Bumper offer: ಪ್ಲಾಸ್ಟಿಕ್​ ತ್ಯಾಜ್ಯ ನೀಡಿದ್ರೆ ಸಾಕು ಇಲ್ಲಿ ಉಚಿತವಾಗಿ ವಡಾ ಪಾವ್​ ಕೊಡ್ತಾರೆ!

Vada Pav: ಇದುವರೆಗೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಹಲವು ಸಮಾವೇಶ, ಸಭೆಗಳು ನಡೆದಿವೆ. ಏಷ್ಟೇ ಹೇಳಿದರೂ ಜನರಲ್ಲಿ ಬದಲಾವಣೆ ಆಗಿಲ್ಲ. ಆದರೆ, ಮಹಾರಾಷ್ಟ್ರದ ಪುಣೆಯ ಮುನ್ಸಿಪಲ್ ಅಧಿಕಾರಿಗಳು ವಿನೂತನ ಐಡಿಯಾವನ್ನು (Idea) ಮಾಡಿದ್ದಾರೆ.

ವಡಾ ಪಾವ್​ ನೀಡುತ್ತಿರುವ ದೃಶ್ಯ

ವಡಾ ಪಾವ್​ ನೀಡುತ್ತಿರುವ ದೃಶ್ಯ

 • Share this:
  ಪ್ರಸ್ತುತ ದೇಶದಲ್ಲಿ ಪರಿಸರ ಮಾಲಿನ್ಯ (Environmental pollution) ಹೆಚ್ಚಾಗುತ್ತಿದೆ. ಮುಖ್ಯವಾಗಿ ವಾಹನದ ಹೊಗೆ ಮತ್ತು ಕಾರ್ಖಾನೆ ತ್ಯಾಜ್ಯವನ್ನು (Factory waste) ಒಳಗೊಂಡಿದೆ. ಇವುಗಳ ಜೊತೆಗೆ ಪ್ಲಾಸ್ಟಿಕ್ ಭೂತ ಕೂಡ ಅಪಾರವಾದ ಮಾಲಿನ್ಯವನ್ನು ಉಂಟು ಮಾಡುತ್ತಿದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ಲಾಸ್ಟಿಕ್ (Plastic) ಬಳಸುತ್ತೇವೆ. ಬೆಳಗ್ಗೆ ಹಾಲಿನ ಪ್ಯಾಕೆಟ್ (Milk Packet) ನಿಂದ ಹಿಡಿದು ರಾತ್ರಿ ಮನೆಗೆ ತೆಗೆದುಕೊಂಡು ಹೋಗುವ ಸಾಮಾನುಗಳವರೆಗೆ ಪ್ರತಿ ವಿಷಯದಲ್ಲೂ ಪ್ಲಾಸ್ಟಿಕ್ ಬಳಸುತ್ತೇವೆ. ಮೂಲಭೂತವಾಗಿ, ಪ್ಲಾಸ್ಟಿಕ್ ಕರಗುವುದಿಲ್ಲ. ಹಾಗಾಗಿ ಎಲ್ಲೆಂದರಲ್ಲಿ ಸಾಡುವ ಪ್ಲಾಸ್ಟಿಕ್​ ಮಣ್ಣಿನೊಂದಿಗೆ ಸೇರಲು ನೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಪ್ಲಾಸ್ಟಿಕ್ ಸುಟ್ಟಾಗ ಹೊರಸೂಸುವ ಅನಿಲಗಳು ಪರಿಸರಕ್ಕೆ ದೊಡ್ಡ ಅಪಾಯವಾಗಿ ಪರಿಣಮಿಸಿವೆ. ಇದುವರೆಗೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಹಲವು ಸಮಾವೇಶ, ಸಭೆಗಳು ನಡೆದಿವೆ. ಏಷ್ಟೇ ಹೇಳಿದರೂ ಜನರಲ್ಲಿ ಬದಲಾವಣೆ ಆಗಿಲ್ಲ. ಆದರೆ, ಮಹಾರಾಷ್ಟ್ರದ ಪುಣೆಯ ಮುನ್ಸಿಪಲ್ ಅಧಿಕಾರಿಗಳು ವಿನೂತನ ಐಡಿಯಾವನ್ನು (Idea) ಮಾಡಿದ್ದಾರೆ. ಪ್ಲಾಸ್ಟಿಕ್ ಸ್ವೀಕರಿಸಲು ವಿಶೇಷ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅದೂ ಅಲ್ಲದೆ ಪ್ಲಾಸ್ಟಿಕ್ ಬಾಟಲಿ (Plastic Bottle) ಕೊಟ್ಟವರಿಗೆ ಇಲ್ಲಿ ಉಚಿತವಾಗಿ ವಡಾ ಪಾವ್ (Vada Pav), ಟೀ (Tea) ಕೊಡುತ್ತಾರೆ.

  ಪುಣೆಯ ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಅಧಿಕಾರಿಗಳು ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಅವರು ಪ್ಲಾಸ್ಟಿಕ್ ಅನ್ನು ನಿಗ್ರಹಿಸಲು ಹೊಸ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಇದರ ಭಾಗವಾಗಿ ಪೂನಾದಲ್ಲಿ ಮೂರು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ವಡಾ ಪಾವ್ ಅನ್ನು ಉಚಿತವಾಗಿ ಪಡೆಯಬಹುದು ಎಂದು ಪ್ರಚಾರ ಮಾಡಿದರು. ಇದನ್ನು ಗಮನಿಸಿ ಅನೇಕರು ಪ್ರತಿದಿನ ಪ್ಲಾಸ್ಟಿಕ್ ಬಾಟಲಿಗಳನ್ನು ತಂದು ಕೊಡುತ್ತಿದ್ದಾರೆ. ನಂತರ ಇಲ್ಲಿಂದ  ವಡಾ ಪಾವ್ ಮತ್ತು ಚಹಾವನ್ನು ತೆಗೆದುಕೊಂಡು ಕುಡಿಯುತ್ತಾರೆ. ಈ ವಿಶೇಷ ಮಳಿಗೆಗಳಿಗೆ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಹಣ ನೀಡಲಾಗುತ್ತದೆ.

  ಹೀಗೆ ಸ್ವೀಕರಿಸಿದ ಪ್ಲಾಸ್ಟಿಕ್ ಅನ್ನು ಮರುಬಳಕೆಗಾಗಿ ಕಂಪನಿಗಳಿಗೆ ಹಿಂತಿರುಗಿಸಲಾಗುತ್ತದೆ. ಇದರಿಂದ ಜನರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆಯಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಆದೇಶದಲ್ಲಿ ಯಶವಂತ್ ರಾವ್ ಚವ್ಹಾಣ ಮಾರ್ಗ ಪಿಂಪ್ರಿ, ಕೇಶವ ನಗರ ಶಾಸ್ತ್ರಿನಗರ ಕಾಸರ್ ವಾಡಿ ಮತ್ತು ಸಂತ ಗಜಾನನ ಮಂದಿರ ಚಿಂಚ್ ವಾಡಾದಲ್ಲಿ ಶಾಖೆಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ಅನಿಲ್ ರಾಯ್ ತಿಳಿಸಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಬಹುತೇಕರಿಗೆ ತಿಳಿದಿದೆ ಪ್ಲಾಸ್ಟಿಕ್​ ಕರಗದ ವಸ್ತುವಾಗಿದೆ. ಪ್ಲಾಸ್ಟಿಕ್​ ಕರಗಲು ಅದೆಷ್ಟೋ ವರ್ಷಗಳು ಬೇಕಾಗುತ್ತದೆ. ಹಾಗಾಗಿ ಎಲ್ಲೆಂದರಲ್ಲಿ ಬಿಸಾಕುವುದರಿಂದ ಮುಂದೊಂದು ದಿನ ಮಾರಾಕವಾಗುವ ಸಂದರ್ಭ ದೂರವಿಲ್ಲ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್​ ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವ ತಂತ್ರನಡೆಯುತ್ತಿದೆ. ಇಷ್ಟೇಲ್ಲಾ ಆದರೂ ಪ್ಲಾಸ್ಟಿಕ್​ ಬಳಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

  ಇದನ್ನೂ ಓದಿ: Viral News: ನಗಲು ಸಾಧ್ಯವಾಗದ ಈ ಮಹಿಳೆಯ ಪರಿಸ್ಥಿತಿ ಕೇಳಿದ್ರೆ ಅಳು ಬರುತ್ತದೆ!

  ಪ್ಲಾಸ್ಟಿಕ್​ ಚೀಲ ಬಿಡಿ, ಬಟ್ಟೆ ಚೀಲ ಹಿಡಿ

  ಪ್ಲಾಸ್ಟಿಕ್​ ಚೀಲ ಬಿಡಿ, ಬಟ್ಟೆ ಚೀಲ ಹಿಡಿ ಎಂಬ ವಾಕ್ಯದೊಂದಿಗೆ ಸರ್ಕಾರ ಕ್ರಮವನ್ನು ಕೈಗೊಂಡರು ನಗರ ಪ್ರದೇಶಗಳಲ್ಲಿ ಸಾಮಾನು ಸಾಗಿಸಲು ಪ್ಲಾಸ್ಟಿಕ್​ ಚೀಲಗಳನ್ನು ವಿಪರೀತ ಬಳಸಲಾಗುತ್ತದೆ. ಇದಕ್ಕೆ ಸೂಕ್ತ ಕ್ರಮ ಕೈಗೊಂಡರೆ ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಬಹುದಾಗಿದೆ.

  ಇದನ್ನೂ ಓದಿ: Shocking: ಹಣಕ್ಕಾಗಿ ಏನೆಲ್ಲ ಮಾಡ್ತಾರೆ.. ವೇತನ ಏರಿಸಲು ಹಣವಿಲ್ಲದೇ ಶಿಕ್ಷಕಿಯ ಕಿಡ್ನಾಪ್!

  ಪ್ಲಾಸ್ಟಿಕ್​ ಮರುಮಳಕೆ ಮಾಡುವ ಅದೆಷ್ಟೋ ತಂತ್ರಗಳು ನಡೆಯುತ್ತಿದೆ. ಆದರೆ ಭೂಮಿ ಮೇಲೆ ಪ್ಲಾಸ್ಟಿಕ್​ ಭಾರ ಹೆಚ್ಚಾಗುತ್ತಿದೆ. ನೀರು ಇಂಗಿ ಮಣ್ಣು ಸೇರದಂತೆ ಪ್ಲಾಸ್ಟಿಕ್ ತಡೆಯುತ್ತದೆ. ಪ್ಲಾಸ್ಟಿಕ್​ನಿಂದಾಗಿ ಕಾಡುಗಳು ನಾಶವಾಗುತ್ತಿವೆ. ಹಾಗಾಗಿ ಪ್ಲಾಸ್ಟಿಕ್​ ಬಳಕೆಯನ್ನು ಮಾಡದಿರಲು ಮುಂದಾಗಬೇಕಿದೆ.
  Published by:Harshith AS
  First published: