ಲಾಕ್ಡೌನ್(Lockdown) ಸಂದರ್ಭದಲ್ಲಿ ಗಾಳಿಯ(Air) ಮಾಲಿನ್ಯತೆ ತಗ್ಗಿ, ಪ್ರಕೃತಿಯಲ್ಲಿ(Nature) ಚೇತೋಹಾರಿ ಸುಧಾರಣೆ ಕಂಡು ಬಂದ ಸಂಗತಿ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಆದರೆ, ಇದೇ ಹೊತ್ತಿನಲ್ಲಿ ಮಿಂಚಿನ(Lightening) ಪ್ರಮಾಣವೂ ತಗ್ಗಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು ಮಾನವ(Human) ಜಗತ್ತು(World) ಲಾಕ್ಡೌನ್ ಸಂದರ್ಭದಲ್ಲಿ ತಲ್ಲಣಗೊಂಡಿತ್ತು. ಈ ಸಮಯದಲ್ಲಿ ಮಾನವ ಚಟುವಟಿಕೆಗಳು ಕಡಿಮೆಯಾಗಿದ್ದವು. ಕೋವಿಡ್-19 ಸಾಂಕ್ರಾಮಿಕದ ಕಾರಣಕ್ಕೆ ಜಗತ್ತಿನಾದ್ಯಂತ ಹೇರಲ್ಪಟ್ಟಿದ್ದ ಲಾಕ್ಡೌನ್ನಿಂದಾಗಿ ಮನುಷ್ಯ ಚಟುವಟಿಕೆಗಳು ಸ್ಥಗಿತಗೊಂಡು, ಅವರೆಲ್ಲ ಮನೆಗೆ ಸೀಮಿತಗೊಂಡ ಪರಿಣಾಮ ಪ್ರಕೃತಿಯ ಮೇಲೆ ಕೆಲವು ಅದ್ಭುತ ಪರಿಣಾಮಗಳುಂಟಾದವು.
ಲಾಕ್ಡೌನ್ ವೇಳೆ ಕಡಿಮೆಯಾಗಿತ್ತು ಮಿಂಚಿನ ಆರ್ಭಟ
ಶುಭ್ರಗೊಂಡ ಆಕಾಶ, ಗಾಳಿಯ ಗುಣಮಟ್ಟದಲ್ಲಿನ ಸುಧಾರಣೆ ಹಾಗೂ ಸ್ವಚ್ಛಗೊಂಡ ಜಲಮೂಲಗಳ ಕಾರಣಕ್ಕೆ ಪ್ರಕೃತಿ ಲಾಕ್ಡೌನ್ ಪ್ರಕ್ರಿಯೆಯಿಂದ ಗಮನಾರ್ಹ ಲಾಭ ಪಡೆಯಿತು. ಇದೇ ಸಂದರ್ಭದಲ್ಲಿ ಮಿಂಚಿನ ಚಟುವಟಿಕೆ ತಗ್ಗಿರುವ ಕುರಿತು ಹಲವಾರು ಮಂದಿ ವಿಸ್ಮಿತರಾಗಿದ್ದರು.
ಇದನ್ನೂ ಓದಿ: ಇದೇನಾ ‘ಚಿಲ್ಲರೆ ಬುದ್ಧಿ’..? ಸಂಬಳ ಕೇಳಿದ್ದಕ್ಕೆ ಪೀಕಲಾಟ ತಂದಿಟ್ಟ ಮಾಲೀಕ!
ಏರೋಸಾಲ್ ಪ್ರಮಾಣ ತಗ್ಗಿರುವುದರಿಂದ ಮಿಂಚಿನ ಚಟುವಟಿಕೆಯಲ್ಲೂ ಇಳಿಕೆ
ಆದರೆ, ಇತ್ತೀಚಿಗೆ 'ಸೈನ್ಸ್ ಡೈರೆಕ್ಟ್'ನಲ್ಲಿ ಪ್ರಕಟಗೊಂಡಿರುವ ಅಧ್ಯಯನದ ಪ್ರಕಾರ, ವಾತಾವರಣದಲ್ಲಿ ಏರೋಸಾಲ್ ಪ್ರಮಾಣ ತಗ್ಗಿರುವುದರಿಂದ ಮಿಂಚಿನ ಚಟುವಟಿಕೆಯಲ್ಲೂ ಇಳಿಕೆಯಾಗಿದೆ ಎಂದು ಹೇಳಿದೆ. ಮಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯಲ್ಲಿ ಭೌತಿಕ ಮಾಪನಕಾರರಾಗಿರುವ ಎರ್ಲ್ ವಿಲಿಯಮ್ಸ್ ಪ್ರಕಾರ, ವಾತಾವರಣದಲ್ಲಿನ ಕೆಲವು ಏರೋಸಾಲ್ಗಳು ನೀರನ್ನು ಸಂಗ್ರಹಿಸಿ ಮೋಡ ಹನಿಗೂಡಲು ಕೊಡುಗೆ ನೀಡುತ್ತವೆ. ಮಾನವನ ಅತಿಯಾದ ಚಟುವಟಿಕೆಯಿಂದ ಈ ಬಗೆಯ ಏರೋಸಾಲ್ಗಳು ವಾತಾವರಣಕ್ಕೆ ಮತ್ತಷ್ಟು ಬಿಡುಗಡೆಯಾಗುತ್ತವೆ. ಆ ಮೂಲಕ ಮೋಡದಲ್ಲಿ ತೀವ್ರವಾದ ಸಣ್ಣ ಪ್ರಮಾಣದ ಹನಿಗಳು ರೂಪುಗೊಳ್ಳಲು ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
ಮಿಂಚು ಹೇಗೆ ಉಂಟಾಗುತ್ತದೆ..?
'ಇನ್ಸೈಡ್ ಸೈನ್ಸ್'ನಲ್ಲಿ ಪ್ರಕಟವಾಗಿರುವ ವರದಿಯು ಈ ಪ್ರಕ್ರಿಯೆಯನ್ನು ಮತ್ತಷ್ಟು ವಿವರಿಸಿದ್ದು, ಸಣ್ಣ ತುಂತುರುಗಳು ನಂತರದಲ್ಲಿ ಹರಳುಗಟ್ಟಿ ಗ್ರೌಪೆಲ್ ಎಂಬ ಆಲಿಕಲ್ಲಾಗಿ ರೂಪುಗೊಳ್ಳುತ್ತವೆ. ಹೀಗೆ ರೂಪುಗೊಳ್ಳುವ ಗ್ರೌಪೆಲ್ ಆಲಿಕಲ್ಲುಗಳು ಪರಸ್ಪರ ಡಿಕ್ಕಿ ಹೊಡೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ ಕೆಲವು ಋಣಾತ್ಮಕ ವಿದ್ಯುತ್ ಪ್ರವಹಿಸಿದರೆ, ಮತ್ತೆ ಕೆಲವು ಧನಾತ್ಮಕ ವಿದ್ಯುತ್ ಪ್ರವಹಿಸುತ್ತವೆ. ವಿದ್ಯುತ್ ಪ್ರಸರಣದಲ್ಲಿನ ಈ ವ್ಯತ್ಯಾಸವು ಮಿಂಚು ಪ್ರಕ್ರಿಯೆಗೆ ಕಾರಣವಾಗುತ್ತದೆ ಎಂದು ಹೇಳಿದೆ.
ಮನುಷ್ಯನು ದಹಿಸುವ ಪಳೆಯುಳಿಕೆ ಇಂಧನಗಳಿಂದ ಸೂಕ್ಷ್ಮ ಏರೋಸಾಲ್ಗಳು ಉತ್ಪತ್ತಿಯಾಗುತ್ತವೆ ಎಂಬುದರತ್ತ ಅಧ್ಯಯನ ಬೊಟ್ಟು ಮಾಡಿದೆ. ಯಾವಾಗ ಉದ್ಯಮಗಳು ಬಂದ್ ಆಗಿ, ವಾಹನಗಳ ಓಡಾಟ ಸ್ಥಗಿತಗೊಂಡಿತೋ ಆಗ ವಾತಾವರಣವು ಮಿಂಚನ್ನು ಸೃಷ್ಟಿಸಲು ಸಾಕಷ್ಟು ಸೂಕ್ಷ್ಮ ಕಣಗಳು ಇರಲಿಲ್ಲ ಎಂದು ಈ ವರದಿ ತಿಳಿಸಿದೆ.
ಇದನ್ನೂ ಓದಿ: ಸತ್ತ ಜಿರಳೆಗಳ ಮೇಲೆ ಮೂಡಿತು ವಿವಿಧ ಚಿತ್ರ ಕಲಾಕೃತಿ
ಅಮೆರಿಕದ ಭೂಗರ್ಭ ಭೌತಿಕ ಒಕ್ಕೂಟದ ಸಂಶೋಧಕರು ಮಿಂಚನ್ನು ಅಳೆಯುವ ಮೂರು ವಿಭಿನ್ನ ಪದ್ಧತಿಗಳನ್ನು ಬಳಸಿ ಅವುಗಳ ಸಂಭವ ಸಾಧ್ಯತೆಯನ್ನು ವಿವರಿಸಲು ಒಂದು ಅಧ್ಯಯನವನ್ನು ಕೈಗೊಂಡಿತ್ತು. ಎಲ್ಲ ಫಲಿತಾಂಶಗಳೂ ಒಂದೇ ಸಾಧ್ಯತೆ ತೋರಿಸಿದವು. ಅದೆಂದರೆ, ಇಳಿಕೆಯಾಗಿರುವ ಏರೋಸಾಲ್ ಸಾಂದ್ರತೆಯೊಂದಿಗೆ ಸಂಬಂಧವಿರುವ ಇಳಿಕೆಗೊಂಡ ಮಿಂಚಿನ ಚಟುವಟಿಕೆ ಎಂದು ಅಧ್ಯಯನ ವರದಿ ಸಲ್ಲಿಸಿರುವ ಸಂಶೋಧಕರ ಪೈಕಿ ಒಬ್ಬರಾಗಿರುವ ವಿಲಿಯಮ್ ಅಭಿಪ್ರಾಯ ಪಟ್ಟಿದ್ದಾರೆ. ವಿಲಿಯಮ್ಸ್ ಹಾಗೂ ಅವರ ತಂಡವು 2018, 2019, 2021ರ ಮಾರ್ಚ್ನಿಂದ ಮೇ ತಿಂಗಳ ಅವಧಿಗೆ ಹೋಲಿಸಿದರೆ ಇದೇ ಅವಧಿಯ 2020ರಲ್ಲಿ ಶೇ. 19ರಷ್ಟು ಮಿಂಚಿನ ಪ್ರಮಾಣ ಇಳಿಕೆಯಾಗಿರುವುದನ್ನು ದಾಖಲಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದೇ ವೇಳೆ, ಲಾಕ್ಡೌನ್ ಸಂದರ್ಭದಲ್ಲಿ ಅಮೆರಿಕದಲ್ಲಿ ಮಿಂಚಿನ ಚಟುವಟಿಕೆಯ ಮೇಲೆ ಅಷ್ಟೇನೂ ಪರಿಣಾಮ ಉಂಟಾಗಿಲ್ಲ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಆದರೆ, ಆಗ್ನೇಯ ಏಷ್ಯಾ, ಯೂರೋಪ್ ಹಾಗೂ ಆಫ್ರಿಕಾದಲ್ಲಿ ಏರೋಸಾಲ್ ಇಳಿಕೆಯ ಮೇಲೆ ಗಮನಾರ್ಹ ಪರಿಣಾಮ ಉಂಟಾಗಿದೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ