Gold Price Today: ಸತತ ಇಳಿಕೆ ಕಂಡ ಚಿನ್ನದ ಬೆಲೆ; ಬಂಗಾರ ಖರೀದಿಸಲು ಇದೇ ಸಕಾಲ

Gold and Silver Price Today: ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 49,460 ರೂ. ಆಗಿದೆ. ಹಾಗೆಯೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 45,340 ರೂ. ಆಗಿದೆ.

ಚಿನ್ನ

ಚಿನ್ನ

  • Share this:
    Gold Rate Today | ಕಳೆದೊಂದು ವಾರದಿಂದ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಕುಸಿತವಾಗುತ್ತಿದೆ. ಹೀಗಾಗಿ, ಬಂಗಾರ ಖರೀದಿಸಲು ಯೋಚಿಸುತ್ತಿದ್ದರೆ ಇದು ಸಕಾಲ. ನೀವೇನಾದರೂ ಚಿನ್ನ ಕೊಳ್ಳಲು ಯೋಚಿಸುತ್ತಿದ್ದರೆ ದೇಶದ ವಿವಿಧ ನಗರಗಳಲ್ಲಿ ಚಿನ್ನಕ್ಕೆ ಯಾವ ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ನಿನ್ನೆ 49,630 ರೂ. ಇದ್ದುದು, 49,460 ರೂ.ಗೆ ಇಳಿದಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 45,500 ರೂ. ಇದ್ದುದು ಇಂದು 45,340 ರೂ.ಗೆ ಇಳಿದಿದೆ. ಬೆಳ್ಳಿ ದರದಲ್ಲಿ ಏರಿಕೆಯಾಗಿದ್ದು, ನಿನ್ನೆ 71,300 ರೂ.ಇದ್ದ ಬೆಳ್ಳಿ ಬೆಲೆ (Silver Price) ಇಂದು 71,500ಕ್ಕೆ ಏರಿದೆ.

    ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಭಾರತದಲ್ಲಿ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,410 ರೂ. ಇದ್ದುದು ಇಂದು 47,400 ರೂ.ಗೆ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 48,410 ರೂ. ಇತ್ತು. ಇಂದು ಆ ಬೆಲೆ 48,400ಕ್ಕೆ ಕುಸಿದಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

    ಇದನ್ನೂ ಓದಿ:Karnataka Rain Updates: ಮಲೆನಾಡಲ್ಲಿ ಭಾರೀ ಮಳೆಗೆ ತತ್ತರಿಸಿದ ಜನರು; ಮೈದುಂಬಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳು

    ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 49,460 ರೂ. ಆಗಿದೆ. ಹಾಗೆಯೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 45,340 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 51,000 ರೂ. ದಾಟಿದೆ.

    ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 71,300 ರೂ. ಇದ್ದುದು ಇಂದು 71,500 ರೂ. ಗೆ ಏರಿಕೆಯಾಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 71,500 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 76,200 ರೂ. ಆಸುಪಾಸಿನಲ್ಲಿದೆ.

    ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ: ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ

    ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇ ರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು.

    ಕೊರೋನಾ ವೈರಸ್​ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್​ಡೌನ್​ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್​ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

    ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
    Published by:Latha CG
    First published: