Gold Price: 45 ಸಾವಿರದ ಗಡಿ ತಲುಪಿದ ಚಿನ್ನ; ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ

ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ, ಚಿನ್ನದ ದರದಲ್ಲಿ ಭಾರೀ ಏರಿಳಿತ ಕಾಣುತ್ತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 48,050 ರೂಪಾಯಿ ಆಗಿದೆ.

news18-kannada
Updated:June 20, 2020, 10:13 AM IST
Gold Price: 45 ಸಾವಿರದ ಗಡಿ ತಲುಪಿದ ಚಿನ್ನ; ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜೂ. 20): ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಲಾಕ್​ಡೌನ್​ ಅವಧಿಯಲ್ಲಿ ಚಿನ್ನದ ಬೆಲೆ ಸಂಪೂರ್ಣವಾಗಿ ಕುಸಿದಿತ್ತು. ಪರಿಣಾಮ 80 ದಿನಗಳ ಕಾಲ ಚಿನ್ನದ ಮಾರಾಟ ನೆಲಕಚ್ಚಿತ್ತು. ಈಗ ಚಿನ್ನಕ್ಕೆ ಭಾರೀ ಬೇಡಿಕೆ ಬಂದಿದೆ. ಪರಿಣಾಮ ಬೆಂಗಳೂರಲ್ಲಿ ಚಿನ್ನದ ದರ 45 ಸಾವಿರದ ಗಡಿ ಸಮೀಪಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನ 90 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಲೆ 44,950 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 90 ರೂಪಾಯಿ ಏರಿಕೆ ಕಂಡಿದ್ದು, 49,200 ರೂಪಾಯಿ ಆಗಿದೆ. 

ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ, ಚಿನ್ನದ ದರದಲ್ಲಿ ಭಾರೀ ಏರಿಳಿತ ಕಾಣುತ್ತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 500 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 48,050 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಲಾಕ್​ಡೌನ್​ ವೇಳೆ ಇಳಿಕೆ ಕಂಡ ಚಿನ್ನದ ದರ:

  • ಲಾಕ್​ಡೌನ್ 1.0: ಮಾ.25-ಏ.14: ಒಟ್ಟು ಏರಿಕೆ 2610

  • ಲಾಕ್​ಡೌನ್ 2.0: ಏ.15 ಮೇ 3: ಒಟ್ಟು 121 ರೂ. ಏರಿಕೆ
  • ಲಾಕ್​ಡೌನ್ 3.0: ಮೇ 4: ಮೇ 17 ಒಟ್ಟು 1,154 ರೂ ಏರಿಕೆ

  • ಲಾಕ್​ಡೌನ್ 4.0: 932 ರೂ. ಇಳಿಕೆ

First published:June 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading