Gold Rate Today: ಇದೇ ಮೊದಲ ಬಾರಿಗೆ ಇಳಿಕೆ ಕಂಡ ಚಿನ್ನ; ಬೆಳ್ಳಿ ದರದಲ್ಲಿ ಭಾರೀ ಏರಿಕೆ

ನಿನ್ನೆ ಬೆಳ್ಳಿ ದರ ಕೆಜಿಗೆ 940ರೂಪಾಯಿ ಏರಿಕೆ ಕಾಣುವ ಮೂಲಕ 75,150 ರೂಪಾಯಿ ಆಗಿದೆ. ಶನಿವಾರ ಬೆಳ್ಳಿ ದರ 2310 ರೂಪಾಯಿ ಇಳಿಕೆ ಕಂಡಿತ್ತು.

news18-kannada
Updated:August 11, 2020, 9:40 AM IST
Gold Rate Today: ಇದೇ ಮೊದಲ ಬಾರಿಗೆ ಇಳಿಕೆ ಕಂಡ ಚಿನ್ನ; ಬೆಳ್ಳಿ ದರದಲ್ಲಿ ಭಾರೀ ಏರಿಕೆ
ಚಿನ್ನ
  • Share this:
ಬೆಂಗಳೂರು (ಆ.11): ಇತ್ತೀಚೆಗೆ ಕೊರೋನಾ ಜೊತೆ ಜೊತೆಗೆ ಚರ್ಚೆಯಲ್ಲಿರುವ ಮತ್ತೊಂದು ವಿಚಾರ ಎಂದರೆ ಅದು ಚಿನ್ನದ ದರ. ಯಾವಾಗ ಕೊರೋನಾ ವೈರಸ್​ ದೇಶಕ್ಕೆ ಲಗ್ಗೆ ಇಟ್ಟಿತ್ತೋ ಅಂದಿನಿಂದ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಲೇ ಇದೆ. ಆದರೆ, ಇದೇ ಮೊದಲ ಬಾರಿಗೆ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಹೌದು, ಶನಿವಾರ ಹಾಗೂ ಸೋಮವಾರ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಸೋಮವಾರ ಆಭರಣ ಚಿನ್ನ 10 ಗ್ರಾಂಗೆ 240 ರೂಪಾಯಿ ಇಳಿಕೆ ಕಂಡಿದೆ  ಈ ಮೂಲಕ ಬೆಲೆ 52,250 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  240 ರೂಪಾಯಿ ಇಳಿಕೆ ಕಂಡಿದ್ದು, 57,020 ರೂಪಾಯಿ ಆಗಿದೆ. ಶನಿವಾರ ಆಭರಣ ಚಿನ್ನ 320 ಹಾಗೂ ಶುದ್ಧ ಚಿನ್ನ 350 ರೂಪಾಯಿ ಇಳಿಕೆ ಕಂಡಿದೆ. 

ಬೆಳ್ಳಿ ಖರೀದಿದಾರರಿಗೂ ಸಿಹಿ ಸುದ್ದಿ ಸಿಗುತ್ತಿಲ್ಲ. ಬೆಳ್ಳಿ ಬೆಲೆಯಲ್ಲಾದರೂ ಇಳಿಕೆ ಕಾಣಬಹುದು ಎಂದು ಕಾದು ಕೂತಿದ್ದವರಿಗೂ ನಿರಾಸೆ ಆಗಿದೆ. ನಿನ್ನೆ ಬೆಳ್ಳಿ ದರ ಕೆಜಿಗೆ 940ರೂಪಾಯಿ ಏರಿಕೆ ಕಾಣುವ ಮೂಲಕ 75,150 ರೂಪಾಯಿ ಆಗಿದೆ. ಶನಿವಾರ ಬೆಳ್ಳಿ ದರ 2310 ರೂಪಾಯಿ ಇಳಿಕೆ ಕಂಡಿತ್ತು.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.

ಇದನ್ನೂ ಓದಿ: ಸುಖಾಂತ್ಯ ಕಂಡ ರಾಜಸ್ಥಾನ ರಾಜಕೀಯ ಹೈಡ್ರಾಮಾ; ಸಚಿನ್ ಪೈಲಟ್ ಮನವೊಲಿಸಿದ ರಾಹುಲ್, ಪ್ರಿಯಾಂಕಾ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.
Published by: Rajesh Duggumane
First published: August 11, 2020, 9:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading