ನಾಯಿಗಳು (Dogs) ಬಹಳ ಬುದ್ಧಿವಂತರಾಗಿರುತ್ತವೆ (Intelligent) ಮತ್ತು ಅವುಗಳಿಗೆ ಸೂಕ್ತ ತರಬೇತಿ (Training) ನೀಡಿದಾಗ, ಯಾವುದೇ ರೀತಿಯ ಕೆಲಸವನ್ನು ಕೂಡ ಮಾಡಲು ಸಮರ್ಥವಾಗುತ್ತವೆ ಎಂಬ ಸಂಗತಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ಕಳ್ಳರನ್ನು (Thief) ಹಿಡಿಯಲು, ಕಳೆದು ಹೋದ ವಸ್ತುಗಳನ್ನು ಪತ್ತೆ ಹಚ್ಚಲು ನಾಯಿಗಳ ಸಹಾಯ (Help) ಪಡೆಯುತ್ತಾರೆ ಎಂಬ ವಿಷಯ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಅಡುಗೆ (Cook) ಮಾಡುವ ನಾಯಿಯನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ, ಬಡ್ಗರ್ (Badger) ಎಂಬ ಹೆಸರಿನ ಗೋಲ್ಡನ್ ರಿಟ್ರೀವರ್ (Golden Retriever) ನಾಯಿಯ ವಿಡಿಯೋವನ್ನು ನೀವು ನೋಡಲೇಬೇಕು.
ಅಡುಗೆ ಮಾಡುವ ಶೆಫ್ ಗೋಲ್ಡನ್ ರಿಟ್ರೀವರ್ ನಾಯಿ
ಅದು ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಂನಲ್ಲಿ ತನ್ನದೇ ಪುಟವನ್ನು ಹೊಂದಿದ್ದು, ಅದರಲ್ಲಿ ಬಡ್ಗರ್ ಶೆಫ್ ಉಡುಗೆ ತೊಟ್ಟು, ಶೆಫ್ ಟೋಪಿ ಧರಿಸಿ ಮಾಂಸದ ಖಾದ್ಯವೊಂದನ್ನು ತಯಾರಿಸುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ನೆಟ್ಟಿಗರಂತೂ ಈ ಶೆಫ್ ಗೋಲ್ಡನ್ ರಿಟ್ರೀವರ್ ನಾಯಿಯನ್ನು ನೋಡಿ ಅಚ್ಚರಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Dog Video: ಈ ನಾಯಿಗೆ ಮನೆಯಲ್ಲಿ ಸ್ನಾನ ಮಾಡುವುದಂದ್ರೆ ತುಂಬಾ ಬೋರ್! ಅದಕ್ಕೇನು ಮಾಡುತ್ತೆ ಗೊತ್ತಾ?
“ನಿಮ್ಮ ತಂದೆ ನನ್ನಂತೆಯೇ ಪಾವ್ಸಮ್ ಆಗಿದ್ದಾಗ, ನೀವು ಖಂಡಿತಾ ಅವರನ್ನು ಸ್ಪಾಯಿಲ್ ಮಾಡಿ” ಎಂಬ ಶೀರ್ಷಿಕೆಯನ್ನು ಕೂಡ ಈ ವಿಡಿಯೋಗೆ ನಿಡಲಾಗಿದೆ. ಅಷ್ಟೇ ಅಲ್ಲ, ವಿಡಿಯೋದ ವಿವರಣೆಯಲ್ಲಿ, “ ಗೋಲ್ಡನ್ ರಿಟ್ರೀವರ್ ಪಪ್ಪಿ ಶೆಫ್ 6oz ಫಿಲೆಟ್ ಮಿಗ್ನಾನ್, ಹಿಚುಕಿದ ಆಲೂಗಡ್ಡೆ ಮತ್ತು ಶತಾವರಿಯನ್ನು ತಯಾರಿಸುತ್ತಿದ್ದಾರೆ” ಎಂದು ಬರೆಯಲಾಗಿದೆ. “ಈ ನಾಯಿ ಯಾವ ಸೆಲೆಬ್ರಿಟಿ ಶೆಫ್ಗೂ ಕಡಿಮೆ ಇಲ್ಲ. ಯಾಕಂತೀರಾ? ಇದು ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ 80,500 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ. ಇದರ ಇನ್ಸ್ಟಾಗ್ರಾಂ ಬಯೋದಲ್ಲಿ , “ಗೋಲ್ಡನ್ ರಿಟ್ರೀವರ್, ಶಾಸ್ತ್ರೀಯವಾಗಿ ತರಬೇತಿ ಪಡೆದ ಬಾಣಸಿಗ” ಎಂದು ಬರೆಯಲಾಗಿದೆ.
ವಿಡಿಯೋದಲ್ಲಿನ ದೃಶ್ಯ ಹೀಗಿದೆ
ತಲೆಯ ಮೇಲೆ ಶೆಫ್ ಟೋಪಿ ಧರಿಸಿ, ಪಂಜಗಳಿಗೆ ಗ್ಲೌಸ್ ಧರಿಸಿರುವ ಆ ಗೋಲ್ಡನ್ ರಿಟ್ರೀವರ್ ಮೊದಲು ಆಲೂಗಡ್ಡೆಗಳ ಸಿಪ್ಪೆ ತೆಗೆದು, ಅದನ್ನು ಕತ್ತರಿಸಿ, ಆ ತುಂಡುಗಳನ್ನು ಪಾತ್ರೆಯೊಂದರಲ್ಲಿರುವ ನೀರಿನಲ್ಲಿನ ಹಾಕುತ್ತದೆ. ಒಲೆ ಹೊತ್ತಿಸುತ್ತದೆ, ಬಳಿಕ ಅದನ್ನು ಬೇಯಿಸಿ ಮ್ಯಾಶ್ ಮಾಡುತ್ತದೆ. ಬಳಿಕ ಶತಾವರಿಯನ್ನು ಪ್ಯಾನ್ನಲ್ಲಿ ಹಾಕಿ ಹುರಿಯುತ್ತದೆ ಮತ್ತು ಮಾಂಸವನ್ನು ಪ್ಯಾನ್ನಲ್ಲಿ ಫ್ರೈ ಮಾಡುತ್ತದೆ. ಸಿದ್ಧ ಪಡಿಸಿದ ಖಾದ್ಯದ ಮುಂದೆ ಕುಳಿತು ಪೋಸ್ ನೀಡುತ್ತದೆ.
11,000 ಕ್ಕೂ ಹೆಚ್ಚು ವೀಕ್ಷಣೆ ಮಾಡಿದ ವಿಡಿಯೋ
ಈ ವಿಡಿಯೋವನ್ನು ನಾಲ್ಕು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ಕ್ಷಣದಿಂದ ಇದು ವರೆಗೆ ಈ ವಿಡಿಯೋ 11,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಶ್ವಾನವೊಂದು ಅಡುಗೆ ಮಾಡುವ ಈ ಮಜಾವಾದ ವಿಡಿಯೋವನ್ನು ನೋಡಿದ ನೆಟ್ಟಿಗರು ಇನ್ಸ್ಟಾಗ್ರಾಂನಲ್ಲಿ ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಕೆಲವರಂತೂ ವಿಡಿಯೋದಲ್ಲಿನ ಬಾಣಸಿಗ ಶ್ವಾನವನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ.
ವಿಡಿಯೋ ನೋಡಿ ಜನ ಹೇಳಿದ್ದೇನು ನೋಡಿ
“ನನಗೆ ಇದರ ಇನ್ನಷ್ಟು ವಿಡಿಯೋಗಳನ್ನು ನೋಡುವ ನಿರೀಕ್ಷೆ ಇದೆ ! ಇದು ನನ್ನ ದಿನವನ್ನು ಬೆಳಗಿಸುತ್ತದೆ” ಎಂದು ಒಬ್ಬ ಇನ್ಸ್ಟಾಗ್ರಾಂ ಬಳಕೆದಾರರು ಬರೆದಿದ್ದರೆ, ಇನ್ನೊಬ್ಬರು, “ಬ್ರಾವೋ ಶೇಫ್ ! ನೀವು ಮತ್ತೆ ನಿಮ್ಮನ್ನು ಮೀರಿಸಿದ್ದೀರಿ” ಎಂದು ಪ್ರಶಂಸಿಸಿದ್ದಾರೆ. “ಅವನು ಅಷ್ಟೊಂದು ಸ್ವಯಂ ನಿಯಂತ್ರಣವನ್ನು ಹೊಂದಿರುವುದು ಅಚ್ಚರಿದಾಯಕ” ಎಂದು ಇನ್ನೊಬ್ಬ ನೆಟ್ಟಿಗ ಹೊಗಳಿದ್ದಾರೆ. “ಯಾಕೆ, ನೀವು ಈ ಬಡಪಾಯಿ ನಾಯಿಯನ್ನು ಅದರ ಪಾಡಿಗೆ ಅದಕ್ಕೆ ಇರಲು ಬಿಡುತ್ತಿಲ್ಲ” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಬಹಳಷ್ಟು ಮಂದಿ ಹೃದಯ ಮತ್ತು ಚಪ್ಪಾಳೆಯ ಇಮೋಜಿಗಳನ್ನು ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Dogs Library: ಒಂದನ್ನು ತಗೊಳ್ಳಿ, ಒಂದನ್ನು ಬಿಡಿ; ಇಲ್ಲಿ ನಾಯಿಗಳಿಗೂ ಇದೆ ಗ್ರಂಥಾಲಯ
ಈ ಗೋಲ್ಡನ್ ರಿಟ್ರೀವರ್ ನಾಯಿಯ ಇನ್ಸ್ಟಾಗ್ರಾಂ ಖಾತೆಯಲ್ಲಿ, ಅದು ತರಾವರಿ ಅಡುಗೆಗಳನ್ನು ತಯಾರಿಸುವ ಅನೇಕ ವಿಡಿಯೋಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ