• Home
  • »
  • News
  • »
  • trend
  • »
  • Weird News: ಮೂರು ಮಕ್ಕಳಿರುವ ಮಹಿಳೆಯರಿಗೆ ಹೆಚ್ಚಿನ ಸಂಬಳ, ಜೊತೆಗೆ 3 ಲಕ್ಷ ಸಹಾಯ ಕೂಡ ಸಿಗುತ್ತೆ!

Weird News: ಮೂರು ಮಕ್ಕಳಿರುವ ಮಹಿಳೆಯರಿಗೆ ಹೆಚ್ಚಿನ ಸಂಬಳ, ಜೊತೆಗೆ 3 ಲಕ್ಷ ಸಹಾಯ ಕೂಡ ಸಿಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ಸಾಧ್ಯವಾದಷ್ಟು ಮಕ್ಕಳಿಗೆ ಜನ್ಮ ನೀಡುವಂತೆ ನಾಗರಿಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.

  • Share this:

ನಮ್ಮ ಕಾನೂನಿನ ಪ್ರಕಾರ ಒಬ್ಬ ದಂಪತಿಗೆ 2 ಮಕ್ಕಳು ಮಾತ್ರ ಇರಬೇಕು ಎಂದು ನಿಯಮವಿದೆ. ಯಾಕೆಂದರೆ ಜನಸಂಖ್ಯೆ ಹೆಚ್ಚಾಗಬಾರದು ಎಂಬ ಕಾರಣದಿಂದಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಇದೇ ರೀತಿಯಾದ ನೀತಿ ನಿಯಮಗಳು ಎಲ್ಲಾ ದೇಶಗಳಲ್ಲಿಯೂ ಇದ್ಯಾ ಅಂತ ಕೇಳಿದ್ರೆ, ಇಲ್ಲ ಒಂದೊಂದು ದೇಶಗಳಲ್ಲಿ ಒಂದೊಂದು ನೀತಿ ನಿಯಮಗಳು (Rules) ಇರುತ್ತದೆ. ಆದರೆ, ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ಸಾಧ್ಯವಾದಷ್ಟು ಮಕ್ಕಳಿಗೆ ಜನ್ಮ ನೀಡುವಂತೆ ನಾಗರಿಕರನ್ನು (Citizen) ಪ್ರೋತ್ಸಾಹಿಸುತ್ತಿದ್ದಾರೆ. 3 ಮಕ್ಕಳಿಗೆ ಜನ್ಮ ನೀಡಿದವರಿಗೆ ಬಹುಮಾನ ವಿತರಿಸಿದ್ದಾರೆ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (Prem Sing Tamang) ಅವರು ಈ ವಿಚಿತ್ರ ಘೋಷಣೆ ಮಾಡಿದ್ದಾರೆ.


ಸಾಧ್ಯವಾದಷ್ಟು ಮಕ್ಕಳನ್ನು ಹೊಂದಲು ಸರ್ಕಾರವು ನಾಗರಿಕರನ್ನು ಪ್ರೋತ್ಸಾಹಿಸುತ್ತಿರುವ ಭಾರತದ ಮೊದಲ ರಾಜ್ಯ ಸಿಕ್ಕಿಂ ಆಗಿದೆ. ಜನಿಸುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಈಗಾಗಲೇ ಮಹಿಳೆಯರಿಗೆ 365 ದಿನಗಳ ಹೆರಿಗೆ ರಜೆ ಮತ್ತು ಪುರುಷ ಉದ್ಯೋಗಿಗಳಿಗೆ 30 ದಿನಗಳ ರಜೆಯನ್ನು ಒದಗಿಸುತ್ತದೆ.


ದಕ್ಷಿಣ ಸಿಕ್ಕಿಂನ ಜೋರೆಥಾನ್ಹ್ ಪಟ್ಟಣದಲ್ಲಿ ಭಾನುವಾರ ಕಾರ್ಯಕ್ರಮವೊಂದು ನಡೆಯಿತು. ಆ ವೇಳೆ ಮುಖ್ಯಮಂತ್ರಿ ತಮಾಂಗ್ ಅವರು ಕಾರ್ಯಕ್ರಮದಲ್ಲಿ ಘೋಷಿಸಿದ್ದು, ''ಮಹಿಳಾ ಉದ್ಯೋಗಿಗಳಿಗೆ ಎರಡನೇ ಮಗುವಿಗೆ ಜನ್ಮ ನೀಡುವುದಕ್ಕಾಗಿ ಒಂದು ವೇತನ ಹೆಚ್ಚಳ ಹಾಗೂ ಮೂರನೇ ಮಗುವಿಗೆ ಜನ್ಮ ನೀಡುವುದಕ್ಕಾಗಿ ಎರಡು ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎಂದು ವಿವರಿಸಿದರು.


ಕೇವಲ ಒಂದು ಮಗುವನ್ನು ಹೊಂದಿರುವ ಮಹಿಳೆಯರು ಈ ಆರ್ಥಿಕ ಪ್ರಯೋಜನವನ್ನು ಪಡೆಯುವುದಿಲ್ಲ. ಸಾಮಾನ್ಯ ಜನರು ಗರಿಷ್ಠ ಸಂಖ್ಯೆಯ ಮಕ್ಕಳನ್ನು ಹೊಂದಲು ಆರ್ಥಿಕ ಸಹಾಯವನ್ನು ಪಡೆಯುತ್ತಾರೆ, ಇದನ್ನು ಆರೋಗ್ಯ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳು ಮೇಲ್ವಿಚಾರಣೆ ಮಾಡುತ್ತವೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಹೂಗಳ ಹಬ್ಬ! ಲಾಲ್​ಬಾಗ್​ ಪುಷ್ಪಲೋಕದ ವೈಭವ ನೋಡಿ


ತಮಾಂಗ್, "ಸರ್ಕಾರವು ಸಿಕ್ಕಿಂನ ಆಸ್ಪತ್ರೆಗಳಲ್ಲಿ ಐವಿಎಫ್ ಸೌಲಭ್ಯವನ್ನು ಪ್ರಾರಂಭಿಸಿದೆ. ನೈಸರ್ಗಿಕವಾಗಿ ಗರ್ಭಧರಿಸಲು ತೊಂದರೆ ಇರುವ ಮಹಿಳೆಯರು ಈ ಪ್ರಕ್ರಿಯೆಯ ಮೂಲಕ ಮಕ್ಕಳಿಗೆ ಜನ್ಮ ನೀಡಬಹುದು. ಈ ರೀತಿ ಹೆರಿಗೆಯಾಗುವ ಮಹಿಳೆಯರಿಗೆ 3 ಲಕ್ಷ ರೂ. ಸಹಾಯಧನ ನೀಡಲಾಗುವುದು" ಎಂದು ಹೇಳಿದರು.


ಸಿಕ್ಕಿಂನ ನಾಗರಿಕರು ಒಂದೇ ಮಗುವಿನೊಂದಿಗೆ ಸಣ್ಣ ಕುಟುಂಬಗಳನ್ನು ಹೊಂದಲು ಒತ್ತಡ ಹೇರಿದ್ದಕ್ಕಾಗಿ ಹಿಂದಿನ ಸರ್ಕಾರವನ್ನು ತಮಾಂಗ್ ಹೇಳಲಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಪ್ರತಿ ಮಹಿಳೆಗೆ ಒಂದು ಮಗು ಸ್ಥಳೀಯ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು.


ಮಹಿಳೆಯರು ಸೇರಿದಂತೆ ಸ್ಥಳೀಯ ಜನರು ಸಾಧ್ಯವಾದಷ್ಟು ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಉತ್ತೇಜಿಸುವ ಮೂಲಕ ಫಲವತ್ತತೆಯ ಪ್ರಮಾಣ ಕುಸಿಯುತ್ತಿರುವುದನ್ನು ತಡೆಯುವ ಅಗತ್ಯವಿದೆ. ನಮ್ಮ ಸರ್ಕಾರವು ದೊಡ್ಡ ಕುಟುಂಬವನ್ನು ಹೊಂದಲು ಸ್ಥಳೀಯ ಜನರನ್ನು ಪ್ರೋತ್ಸಾಹಿಸುತ್ತಿದೆ. ಪ್ರಸ್ತುತ, ಸಿಕ್ಕಿಂನ ಜನಸಂಖ್ಯೆಯು ಸರಿಸುಮಾರು ಏಳು ಲಕ್ಷಕ್ಕಿಂತ ಕಡಿಮೆಯಿದೆ. ಅವರಲ್ಲಿ ಸುಮಾರು 80 ಪ್ರತಿಶತ ಸ್ಥಳೀಯರು ಇದ್ದಾರೆ.




ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ, ಸಾಧ್ಯವಾದಷ್ಟು ಮಕದಕಳು ಇದ್ರೆ ಮುಂದೆ ನಮ್ಮ ರಾಜ್ಯಕ್ಕೇ ಒಳಿತು ಎಂದು ಮುಖ್ಯಮಂತ್ರಿಯವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಜನರು ಒಂದು ಬಾರಿಗೆ ಮೂಕವಿಸ್ಮಿತರಾದ್ರೂ ಕೊನೆಗೆ ಇವರು ನೀಡಿದ ಕಾರಣಗಳಿಂದ ಸುಮ್ಮನಾಗಿದ್ದಾರೆ ಮತ್ತು ಮಾತನ್ನು ಒಪ್ಪಿಕೊಂಡಿದ್ದಾರೆ.

First published: