Trending| ಚಿನ್ನದ ಚೈನ್ ಕೊಕ್ಕೆಗಳನ್ನು ತಲೆಯ ಮೇಲೆ ಶಸ್ತ್ರ ಚಿಕಿತ್ಸೆಯಿಂದ ಅಳವಡಿಸಿಕೊಂಡ ಮೆಕ್ಸಿಕೋ ರ‍್ಯಾಪರ್

ನನ್ನ ತಲೆಯಲ್ಲಿ ಅಳವಡಿಸಿರುವುದು ಕೊಕ್ಕೆಯಂತಿದೆ. ಮತ್ತು ಆ ಕೊಕ್ಕೆ ಹಲವು ಕೊಕ್ಕೆಗಳನ್ನು ಹೊಂದಿದೆ ಮತ್ತು ಅವೆಲ್ಲವೂ ನನ್ನ ತಲೆಬುರುಡೆಯಲ್ಲಿ, ನನ್ನ ಚರ್ಮದ ಕೆಳಗೆ ಸಿಕ್ಕಿಕೊಂಡಿವೆ'' ಎಂದು ರ‍್ಯಾಪರ್ ಹೇಳಿಕೊಂಡಿದ್ದಾರೆ.

ಚಿನ್ನದ ಚೈನ್ ಕೊಕ್ಕೆಗಳನ್ನು ತಲೆಯ ಮೇಲೆ ಶಸ್ತ್ರಚಿಕಿತ್ಸೆಯಿಂದ ಅಳವಡಿಸಿಕೊಂಡಿರುವ ಮೆಕ್ಸಿಕೋ ರ‍್ಯಾಪರ್

ಚಿನ್ನದ ಚೈನ್ ಕೊಕ್ಕೆಗಳನ್ನು ತಲೆಯ ಮೇಲೆ ಶಸ್ತ್ರಚಿಕಿತ್ಸೆಯಿಂದ ಅಳವಡಿಸಿಕೊಂಡಿರುವ ಮೆಕ್ಸಿಕೋ ರ‍್ಯಾಪರ್

  • Share this:
23 ವರ್ಷದ ಮೆಕ್ಸಿಕೋ ಮೂಲದ ರ‍್ಯಾಪರ್ ಇತ್ತೀಚೆಗೆ ತನ್ನ ತಲೆಯ ಮೇಲಿನ ಕೂದಲುಗಳನ್ನು ಬದಲಾಯಿಸಿಕೊಂಡಿದ್ದಾರೆ. ಇದೇನು ಸುದ್ದಿ ಅಂತೀರಾ..? ಅವರು ತಮ್ಮ ಕೂದಲಿನ ಬದಲು ಚಿನ್ನದ ಚೈನ್‌ ಕೊಕ್ಕೆಗಳನ್ನು ತಲೆಯ ಮೇಲೆ ಅಳವಡಿಸಿಕೊಂಡಿದ್ದಾರೆ. ಅದೂ, ಶಸ್ತ್ರಚಿಕಿತ್ಸೆಯ ಮೂಲಕ. ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದಂತೆ, ಡಾನ್ ಸುರ್ ವೃತ್ತಿಯಲ್ಲಿ ರ‍್ಯಾಪರ್ ಆಗಿದ್ದಾರೆ ಮತ್ತು  ಮಾನವ ಇತಿಹಾಸದಲ್ಲಿ ಚಿನ್ನದ ಸರಗಳನ್ನು ತನ್ನ ಕೂದಲಿನಂತೆ ಹೊಂದಿದ ಮೊದಲ ರ‍್ಯಾಪರ್ ನಾನೇ ಎಂದು ಅವರು ಹೇಳಿಕೊಂಡಿದ್ದಾರೆ. ಸುರ್ ತನ್ನ ವಿಲಕ್ಷಣ ಹೊಸ ಹೆಡ್‌ಪೀಸ್ ಅನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ತೋರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಟಿಕ್‌ಟಾಕ್‌ನಲ್ಲಿ ಅವರು ಸುಮಾರು ಎರಡು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಈ ಕಾರ್ಯವಿಧಾನದ ನಂತರ, ಸುರ್, ತನ್ನ ಟಿಕ್‌ಟಾಕ್ ವಿಡಿಯೋವೊಂದರಲ್ಲಿ,  "ಸತ್ಯವೆಂದರೆ ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದೆ. ಏಕೆಂದರೆ ಈ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಕೂದಲಿಗೆ ವಿಭಿನ್ನವಾಗಿ ಬಣ್ಣ ಹಚ್ಚುವುದನ್ನು ನಾನು ನೋಡುತ್ತೇನೆ. ಈಗ, ಎಲ್ಲರೂ ನನ್ನನ್ನು ಅನುಸರಿಸಲು ಪ್ರಾರಂಭಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

ತಾವು ಕೇವಲ ಆಭರಣ ಅಂಗಡಿಯಿಂದ ಹೊರಬಂದಂತೆ ಕಾಣಲು ಬಯಸಿದ್ದೆ ಎಂದು ಸುರ್ ಹೇಳಿದ್ದಾರೆ.  ತನ್ನ ಈ ಹೇರ್‌ ಲಾಕ್‌ ಬಗ್ಗೆ ಮಾತನಾಡುತ್ತಾ, "ನನ್ನ ತಲೆಯಲ್ಲಿ ಅಳವಡಿಸಿರುವುದು ಕೊಕ್ಕೆಯಂತಿದೆ. ಮತ್ತು ಆ ಕೊಕ್ಕೆ ಹಲವು ಕೊಕ್ಕೆಗಳನ್ನು ಹೊಂದಿದೆ ಮತ್ತು ಅವೆಲ್ಲವೂ ನನ್ನ ತಲೆಬುರುಡೆಯಲ್ಲಿ, ನನ್ನ ಚರ್ಮದ ಕೆಳಗೆ ಸಿಕ್ಕಿಕೊಂಡಿವೆ'' ಎಂದು ರ‍್ಯಾಪರ್ ಹೇಳಿಕೊಂಡಿದ್ದಾರೆ.

ಕ್ಯಾರಕೋಲ್ ಟಿವಿ ವರದಿಗಳ ಪ್ರಕಾರ, ಸುರ್ ಈ ವರ್ಷದ ಏಪ್ರಿಲ್‌ನಲ್ಲಿ ಈ ರೀತಿ ಚಿನ್ನದ ಚೈನ್‌ ಕೊಕ್ಕೆಗಳನ್ನು ಹೊಂದಲು ಕೂದಲು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇನ್ನು,  ಸುರ್ ಅವರ ಹೊಸ ಕೂದಲು ಅವತಾರ, ಅವರ ಸಾಮಾಜಿಕ ಮಾಧ್ಯಮದ ಅನುಯಾಯಿಗಳಿಗೆ ಸಾಕಷ್ಟು ಮೆಚ್ಚುಗೆಯಾಗಿದೆ ಎನ್ನಲಾಗಿದೆ. ಯಾಕೆಂದರೆ ಟಿಕ್‌ಟಾಕ್‌ನಲ್ಲಿ ರ‍್ಯಾಪರ್‌ನ ಫಾಲೋವರ್‌ಗಳ ಸಂಖ್ಯೆ 12,000ದಿಂದ ಸುಮಾರು 1.9 ಮಿಲಿಯನ್‌ಗೆ ಬೆಳೆದಿದೆ. ಅದೇ ರೀತಿ, ಇನ್ಸ್ಟಾಗ್ರಾಮ್‌ನಲ್ಲೂ, ಅವರು ಟಿಕ್‌ಟಾಕ್‌ಗಿಂತ ಹತ್ತಾರು ಸಾವಿರ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಆದರೂ, ಕೆಲವು ನೆಟ್ಟಿಗರು ಸುರ್, ರ‍್ಯಾಪರ್‌  ಲಿಲ್ ಉಜಿ ವರ್ಟ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದರು. ಅವರು ಈ ವರ್ಷದ ಆರಂಭದಲ್ಲಿ ಹಣೆಗೆ ಕಸಿ ಮಾಡಿದ "ನೈಸರ್ಗಿಕ" ಗುಲಾಬಿ ವಜ್ರ ಅಥವಾ ಪಿಂಕ್‌ ಡೈಮೆಂಡ್‌ಗಾಗಿ 24 ಮಿಲಿಯನ್ ಡಾಲರ್‌ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಿದಾಗ ವೈರಲ್ ಆಗಿತ್ತು. ನೀವು ಸುರ್ ಇನ್‌ಸ್ಟಾಗ್ರಾಮ್ ಖಾತೆಯ ಹಳೆಯ ಫೋಟೋಗಳನ್ನು ನೋಡಿದರೆ, ಅವರ ಅಸಾಮಾನ್ಯ ಕೂದಲು ಬದಲಿಸುವ ಮುನ್ನ ಅವರ ಸಾಂಪ್ರದಾಯಿಕ ಕೂದಲಿನ ಚಿತ್ರಗಳನ್ನು ನೀವು ಕಾಣಬಹುದು. ಸುರ್ ನೈಸರ್ಗಿಕವಾಗಿ ಕಪ್ಪು ಕೂದಲನ್ನು ಹೊಂದಿದ್ದರು, ಅದನ್ನು ಅವರು ಡ್ರೆಡ್‌ಲಾಕ್‌ಗಳಲ್ಲಿ ಇರಿಸುತ್ತಿದ್ದರು.

ಇದನ್ನೂ ಓದಿ: Ajay Jadeja| ಟಿ20 ವಿಶ್ವಕಪ್‌ಗೆ ಧೋನಿ ಮೆಂಟರ್‌: ಬಿಸಿಸಿಐ ತೀರ್ಮಾನವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೇ..?

ಇನ್ನು, ಚಿನ್ನವನ್ನು ತಲೆಯ ಮೇಲೆ ಮಾತ್ರವಲ್ಲದೆ, ಹಲ್ಲುಗಳಲ್ಲೂ ಹಾಕಿಸಿಕೊಂಡಿ ರುವುದು ಕಂಡುಬಂದಿದೆ. ಇನ್ನು, ಸರಪಳಿಗಳು ನಿಜವಾಗಿದೆಯೇ ಮತ್ತು ಗೋಲ್ಡನ್ ಗ್ರಿಡ್‌ನೊಂದಿಗೆ ಅವರು ತನ್ನ ಹಲ್ಲುಗಳನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ಆನ್‌ಲೈನ್‌ನಲ್ಲಿ ಅನೇಕ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಇದೆಲ್ಲವೂ ಅಧಿಕೃತ ಎಂದು  ರ‍್ಯಾಪರ್ ಡಾನ್ ಸುರ್  ಸ್ಪಷ್ಟನೆ ನೀಡಿದ್ದಾರೆ.
Published by:MAshok Kumar
First published: