Girl Stuck In Dress: ಟೈಟ್ ಡ್ರೆಸ್​​​ನಲ್ಲಿ ಸಿಕ್ಕಾಕೊಂಡು ಬಾತ್ ಟಬ್​​ಗೆ ಬಿದ್ದ ಯುವತಿಯ ಕಾಮಿಡಿ ವಿಡಿಯೋ ವೈರಲ್!

ಫೋಟೋ ಕ್ಲಿಕ್ಕಿಸಿಕೊಂಡ ನಂತರ ಡ್ರೆಸ್ ತೆಗೆಯಲು ಯುವತಿ ಪ್ರಯತ್ನಿಸಿದ್ದಾಳೆ. ಆದ್ರೆ ಅದು ಟೈಟ್ ಆಗಿದ್ದರಿಂದ ಕತ್ತಿನ ಭಾಗದಿಂದ ಮೇಲೆ ಬಂದಿಲ್ಲ. ಹಾಗಾಗಿ ಅರ್ಧ ಡ್ರೆಸ್ ಹೊರ ಬಂದಿದ್ದರಿಂದ ಕಾಣದೆ ಯುವತಿ ಬಾತ್​ ಟಬ್​​ ಗೆ ಬಿದ್ದಿದ್ದಾಳೆ.

ಬಾತ್​ ಟಬ್​​ನಲ್ಲಿ ಬಿದ್ದ ಯುವತಿ

ಬಾತ್​ ಟಬ್​​ನಲ್ಲಿ ಬಿದ್ದ ಯುವತಿ

  • Share this:
ಲಂಡನ್: ಈಗೇನಿದ್ರೂ ಡಿಜಿಟಲ್ ದುನಿಯಾ. ಹೊಸ ಬಟ್ಟೆ, ಕಾರು ಸೇರಿದಂತೆ ಏನೇ ವಸ್ತುಗಳನ್ನ ತಂದರೂ ಅದನ್ನ ಸೋಶಿಯಲ್ ಮೀಡಿಯಾ (Social Media)ದಲ್ಲಿ ಶೇರ್ ಮಾಡಿಕೊಳ್ಳುವುದು ಟ್ರೆಂಡ್. ಇನ್ನೂ ಕೆಲವರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಅದೇ ರೀತಿ ಯುವತಿ ಯೊಬ್ಬಳು ಹೊಸ ಬಟ್ಟೆ (New Dress) ಧರಿಸಿ ಇಕ್ಕಟ್ಟಿಗೆ ಸಿಲುಕಿದ ವೀಡಿಯೋದ ಫೋಟೋಗಳು ವೈರಲ್ (Viral Video) ಆಗುತ್ತಿವೆ.

ಲಂಡನ್ ನಿವಾಸಿಯಾಗಿರುವ ಯುವತಿ ಹೊಸ ಡ್ರೆಸ್ ಖರೀದಿಸಿದ್ದಾಳೆ. ಡ್ರೆಸ್ ಧರಿಸುವಾಗ ಅದು ಸ್ವಲ್ಪ ಟೈಟ್ ಆಗಿತ್ತು. ಆದ್ರೂ ಯುವತಿ ಹೊಸ ಡ್ರೆಸ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಆದ್ರೆ ಮುಂದೆ ಅದೇ ಡ್ರೆಸ್ ಆಕೆಗೆ ಸಂಕಷ್ಟ ತರುತ್ತೆ ಎಂಬುವುದು ಬಹುಶಃ ಗೊತ್ತಿರಲಿಲ್ಲ.

ನೋಡ ನೋಡುತ್ತಿದ್ದಂತೆ ಬಾತ್ ಟಬ್‍ನಲ್ಲಿ ಬಿದ್ದ ಯುವತಿ

ಫೋಟೋ ಕ್ಲಿಕ್ಕಿಸಿಕೊಂಡ ನಂತರ ಡ್ರೆಸ್ ತೆಗೆಯಲು ಯುವತಿ ಪ್ರಯತ್ನಿಸಿದ್ದಾಳೆ. ಆದ್ರೆ ಅದು ಟೈಟ್ ಆಗಿದ್ದರಿಂದ ಕತ್ತಿನ ಭಾಗದಿಂದ ಮೇಲೆ ಬಂದಿಲ್ಲ. ಹಾಗಾಗಿ ಅರ್ಧ ಡ್ರೆಸ್ ಹೊರ ಬಂದಿದ್ದರಿಂದ ಯುವತಿ ಮುಂದೆ ಏನು ಮಾಡೋದು ಅಂತ ತೋಚದೇ ಹಿಂದೆ ಮುಂದೆ ನಡೆದಿದ್ದಾಳೆ. ಹೀಗೆ ನಡೆದಾಡುತ್ತಿರುವಾಗಲೇ ಹೋಗಿ ಬಾತ್ ಟಬ್ ನಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾಳೆ. ಎಷ್ಟೇ ಪ್ರಯತ್ನಿಸಿದ್ರೂ ಯುವತಿಗೆ ಡ್ರೆಸ್ ತೆಗೆಯಲು ಆಗದಿದ್ದಾಗ ಗೆಳೆಯನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಇನ್ನೂ ಯುವತಿಯ ವೀಡಿಯೋ ನೋಡಿದ ಗೆಳೆಯ ಎದ್ನೋ ಬಿದ್ನೊ ಅಂತ ಕಚೇರಿ ಕೆಲಸಕ್ಕೆ ರಜೆ ಹಾಕಿ ಮನೆಗೆ ಬಂದು ಗೆಳತಿಗೆ ಸಹಾಯ ಮಾಡಿದ್ದಾನೆ.

ಟಿಕ್‍ಟಾಕ್ (TikTok) ನಲ್ಲಿ ವೀಡಿಯೋ ವೈರಲ್

ಈ ಎಲ್ಲ ದೃಶ್ಯಗಳು ಯುವತಿ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅದನ್ನು ಆಕೆ ಟಿಕ್ ಟಾಕ್ ನಲ್ಲಿ (@slurricanemandy) ಹಂಚಿಕೊಂಡಿದ್ದಾಳೆ. ಯುವತಿ ಡ್ರೆಸ್ ಟ್ರಯಲ್ ಮಾಡುವಾಗ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ವರದಿಯಾಗಿದೆ. ಆದ್ದರಿಂದ ಗೆಳೆಯನಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ.

ಇದನ್ನೂ ಓದಿ: Aamir Khans bodyguard salary: ನಟ ಅಮೀರ್ ಖಾನ್ ಬಾಡಿಗಾರ್ಡ್ ಸಂಬಳ ಎಷ್ಟು ಕೋಟಿ ಅಂತ ತಿಳಿದ್ರೆ ಶಾಕ್ ಆಗ್ತಿರ!

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪಾದರಸದಂತೆ ಹರಿದಾಡುತ್ತಿದೆ. ವೀಡಿಯೋ ನೋಡಿದ ನೆಟ್ಟಿಗರು ಯುವತಿಗೆ ಸಲಹೆ ನೀಡಿದೆ, ಕೆಲವರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ. ಈವರೆಗೂ ಟಿಕ್‍ಟಾಕ್ ನಲ್ಲಿ ಈ ವೀಡಿಯೋ 1.70 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಇದರ ಜೊತೆಗೆ ಮೂವತ್ತು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ಡ್ರೆಸ್ ಖರೀದಿಸುವಾಗ ಇವುಗಳ ಬಗ್ಗೆ ಗಮನ ಹರಿಸಿ

  1.  ಅಂಗಡಿ/ಶೋ ರೂಂಗಳಿಗೆ ತೆರಳಿದಾಗ ಯಾವುದೇ ಡ್ರೆಸ್ ಖರೀದಿಗೂ ಮುನ್ನ ಒಮ್ಮೆ ಟ್ರಯಲ್ ಮಾಡಿ ನೋಡಿ. ಇದರಿಂದ ಮನೆಗೆ ಬಂದು ಚಿಕ್ಕದಾಯ್ತು/ದೊಡ್ಡದಾಯ್ತು ಅಂತ ಗೋಳಾಡೋದು ತಪ್ಪುತ್ತದೆ.

  2. ಇನ್ನೂ ಆನ್‍ಲೈನ್ ನಲ್ಲಿ ಖರೀದಿಸುವಾಗ ನಿಮ್ಮ ಅಳತೆಯನ್ನು ಸರಿಯಾಗಿ ನಮೂದಿಸಬೇಕು.

  3. ನಿಮ್ಮ ದೇಹಕ್ಕೆ ಹೊಂದುವಂತಹ ಬಟ್ಟೆ ಖರೀದಿಸಿ.

  4. ಬಣ್ಣಗಳ ಆಯ್ಕೆಯಲ್ಲಿಯೂ ಎಚ್ಚರಿಸಬೇಕು.

  5. ಶೋರೂಂಗಳಿಗೆ ತೆರಳುವಾಗ ನಿಮ್ಮ ಗೆಳೆಯ/ತಿಯರನ್ನು ಜೊತೆಗೆ ಕರೆದುಕೊಂಡು ಹೋಗುವುದು ಉಚಿತ.

  6.  ಯಾವ ಕಾರ್ಯಕ್ರಮಕ್ಕೆ ಡ್ರೆಸ್ ಖರೀದಿಸುತ್ತಿದ್ದೀರಿ ಎಂಬುದರ ಬಗ್ಗೆ ಮೊದಲೇ ಯೋಚಿಸಿ.

  7. ಖರೀದಿಗೂ ತೆರಳುವ ಮುನ್ನವೇ ಯಾವ ಮಾದರಿಯ ಬಟ್ಟೆ ಖರೀದಿ ಮಾಡಬೇಕು? ಎಲ್ಲಿ? ಬಜೆಟ್? ಹೀಗೆ ಇತ್ಯಾದಿ ಅಂಶಗಳನ್ನು ಪ್ಲಾನ್ ಮಾಡಿಕೊಳ್ಳಬೇಕು.


ವರದಿ: ಮಹ್ಮದ್ ರಫೀಕ್ ಕೆ.
Published by:Kavya V
First published: