ದುಬಾರಿ ಬೆಲೆಗೆ ಮಾರಾಟವಾಯ್ತು ‘ಸಲ್ಮಾನ್​‘ ಮೇಕೆ; ಅಷ್ಟಕ್ಕೂ ಈ ‘ಬಕರಾ‘ದ ವಿಶೇಷತೆಗಳೇನು ಗೊತ್ತಾ?

ವಿಶೇಷವೆಂದರೆ ಈ ಮೇಕೆಯ ಹೆಸರು ‘ಸಲ್ಮಾನ್‘​​ ಎಂದಾಗಿದ್ದು, ಅದರ ಮೈ ಮೇಲೆ ‘ಅಲ್ಲಾ‘ ಎಂಬ ಹೆಸರಿದೆ. ಈ ಕಾರಣಕ್ಕಾಗಿ ಮೇಕೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಅಂತೆಯೇ, ಇದರ ಮಾಲೀಕನಾಗಿರು ಮೊಹಮ್ಮದ್​ ನಿಜಾಮುದ್ದೀನ್​ ನಿತ್ಯ ಈ ಮೇಕೆಯ ಕರ್ಚಿಗಾಗಿ 700 ರಿಂದ 800 ರೂ ಖರ್ಚು ಮಾಡಿದ್ದಾರಂತೆ. ಜೊತೆಗೆ ಮನೆಯ ಒಳಗಡೆಗೆ ಸಾಕುತ್ತಿದ್ದರು.

news18
Updated:August 12, 2019, 9:14 PM IST
ದುಬಾರಿ ಬೆಲೆಗೆ ಮಾರಾಟವಾಯ್ತು ‘ಸಲ್ಮಾನ್​‘ ಮೇಕೆ; ಅಷ್ಟಕ್ಕೂ ಈ ‘ಬಕರಾ‘ದ ವಿಶೇಷತೆಗಳೇನು ಗೊತ್ತಾ?
‘ಸಲ್ಮಾನ್​‘ ಮೇಕೆ
  • News18
  • Last Updated: August 12, 2019, 9:14 PM IST
  • Share this:
ದೇಶದಾದ್ಯಂತ ಬಕ್ರೀದ್​ ಆಚರಣೆ ಸಡಗರದಿಂದ ಸಾಗುತ್ತಿದೆ. ಹಬ್ಬದ ದಿನದಂದು ಕುರಿ-ಮೇಕೆಗಳ ಖರೀದಿಗೆ ಭಾರಿ ಬೇಡಿಕೆ ಬಂದಿದೆ. ಈ ಹಬ್ಬದ ಸಡಗರ ನಡುವೆ ಉತ್ತರ ಪ್ರದೇಶದ ಗೋರಖ್​ಪುರ್​ನಲ್ಲಿ ಮೇಕೆಯೊಂದು ಬರೋಬ್ಬರಿ 8 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ವಿಶೇಷವೆಂದರೆ ಈ ಮೇಕೆಯ ಹೆಸರು ‘ಸಲ್ಮಾನ್‘​​ ಎಂದಾಗಿದ್ದು, ಅದರ ಮೈ ಮೇಲೆ ‘ಅಲ್ಲಾ‘ ಎಂಬ ಹೆಸರಿದೆ. ಈ ಕಾರಣಕ್ಕಾಗಿ ಮೇಕೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಅಂತೆಯೇ, ಇದರ ಮಾಲೀಕನಾಗಿರು ಮೊಹಮ್ಮದ್​ ನಿಜಾಮುದ್ದೀನ್​ ನಿತ್ಯ ಈ ಮೇಕೆಯ ಕರ್ಚಿಗಾಗಿ 700 ರಿಂದ 800 ರೂ ಖರ್ಚು ಮಾಡಿದ್ದಾರಂತೆ. ಜೊತೆಗೆ ಮನೆಯ ಒಳಗಡೆಗೆ ಸಾಕುತ್ತಿದ್ದರು.

ಇನ್ನು ಮುಸ್ಲಿಂಮರ ಪವಿತ್ರ ಹಬ್ಬದ ಆಚರಣೆ ದಿನ ಗೋರಖ್​ಪುರ ಮಾರುಕಟ್ಟೆಗೆ ಈ ಆಡನ್ನು ಮಾರಾಟ ಮಾಡಲು ತೆಗೆದುಕೊಂಡು ಬರಲಾಗಿದೆ. ಆಡಿನ ಮೈ ಮೇಲೆ ಬರೆದಿದ್ದ ಅಲ್ಲಾ ಎಂಬ ಹೆಸರನ್ನು ನೋಡಿದ ಜನರು ನಾ ಮುಂದು ತಾ ಮುಂದು ಎಂದು ಖರೀದಿಸಲು ಮುಂದಾಗಿದ್ದಾರೆ. ಈ ವೇಳೆ 8 ಲಕ್ಷ ಮೊತ್ತಕ್ಕೆ ಈ ಮೇಕೆ ಮಾರಾಟವಾಗಿದೆ.
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...