• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Love Story: ಅಂತರ್ಜಾತಿ ವಿವಾಹಕ್ಕೆ ಒಪ್ಪದ ಕುಟುಂಬಸ್ಥರು, 22 ವರ್ಷ ಕಾದು ಹೆತ್ತವರ ಒಪ್ಪಿಗೆ ಪಡೆದೇ ಮದ್ವೆಯಾದ ಹುಡುಗಿ!

Love Story: ಅಂತರ್ಜಾತಿ ವಿವಾಹಕ್ಕೆ ಒಪ್ಪದ ಕುಟುಂಬಸ್ಥರು, 22 ವರ್ಷ ಕಾದು ಹೆತ್ತವರ ಒಪ್ಪಿಗೆ ಪಡೆದೇ ಮದ್ವೆಯಾದ ಹುಡುಗಿ!

 22 ವರ್ಷ ಕಾದು ಹೆತ್ತವರ ಒಪ್ಪಿಗೆ ಪಡೆದೇ ಮದ್ವೆಯಾದ ಹುಡುಗಿ

22 ವರ್ಷ ಕಾದು ಹೆತ್ತವರ ಒಪ್ಪಿಗೆ ಪಡೆದೇ ಮದ್ವೆಯಾದ ಹುಡುಗಿ

ಸಾಮಾನ್ಯವಾದ ಕಾರಣವೆಂದರೆ ಅದು ‘ಹುಡುಗ ಅಥವಾ ಹುಡುಗಿ ನಮ್ಮ ಜಾತಿಯವರಲ್ಲ, ಬೇರೆ ಜಾತಿಗೆ ಸೇರಿದವರು, ನಮ್ಮ ಮನೆಗೆ ಸರಿಯಾಗಿ ಹೊಂದಿಕೊಳ್ಳಲು ಆಗುವುದಿಲ್ಲ’ ಅಂತೆಲ್ಲಾ ಪೋಷಕರು ಹೇಳುವುದನ್ನು ನಾವು ಕೇಳಿರುತ್ತೇವೆ ಮತ್ತು ಅನೇಕ ಸಂದರ್ಭಗಳಲ್ಲಿ ನೋಡಿಯೂ ಇರುತ್ತೇವೆ ಅಂತ ಹೇಳಬಹುದು.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಎಷ್ಟೋ ಜನ ಹುಡುಗ ಹುಡುಗಿ ಕಾಲೇಜಿನಲ್ಲಿ ಓದುವಾಗ ಪ್ರೀತಿಸಿ, ನಂತರ ತಮ್ಮ ಮನೆಯಲ್ಲಿ ಪೋಷಕರಿಗೆ (Parents) ವಿಷಯ ಗೊತ್ತಾಗಿ ಆ ಪ್ರೇಮಪಕ್ಷಿಗಳನ್ನು ಬೇರೆ ಮಾಡಲು ನೋಡಿದಾಗ ಮತ್ತು ಅವರ ಮದುವೆಗೆ ಒಪ್ಪದೆ ಇದ್ದಾಗ ತಮ್ಮ ಮಕ್ಕಳಿಗೆ ಅನೇಕ ರೀತಿಯ ಕಾರಣಗಳನ್ನು ನೀಡುತ್ತಾರೆ. ಇದರಲ್ಲಿ ಸಾಮಾನ್ಯವಾದ ಕಾರಣವೆಂದರೆ ಅದು ‘ಹುಡುಗ ಅಥವಾ ಹುಡುಗಿ ನಮ್ಮ ಜಾತಿಯವರಲ್ಲ, ಬೇರೆ ಜಾತಿಗೆ ಸೇರಿದವರು, ನಮ್ಮ ಮನೆಗೆ ಸರಿಯಾಗಿ ಹೊಂದಿಕೊಳ್ಳಲು ಆಗುವುದಿಲ್ಲ’ ಅಂತೆಲ್ಲಾ ಪೋಷಕರು ಹೇಳುವುದನ್ನು ನಾವು ಕೇಳಿರುತ್ತೇವೆ ಮತ್ತು ಅನೇಕ ಸಂದರ್ಭಗಳಲ್ಲಿ ನೋಡಿಯೂ ಇರುತ್ತೇವೆ ಅಂತ ಹೇಳಬಹುದು. ಹೀಗೆ ತಮ್ಮನ್ನು ಎಲ್ಲಿ ದೂರ ಮಾಡಿ ಬಿಡುತ್ತಾರೆ ಮತ್ತು ಬೇರೆಯವರೊಂದಿಗೆ ಮದುವೆ ಮಾಡಿಸಿ ಬಿಡುತ್ತಾರೆ ಅನ್ನೋ ಭಯಕ್ಕೆ ಅನೇಕ ಹುಡುಗ ಹುಡುಗಿಯರು ಮನೆಯಿಂದ ಓಡಿ ಹೋಗಿ ಮದುವೆಯಾಗುವಂತಹ ಅಥವಾ ಮನೆಯಿಂದ ಹೋಗಿ ತಮ್ಮ ಪೋಷಕರಿಂದ (Parents) ದೂರ ಹೋಗಿ ಬೇರೆ ಇರುವಂತಹ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ.


ಅದರಲ್ಲೂ ಈ ಅಂತರ್ಜಾತೀಯ ಮದುವೆಗಳಿಗಂತೂ ಹೆಚ್ಚಿನ ಪೋಷಕರು ತಮ್ಮ ಒಪ್ಪಿಗೆಯನ್ನು ನೀಡುವುದಿಲ್ಲ. ಹೀಗೆ ಒಪ್ಪಿಗೆ ಸೂಚಿಸದೇ ಇದ್ದಾಗ ಹುಡುಗ ಹುಡುಗಿ ಓಡಿ ಹೋಗಿ ಮದುವೆಯಾದದ್ದು ನೋಡಿರುತ್ತೇವೆ. ಆದರೆ ಆ ಪ್ರೀತಿಯನ್ನು ಮನೆಯವರು ಒಪ್ಪಿಕೊಳ್ಳುವ ತನಕ ತಾಳ್ಮೆಯಿಂದ ಕಾದ ಹುಡುಗ ಹುಡುಗಿಯನ್ನು ನೀವು ನೋಡಿರುವುದು ತುಂಬಾನೇ ಅಪರೂಪ ಅಂತ ಹೇಳಬಹುದು.


ಅಂತರ್ಜಾತೀಯ ವಿವಾಹವನ್ನು ಮನೆಯವರು ಒಪ್ಪಿಕೊಳ್ಳಲು 22 ವರ್ಷಗಳ ಕಾಲ ಕಾದು ಕುಳಿತ ಪ್ರಿಯತಮೆ..


ಇಲ್ಲೊಬ್ಬ ಹುಡುಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 22 ವರ್ಷಗಳ ಕಾಲ ತನ್ನ ಪ್ರೀತಿಯನ್ನು ಮನೆಯವರು ಒಪ್ಪಿಕೊಂಡು ಅಂತರ್ಜಾತೀಯ ಮದುವೆಗೆ ಸಮ್ಮತಿಯನ್ನು ಸೂಚಿಸುತ್ತಾರೆ ಅಂತ ತಾಳ್ಮೆಯಿಂದ ಕಾದು ಕುಳಿತ ನಿಜವಾದ ಘಟನೆ ನಡೆದಿದೆ ನೋಡಿ.


ಬೇರೆ ಜಾತಿಗೆ ಸೇರಿದವಳಾಗಿರುವುದರಿಂದ ತಾನು ಪ್ರೀತಿಸುವ ವ್ಯಕ್ತಿಯೊಂದಿಗೆ ಮದುವೆಯಾಗಲು ಪೋಷಕರು ಅನುಮತಿಸದ ಕಾರಣ ಮದುವೆಯಾಗಲು 22 ವರ್ಷಗಳ ಕಾಲ ಕಾಯುತ್ತಿದ್ದ ಹುಡುಗಿಯ ಕಥೆ ನಿಜಕ್ಕೂ ಅಪರೂಪವಾದದ್ದು.


ಸೋನಿಯಾ ತನ್ನ ಜೀವನದಲ್ಲಿ ಪ್ರೀತಿಸಿದ ವ್ಯಕ್ತಿಯನ್ನೇ ಬಾಳ ಸಂಗಾತಿಯಾಗಿ ಕೈ ಹಿಡಿಯಲು 22 ವರ್ಷಗಳ ಕಾಲ ಕಾಯ್ದಿದ್ದಾಳೆ. ಅಂತಿಮವಾಗಿ, ಅವರ ಕುಟುಂಬವು ಅವರ ಅಂತರ್ಜಾತೀಯ ವಿವಾಹಕ್ಕೆ ಅನುಮತಿ ನೀಡಿತು.


22 ವರ್ಷಗಳ ಬಳಿಕ ವಧುವಿನ ಗೆಟಪ್ ನಲ್ಲಿ ಕಾಣಿಸಿಕೊಂಡ್ರು ಸೋನಿಯಾ


ಹೃದಯಸ್ಪರ್ಶಿ ಪ್ರೇಮಕಥೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಪಡೆಯಲು ಸಾಧ್ಯವಾಗದಿದ್ದರೂ, ಸೋನಿಯಾ ಅವರ ವೀಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.




ವೀಡಿಯೋ ಕ್ಲಿಪ್ ನಲ್ಲಿ ಸೋನಿಯಾ ವಧುವಿನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದಂತೆ, ಅವರು ತಮ್ಮ ವಿವಾಹ ಆರತಕ್ಷತೆಗೆ ತಯಾರಿ ನಡೆಸುತ್ತಿದ್ದಾರೆ.


ಇದನ್ನೂ ಓದಿ: 'ಬಾಟಲಿ'ಪುತ್ರರಿಗೆ ಅಬ್ಬಬ್ಬಬ್ಬಾ, ಲಾಟ್ರಿ! 100 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ 'ಎಣ್ಣೆ' ಬಾಟಲಿ! ಅದು ಎಲ್ಲಿ ಗೊತ್ತಾ?


ನೆಟ್ಟಿಗರು ಇವರ ಪ್ರೇಮಕಥೆಯನ್ನು ಕೇಳಿ ವಿಸ್ಮಯಗೊಂಡಿದ್ದಾರೆ ಮತ್ತು ಸೋನಿಯಾ ಮತ್ತು ಅವರ ಸಂಗಾತಿಗೆ ಶುಭ ಹಾರೈಕೆಗಳು, ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದ್ದಾರೆ.


ಸೋನಿಯಾ ಅವರ ಪ್ರೇಮಕಥೆ ಕೇಳಿ ವಿಸ್ಮಯಗೊಂಡ ನೆಟ್ಟಿಗರು


ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಇದು ನನಗೆ ಗೂಸ್ ಬಂಪ್ ಗಳನ್ನು ನೀಡಿತು, ಮನೆಯವರ ಒಪ್ಪಿಗೆ ಪಡೆದು ಇಬ್ಬರು ಮದುವೆಯಾಗಲು ತುಂಬಾ ಸಮಯದಿಂದ ಕಾಯ್ದಿದ್ದಾರೆ. ನಿಮ್ಮ ನಿಷ್ಠೆ ಮತ್ತು ಸಮರ್ಪಣೆಗೆ ವಂದನೆಗಳು.. ಯಾವಾಗಲೂ ಚೆನ್ನಾಗಿರಿ" ಎಂದು ಹೇಳಿದ್ದಾರೆ.


ಇನ್ನೊಬ್ಬರು "ಅವರು ಓಡಿ ಹೋಗಲಿಲ್ಲ ಅಥವಾ ಪ್ರೀತಿ ಮತ್ತು ಕುಟುಂಬದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಆದರೆ ಅವರ ಕುಟುಂಬಗಳು ಒಪ್ಪಿಕೊಳ್ಳುವವರೆಗೆ ಕಾಯುತ್ತಿದ್ದರು. ಅವರ ತಾಳ್ಮೆ ಮತ್ತು ಪ್ರೀತಿಗೆ ತುಂಬಾನೇ ಗೌರವ ಇದೆ” ಎಂದು ಕಾಮೆಂಟ್ ಮಾಡಿದ್ದಾರೆ.




‘ಲುಕ್ಸ್ ಬೈ ಮನಿಷ್ ಕಚ್ರು’ ಎಂಬ ಹೆಸರಿನ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೋ 7 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

First published: