ಈ ಪ್ರಪಂಚದಲ್ಲಿ( world) ಅದೆಷ್ಟೋ ಪವಾಡ ಸದೃಶ (Miracles) ಘಟನೆಗಳು ನಡೆಯುತ್ತಲೇ ಇರುತ್ತವೆ. ಅದೆಷ್ಟೋ ನವಜಾತ ಶಿಶುಗಳು ವಿಶೇಷ ರೂಪದಲ್ಲಿ ಜನಿಸಿರುವ (Born Specially) ಅದೆಷ್ಟೋ ಘಟನೆಗಳನ್ನು ನಾವು ಟಿವಿ, ಪತ್ರಿಕೆ, ಸುದ್ದಿತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಇದೇ ರೀತಿ ಪ್ರಾಣಿಗಳಲ್ಲೂ ಮೂರು ಕಾಲಿನ ಕರುವಿನ ಜನನ(Three-eyed calf), ಮೂರು ಕಣ್ಣಿನ ಆಡಿನ ಮರಿ ಜನನ ಹೀಗೆ ಅದೆಷ್ಟೋ ನಂಬಲು ಅಸಾಧ್ಯವಾಗಿರುವ ಘಟನೆಗಳು ಈ ಭೂಮಂಡಲದಲ್ಲಿ(Planet) ನಡೆಯುತ್ತಲೇ ಇರುತ್ತದೆ. ಪ್ರಕೃತಿ (Nature) ಕೂಡ ಒಂದಿಲ್ಲೊಂದು ವಿಸ್ಮಯಕಾರಿ (Astonishing) ಘಟನೆಗಳಿಂದ ಮಾನವ ಕುಲವನ್ನು ಸ್ತಬ್ಧಗೊಳಿಸುತ್ತಲೇ ಇರುತ್ತದೆ.
ಮನುಷ್ಯರಂತೆಯೇ ಕಾಣುವ ಮೇಕೆ
ಈಗ ಇಂತಹುದ್ದೇ ವಿಸ್ಮಯಕಾರಿ ಘಟನೆಯೊಂದು ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಜಿಲ್ಲೆಯಲ್ಲಿ ಮೇಕೆಯೊಂದು ವಿರೂಪಗೊಂಡ ಕೂದಲು ರಹಿತ ಮೇಕೆ ಮರಿಗೆ ಜನ್ಮನೀಡಿದೆ. ಈ ಮೇಕೆ ಮರಿ ಮನುಷ್ಯರಂತೆಯೇ ಕಾಣುತ್ತಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಇದನ್ನೂ ಓದಿ: Mysore Zoo: ಮುಂದಿನ ವರ್ಷದಿಂದ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ದುಬಾರಿ
ಮೇಕೆ ಮರಿಯು ಮನುಷ್ಯರಂತೆಯೇ ಕಣ್ಣು, ಮೂಗು ಹಾಗೂ ಬಾಯಿಯನ್ನು ಹೊಂದಿತ್ತು. ಆದರೆ ಕಿವಿ ಮೇಕೆಯಂತಿತ್ತು. ಅದು 2 ಕಾಲುಗಳನ್ನು ಹೊಂದಿದ್ದು, ಬಾಲವಿಲ್ಲ ಅಂತೆಯೇ ಅದರ ದೇಹದಲ್ಲಿ ಯಾವುದೇ ಕೂದಲಿಲ್ಲ.
ವಿಡಿಯೋ ನೋಡಿ:
ಹುಟ್ಟಿದ ತಕ್ಷಣವೇ ಮರಣ
ಈ ಮೇಕೆಯ ಯಜಮಾನನ ಹೆಸರು ಶಂಕರ್ದಾಸ್ ಎಂದಾಗಿದ್ದು ಮೇಕೆಯು ಇನ್ನೊಂದು ಮರಿಗೆ ಜನ್ಮನೀಡಿದೆ ಹಾಗೂ ಆ ಮರಿ ಆರೋಗ್ಯಕರವಾಗಿದ್ದು ಸಾಮಾನ್ಯ ಮೇಕೆ ಮರಿಯಂತಿದೆ ಎಂದು ಸೆಂಟಿನೆಲ್ ಅಸ್ಸಾಂ ವರದಿ ಮಾಡಿದೆ. ಮೇಕೆಯು ವಿಚಿತ್ರವಾದ ಮರಿಯನ್ನು ಹಾಕಿದೆ ಎಂಬ ಸುದ್ದಿ ತಿಳಿದೊಡನೆಯೆ ಹತ್ತಿರದ ಗ್ರಾಮಸ್ಥರು ಮೇಕೆ ಮಾಲೀಕರ ಮನೆಗೆ ಆಗಮಿಸಿ ಅದನ್ನು ವೀಕ್ಷಿಸಿದರು. ಈ ವಿಲಕ್ಷಣ ಮರಿ ಹುಟ್ಟಿದ ತಕ್ಷಣವೇ ಮರಣ ಹೊಂದಿದ್ದು ನಂತರ ಅದನ್ನು ಮಣ್ಣು ಮಾಡಲಾಯಿತು.
ಇಂತಹುದ್ದೇ ಘಟನೆಗಳು
ಇಂತಹುದ್ದೇ ಇನ್ನೊಂದು ಘಟನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೇಕೆಯೊಂದು 8 ಕಾಲು ಹಾಗೂ 2 ಸೊಂಟವಿರುವ ಮರಿಗೆ ಜನ್ಮನೀಡಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಂಗಾವ್ನ ಕಲ್ಮೇಘ ಪ್ರದೇಶದಲ್ಲಿ ಈ ಮೇಕೆ ಮರಿ ಜನಿಸಿದ್ದು, ಇದು ಕೂಡ ಹುಟ್ಟಿದ ಕೆಲವೇ ಸಮಯದಲ್ಲಿ ಸಾವನ್ನಪ್ಪಿದೆ.
ಗುಜರಾತ್ನಲ್ಲಿ ಮಾನವ ಮುಖದೊಂದಿಗೆ ಜನಿಸಿದ ರೂಪಾಂತರಿತ ಮೇಕೆ ಮರಿಯನ್ನು ದೇವರ ಅಂಶವೆಂದು ಪೂಜಿಸಲಾಗಿದೆ. ಗುಜರಾತ್ನ ಸೋಂಗಾದ್ ತಾಲೂಕಿನ ತಾಪಿ ನದಿಯ ದಡದಲ್ಲಿರುವ ಸೆಲ್ತಿಪಾಡಾ ಗ್ರಾಮದಲ್ಲಿ ಈ ಮೇಕೆ ಮರಿ ಹುಟ್ಟಿತ್ತು. ಮೇಕೆಯು ಸಾಮಾನ್ಯ ರೂಪದಂತೆಯೇ 4 ಕಾಲು, ಕಿವಿಗಳನ್ನು ಹೊಂದಿದ್ದು ಅದರ ದೇಹದ ಉಳಿದ ಭಾಗಗಳು ಮನುಷ್ಯರ ದೇಹಾಕಾರವನ್ನು ಹೋಲುತ್ತಿತ್ತು. ಹಣೆ, ಕಣ್ಣು, ಬಾಯಿ, ಗಲ್ಲದ ಭಾಗವನ್ನು ಮನುಷ್ಯರಂತೆಯೇ ಹೊಂದಿತ್ತು ಹಾಗೂ ಈ ಮೇಕೆಗೆ ಬಾಲವಿರಲಿಲ್ಲ.
ಇದನ್ನೂ ಓದಿ: Cold Wave: ಶೀತಗಾಳಿಗೆ ಪ್ರಾಣಿ ಪಕ್ಷಿಗಳ ರಕ್ಷಿಸಲು ಅಸ್ಸಾಂ ಮೃಗಾಲಯದಲ್ಲಿ ಸಖತ್ ಐಡಿಯಾ... ಏನು ಗೊತ್ತೇ?
ಅಸಾಮಾನ್ಯ ರೂಪ ಹೊಂದಿದ್ದ ಈ ಮೇಕೆ ಬರೇ 10 ನಿಮಿಷಗಳ ಕಾಲ ಬದುಕಿತ್ತು. ತಮ್ಮ ಪೂರ್ವಜರು ಮೇಕೆಯ ರೂಪದಲ್ಲಿ ಮರುಜನ್ಮ ತಾಳಿದ್ದಾರೆ ಎಂದು ನಂಬಿ ಮೇಕೆಯನ್ನು ಹೂಳುವ ಮೊದಲು ಜನರು ಅದನ್ನು ಪೂಜಿಸಿದರು.
ಮೃಗಾಲಯದಲ್ಲಿ ಹೀಟರ್ ಹಾಗೂ ಬಲ್ಬ್ ಅಳವಡಿಕೆ:
ಅಸ್ಸಾಂ ಮೃಗಾಲಯದಲ್ಲಿ ಅಧಿಕಾರಿಗಳು ಚಳಿಯಿಂದ ಪ್ರಾಣಿಗಳನ್ನು ಸಂರಕ್ಷಿಸುವ ಸಲುವಾಗಿ ಹೀಟರ್ಗಳನ್ನು ಅಳವಡಿಸಿದ್ದು ಪ್ರಾಣಿಗಳ ಆಹಾರದಲ್ಲಿ ಕೂಡ ಕೆಲವೊಂದು ಅಗತ್ಯ ಬದಲಾವಣೆಗಳನ್ನು ಮಾಡಿದ್ದಾರೆ. ಮುಖ್ಯ ಪ್ರಾಣಿ ಪಾಲಕಿ ರಜನಿ ಕಾಂತಾ ದೇಖಾ ಈ ಕುರಿತು ಅಭಿಪ್ರಾಯ ನೀಡಿದ್ದು, ಹುಲಿ, ಸಿಂಹ, ಹೆಬ್ಬಾವುಗಳ ಕೊಠಡಿಗಳನ್ನು ಬೆಚ್ಚಗೆ ಇರಿಸುವುದಕ್ಕಾಗಿ ಹೀಟರ್ಗಳನ್ನು ಬಳಸಿದ್ದೇವೆ. ಆಮೆಗಳಿಗೆ ನೀರು ಬೆಚ್ಚಗೆ ಮಾಡುವ ಸಲುವಾಗಿಯೂ ಹೀಟರ್ಗಳನ್ನು ಅಳವಡಿಸಿದ್ದು ಕೊಠಡಿಗಳಲ್ಲಿ 100 ವಾಲ್ಟ್ಗಳ ಬಲ್ಬ್ಗಳನ್ನು ಜೋಡಿಸಿದ್ದೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ