HOME » NEWS » Trend » GOLD RATE GOLD PRICE TODAY GOLD RATE ON 3ND JUNE 2020 GOLD RATE IN BANGALORE RMD

Gold Price Today: ಸತತ ಏರಿಕೆ ಕಂಡ ಬೆನ್ನಲ್ಲೇ ಇಳಿಕೆ ಕಂಡ ಚಿನ್ನ

Gold Price: ಬೆಳ್ಳಿ ಬೆಲೆಯಲ್ಲಿ ಅಲ್ಪ  ಜಿಗಿತ ಕಂಡಿದೆ. ಕೆಜಿ ಬೆಳ್ಳಿಗೆ 10 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 50,160 ರೂಪಾಯಿ ಆಗಿದೆ.

news18-kannada
Updated:June 3, 2020, 10:08 AM IST
Gold Price Today: ಸತತ ಏರಿಕೆ ಕಂಡ ಬೆನ್ನಲ್ಲೇ ಇಳಿಕೆ ಕಂಡ ಚಿನ್ನ
ಚಿನ್ನ
  • Share this:
ಬೆಂಗಳೂರು (ಜೂ. 3): ಅನ್​ಲಾಕ್​ 1.0 ಆರಂಭಗೊಂಡಿದೆ.   ಚಿನ್ನದ ಮಳಿಗೆಗಳು ತೆರೆಯಲ್ಪಿಟ್ಟಿದ್ದು, ಜನರು ಚಿನ್ನ ಖರೀದಿ ಮಾಡುವಲ್ಲಿ ನಿರತರಾಗಿದ್ದಾರೆ.  ಈ ಮಧ್ಯೆ ಚಿನ್ನದ ದರದಲ್ಲಿ ಏರಿಳಿತ ಕಾಣುತ್ತಲೇ ಇದೆ.  ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 50 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 44,200 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಕೂಡ 130 ರೂಪಾಯಿ ಇಳಿಕೆ ಕಂಡಿದ್ದು, 48,220 ರೂಪಾಯಿ ಆಗಿದೆ.  

ಇತ್ತೀಚೆಗೆ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಾಣುತ್ತಿತ್ತು. ಒಂದೇ ದಿನ 900 ರೂಪಾಯಿ ಇಳಿಕೆ ಕಂಡ ದಾಖಲೆ ಕೂಡ ಇದೆ. ಆದರೆ, ಈಗ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಾಣಲು ಆರಂಭವಾಗಿದೆ. ಶನಿವಾರ ಹಾಗೂ ಸೋಮವಾರ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.

ಇದನ್ನೂ ಓದಿ: ಹಲಸಿನ ಹಣ್ಣಿನ ಸುವಾಸನೆಗೆ ಮರವೇರಿದ ಗಜರಾಜ!; ಅವನಿಗೂ ತಿನ್ನಬೇಕೆಂಬ ಆಸೆ ಇರಲ್ವೇ!

ಬೆಳ್ಳಿ ಬೆಲೆಯಲ್ಲಿ ಅಲ್ಪ  ಜಿಗಿತ ಕಂಡಿದೆ. ಕೆಜಿ ಬೆಳ್ಳಿಗೆ 10 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 50,160 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

  • ಲಾಕ್​ಡೌನ್ 1.0: ಮಾ.25-ಏ.14: ಒಟ್ಟು ಏರಿಕೆ 2610
  • ಲಾಕ್​ಡೌನ್ 2.0: ಏ.15 ಮೇ 3: ಒಟ್ಟು 121 ರೂ. ಏರಿಕೆ

  • ಲಾಕ್​ಡೌನ್ 3.0: ಮೇ 4: ಮೇ 17 ಒಟ್ಟು 1,154 ರೂ ಏರಿಕೆ

  • ಲಾಕ್​ಡೌನ್ 4.0: 932 ರೂ. ಇಳಿಕೆ

First published: June 3, 2020, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories