿವಂತಿಕೆ ಇರುತ್ತದೆ ಎಂದು ಹೇಳಬಹುದು. ಎಷ್ಟೋ ಸಲ ಈ ದೈತ್ಯ ಪ್ರಾಣಿಗಳು ಚಿಕ್ಕ ಪ್ರಾಣಿಗಳ ಮೇಲೆ ಯಾವಾಗ ಬೇಕೋ ಆವಾಗ ದಾಳಿ ಮಾಡಿ ಅವುಗಳನ್ನು ಕೊಂದು ಹಾಕಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಇರುತ್ತವೆ. ಚಿಕ್ಕ ಪ್ರಾಣಿಗಳು ಸಹ ಮೈಯೆಲ್ಲಾ ಕಣ್ಣಾಗಿಸಿಕೊಂಡು ತಿರುಗಾಡುತ್ತಿರುತ್ತವೆ ಎಂಬ ಸತ್ಯ ದೊಡ್ಡ ಪ್ರಾಣಿಗಳಿಗೆ ಗೊತ್ತಿರುವುದಿಲ್ಲ.

ದೈತ್ಯ ಹುಲಿಗಳ ಗುಂಪಿನ ಮಧ್ಯದಲ್ಲಿ ನಿರ್ಭಯವಾಗಿ ಅಡ್ಡಾಡುತ್ತಿರುವ ನಾಯಿ
ಅರೆರೇ.. ದೈತ್ಯ ಪ್ರಾಣಿಗಳ ಮತ್ತು ಚಿಕ್ಕ ಪ್ರಾಣಿಗಳ ಬಗ್ಗೆ ಏಕೆ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೇವೆ ಎಂದು ನಿಮಗೆ ಅನ್ನಿಸುವುದು ಗ್ಯಾರಂಟಿ. ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೋ ಜೋರಾಗಿಯೇ ಹರಿದಾಡುತ್ತಿದೆ ನೋಡಿ, ಅದರಲ್ಲಿ ಒಂದು ಗೋಲ್ಡನ್ ರಿಟ್ರೈವರ್ ನಾಯಿ ಧೈರ್ಯದಿಂದ ಅಂತಿಂತ ಪ್ರಾಣಿಗಳ ನಡುವೆ ಅಡ್ಡಾಡುತ್ತಿಲ್ಲ, ದೈತ್ಯ ಹುಲಿಗಳ ಗುಂಪಿನ ಮಧ್ಯದಲ್ಲಿ ನಿರ್ಭಯವಾಗಿ ಅಡ್ಡಾಡುತ್ತಿದೆ ನೋಡಿ.

ಇದನ್ನೂ ಓದಿ: Viral Video: ಮಗುವಿನ ಗಾಯಕ್ಕೆ ಕೀಟದ ಲೇಪನವನ್ನು ಔಷಧವಾಗಿ ಬಳಸಿದ ಜಾಣ ತಾಯಿ ಚಿಂಪಾಂಜಿ

ಸಿಕ್ಕಾಪಟ್ಟೆ ವೈರಲ್ ಆಯಿತು ವಿಡಿಯೋ
ಈ ವೀಡಿಯೋ ಅಂತರ್ಜಾಲದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ವೀಡಿಯೋದಲ್ಲಿ, ನಾಯಿ ಹುಲಿಗಳ ನಡುವೆ ನಿರ್ಭಯವಾಗಿ ತಿರುಗಾಡುತ್ತಿರುವುದನ್ನು ಕಾಣಬಹುದು. ಆಶ್ಚರ್ಯಕರವಾಗಿ, ಹುಲಿಗಳು ನಾಯಿಯ ಹತ್ತಿರಕ್ಕೂ ಸುಳಿದಿಲ್ಲ. ಮೇಲಾಗಿ ನಾಯಿ ಹುಲಿಗಳ ಮಧ್ಯೆ ನಿಂತು ಜೋರಾಗಿ ಬೊಗಳುತ್ತಿದೆ. ಈ ವೀಡಿಯೋವನ್ನು ಟೈಗರ್ ಬಿಗ್‌ಫ್ಯಾನ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮೇ 26 ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 1.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 52,000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ.


View this post on Instagram


A post shared by Tiger (@tiger__bigfan)
ಪೋಸ್ಟ್ ಪ್ರಕಾರ, ಈ ನಾಯಿಯ ತಾಯಿ ಈ ಹುಲಿಗಳು ಮರಿಗಳಾಗಿದ್ದಾಗ ತನ್ನ ಹಾಲನ್ನು ಉಣಬಡಿಸಿದಳು ಮತ್ತು ಅದಕ್ಕಾಗಿಯೇ ಆ ಹುಲಿಗಳು ಆ ನಾಯಿಯ ತಾಯಿಯನ್ನು ತಮ್ಮ ತಾಯಿ ಎಂದು ಭಾವಿಸುತ್ತವೆ. "ನಾಯಿಯ ತಾಯಿಗೆ ಹಲವಾರು ಹುಲಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವಿಡಿಯೋ ನೋಡಿ ಆಘಾತಕ್ಕೊಳಗಾದ ನೆಟ್ಟಿಗರು
ಹುಲಿಗಳಿಂದ ಸುತ್ತುವರಿಯಲ್ಪಟ್ಟಿದ್ದರೂ, ಗೋಲ್ಡನ್ ರಿಟ್ರೈವರ್ ನಾಯಿ ಸಂಪೂರ್ಣವಾಗಿ ನಿರ್ಭೀತವಾಗಿದೆ ಎಂದು ವೀಡಿಯೋ ತೋರಿಸುತ್ತದೆ. ಅಂತರ್ಜಾಲದಲ್ಲಿ ದೃಶ್ಯಾವಳಿಯನ್ನು ನೋಡಿ ವೀಕ್ಷಕರು ಆಘಾತಕ್ಕೊಳಗಾದರು, ಆದರೆ ಹುಲಿಗಳು ಏಕೆ ಈ ರೀತಿ ವರ್ತಿಸುತ್ತವೆ ಎಂದು ಅವರಲ್ಲಿ ಕೆಲವರು ಮಾತ್ರ ಅರಿತುಕೊಂಡರು.

ಇದನ್ನೂ ಓದಿ: Tiger and Duck: ಹುಲಿಗೇ ಚಳ್ಳೆ ಹಣ್ಣು ತಿನ್ನಿಸಿದ ಪುಟ್ಟ ಬಾತುಕೋಳಿ! ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ

"ಆ ನಾಯಿ ಆ ಹುಲಿಗಳನ್ನು ಸಾಕಲು ಸಹಾಯ ಮಾಡಿತು ಮತ್ತು ಅವುಗಳಿಗೆ ತನ್ನ ಹಾಲನ್ನು ಉಣಬಡಿಸಿತು. ಅವರು ನಾಯಿಯನ್ನು ನೋಯಿಸುವ ಸಾಧ್ಯಯಿಲ್ಲ. ಇದು ಸಾಧ್ಯ ಆದರೆ ತುಂಬಾನೇ ಅಪರೂಪ ಕೂಡ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: