Gold Price: ಬೇಡಿಕೆ ಹೆಚ್ಚಿದರೂ ಏರಿಕೆ ಕಾಣದ ಚಿನ್ನ; ಬೆಳ್ಳಿ ಬೆಲೆಯಲ್ಲಿ ಅಲ್ಪ ಕುಸಿತ

Gold Price In Bangalore: ಬೆಳ್ಳಿ ಬೆಲೆಯಲ್ಲೂ ಅಲ್ಪ ಇಳಿಕೆ ಕಂಡಿದೆ. ಕೆಜಿ ಬೆಳ್ಳಿಗೆ 50 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 47,550 ರೂಪಾಯಿ ಆಗಿದೆ.

news18-kannada
Updated:June 19, 2020, 10:57 AM IST
Gold Price: ಬೇಡಿಕೆ ಹೆಚ್ಚಿದರೂ ಏರಿಕೆ ಕಾಣದ ಚಿನ್ನ; ಬೆಳ್ಳಿ ಬೆಲೆಯಲ್ಲಿ ಅಲ್ಪ ಕುಸಿತ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜೂ. 19): 80 ದಿನಗಳ ಲಾಕ್​ಡೌನ್​ ನಂತರ ಚಿನ್ನದ ಮಳಿಗೆಗಳು ತೆರೆದಿದ್ದು ಗ್ರಾಹಕರು ಚಿನ್ನ ಖರೀದಿ ಮಾಡುತ್ತಿದ್ದಾರೆ. ಹಬ್ಬ ಹರಿದಿನಗಳಿಗಾಗಿ ಚಿನ್ನ ಖರೀದಿ ಮಾಡಬೇಕೆಂದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈಗ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಈ ಮಧ್ಯೆ ಗುರುವಾರ ಚಿನ್ನದ ಬೆಲೆ ತಟಸ್ಥವಾಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನ ಯಾವುದೇ ಏರಿಳಿತ ಕಂಡಿಲ್ಲ. ಈ ಮೂಲಕ ಚಿನ್ನದ ಬೆಲೆ 44,860 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 30 ರೂಪಾಯಿ ಇಳಿಕೆ ಕಂಡಿದ್ದು, 48,930 ರೂಪಾಯಿ ಆಗಿದೆ. 

ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನದ ದರದಲ್ಲಿ ಏರಿಕೆ ಕಂಡಿದ್ದೇ ಹೆಚ್ಚು.  ಇನ್ನು, ಬೆಳ್ಳಿ ಬೆಲೆಯಲ್ಲೂ ಅಲ್ಪ ಇಳಿಕೆ ಕಂಡಿದೆ. ಕೆಜಿ ಬೆಳ್ಳಿಗೆ 50 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 47,550 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಲಾಕ್​ಡೌನ್​ ವೇಳೆ ಇಳಿಕೆ ಕಂಡ ಚಿನ್ನದ ದರ:

  • ಲಾಕ್​ಡೌನ್ 1.0: ಮಾ.25-ಏ.14: ಒಟ್ಟು ಏರಿಕೆ 2610

  • ಲಾಕ್​ಡೌನ್ 2.0: ಏ.15 ಮೇ 3: ಒಟ್ಟು 121 ರೂ. ಏರಿಕೆ
  • ಲಾಕ್​ಡೌನ್ 3.0: ಮೇ 4: ಮೇ 17 ಒಟ್ಟು 1,154 ರೂ ಏರಿಕೆ

  • ಲಾಕ್​ಡೌನ್ 4.0: 932 ರೂ. ಇಳಿಕೆ

First published:June 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading