• Home
  • »
  • News
  • »
  • trend
  • »
  • Viral News: ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ಕೊಟ್ಟ ಮೇಕೆ, ಅಚ್ಚರಿ ಹಿಂದಿನ ಕಾರಣವೂ ಬಹಿರಂಗ!

Viral News: ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ಕೊಟ್ಟ ಮೇಕೆ, ಅಚ್ಚರಿ ಹಿಂದಿನ ಕಾರಣವೂ ಬಹಿರಂಗ!

ಮನುಷ್ಯನ ಮುಖ ಹೋಲುವ ಮೇಕೆ

ಮನುಷ್ಯನ ಮುಖ ಹೋಲುವ ಮೇಕೆ

ಮಧ್ಯಪ್ರದೇಶದ ವಿದಿಶಾದ ಸಿರೊಂಜ್ ತೆಹಸಿಲ್‌ನ ಸೆಮಲ್ ಖೇಡಿ ಗ್ರಾಮದ ನವಾಬ್ ಖಾನ್ ಎಂಬುವವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಅವರ ಮುದ್ದಿನ ಮೇಕೆಯು ಮನುಷ್ಯರಂತೆಯೇ ಇರುವ ಮರಿಗೆ ಜನ್ಮ ನೀಡಿದೆ. ಈ ಮೇಕೆಯನ್ನು ನೋಡಲು ದೂರದೂರುಗಳಿಂದ ಜನ ಬರುತ್ತಿದ್ದಾರೆ.

  • News18 Kannada
  • Last Updated :
  • Bhopal, India
  • Share this:

ಭೋಪಾಲ್(ನ.22): ಮನುಷ್ಯರಾಗಲಿ, ಪ್ರಾಣಿಗಳಾಗಲಿ ಅವರಿಗೆ ರೋಗಗಳು (Disease)  ಬರುವುದು ಸಾಮಾನ್ಯ. ಅನೇಕ ಬಾರಿ, ಕೆಲವು ಗಂಭೀರ ಕಾಯಿಲೆ ಅಥವಾ ಸಮಸ್ಯೆಯಿಂದಾಗಿ, ವಿಭಿನ್ನ ಅಸ್ವಸ್ಥತೆಯು ಅವರ ದೇಹಕ್ಕೆ ದಾಳಿ ಇಡುತ್ತದೆ. ಇದು ಅವುಗಳ ದೇಹದ ಆಕಾರವನ್ನೇ ಸಂಪೂರ್ಣವಾಗಿ ಬದಲಾಗುತ್ತದೆ. ಅನೇಕ ಮಂದಿ ಇದನ್ನು ಪವಾಡವೆಂದು (Miracle)  ಪರಿಗಣಿಸುತ್ತಾರೆ. ಈ ವಿಚಾರ ನೋಡ ನೋಡುತ್ತಿದ್ದಂತೆಯೇ ಎಲ್ಲರಿಗೂ ತಿಳಿಯುತ್ತದೆ. ಇತ್ತೀಚೆಗೆ, ಮಧ್ಯಪ್ರದೇಶದ (Madhya Pradesh) ಹಳ್ಳಿಯೊಂದರಲ್ಲಿ ಅದೇ ರೀತಿಯ ಘಟನೆ ಸಂಭವಿಸಿದೆ, ಇಲ್ಲಿ ಮಾನುಷ್ಯನ ಮುಖವನ್ನು ಹೋಲುವ ಮರಿಗೆ ಮೇಕೆಯೊಂದು (Goat) ಜನ್ಮ ಕೊಟ್ಟಿದೆ.


ವರದಿಗಳ ಪ್ರಕಾರ, ಮಧ್ಯಪ್ರದೇಶದ ವಿದಿಶಾದ ಸಿರೊಂಜ್ ತಹಸಿಲ್‌ನ ಸೆಮಲ್ ಖೇಡಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ಸಂಭವಿಸಿದೆ. ಇಲ್ಲಿ ವಿಚಿತ್ರ ಮೇಕೆ ಹುಟ್ಟಿದೆ. ಗ್ರಾಮದ ನಿವಾಸಿ ನವಾಬ್ ಖಾನ್ ಎಂಬುವರ ಮನೆಯಲ್ಲಿ ಅವರ ಮುದ್ದಿನ ಮೇಕೆ ಮರಿಯೊಂದಕ್ಕೆ ಜನ್ಮ ನೀಡಿದ್ದು, ಅದರ ಮುಖ ಮನುಷ್ಯರಂತಿದೆ. ಇದರಿಂದ ಗ್ರಾಮದ ಜನರಷ್ಟೇ ಅಲ್ಲ, ಇಡೀ ತಹಸೀಲ್‌ನ ಜನರು ಅಚ್ಚರಿಗೊಂಡಿದ್ದಾರೆ.


ಇದನ್ನೂ ಓದಿ: 12 ದಿನಗಳಿಂದ ವೃತ್ತಾಕಾರದಲ್ಲಿ ಚಲಿಸುತ್ತಿರುವ ಕುರಿಗಳು! ಏನಾಗಿದೆ ಈ ಪ್ರಾಣಿಗಳಿಗೆ?


ವಿಚಿತ್ರವಾಗಿವೆ ಮೇಕೆ ಮರಿಯ ಕಣ್ಣುಗಳು


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮೇಕೆಯ ಮುಖವು ತುಂಬಾ ವಿಚಿತ್ರವಾಗಿದೆ. ಇದರ ಎರಡು ಕಣ್ಣುಗಳು ಮನುಷ್ಯರಂತೆ ಒಂದರ ಹತ್ತಿರ ಮತ್ತೊಂದಿದೆ ಅವುಗಳ ಸುತ್ತಲೂ ಕಪ್ಪು ವೃತ್ತವಿದ್ದು ಅದು ಕನ್ನಡಕದಂತಹ ಭಾವನೆಯನ್ನು ನೀಡುತ್ತದೆ. ಇದಲ್ಲದೇ ಮೇಕೆಯ ಬಾಯಿಯೂ ಮನುಷ್ಯರಂತೆಯೇ ಇದ್ದು ಅದರ ತಲೆಯ ಮೇಲೆ ಸಾಕಷ್ಟು ಬಿಳಿ ಕೂದಲುಗಳಿವೆ. ಮೇಕೆಯ ಈ ವಿಚಿತ್ರ ಆಕಾರದಿಂದಾಗಿ ಸಿರಿಂಜ್‌ನಿಂದಲೇ ಹಾಲು ನೀಡಬೇಕಾಗುತ್ತದೆ. ಮೇಕೆಯ ಮುಖವು ಯಾವುದೋ ಅಸ್ವಸ್ಥತೆಯಿಂದಾಗಿ ಹೀಗಾಗಿದೆ ಎಂದು ಅಂದಾಜಿಸಲಾಗಿದೆ, ಆದರೆ ಜನರು ಮಾತ್ರ ಇದನ್ನು ಅದ್ಭುತ ಎಂದು ಪರಿಗಣಿಸುತ್ತಿದ್ದಾರೆ. ಅಲ್ಲದೇ ಅದನ್ನು ನೋಡಲು ದೂರದೂರುಗಳಿಂದ ಬರುತ್ತಿದ್ದಾರೆ.


ಇದನ್ನೂ ಓದಿ: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!


ಇಂತಹ ಮುಖ ಏಕೆ? ಕಾರಣ ಕೊಟ್ಟ ವೈದ್ಯರು


ಡೈಲಿ ಸ್ಟಾರ್ ನ್ಯೂಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಮೇಕೆ ಅನುಭವಿಸಿದ ಸಮಸ್ಯೆಯನ್ನು 'ಹೆಡ್ ಡಿಸ್ಪೆಪ್ಸಿಯಾ' ಎಂದು ಕರೆಯಲಾಗುತ್ತದೆ ಎಂದು ಪಶುವೈದ್ಯ ಮಾನವ್ ಸಿಂಗ್ ಹೇಳಿದ್ದಾರೆ. 50,000 ರಲ್ಲಿ ಕೇವಲ ಒಂದು ಪ್ರಾಣಿ ಮಾತ್ರ ಹೀಗೆ ಬಳಲುತ್ತದೆ, ಆದರೆ ಇದು ಸಾಮಾನ್ಯವಾಗಿ ಹಸುಗಳು ಮತ್ತು ಎಮ್ಮೆಗಳಲ್ಲಿ ಕಂಡು ಬರುತ್ತದೆ ಆದರೆ ಮೇಕೆಗಳಲ್ಲಿ ಅಲ್ಲ. ಈ ಸ್ಥಿತಿಯಲ್ಲಿ ಪ್ರಾಣಿಯ ತಲೆ ಊದಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದರು.ಗರ್ಭಾವಸ್ಥೆಯಲ್ಲಿ ಪ್ರಾಣಿಗಳಲ್ಲಿ ವಿಟಮಿನ್ ಎ ಕೊರತೆ ಅಥವಾ ಗರ್ಭಾವಸ್ಥೆಯಲ್ಲಿ ತಪ್ಪಾದ ಔಷಧಿಗಳನ್ನು ನೀಡಿದರೆ ಇಂತಹ ಸ್ಥಿತಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು "ಹೈಡ್ರೋಸೆಫಾಲಸ್" ಎಂದು ಕರೆಯಲಾಗುತ್ತದೆ.

Published by:Precilla Olivia Dias
First published: