• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ದೆಹಲಿ ಮೆಟ್ರೋದಲ್ಲಿ ಭೋಜ್​​ಪುರಿ ಹಾಡಿಗೆ ಡ್ಯಾನ್ಸ್ ಮಾಡಿದ ಹುಡುಗಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್

Viral Video: ದೆಹಲಿ ಮೆಟ್ರೋದಲ್ಲಿ ಭೋಜ್​​ಪುರಿ ಹಾಡಿಗೆ ಡ್ಯಾನ್ಸ್ ಮಾಡಿದ ಹುಡುಗಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮೆಟ್ರೋ ನಿಲ್ದಾಣದಲ್ಲಿ ಡ್ಯಾನ್ಸ್​ ಮಾಡಿದ ಮಹಿಳೆ

ಮೆಟ್ರೋ ನಿಲ್ದಾಣದಲ್ಲಿ ಡ್ಯಾನ್ಸ್​ ಮಾಡಿದ ಮಹಿಳೆ

ನಾವು ಇನ್​​ಸ್ಡಾಗ್ರಾಮ್​ನಲ್ಲಿ ಹಲವಾರು ರೀಲ್ಸ್​ಗಳನ್ನು ನೋಡುತ್ತಿರುತ್ತೇವೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಭೋಜ್​​ಪುರಿ ಹಾಡಿಗೆ ಮೆಟ್ರೋ ಸ್ಟೇಷನ್​ನಲ್ಲೇ ರೀಲ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  • Share this:

ಇತ್ತೀಚಿನ ದಿನಗಳಲ್ಲಿ ಏನಾದರೂ ಮಾಡಿ ಗಮನ ಸೆಳೆಯುವ ಆಸಕ್ತಿ ಹೆಚ್ಚುತ್ತಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಚೆನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳು (Social Media) ಇಂದಿನ ದಿನದಲ್ಲಿ ಪ್ರತಿಯೊಬ್ಬರ ಎಂಟರ್​​ಟೈನ್​ಮೆಂಟ್​ ಮಾಧ್ಯಮವಾಗಿಬಿಟ್ಟಿದೆ. ಅದರಲ್ಲೂ ಟಿಕ್​ಟಾಕ್ (Tik Tok) ಬ್ಯಾನ್​ ಆದ ನಂತರ ಇನ್​​ಸ್ಟಾಗ್ರಾಮ್ (Instagram)​ ಬಳಕೆ ಬಹಳಷ್ಟು ಹೆಚ್ಚಾಗಿದೆ. ದೆಹಲಿ ಮೆಟ್ರೋದಲ್ಲಿ ಈಗಾಗಲೇ ಹಲವು ಮಂದಿ ರೀಲ್ಸ್​​ಗಳನ್ನು ಮಾಡಿ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ರೀಲ್ಸ್ (Reels) ಮಾಡುತ್ತಲೇ ಎಷ್ಟೋ ಜನರು ಇಂದು ಸೆಲೆಬ್ರಿಟಿಗಳಾಗುತ್ತಿದ್ದಾರೆ. 


ಅದೇ ರೀತಿ ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಹುಡುಗಿಯೊಬ್ಬಳು ಭೋಜ್​ಪುರಿ ಹಾಡಿಗೆ ಡ್ಯಾನ್ಸ್​ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.


ದೆಹಲಿ ಮೆಟ್ರೋ


ದೆಹಲಿ ಮೆಟ್ರೋದಲ್ಲಿ, ರೀಲ್ಸ್​​ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ . ಮೆಟ್ರೋದಲ್ಲಿ ಇಂತಹವುಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಪ್ರಯಾಣಿಕರು ಗಮನಹರಿಸುತ್ತಿಲ್ಲ. ಇತ್ತೀಚೆಗೆ ಮಹಿಳೆಯೊಬ್ಬರು ಭೋಜ್‌ಪುರಿ ಹಾಡಿಗೆ ಮಾಡಿದ ನೃತ್ಯ ವೈರಲ್ ಆಗಿದೆ.


ಇದನ್ನೂ ಓದಿ: ಮದುಮಗಳನ್ನು ದರದರ ಎಳೆದುಕೊಂಡು ಹೋದ ಜನ, ಆದ್ರೆ ಇಲ್ಲಿ ಮ್ಯಾಟರ್​ ಬೇರೆ


ಇತ್ತೀಚಿನ ದಿನಗಳಲ್ಲಿ, ನಿರ್ದಿಷ್ಟ ಪ್ರದೇಶವನ್ನು ಆಯ್ಕೆಮಾಡುವುದು ಮತ್ತು ಅಲ್ಲಿ ನೃತ್ಯ ವಿಡಿಯೋಗಳನ್ನು ಮಾಡುವುದು ಸಾಮಾನ್ಯವಾಗಿದೆ. ಇದೀಗ ರೀಲ್ಸ್​​ಗಳನ್ನು ಮಾಡಲು ಮೆಟ್ರೋ ನಿಲ್ದಾಣಗಳು ಸಹ ವೇದಿಕೆಯಾಗುತ್ತಿವೆ.


ತಮಾಷೆಯ ರೀಲ್ಸ್​​ಗಳು ಮತ್ತು ನೃತ್ಯದ ರೀಲ್ಸ್​​ಗಳನ್ನು ಮಹಾನಗರಗಳಲ್ಲಿನ ಮೆಟ್ರೋ ನಿಲ್ದಾಣದಲ್ಲಿ ಮಾಡುವ ಟ್ರೆಂಡ್‌ ಇವಾಗ ಶುರವಾಗಿದೆ. ಈ ಎಲ್ಲಾ ವಿಷಯಗಳು ಅಂತಿಮವಾಗಿ ಮೆಟ್ರೋ ಅಧಿಕಾರಿಗಳಿಗೆ ತಲುಪಿತು ಮತ್ತು ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದರೂ, ಪ್ರಯಾಣಿಕರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ತಮ್ಮ ರೀಲ್ಸ್​​ ಮಾಡುವುದನ್ನು ಮುಂದುವರಿಸಿದ್ದಾರೆ.


ಮೆಟ್ರೋದಲ್ಲಿ ಮಾಡಿದ ಹಲವಾರು ರೀಲ್ಸ್​, ವಿಡಿಯೋಗಳು ವೈರಲ್


ಕೇವಲ ಶರ್ಟ್​​ ಮತ್ತು ಮಿನಿಸ್ಕರ್ಟ್ ಧರಿಸಿದ ಹುಡುಗಿಯೊಬ್ಬಳು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್‌ ಆದ ನಂತರ ದೆಹಲಿ ಮೆಟ್ರೋ ಎಲ್ಲರ ಗಮನ ಸೆಳೆದಿತ್ತು.


ಮೆಟ್ರೋದಲ್ಲಿ ಸೀಟ್‌ಗಾಗಿ ಜಗಳ ಆಡುತ್ತಿರುವ ಹಾಗೂ ಗುದ್ದಾಟ ಮಾಡುತ್ತಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಈ ಹಿಂದೆ ಭಾರೀ ವೈರಲ್‌ ಆಗಿತ್ತು.


ಸೀರೆಯುಟ್ಟು ಡ್ಯಾನ್ಸ್​ ಮಾಡಿದ ಮಹಿಳೆ 


ಇದೀಗ ಸಬ್‌ವೇ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯೊಬ್ಬರು ಸೀರೆಯುಟ್ಟು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವ್ನಿಕರಿಶ್ ಎಂದು ಗುರುತಿಸಲಾದ ಮಹಿಳೆ ತನ್ನ ಇನ್​​ಸ್ಟಾಗ್ರಾಮ್​​ ಪ್ರೊಫೈಲ್​​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.




ಖೇಸರಿ ಲಾಲ್ ಯಾದವ್ ಮತ್ತು ಪ್ರಿಯಾಂಕಾ ಸಿಂಗ್ ಅವರ ಜನಪ್ರಿಯ ಭೋಜ್‌ಪುರಿನ 'ಸಾಜ್ ಕೆ ಸಾವರ್ ಕೆ' ಹಾಡಿಗೆ ಅವರು ನೃತ್ಯ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.


ಇನ್​ಸ್ಟಾಗ್ರಾಮ್​ನಲ್ಲಿ ಫುಲ್ ವೈರಲ್


ಈ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ ಮತ್ತು ವಿವಿಧ ರೀತಿಯ ಕಾಮೆಂಟ್‌ಗಳನ್ನು ಸಹ ಪಡೆದುಕೊಂಡಿದೆ. ಮೆಟ್ರೋ ಆವರಣದೊಳಗೆ ಯಾವುದೇ ರೀತಿಯ ಫೋಟೋ ಅಥವಾ ವಿಡಿಯೋಗ್ರಫಿಯನ್ನು ಡಿಎಂಆರ್‌ಸಿ ನಿಷೇಧಿಸಿದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.


ಮೆಟ್ರೋ ನಿಲ್ದಾಣದಲ್ಲಿ ಡ್ಯಾನ್ಸ್​ ಮಾಡಿದ ಮಹಿಳೆ


ಇತರರು ಅಂತಹ ವಿಡಿಯೋಗಳನ್ನು ನಿಲ್ಲಿಸಲು ಸಿಐಎಸ್‌ಎಫ್ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ. ಆದರೆ ಕೆಲವರು ವಿಡಿಯೋದಲ್ಲಿರುವ ಹುಡುಗಿಯ ಧೈರ್ಯವನ್ನು ಕೊಂಡಾಡಿದ್ದಾರೆ.


ಇದು ಇದೇ ಮೊದಲಲ್ಲ, ಅವ್ನಿಕರಿಶ್ ಅವರು ದೆಹಲಿ ಮೆಟ್ರೋದಲ್ಲಿ ನೃತ್ಯ ಮಾಡುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.


ಅವರು ಮಾರ್ಚ್‌ನಲ್ಲಿ ಡ್ಯಾನ್ಸ್ ಮಾಡಿದ ಕ್ಲಿಪ್ ಅನ್ನು ಹಂಚಿಕೊಂಡಿದ್ದರು, ಅಲ್ಲಿ ಅವರು ಸೋನು ನಿಗಮ್ ಮತ್ತು ಅಲ್ಕಾ ಯಾಗ್ನಿಕ್ ಅವರ ಬಿಂದಿಯಾ ಚಮ್ಕೆ ಚೂಡಿ ಖನಕೆ ಹಾಡಿಗೆ ನೃತ್ಯ ಮಾಡಿದ್ದರು.




ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸಭ್ಯತೆ, ಗೌಪ್ಯತೆಯನ್ನು ಎಲ್ಲರು ಪರಿಗಣಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಕಿರಿಕಿರಿಯುಂಟುಮಾಡಬಾರದು ಎಂದು ಸಾರಿಗೆ ಅಧಿಕಾರಿಗಳು ಎಷ್ಟೇ ಹೇಳಿದರು ಜನರು ಅವರ ಮಾತನ್ನು ಕಿವಿಗೂ ಹಾಕಿಕೊಳ್ಳದೆ ರೀಲ್ಸ್​​ ಮಾಡುವುದನ್ನು ಮುಂದುವರಿಸಿದ್ದಾರೆ.


ಕೆಲವರು ರೀಲ್ಸ್ ಮಾಡುವವರನ್ನು ಬೆಂಬಲಿಸುತ್ತಾರೆ, ಆದರೆ ಕೆಲವರು ಅವರನ್ನು ನೋಡಿದರೆ ಕಿಡಿಕಾರುತ್ತಾರೆ. ಎಲ್ಲಾ ರೀತಿಯ ಜನರನ್ನು ಗೌರವಿಸಲು ಜನರು ಕೆಲವು ನಿಯಮಗಳನ್ನು ಅನುಸರಿಸಬೇಕು.

First published: