• Home
 • »
 • News
 • »
 • trend
 • »
 • Monsoon Trekking: ಮಳೆಗಾಲದಲ್ಲಿ ಟ್ರೆಕ್ಕಿಂಗ್ ಹೋಗಬೇಕಾ? ಹಾಗಿದ್ರೆ ಈ ಸ್ಥಳ ಬೆಸ್ಟ್

Monsoon Trekking: ಮಳೆಗಾಲದಲ್ಲಿ ಟ್ರೆಕ್ಕಿಂಗ್ ಹೋಗಬೇಕಾ? ಹಾಗಿದ್ರೆ ಈ ಸ್ಥಳ ಬೆಸ್ಟ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗೋವಾ ಎಂದರೆ ಅಲ್ಲರಿಗೂ ಅಚ್ಚುಮೆಚ್ಚಿನ ಸ್ಥಳ. ಗೋವಾಗೆ ಹೋಗಲು ನಿಮ್ಮ ಬಳಿ ತುಂಬಾ ಹಣವಿರಬೇಕು ಎಂದೆನಿಲ್ಲ. ನೀವು ಕಡಿಮೆ ಖರ್ಚಿನಲ್ಲಿ ಗೋವಾ ಸುತ್ತಿ ಬರಬಹುದು. ಅದರಲ್ಲೂ ನೀವು ಈ ಮಳೆಗಾಲದಲ್ಲಿ ಟ್ರೆಕ್ಕಿಂಗ್ ಹೋಗಲು ಇಷ್ಟ ಪಡುವವರು ಆಗಿದ್ದರೆ, ಇಲ್ಲೊಂದು ಉತ್ತಮವಾದ ಆಯ್ಕೆ ಇದೆ ನೋಡಿ.

ಮುಂದೆ ಓದಿ ...
 • Share this:

ಗೋವಾ (Goa) ಅಂತ ಹೆಸರು ಕೇಳಿದರೆ ಸಾಕು, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಮುಖದಲ್ಲಿ ಏನೋ ಒಂದು ರೀತಿಯ ಖುಷಿ. ಹೌದು, ಗೋವಾಗೆ ಪ್ರವಾಸಕ್ಕೆ (Goa Tour) ಹೋಗಲು ಎಲ್ಲರೂ ತುದಿಗಾಲಿನಲ್ಲಿಯೇ ನಿಂತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಗೋವಾ ಎಂದರೆ ಅಲ್ಲರಿಗೂ ಅಚ್ಚುಮೆಚ್ಚಿನ ಸ್ಥಳ. ಗೋವಾಗೆ ಹೋಗಲು ನಿಮ್ಮ ಬಳಿ ತುಂಬಾ ಹಣವಿರಬೇಕು ಎಂದೆನಿಲ್ಲ. ನೀವು ಕಡಿಮೆ ಖರ್ಚಿನಲ್ಲಿ (Lower Cost) ಗೋವಾ ಸುತ್ತಿ ಬರಬಹುದು. ಅದರಲ್ಲೂ ನೀವು ಈ ಮಳೆಗಾಲದಲ್ಲಿ (Monsoon) ಟ್ರೆಕ್ಕಿಂಗ್ (Trekking) ಹೋಗಲು ಇಷ್ಟ ಪಡುವವರು ಆಗಿದ್ದರೆ, ಇಲ್ಲೊಂದು ಉತ್ತಮವಾದ ಆಯ್ಕೆ ಇದೆ ನೋಡಿ.


ವಾರಾಂತ್ಯದಲ್ಲಿ ಮಾನ್ಸೂನ್ ಚಾರಣ
ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಜಿಟಿಡಿಸಿ) ಸ್ಥಳೀಯ ಜೀವನೋಪಾಯವನ್ನು ಹೆಚ್ಚಿಸಲು ವಾರಾಂತ್ಯದಲ್ಲಿ ಮಾನ್ಸೂನ್ ಚಾರಣಗಳನ್ನು ಪ್ರಾರಂಭಿಸಿದೆ. ಗೋವಾದ ಸುತ್ತಮುತ್ತಲೂ ಇರುವ ಅತ್ಯಂತ ಸುಂದರವಾದ ಜಲಪಾತಗಳಿಗೆ ಚಾರಣವನ್ನು ಕಾಯ್ದಿರಿಸುವುದು ಹೇಗೆ ಎಂದು ಇಲ್ಲಿದೆ ನೋಡಿ.


ಜಿಟಿಡಿಸಿಯ ಮ್ಯಾನೇಜರ್ ಆದಂತಹ ಅನಿಲ್ ದಲಾಲ್ ಅವರು ಮಾತನಾಡುತ್ತಾ "ನಾವು ಇದನ್ನು ಮತ್ತೆ ಪ್ರಾರಂಭಿಸಲು ಕಾಯುತ್ತಿದ್ದೇವೆ ಅಂತ ಹಿಂದೊಮ್ಮೆ ಹೇಳಿದ್ದೆ, ಈಗ ಜುಲೈ 3, 2022 ರಂದು ಅದನ್ನು ಮತ್ತೆ ಶುರು ಮಾಡಲು ನಮಗೆ ತುಂಬಾನೇ ಸಂತೋಷವಾಗುತ್ತಿದೆ ಮತ್ತು ಆರಂಭಿಕ ಭಾಗವಹಿಸುವಿಕೆಯು ಇದು ಒಂದು ಉತ್ತಮ ಉಪಕ್ರಮ ಎಂದು ಸಾಬೀತುಪಡಿಸಿದೆ" ಎಂದು ಹೇಳಿದ್ದಾರೆ. ಅದರಲ್ಲೂ ಈ ಮಾನ್ಸೂನ್ ಸಮಯದಲ್ಲಿ ಗೋವಾದ ಪ್ರಕೃತಿಯನ್ನು ನೋಡುವುದು ತುಂಬಾನೇ ಮಜಾ ನೀಡುತ್ತದೆ.


ಈ ಬಗ್ಗೆ ಚಾರಣಿಗರು ಹೇಳಿದ್ದೇನು 
ಅನೇಕ ಚಾರಣಿಗರಲ್ಲಿ ಒಬ್ಬರಾದ ಸುರೇಶ್ ಅವರು ಮಾತನಾಡುತ್ತಾ "ಮಳೆಗಾಲದಲ್ಲಿ ಗೋವಾದಲ್ಲಿ ಟ್ರೆಕ್ಕಿಂಗ್ ಹೋಗುವುದು ತುಂಬಾನೇ ಮೋಜಿನ ಸಂಗತಿಯಾಗಿದೆ. ಇಲ್ಲಿನ ವಿಭಿನ್ನವಾದ ಸಸ್ಯ ಮರಗಳನ್ನು ಮತ್ತು ಅಲ್ಲಿರುವಂತಹ ಪ್ರಾಣಿಗಳನ್ನು ನೋಡುವುದು ನಿಜಕ್ಕೂ ಬೇರೆಯದೇ ಆದ ಅನುಭವ ನೀಡುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಜಲಪಾತಗಳಲ್ಲಿ ನೀರು ಇರುವುದಿಲ್ಲ ಮತ್ತು ಭೂಪ್ರದೇಶವು ಸಹ ಹೆಚ್ಚು ಸೊಂಪಾಗಿರುವುದಿಲ್ಲ" ಎಂದು ಹೇಳಿದರು.


ಇದನ್ನೂ ಓದಿ: Travel: ಜೀವನದಲ್ಲಿ ಒಮ್ಮೆಯಾದ್ರೂ ಪ್ರಯಾಣ ಮಾಡಲೇಬೇಕಾದ ಭಾರತದ 10 ಸುಂದರ ರೈಲು ಮಾರ್ಗಗಳಿವು


ನೀವು ಮಾನ್ಸೂನ್ ಮತ್ತು ಸೊಂಪಾದ ಹಸಿರನ್ನು ಇಷ್ಟಪಡುವವರು ನೀವಾದಲ್ಲಿ ಗೋವಾ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಿದ ಈ ಮಾನ್ಸೂನ್ ಚಾರಣಗಳು ಉತ್ತಮ ಆಯ್ಕೆ ಎಂದು ಹೇಳಬಹುದು.


ಭಾನುವಾರದ ಚಾರಣಕ್ಕೆ ಸೇರಲು ಜನರಿಗೆ ಆಹ್ವಾನ
ಎಲ್ಲಾ ಸುರಕ್ಷತಾ ಶಿಷ್ಟಾಚಾರಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುವ ಗೋವಾ ಪ್ರವಾಸೋದ್ಯಮ ಇಲಾಖೆಯು ತಮ್ಮ ಭಾನುವಾರದ ಚಾರಣಕ್ಕೆ ಸೇರಲು ಜನರನ್ನು ಆಹ್ವಾನಿಸುತ್ತಿದೆ. ಪ್ರತಿ ವಾರ, ಇಲಾಖೆಯು ಹೊಸ ಭೂಪ್ರದೇಶ ಮತ್ತು ಅನ್ವೇಷಣೆಗೆ ಮಾರ್ಗವನ್ನು ರೂಪಿಸುತ್ತದೆ.


2022 ರ ಜುಲೈ 10 ರಂದು ಮುಂಬರುವ ಚಾರಣವು ಸತ್ತಾರಿ ತಾಲ್ಲೂಕಿನ ಹಿವ್ರೆಮ್ ನಲ್ಲಿ 8 ಕಿಲೋ ಮೀಟರ್ ದೂರದ ಚಾರಣವಾಗಲಿದೆ. ಈ ಚಾರಣವು ನಿಮ್ಮನ್ನು ಸುಂದರವಾದ ಜಲಪಾತಗಳ ಮೂಲಕ ಕರೆದೊಯ್ಯುತ್ತದೆ ಮತ್ತು ಸೊಂಪಾದ ಹಸಿರನ್ನು ನೋಡಲು ನಿಮಗೆ ಅನುವು ಮಾಡಿಕೊಡುತ್ತದೆ. ಆರ್ಕಿಡ್ ಗದ್ದೆಗಳು ಮತ್ತು ಬೆಟ್ಟಗಳ ಮೂಲಕ ನಡೆದು, ಅಂತಿಮವಾಗಿ ಕ್ಯಾಸ್ಕೇಡಿಂಗ್ ಜಲಪಾತವನ್ನು ತಲುಪುತ್ತದೆ.


ಚಾರಣಕ್ಕೆ ಹೋದವರ ಅನುಭವ ನೋಡಿ ಹೇಗಿತ್ತು ಅಂತ 
ಜುಲೈ 3, 2022 ರಂದು ಚಾರಣಕ್ಕೆ ಹೋದ ಜನರ ಗುಂಪಿಗೆ ಸೇರಿದ ನೀಲಿಮಾ ಮಹತ್ಮೆ ಅವರು "ಚಾರಣಕ್ಕೆ ಹೋಗುವ ಮೊದಲು ನಾನು ಚಾರಣ ಹೇಗಿರುತ್ತದೆಯೋ ಅಂತ ತುಂಬಾನೇ ಸಂದೇಹಾಸ್ಪದವಾಗಿದ್ದೆ. ನಾನು ಅದನ್ನು ಆ ಚಾರಣವನ್ನು ಯಶಸ್ವಿಯಾಗಿ ಮುಗಿಸಬಹುದೇ ಅಂತ ನನಗೆ ತುಂಬಾನೇ ಸಂದೇಹಗಳಿದ್ದವು. ಆದಾಗ್ಯೂ, ಮಾರ್ಗದ ಪ್ರತಿ ಹೆಜ್ಜೆಯಲ್ಲೂ, ನನಗೆ ಇಲಾಖೆಯ ಅಧಿಕಾರಿಗಳಿಂದ ಸಹಾಯ ಮತ್ತು ಬೆಂಬಲವಿತ್ತು. ಅವರು ನನ್ನನ್ನು ತುಂಬಾನೇ ಪ್ರೋತ್ಸಾಹಿಸಿದರು” ಎಂದು ಹೇಳಿದರು.


ಇದನ್ನೂ ಓದಿ:   Indian Tourism: ಮಳೆಗಾಲದಲ್ಲಿ ಟೂರ್ ಹೋಗಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ


ಅವರು ಈ ಚಾರಣವನ್ನು ತಮ್ಮ ಜೀವನದ ಅತ್ಯಂತ ಪುನರುಜ್ಜೀವನಗೊಳಿಸುವ ಅನುಭವಗಳಲ್ಲಿ ಒಂದಾಗಿದೆ ಎಂದು ವಿವರಿಸುತ್ತಾರೆ. ಚಾರಣದ ನಂತರ ನೀಡಲಾಗುವ ಆಹಾರದ ಬಗ್ಗೆ ಮಾತನಾಡುತ್ತಾ "ಎರಡೂವರೆ ಗಂಟೆಗಳ ಉತ್ತಮ ಚಾರಣದ ನಂತರ, ನಾವೆಲ್ಲರೂ ತುಂಬಾನೇ ಹಸಿವಿನಿಂದ ಬಳಲುತ್ತಿದ್ದೆವು. ಬಿಸಿ ಬೇಳೆ, ಬೇಳೆಕಾಳುಗಳು ಮತ್ತು ತರಕಾರಿ ತಯಾರಿಕೆಯು ದೇಹಕ್ಕೆ ತುಂಬಾನೇ ಅಗತ್ಯವಾಗಿತ್ತು. ಆಹಾರವು ಸ್ಥಳೀಯ ಪಾಕಪದ್ಧತಿಯಾಗಿತ್ತು ಮತ್ತು ಇದನ್ನು ಸ್ಥಳೀಯ ಸಮುದಾಯಗಳ ಸಹಯೋಗದೊಂದಿಗೆ ತಯಾರಿಸಲಾಗಿತ್ತು" ಎಂದು ಹೇಳಿದರು.


ಪ್ರತಿ ವರ್ಷ ಅರ್ಧ ಮಿಲಿಯನ್ ವಿದೇಶಿ ಪ್ರವಾಸಿಗರು ಸೇರಿದಂತೆ ಮೂರು ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡುತ್ತಾರೆ. ಈ ಸಂಖ್ಯೆಯು ಆರೋಗ್ಯಕರ ವೇಗದಲ್ಲಿ ಬೆಳೆಯುತ್ತಲೇ ಇದೆ. ಈ ಪ್ರವಾಸಿಗರಲ್ಲಿ ಹೆಚ್ಚಿನವರು ಬಿಸಿಲು ಮತ್ತು ಮರಳನ್ನು ಆನಂದಿಸಲು ಬಂದರೆ, ಇನ್ನೂ ಕೆಲವರು ಇಲ್ಲಿನ ಸಮುದ್ರಗಳನ್ನು ನೋಡಲು ಬರುತ್ತಾರೆ ಎಂದು ಹೇಳಬಹುದು.


ಚಾರಣಕ್ಕೆ ಹೋಗಲು ಯಾರು ಅರ್ಹರು 
ಚಾರಣದ ಭಾಗವಾಗಿರುವ ಮಾರ್ಗದರ್ಶಿಗಳೆಲ್ಲರೂ ಜಿಟಿಡಿಸಿ ಮತ್ತು ಅರಣ್ಯ ಇಲಾಖೆಯಿಂದ ತರಬೇತಿ ಪಡೆಯುತ್ತಾರೆ. "ಪ್ರವಾಸಿಗರೊಂದಿಗೆ ಪ್ರಮಾಣೀಕೃತ ಮಾರ್ಗದರ್ಶಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು" ಎಂದು ಅನಿಲ್ ಹೇಳಿದರು. ಐದು ವರ್ಷ ಮೇಲ್ಪಟ್ಟವರು ಯಾರೇ ಆದರೂ ಸಹ ದೈಹಿಕವಾಗಿ ಸದೃಢರಾಗಿದ್ದರೆ ಈ ಗುಂಪಿಗೆ ಸೇರಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ ಎಂದು ಅನಿಲ್ ಹೇಳುತ್ತಾರೆ.


ಇದನ್ನೂ ಓದಿ:  Bachelor Party: ಬ್ಯಾಚುಲರ್ ಪಾರ್ಟಿ ಮಾಡಲು ಭಾರತದ ಈ ಸ್ಥಳಗಳೇ ಬೆಸ್ಟ್


ಸುರೇಶ್ ಅವರು "ನಾವು ಈ ಚಾರಣಗಳಿಗೆ ಹೋದಾಗ ಮಾತ್ರ ಈ ಪ್ರದೇಶದ ಪರಿಸರಶಾಸ್ತ್ರವು ಎಷ್ಟು ಮುಖ್ಯ ಎಂದು ನಮಗೆ ಅರಿವಾಗುತ್ತದೆ. ಸಮಾನ ಮನಸ್ಕ ಜನರೊಂದಿಗೆ ಚಾರಣದಲ್ಲಿ ಇರುವುದು ಸಹ ಉತ್ತಮವಾಗಿದೆ, ಏಕೆಂದರೆ ನಾವು ಅನೇಕ ಪರಿಸರ ಕಾಳಜಿ ವಿಷಯಗಳ ಬಗ್ಗೆ ಚರ್ಚಿಸಬಹುದು. ಈ ಪ್ರದೇಶಗಳಲ್ಲಿ ಯಾವುದೇ ಮಾನವ ವಸಾಹತುಗಳಿಲ್ಲದ ಕಾರಣ, ಚಾರಣವು ನಮಗೆ ಸಂಪೂರ್ಣವಾಗಿ ಆನಂದದಾಯಕವಾಗಿದೆ" ಎಂದು ಹೇಳಿದರು.


ಚಾರಣಕ್ಕೆ ಹೋದಾಗ ಗಮನದಲ್ಲಿಡಬೇಕಾದ ವಿಷಯಗಳು:


 •  ಆಸಕ್ತ ಚಾರಣಿಗರು ಹೆಚ್ಚುವರಿ ಜೋಡಿ ಬಟ್ಟೆಗಳನ್ನು ತೆಗೆದುಕೊಂಡು ಹೋಗಬೇಕು.

 • ಇದು ಮಳೆಗಾಲದ ಸಮಯವಾಗಿರುವುದರಿಂದ, ರೇನ್ ವೇರ್ ಮತ್ತು ಉತ್ತಮ ಟ್ರೆಕ್ಕಿಂಗ್ ಶೂಗಳನ್ನು ಸಹ ಒಯ್ಯಬೇಕು.

 • ಪ್ರತಿಯೊಬ್ಬ ಚಾರಣಿಗನು ತಮ್ಮದೇ ಆದ ನೀರಿನ ಬಾಟಲಿಯನ್ನು ಒಯ್ಯಬೇಕು. ಚಾರಣಕ್ಕೆ ಯಾವುದೇ ಪ್ಲಾಸ್ಟಿಕ್ ಬಾಟಲಿಯನ್ನು ಒಯ್ಯಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಹಾಗೆಯೇ ಸ್ವಲ್ಪ ತಿಂಡಿಯನ್ನು ಸಹ ಜೊತೆಯಲ್ಲಿ ಒಯ್ಯಬಹುದು.

 • ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಚಾರಣಿಗರು ಬೈನಾಕ್ಯುಲರ್ ಗಳನ್ನು ಒಯ್ಯಬಹುದು.

 • ಚಾರಣದಲ್ಲಿದ್ದಾಗ ಧೂಮಪಾನ ಮತ್ತು ಮದ್ಯಪಾನವನ್ನು ಅನುಮತಿಸಲಾಗುವುದಿಲ್ಲ.

 • ಪ್ರತಿ ವ್ಯಕ್ತಿಗೆ 1000 ರೂಪಾಯಿಗಳ ನೋಂದಣಿ ಶುಲ್ಕವಿದೆ, ಇದರಲ್ಲಿ ಊಟ ಮತ್ತು ಪೂರ್ವ ನಿರ್ಧರಿತ ಪಾಯಿಂಟ್ ಗಳಿಂದ ಪಿಕ್ ಅಪ್ ಅನ್ನು ಸಹ ಒಳಗೊಂಡಿದೆ.

 • ಚಾರಣವನ್ನು ಭಾನುವಾರ ಮಾತ್ರ ಆಯೋಜಿಸಲಾಗುವುದು.


ಇದಕ್ಕೆ ಹೆಸರನ್ನು ನೋಂದಾಯಿಸುವುದು ಹೇಗೆ: ನೀವು ಅನಿಲ್ ದಲಾಲ್ ಅವರನ್ನು +91- 9422057704 ಅಥವಾ +91- 8379022215 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.

Published by:Ashwini Prabhu
First published: