Girlfriend; ಗೆಳೆಯನಿದ್ದರೂ ದಾನಿಯಿಂದ ಸ್ಪರ್ಮ್ ಪಡೆದು ತಾಯಿಯಾದ ಯುವತಿ: ಮುಂದೇನಾಯ್ತು?

ಜೋಡಿ(Couple)ಯೊಂದು ಕಳೆದ 10 ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದೆ. ಆದ್ರೆ ಯುವತಿ ಮಾತ್ರ ದಾನಿಯಿಂದ ಸ್ಪರ್ಮ್ (Sperm Donor) ಪಡೆದು ತಾಯಿಯಾಗಿದ್ದಾಳೆ. ಸದ್ಯ ಮಗು (Baby) ಆರು ವರ್ಷದಾಗಿದ್ದು, ಆಕೆಯ ಜವಾಬ್ದಾರಿ ಯಾರು ತೆಗೆದುಕೊಳ್ಳುವ ಬಗ್ಗೆ ಜೋಡಿ ಮಧ್ಯೆ ವೈಮನಸ್ಸು ಉಂಟಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯುವಕ ಮತ್ತು ಯುವತಿ ವಿದೇಶಗಳಲ್ಲಿ ಲಿವಿಂಗ್ ಟುಗೆದರ್ (Living Together) ಅಂತ ಮದುವೆ ಮುಂಚೆಯೇ ಒಂದೇ ಮನೆಯಲ್ಲಿ ಇರುತ್ತಾರೆ. ಈ ಲಿವಿಂಗ್ ಟುಗೆದರ್ ಪದ್ಧತಿ ಭಾರತ(India)ದಲ್ಲಿ ಕಾಲಿಟ್ಟಿದ್ದು, ಮಹಾನಗರಗಳಲ್ಲಿ ಯುವ ಜನತೆ ಲಿವಿಂಗ್ ಟುಗೆದರ್ ನಲ್ಲಿರುವ ಬಗ್ಗೆ ಕೇಳಿರುತ್ತೇವೆ. ಜೋಡಿ(Couple)ಯೊಂದು ಕಳೆದ 10 ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದೆ. ಆದ್ರೆ ಯುವತಿ ಮಾತ್ರ ದಾನಿಯಿಂದ ಸ್ಪರ್ಮ್ (Sperm Donor) ಪಡೆದು ತಾಯಿಯಾಗಿದ್ದಾಳೆ. ಸದ್ಯ ಮಗು (Baby) ಆರು ವರ್ಷದಾಗಿದ್ದು, ಆಕೆಯ ಜವಾಬ್ದಾರಿ ಯಾರು ತೆಗೆದುಕೊಳ್ಳುವ ಬಗ್ಗೆ ಜೋಡಿ ಮಧ್ಯೆ ವೈಮನಸ್ಸು ಉಂಟಾಗಿದೆ. 10 ವರ್ಷಗಳಿಂದ ಜೊತೆಯಲ್ಲಿದ್ದರೂ ಜೋಡಿ ಇನ್ನೂ ಮದುವೆಯಾಗಿಲ್ಲ. ಗೆಳತಿ ದಾನಿಯಿಂದ ಸ್ಪರ್ಮ್ ಪಡೆದು ತಾಯಿಯಾಗಿರುವ ಕುರಿತು ಯುವಕ ಬರೆದುಕೊಂಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಕುರಿತು ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿಯೇ ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ.

ಯುವಕನಿಗೆ ನೆಟ್ಟಿಗರ ಸಲಹೆ

ಯುವಕ ಮುಂದೇನು ಮಾಡಬೇಕು ಎಂದು ತೋಚದೆ ತನ್ನ ವೈಯಕ್ತಿಯ ಸಮಸ್ಯೆಯನ್ನು ರೆಡಿಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್ ನೋಡಿದ ಬಹುತೇಕ ನೆಟ್ಟಿಗರು ನೀವೂ ಬ್ರೇಕಪ್ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಮಹಿಳೆಗೆ ತನ್ನ ಗರ್ಭದಲ್ಲಿ ಯಾರ ಮಗು ಇರಬೇಕು ಎಂದು ನಿರ್ಧರಿಸುವ ಹಕ್ಕು ಇದೆ ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿಮ್ಮ ಒಪ್ಪಿಗೆ ಪಡೆದು ಮಗು ಪಡೆದುಕೊಂಡಿದ್ರೆ, ನೈತಿಕವಾಗಿ ಮಗುವಿನ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.

ಇದನ್ನೂ ಓದಿ:  Boyfriend; ಗೆಳೆಯನ ಕೆಟ್ಟ ಚಾಳಿಯಿಂದ ಬೇಸತ್ತ ಯುವತಿ: ಯುವಕನ ಆ ವರ್ತನೆ ಕಂಡು ನೀವು ಶಾಕ್ ಆಗ್ತೀರಿ!

ಮಗಳ ಭವಿಷ್ಯದ ಚಿಂತಿತನಾದ ಯುವಕ

ರೆಡಿಟ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಯುವಕ ಇಬ್ಬರ ಗುರುತು ಹೇಳಿಕೊಂಡಿಲ್ಲ. ನನ್ನ ಗೆಳತಿ ಬೇರೆ ವ್ಯಕ್ತಿಯಿಂದ ಸ್ಪರ್ಮ್ ಪಡೆದು ತಾಯಿಯಾಗಲು ನಿರ್ಧರಿಸಿದ್ದಾಳೆ ಎಂದು ಬರೆದುಕೊಂಡಿದ್ದಾನೆ. ನಾನು ಮತ್ತು ಆಕೆ ಕಳೆದ 10 ವರ್ಷಗಳಿಂದ ಡೇಟಿಂಗ್ ನಲ್ಲಿದ್ದೇವೆ. ಆದ್ರೆ ಪ್ರೇಯಸಿ ಮತ್ತು ನನ್ನ ಸಿದ್ಧಾಂತ ಹೊಂದಾಣಿಕೆ ಆಗದ ಕಾರಣ ಮದುವೆಯಾಗಿಲ್ಲ.

ಸದ್ಯ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಆರು ವರ್ಷದ ಹೆಣ್ಣು ಮಗುವನ್ನು ಸಾಕುತ್ತಿದ್ದೇವೆ. ಮುಂದೆ ಮಗುವಿನ ಆರೈಕೆ ಮತ್ತು ಜವಾಬ್ದಾರಿ ಕುರಿತು ಆತಂಕಕ್ಕೆ ಒಳಗಾಗಿದ್ದೇನೆ.ಈ ವಿಷಯದ ಕುರಿತು ಇಬ್ಬರ ನಡುವೆ ಜಗಳ ನಡೆಯುತ್ತಿರುತ್ತದೆ. ಆರು ವರ್ಷದಿಂದ ಮಗು ಸಾಕಿರುವ ನನಗೆ ಅವಳ ಮುಂದಿನ ಜೀವನ ಹೇಗೆ ಎಂಬುದರ ಬಗ್ಗೆ ಚಿಂತಿತನಾಗಿದ್ದೇನೆ ಎಂದು ಯುವಕ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:  6 ತಿಂಗಳಲ್ಲಿ 62 ಜನರ ಜೊತೆ ಸಂಬಂಧ, 5 ಸಾವಿರ ಮಹಿಳೆಯರೊಂದಿಗೆ ಸೆಕ್ಸ್​; ಸ್ಪೇನ್ ರಾಜನ ಬೆಡ್​ರೂಂ ರಹಸ್ಯ!

ಪ್ರತ್ಯೇಕವಾದ್ರೆ ಮಗುವಿನ ಜೀವನ

ಮುಂದೆ ನಾವಿಬ್ಬರು ಪ್ರತ್ಯೇಕವಾದ್ರೆ ಮಗುವಿನ ಕುರಿತು ಕಾನೂನು ಹೋರಾಟ ನಡೆಸುವಂತಿಲ್ಲ ಎಂದು ಹೇಳಿದ್ದೇನೆ. ಇಬ್ಬರು ಬೇರೆಯಾದ ನಂತರ ಮಗು ಯಾರ ಆರೈಕೆಯಲ್ಲಿ ಬೆಳೆಯಬೇಕು ಎಂದು ಜಗಳ ಆಗೋದು ಬೇಡ. ಮಗು ಜೈವಿಕ ಮತ್ತು ಕಾನೂನು ರೂಪದಲ್ಲಿ ಒಂಟಿಯಾಗಿದ್ದಾಳೆ. ಕಳೆದ ಆರು ವರ್ಷಗಳಿಂದ ನಾನು ಆಕೆಯನ್ನು ನೋಡಿಕೊಳ್ಳುತ್ತಿದ್ದೇನೆ. ನಾವಿಬ್ಬರೂ ಪೂರ್ಣವಾಧಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮಗಳ ಖರ್ಚು ಸಮಾನವಾಗಿ ಹಂಚಿಕೊಳ್ಳುತ್ತಿದ್ದೇನೆ. ಆದ್ರೂ ಮಗುವಿನ ಮೇಲೆ ನನಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿಕೊಂಡಿದ್ದಾನೆ.

ಮಗಳು ದೊಡ್ಡವಳಾದಂತೆ ಪ್ರೇಯಸಿ ಆಕೆಯ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದಾಳೆ. ತನ್ನ ಇಚ್ಛೆಯಂತೆ ಮಗಳನ್ನು ಬೆಳೆಸಲು ಪ್ರೇಯಸಿ ಇಷ್ಟಪಡುತ್ತಿದ್ದಾಳೆ. ಆದ್ರೆ ಆಕೆಗೆ ಖರ್ಚು ಮಾಡುವ ನನಗೆ ಮಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
Published by:Mahmadrafik K
First published: