• Home
  • »
  • News
  • »
  • trend
  • »
  • Viral Video: ಕೋಳಿ ಹಿಡಿಯೋಕೆ ಹೋಗಿ ತಾನೇ ಪೈಪ್‌ನಲ್ಲಿ ಸಿಕ್ಕಿಕೊಂಡ ಹೆಬ್ಬಾವು! ಗ್ರಹಚಾರ ಕೆಟ್ರೆ ಹೀಗೇ ಆಗೋದು

Viral Video: ಕೋಳಿ ಹಿಡಿಯೋಕೆ ಹೋಗಿ ತಾನೇ ಪೈಪ್‌ನಲ್ಲಿ ಸಿಕ್ಕಿಕೊಂಡ ಹೆಬ್ಬಾವು! ಗ್ರಹಚಾರ ಕೆಟ್ರೆ ಹೀಗೇ ಆಗೋದು

ವೈರಲ್ ದೃಶ್ಯ

ವೈರಲ್ ದೃಶ್ಯ

ಸಣ್ಣ ಪ್ರಾಣಿಗಳು ದೊಡ್ಡ ಪ್ರಾಣಿಗಳನ್ನು ಕಂಡರೆ ಸಖತ್​ ಭಯ ಬೀಳುತ್ತವೆ. ಆದರೆ ಇಲ್ಲೊಂದು ಕೋಳಿ ಹಾವು ತನ್ನನ್ನು ನುಂಗಲು ಬಂದರೂ ಹೇಗೆ ಹೆದರದೇ ನಿಂತಿದೆ ನೋಡಿ.

  • Share this:

ಸಾಮಾಜಿಕ ಮಾಧ್ಯಮದಲ್ಲಿ (Social Media) ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ಕೆಲವು ರೀತಿಯ ವೈರಲ್ ವೀಡಿಯೊಗಳು ಬರ್ತಾನೇ ಇರ್ತವೆ. ಏಕೆಂದರೆ ಅವುಗಳನ್ನು ಕಂಡರೆ ನಮಗೆ ಭಯವಾಗುತ್ತದೆ. ನಮ್ಮ ಮೆದುಳು ಭಯಾನಕ ದೃಶ್ಯಗಳನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತದೆ. ಅದೇ ರೀತಿಯಾಗಿ ಕೆಲವೊಬ್ಬರಿಗೆ ಹಾವಿನ್ನು (Snake) ನೋಡಲು ಆಗುವುದಿಲ್ಲ, ಅದು ವಿಡಿಯೋದಲ್ಲಿ ಕೂಡ ನೋಡಿದರೂ ತುಂಬಾ ಬೆಚ್ಚಿಬೀಳುತ್ತಾರೆ. ಇದೀಗ ಅದೇ ರೀತಿಯ ವಿಡಿಯೋ ವೈರಲ್ (Video Viral)​ ಆಗಿದೆ. ಈ ಹೆಬ್ಬಾವಿನ ವಿಡಿಯೋ ಹಾಗಿಯೇ ಇದೆ. ಈ ವಿಡಿಯೋವನ್ನು ನೋಡಿದರೆ ಎಂಥವರಿಗಾದರೂ ಅಬ್ಬಬ್ಬಾ! ಅಂತ ಅನಿಸುತ್ತೆ. ಆದರೆ ಇಲ್ಲಿ ಇರುವಂತ ಕೋಳಿಯನ್ನು ಮೆಚ್ಚಲೇ ಬೇಕು. ಯಾಕೆ ಅಂತ ಕೇಳ್ತೀರಾ? ನೀವೇ ನೋಡಿ  ಗೊತ್ತಾಗುತ್ತೆ.


ಸಾಮಾನ್ಯವಾಗಿ ಸಣ್ಣ ಪ್ರಾಣಿಗಳು ದೊಡ್ಡ ಪ್ರಾಣಿಗಳನ್ನು ಕಂಡರೆ  ಭಯ ಬೀಳುತ್ತವೆ ಅಥವಾ ಓಡಿ ಹೋಗುತ್ತವೆ. ಯಾಕೆಂದರೆ, ಎಲ್ಲಿ ತನ್ನನ್ನು ತಿಂದು ಬಿಡುತ್ತವೋ ಅಂತ ಭಯದಿಂದ ಕಣ್ಣಾ ಮುಚ್ಚಾಲೆ ಆಡುತ್ತಾ ಇರುತ್ತವೆ. ಆದರೆ, ಇಲ್ಲೊಂದು ಕೋಳಿ ಹುಮ್​... ನಾನು ಯಾರಿಗು ಹೆದ್ರೋಲ್ಲ ಅಂತ ಹೇಗೆ ಧೈರ್ಯದಲ್ಲಿ ನಿಂತಿದೆ ಅಂತ ನೀವೇ ನೋಡಿ.


ಏನಿದೆ ವಿಡಿಯೋದಲ್ಲಿ?


ಕೋಳಿ ತನ್ನ ಪಾಡಿಗೆ ತಾನು ಆಚೆ ಈಚೆ ನೋಡುತ್ತಾ ನಿತ್ತಿರುತ್ತದೆ. ಅದರ ಹಿಂದೆ ಸಣ್ಣದಾದ ಕೆರೆ ಇರುತ್ತದೆ. ಅದು ಕೂಡ ಕೆಸರಿನಿಂದ ತುಂಬಿಕೊಂಡ ನದಿಯಾಗಿರುತ್ತದೆ. ಅಲ್ಲಿ ಯಾರು ಸಖತ್ತಾಗಿ ಪ್ಲಾನ್​ ಮಾಡಿ ಪೈಪ್​ ಹಾಕಿದ್ದಾರೆ. ಯಾಕೆ ಗೊತ್ತಾ? ಯಾವುದಾದರೂ ಹಾವು ಅಥವಾ ಪ್ರಾಣಿಗಳು ತೋಟಕ್ಕೆ ನುಗ್ಗಲು, ಕೋಳಿಗಳನ್ನು ಹಿಡಿಯಲು ಬಂದರೆ ಆ ಪೈಪ್​ನಲ್ಲಿ ಸಿಕ್ಕಿ ಹಾಕಿಕೊಳ್ಳಲಿ ಅಂತಾ. ಅದೇ ರೀತಿಯಾಗಿ ಬಲೀಕ ಬಕ್ರಾ ಆಗೇ ಹೋಯ್ತು ಒಂದು ದೊಡ್ಡ ಹಾವು.


ಇದನ್ನೂ ಓದಿ: ಮಗನ ಸ್ವಾರಸ್ಯಕರ ಉತ್ತರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಮಾಜಿ ಗೂಗಲ್ ಎಂಡಿ


ಕೋಳಿಯನ್ನು ಹಿಡಿಯಲು ಹಾವು ಎಷ್ಟು ರಭಸದಿಂದ ಬರುತ್ತದೆ. ಆಗ ಆ ಪೈಪ್​ನಲ್ಲಿ ಹಾವು ಸಿಕ್ಕಿ ಹಾಕಿಕೊಳ್ಳುತ್ತದೆ. ಆದರೆ, ಕೋಳಿ ಒಂದು ಚೂರು ಭಯಪಡದೇ ಸುಮ್ಮನೇ ಜಿಗುಪ್ಸೆ ಬಂದ ಹಾಗೆ ನಿತ್ತಿರುತ್ತದೆ. ಅದು ಸಾಮಾನ್ಯ ಹಾವಲ್ಲ, ಹೆಬ್ಬಾವು ಕಂಡ್ರೀ. ಅದೆಷ್ಟು ದೊಡ್ಡ ಇದೆ ಅಂತ ನೀವೇ ನೋಡಿ, ಬೆಚ್ಚಿ ಬೀಳ್ತೀರಾ!


ವಿಡಿಯೋಗೆ ಸುಮಾರು 5ಮಿಲಿಯನ್​ಕ್ಕೂ ಹೆಚ್ಚು ಲೈಕ್ಸ್​ ಬಂದಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. "ಕೆಲವರು ಹಾಗೆ ಹಾವನ್ನು ಬಲೆಗೆ ಬೀಳಿಸುವ ಉಪಾಯ ಮಾಡ್ತಾರೆ" ಅಂತ ಹೇಳಿದ್ರೆ, ಇನ್ನೂ ಕೆಲವರು "ಇದು ನನಗೆ ದುಃಸ್ವಪ್ನದಂತೆ ಭಾಸವಾಯಿತು" ಎಂದು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬ ಬಳಕೆದಾರರು "ನಾನು ಹೆದರುತ್ತಿದ್ದೆ" ಎಂದು ಕಾಮೆಂಟ್ ಮಾಡಿದ್ದಾರೆ. "ಸಣ್ಣ ಹಾವಾಗಿದ್ದರೂ ಅದು ಏಕೆ ದೊಡ್ಡ ಹಾವಿನಂತೆ ಕಾಣುತ್ತದೆ?" ಇನ್ನೊಬ್ಬ ಬಳಕೆದಾರರು ಕಾಮಿಡಿಯಾಗಿ ಕೇಳಿದ್ದಾರೆ. "ಉಮ್ಮ್ ಆ ಹಾವು ಮನುಷ್ಯನನ್ನೂ ನುಂಗಬಲ್ಲದು" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದು ದೊಡ್ಡ ಹಾವು ಎಂದು ಹಲವರು ಕಮೆಂಟ್​ ಮಾಡಿದ್ದಾರೆ.


Python trap using live chicken pic.twitter.com/pM5fP5J36Gಈ ವೀಡಿಯೊವನ್ನು Twitter ನ @OTerrifying ಖಾತೆಯಲ್ಲಿ 15 ಸೆಕೆಂಡುಗಳ ಕಾಲ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ 51 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಹಾವಿಗೆ ಬೆವರನ್ನು ಇಳಿಸಿತು ಈ ಕೋಳಿ ಅಂತ ಹೇಳಿದ್ರೂ ತಪ್ಪಾಗೋಲ್ಲ ಬಿಡಿ.

First published: