ಪ್ರೀತಿಸಿ ವಂಚಿಸಿದ ಪ್ರಿಯತಮನ ನಕಲಿ ಅಂತ್ಯಸಂಸ್ಕಾರ ಮಾಡಿ ಆತನ ಮಾಜಿ ಪ್ರಿಯತಮೆಯ ಮೇಲೆ ಸೇಡು ತೀರಿಸಿಕೊಂಡ ಮಹಿಳೆ..!

ಈ ವಿಷಯದ ಬಗ್ಗೆ ಅರಿವಿರದ ಪ್ರಿಯತಮನ ಮಾಜಿ ಗೆಳತಿ ಥಿಯಾ ಅವರಿಗೆ ಆತ ಎಲ್ಲಿದ್ದಾನೆ ಎಂದು ಮೆಸೇಜ್ ಕಳುಹಿಸುತ್ತಿದ್ದರಂತೆ. ಇದಕ್ಕೆ ಥಿಯಾ ಆತ ಸತ್ತು ಹೋಗಿದ್ದಾನೆ ಎಂದಿದ್ದಾರೆ. ಅಲ್ಲದೇ ಈ ಸುದ್ದಿಯನ್ನು ನಿಜವೆಂದು ನಂಬಿಸಲು ನಕಲಿ ಅಂತ್ಯಸಂಸ್ಕಾರ ಆಯೋಜಿಸಿದ್ದಾರೆ. ಇದಕ್ಕೆ ತಮ್ಮ ಪ್ರಿಯತಮನ ಸಹೋದರಿಯ ಸಹಾಯ ಕೇಳಿದಾಗ ಆಕೆಯೂ ಥಿಯಾ ಜೊತೆಗೆ ನಕಲಿ ಅಂತ್ಯಸಂಸ್ಕಾರಕ್ಕೆ ಸಹಕರಿಸಿದ್ದಾರೆ.

ಥಿಯಾ ಲವ್ರಿಡ್ಜ್

ಥಿಯಾ ಲವ್ರಿಡ್ಜ್

 • Share this:
  ತನ್ನ ಮಾಜಿ ಪ್ರಿಯತಮೆ ಜೊತೆಗೆ ಸೇರಿಕೊಂಡು ತನಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ ಮಹಿಳೆಯೊಬ್ಬರು ಪ್ರಿಯತಮ ಸಾವನ್ನಪ್ಪಿದ್ದಾನೆ ಎಂದು ಆತನ ಮಾಜಿ ಪ್ರೇಯಸಿಗೆ ಹೇಳಿದ್ದಾಳೆ. ಅಷ್ಟೇ ಅಲ್ಲ, ಈ ಘಟನೆಯನ್ನು ನಿಜವೆಂದು ನಂಬಿಸಲು ಆತನ ನಕಲಿ ಅಂತ್ಯಸಂಸ್ಕಾರವನ್ನು ಆಯೋಜಿಸುವ ಮೂಲಕ ತನ್ನ ಸಿಟ್ಟನ್ನು ಶಮನ ಮಾಡಿಕೊಂಡ ತ್ರಿಕೋನ ಪ್ರೇಮ ಕಥೆ ಇದು. ಮಿರರ್ ಪ್ರಕಾರ, ಟಿಕ್‌ಟಾಕ್ ಬಳಕೆದಾರರಾದ ಥಿಯಾ ಲವ್ರಿಡ್ಜ್ ಅವರು ಟಿಕ್‌ಟಾಕ್ ವೇದಿಕೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ತನ್ನ ದುಷ್ಟ ಆಲೋಚನೆಯನ್ನು ವಿವರಿಸಿದ್ದಾರೆ. ತನ್ನನ್ನು ಮೋಸಗೊಳಿಸಿದ ಗೆಳೆಯ ಮತ್ತು ಆತನ ಮಾಜಿ ಪ್ರಿಯತಮೆ ಹೇಗೆ ತಮ್ಮ ಸಂಬಂಧದಲ್ಲಿ ಬಿರುಕು ಮೂಡಿಸಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.

  ಇನ್ನು ಈ ವಿಡಿಯೋ ಕ್ಲಿಪ್ನಲ್ಲಿ ತಾವು ತಮ್ಮ ಮಗನಿಗೆ ಜನ್ಮ ನೀಡಿದ ಬಳಿಕ ಮೋಸ ಹೋಗಿರುವ ವಿಷಯವನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಆಕೆ ಗರ್ಭಿಣಿಯಾಗಿದ್ದ ಸಂಪೂರ್ಣ ಸಮಯದಲ್ಲೂ ತನ್ನ ಗೆಳೆಯ ಮೋಸ ಮಾಡಿದ್ದಾನೆ ಎಂದು ನೊಂದುಕೊಂಡಿದ್ದಾರೆ. ಅಲ್ಲದೇ ಈ ವಿಷಯ ತಿಳಿದ ಕೆಲವೇ ಸಮಯದ ಬಳಿಕ ಆತನನ್ನು ಜೈಲಿಗೆ ಕಳುಹಿಸಲಾಯಿತು ಎನ್ನುವ ಅಂಶವನ್ನು ವಿಡಿಯೋದಲ್ಲಿ ಥಿಯಾ ತಿಳಿಸಿದ್ದಾರೆ.

  ಈ ವಿಷಯದ ಬಗ್ಗೆ ಅರಿವಿರದ ಪ್ರಿಯತಮನ ಮಾಜಿ ಗೆಳತಿ ಥಿಯಾ ಅವರಿಗೆ ಆತ ಎಲ್ಲಿದ್ದಾನೆ ಎಂದು ಮೆಸೇಜ್ ಕಳುಹಿಸುತ್ತಿದ್ದರಂತೆ. ಇದಕ್ಕೆ ಥಿಯಾ ಆತ ಸತ್ತು ಹೋಗಿದ್ದಾನೆ ಎಂದಿದ್ದಾರೆ. ಅಲ್ಲದೇ ಈ ಸುದ್ದಿಯನ್ನು ನಿಜವೆಂದು ನಂಬಿಸಲು ನಕಲಿ ಅಂತ್ಯಸಂಸ್ಕಾರ ಆಯೋಜಿಸಿದ್ದಾರೆ. ಇದಕ್ಕೆ ತಮ್ಮ ಪ್ರಿಯತಮನ ಸಹೋದರಿಯ ಸಹಾಯ ಕೇಳಿದಾಗ ಆಕೆಯೂ ಥಿಯಾ ಜೊತೆಗೆ ನಕಲಿ ಅಂತ್ಯಸಂಸ್ಕಾರಕ್ಕೆ ಸಹಕರಿಸಿದ್ದಾರೆ.

  ಅಲ್ಲದೇ ಜೈಲಿನಲ್ಲಿರುವ ತನ್ನ ಪ್ರಿಯತಮನ ನಕಲಿ ಅಂತ್ಯಸಂಸ್ಕಾರ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲೂ ಅಪ್ಲೋಡ್ ಮಾಡಿದ್ದಾರೆ ಥಿಯಾ. ಈ ಘಟನೆ ನಡೆದು ಮೂರು ವರ್ಷಗಳಾಗಿವೆ. ಆದರೆ ಆತನ ಮಾಜಿ ಗೆಳತಿ ಇದನ್ನು ನಿಜವೆಂದು ಇಂದಿಗೂ ನಂಬಿದ್ದಾಳೆ ಎಂದು ಟಿಕ್‌ಟಾಕ್ ವಿಡಿಯೋವಿನ ಕಡೆಯಲ್ಲಿ ಬಯಲು ಮಾಡಿದ್ದಾಳೆ.

  ಮತ್ತಷ್ಟು ಆಘಾತಕಾರಿ ಅಂಶವೆಂದರೆ ಥಿಯಾಗೆ ಮೋಸ ಮಾಡಿದ್ದ ಆಕೆಯ ಪ್ರಿಯತಮನ ಮಾಜಿ ಪ್ರಿಯತಮೆ 'ಇಂದಿಗೂ ಆತ ಈ ಭೂಮಿಯ ಮೇಲಿಲ್ಲ ಎಂದೇ ಭಾವಿಸಿದ್ದಾಳೆ. ಅದನ್ನು ಅದೆಷ್ಟು ಅರಗಿಸಿಕೊಂಡಿದ್ದಾಳೆಂದರೆ, ಪ್ರತಿವರ್ಷ ಸಾಮಾಜಿಕ ಮಾಧ್ಯಮದಲ್ಲಿ ಆತನನ್ನು ನೆನಪಿಸಿಕೊಂಡು "ತನ್ನ ಜೀವನದ ಪ್ರೀತಿ" ಗಾಗಿ ಎನ್ನುತ್ತಾ ಪ್ರತಿವರ್ಷ ಗೌರವ ಸಲ್ಲಿಸುತ್ತಾಳೆ' ಎಂದಿದ್ದಾರೆ ಥಿಯಾ.

  ಅದಕ್ಕೆ ಈ ಪ್ರೀತಿ ಅನ್ನೋದು ಕೆಲವೊಮ್ಮೆ ಸಿಹಿಯಾದ ಕಚಗುಳಿ, ಕೆಲವೊಮ್ಮೆ ಅಪಾಯದ ಸುರುಳಿ ಅನ್ನೊದು ಇದಕ್ಕೆನೇ!

  ಟಿಕ್‌ಟಾಕ್ ವೇದಿಕೆ ಮನುಷ್ಯನ ಮನಸ್ಸಿನ ಇಂತಹ ವಿಲಕ್ಷಣ ಕಥೆಗಳು, ಜಗತ್ತು ಕಾಣದ ಈ ಕಾಲ ಘಟ್ಟದ ಕಥೆಗಳನ್ನು ಹಂಚಿಕೊಳ್ಳಲು ಇರುವ ಮಾಧ್ಯಮವಾಗಿ ಪರಿವರ್ತನೆಯಾಗಿದೆ. ಚೀನಾ ಮಾಲೀಕತ್ವದ ಈ ಸೋಶಿಯಲ್ ಮೀಡಿಯಾ ವೇದಿಕೆಯೂ ಆರಂಭದಿಂದಲೂ ಇಲ್ಲಿಯವರೆಗೆ ಅತಿ ದೊಡ್ಡ ಬಳಕೆದಾರರನ್ನು ಹೊಂದಿದೆ. ಆದರೆ ಕಳೆದ ವರ್ಷ ಲಡಾಖ್ ಘರ್ಷಣೆಯ ಸಂದರ್ಭದಲ್ಲಿ ಭಾರತದಲ್ಲಿ ಚೀನಾದ ಟಿಕ್‌ಟಾಕ್ ಆ್ಯಪ್ ಅನ್ನು ನಿಷೇಧ ಮಾಡಲಾಯಿತು. ಆ ನಂತರ ಭಾರತದ ಆ್ಯಪ್‌ಗಳು ಪರ್ಯಾಯ ಸಾಧನವಾಗಿ ನಿಧಾನವಾಗಿ ಜನರನ್ನು ತಲುಪುತ್ತಿವೆ.
  Published by:Latha CG
  First published: