Gold Price Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಇಂತಿದೆ..!

10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,160 ರೂ. ಇದ್ದುದು ಇಂದು 47,200 ರೂ. ಕ್ಕೆ ಏರಿಕೆ ಆಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

ಚಿನ್ನ

ಚಿನ್ನ

  • Share this:
    Gold Rate Today: ಚಿನ್ನ ಮತ್ತು ಬೆಳ್ಳಿ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇದೆ. ನಿನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ನಿನ್ನೆ 48,120 ರೂ. ಇದ್ದುದ್ದು, ಇಂದು 48,110 ರೂ. ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ನಿನ್ನೆ 44,120 ರೂ. ಇದ್ದುದು ಇಂದು 44,110 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ಬೆಲೆಯೂ ಸಹ ಇಂದು ಏರಿಕೆ ಕಂಡಿದೆ. 1 ಕೆಜಿ ಬೆಳ್ಳಿಗೆ ಇಂದು 68,000 ರೂ. ಆಗಿದೆ.

    ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,160 ಇದ್ದುದ್ದು, ಇಂದು 46200 ರೂ.ಗೆ ಏರಿಕೆ ಆಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,160 ರೂ. ಇದ್ದುದು ಇಂದು 47,200 ರೂ. ಕ್ಕೆ ಏರಿಕೆ ಆಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

    ಇದನ್ನೂ ಓದಿ:Coronavirus: ರಾಜ್ಯಕ್ಕಿಂತ ಕೊಡಗಿನಲ್ಲೇ ಹೆಚ್ಚು ಪಾಸಿಟಿವಿಟಿ ರೇಟ್; ಸಚಿವ ಸುಧಾಕರ್ ಆತಂಕ

    ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 48,110 ರೂ. ಆಗಿದೆ. ಹಾಗೆಯೇ, 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದು 44,110 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 50,000 ರೂ.ಗೆ ಸಮೀಪದಲ್ಲಿದೆ.

    ಭಾರತದಲ್ಲಿ 3 ದಿನಗಳಿಂದ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಆದರೆ, ಇಂದು 1 ಕೆಜಿಗೆ 100 ರೂ. ಹೆಚ್ಚಳವಾಗಿದ್ದು, 68,000 ರೂ. ಆಗಿದೆ. ನಿನ್ನೆ 1 ಕೆ.ಜಿ.ಬೆಳ್ಳಿಗೆ 67,900 ರೂ. ಇತ್ತು. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 68,000 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 73,500 ರೂ. ಆಸುಪಾಸಿನಲ್ಲಿದೆ.

    ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇ ರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು.

    ಇದನ್ನೂ ಓದಿ:Karnataka Weather Today: ಇಂದು ಮತ್ತು ನಾಳೆ ರಾಜ್ಯದಲ್ಲಿ ವ್ಯಾಪಕ ಮಳೆ; ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಣೆ

    ಕೊರೋನಾ ವೈರಸ್ ಹರಡುವಿಕೆ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

    ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
    Published by:Latha CG
    First published: