Gold Price Today: ಅನ್​ಲಾಕ್ 1.O ಬೆನ್ನಲ್ಲೇ ಸತತ ಇಳಿಕೆ ಕಂಡ ಚಿನ್ನ; ಬಂಗಾರದ ದರದಲ್ಲಿ ದಾಖಲೆಯ ಕುಸಿತ

Gold Price: ಅನ್​ಲಾಕ್​ ಘೋಷಣೆ ಆದ ಜೂನ್​  1ರಂದು ಚಿನ್ನ 90 ರೂಪಾಯಿ ಏರಿಕೆ ಕಂಡಿತ್ತು. ಅದಾದ ನಂತರ ಸತತ ಮೂರು ದಿನವೂ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ.

news18-kannada
Updated:June 5, 2020, 11:08 AM IST
Gold Price Today: ಅನ್​ಲಾಕ್ 1.O ಬೆನ್ನಲ್ಲೇ ಸತತ ಇಳಿಕೆ ಕಂಡ ಚಿನ್ನ; ಬಂಗಾರದ ದರದಲ್ಲಿ ದಾಖಲೆಯ ಕುಸಿತ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜೂ.5): ದೇಶದಲ್ಲಿ ಕೊರೋನಾ ವೈರಸ್​ ಹೆಚ್ಚುತ್ತಿರುವ ನಡುವೆಯೂ ಕೇಂದ್ರ ಸರ್ಕಾರ ಜೂನ್​ 1ರಿಂದ ಲಾಕ್​ಡೌನ್​ ಪೂರ್ಣಗೊಳಿಸಿ ಅನ್​ಲಾಕ್​ ಜಾರಿಗೆ ತಂದಿದೆ. ಇನ್ನು, ಚಿನ್ನದ ಮಳಿಗೆಗಳು ತೆರೆದಿದ್ದು ಗ್ರಾಹಕರು ಚಿನ್ನ ಖರೀದಿಗೆ ಮಾಡುತ್ತಿದ್ದಾರೆ. ಈ ಮಧ್ಯೆ ಚಿನ್ನದ ದರದಲ್ಲಿ ಸತತ ಇಳಿಕೆ ಕಾಣುತ್ತಿದೆ.  ಬುಧವಾರ ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ.  22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 250 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 43,550 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಕೂಡ 690 ರೂಪಾಯಿ ಇಳಿಕೆ ಕಂಡಿದ್ದು, 47,510 ರೂಪಾಯಿ ಆಗಿದೆ. 

ಅನ್​ಲಾಕ್​ ಘೋಷಣೆ ಆದ ಜೂನ್​  1ರಂದು ಚಿನ್ನ 90 ರೂಪಾಯಿ ಏರಿಕೆ ಕಂಡಿತ್ತು. ಅದಾದ ನಂತರ ಸತತ ಮೂರು ದಿನವೂ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಕೆಜಿ ಬೆಳ್ಳಿಗೆ 400 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 48,500 ರೂಪಾಯಿ ಆಗಿದೆ.

ಇದನ್ನೂ ಓದಿ: ಹಲಸಿನ ಹಣ್ಣಿನ ಸುವಾಸನೆಗೆ ಮರವೇರಿದ ಗಜರಾಜ!; ಅವನಿಗೂ ತಿನ್ನಬೇಕೆಂಬ ಆಸೆ ಇರಲ್ವೇ!

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಲಾಕ್​ಡೌನ್​ ವೇಳೆ ಇಳಿಕೆ ಕಂಡ ಚಿನ್ನದ ದರ:

  • ಲಾಕ್​ಡೌನ್ 1.0: ಮಾ.25-ಏ.14: ಒಟ್ಟು ಏರಿಕೆ 2610
  • ಲಾಕ್​ಡೌನ್ 2.0: ಏ.15 ಮೇ 3: ಒಟ್ಟು 121 ರೂ. ಏರಿಕೆ

  • ಲಾಕ್​ಡೌನ್ 3.0: ಮೇ 4: ಮೇ 17 ಒಟ್ಟು 1,154 ರೂ ಏರಿಕೆ

  • ಲಾಕ್​ಡೌನ್ 4.0: 932 ರೂ. ಇಳಿಕೆ

First published: June 5, 2020, 11:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading