ಹುಡುಗ-ಹುಡಗಿ ಅವರು ಸ್ನೇಹಿತರೇ (Friends) ಆಗಿರಬಹುದು. ಪ್ರೇಮಿಗಳೇ ಇರಬಹುದು. ಅವರು ಎಷ್ಟೇ ಆತ್ಮೀಯರಾಗಿರಬಹುದು. ಆದ್ರೆ ಸಾರ್ವಜನಿಕ ಸ್ಥಳಗಳಿಗೆ ಬಂದಾಗ ಸರಿಯಾದ ರೀತಿ ನಡೆದುಕೊಳ್ಳಬೇಕು. ಬೇರೆಯವರಿಗೆ ಕಿರಿ ಕಿರಿ ಆಗುವಂತೆ ಅಸಭ್ಯವಾಗಿ ನಡೆದುಕೊಳ್ಳಬಾರದು. ನಾವು ಆತ್ಮೀಯರೆಂದು ಎಲ್ಲಂದರಲ್ಲಿ ಮುತ್ತು ಕೊಡೋದು, ಜೋರಾಗಿ ನಗೋದು, ಕೆಟ್ಟ ಕೆಟ್ಟ ಭಾಷೆಗಳಿಂದ ಮಾತನಾಡಿಕೊಳ್ಳುವುದನ್ನು ನೋಡಿದ್ದೇವೆ. ಅದು ಅವರಿಗೆ ಕಾಮನ್ ವಿಚಾರ ಇರಬಹುದು. ಆದ್ರೆ ನೋಡುವವರಿಗೆ ಅದು ಕೆಟ್ಟದಾಗಿ ಕಾಣುತ್ತೆ. ಅದೇ ರೀತಿ ದೆಹಲಿಯಲ್ಲಿ ಮೆಟ್ರೋದಲ್ಲಿ (Delhi Metro) ಪ್ರಯಾಣಿಸುತ್ತಿರುವಾಗಲೇ ಯುವತಿಯೊಬ್ಬಳು ಯುವಕನ ಕೆನ್ನೆಗೆ ಪದೇ ಪದೇ ಬಾರಿಸಿದ್ದಾಳೆ. ಜನರ ಮುಂದೆಯೇ ತನ್ನ ಗೆಳೆಯನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ (Viral Video) ಆಗಿದೆ.
ಯುವಕನ ಕೆನ್ನೆಗೆ ಪದೇ-ಪದೇ ಬಾರಿಸಿದ ಯುವತಿ!
ದೆಹಲಿಯಲ್ಲಿ ಯುವಕ, ಯುವತಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಇಬ್ಬರ ನಡುವೆ ಮಾತಿನ ವಾಗ್ವಾದ ಶುರುವಾಗುತ್ತೆ. ಜೋರಾಗಿ ಮಾತನಾಡುತ್ತಲೇ ಯುವತಿ ಯುವಕನಿಗೆ ಕಪಾಳಕ್ಕೆ ಬಾರಿಸಿದ್ದಾಳೆ. ಅದಕ್ಕೆ ಯುವಕ ಏನೋ ಹೇಳುತ್ತಾನೆ. ಆಕೆ ಮತ್ತೆ ಯುವಕನಿಗೆ ನಾಲ್ಕೈದು ಬಾರಿ ಯುವಕನಿಗೆ ಹೊಡೆದಿದ್ದಾಳೆ. ತಾಳ್ಮೆ ಕಳೆದುಕೊಂಡ ಯುವಕನು ಆಕೆಯ ಕೆನ್ನೆಗೆ ಒಮ್ಮೆ ಬಾರಿಸಿದ್ದಾನೆ.
गर्लफ्रेंडने बॉयफ्रेंडला काढलं बुकलून, दिल्ली मेट्रोमधील व्हिडीओ व्हायरल pic.twitter.com/bO7BXnYFZ4
— Mandar (@mandar199325) July 13, 2022
ಬಟ್ಟೆ ವಿಚಾರವಾಗಿ ಜಗಳವಾಡಿದ ಜೋಡಿ!
ಇಬ್ಬರು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವಾಗ, ಜರಾದಿಂದ 1000 ರೂಪಾಯಿಗೆ ಟೀ ಶರ್ಟ್ ಸಿಕ್ಕಿದೆ ಎಂದು ಹುಡುಗಿ ಹೇಳುತ್ತಾಳೆ. ಆಗ ಹುಡುಗ ಅದು ಹೇಗೆ ಸಾಧ್ಯ? ನಾನು ಅದನ್ನು ಒಪ್ಪಲ್ಲ. ಅದು ಕೇವಲ 150 ರೂಪಾಯಿ ಟೀ ಶರ್ಟ್. ಅದಕ್ಕಿಂತ ಹೆಚ್ಚು ಇರುವುದಿಲ್ಲ ಎಂದು ಹೇಳುತ್ತಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತೆ. ನಂತರ ಕೋಪಗೊಂಡ ಯುವತಿ ಯುವಕನ ಕೆನ್ನೆಗೆ ಬಾರಿಸುತ್ತಾಳೆ. ಜನ ಇದ್ದರೆ ಎನ್ನುವುದನ್ನೂ ಲೆಕ್ಕಿಸದೇ ಹೊಡೆದೇ ಬಿಡುತ್ತಾಳೆ. ನಂತರ ಮುಂದಿನ ನಿಲ್ದಾಣವೊಂದರಲ್ಲಿ ಇಬ್ಬರು ಇಳಿದು ಹೋಗುತ್ತಾರೆ.
ಜನರ ಮುಂದೆಯೇ ಗೆಳೆಯನಿಗೆ ಕಪಾಳಮೋಕ್ಷ!
ಎಷ್ಟೇ ಆತ್ಮೀಯರಾಗಿದ್ರೂ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯವಾಗಿ ನಡೆದುಕೊಳ್ಳಬೇಕು. ಆದ್ರೆ ಈ ಜೋಡಿ ಸಾರ್ವಜನಿಕರು ಓಡಾಡೋ ಮೆಟ್ರೋದಲ್ಲೇ ಈ ರೀತಿ ಹೊಡೆದುಕೊಂಡಿದ್ದಾರೆ. ಏನೇ ಜಗಳ, ಕೋಪ ಇದ್ರೂ ತಾಳ್ಮೆಯಿಂದ ಇರಬೇಕಿತ್ತು. ಕೇವಲ ಒಂದು ಟೀ ಶರ್ಟ್ ವಿಚಾರವಾಗಿ ಈ ರೀತಿ ನಡೆದುಕೊಳ್ಳಬಾರದಿತ್ತು. ಬಟ್ಟೆ ವಿಚಾರವಾಗಿ ಜನರ ಮುಂದೆಯೇ ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: Teacher Slapped Student: 6ನೇ ತರಗತಿ ವಿದ್ಯಾರ್ಥಿ ಕಪಾಲಕ್ಕೆ ಹೊಡೆದ ಶಿಕ್ಷಕ? ಗಣಿತ ನೋಟ್ಬುಕ್ ತರದಿರುವುದೇ ಕಾರಣ
ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡ ಮಂದರ್ ಎಂಬ ವ್ಯಕ್ತಿ
ಮೆಟ್ರೋದಲ್ಲಿ ಜೋರಾಗಿ ಜಗಳವಾಡುತ್ತಿದ್ದಾಗ ಅದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಂದರ್ ಎನ್ನುವವರು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಅದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಆ ವಿಡಿಯೋ ಈಗ ಎಲ್ಲೆಡರೆ ವೈರಲ್ ಆಗಿದೆ. ವಿಡಿಯೋ ನೋಡಿ ಹಲವು ಜನರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಗ್ರಹಿದ್ದಾರೆ.
ಇದನ್ನೂ ಓದಿ: Pakistani Journalist: ಬಾಲಕನ ಕಪಾಳಕ್ಕೆ ಹೊಡೆದ ಪಾಕಿಸ್ತಾನದ ಪತ್ರಕರ್ತೆ!
ಸುಮ್ಮನೆ ನೋಡುತ್ತಾ ಕುಳಿತ್ತಿದ್ದ ಜನರು!
ಯುವಕ, ಯುವತಿ ಜಗಳವಾಡಿ, ಹೊಡೆಯುತ್ತಿರುವಾಗ ಅಲಿದ್ದ ಜನರು ಸುಮ್ಮನೆ ನೋಡುತ್ತಾ ಕುಳಿತ್ತಿದ್ದರು. ಯಾರೂ ಅವರ ಜಗಳ ಬಿಡಿಸಲು ಹೋಗಿಲ್ಲ. ಅದಕ್ಕೆ ಹೇಳೋದು ನೀವು ಜಗಳವಾಡಿದ್ರೆ ಸಾರ್ವಜನಿಕ ಸ್ಥಳದಲ್ಲಿ ಮರ್ಯಾದೆ ಹೋಗುತ್ತೆ ಅಂತ. ನಿಮ್ಮ ಜಗಳವನ್ನು ಇತರೆ ಜನರು ನೋಡಿ ಎಂಜಾಯ್ ಮಾಡ್ತಾರೆ ಅಷ್ಟೆ. ಆದಷ್ಟು ಸಾರ್ವಜನಿಕ ಸ್ಥಳದಲ್ಲಿ ಡಿಸೆಂಟ್ ಆಗಿ ನಡೆದುಕೊಂಡ್ರೆ ನಿಮಗೂ ಒಳ್ಳೆಯದು. ಬೇರೆಯವರಿಗೂ ಕಿರಿಕಿರಿ ಆಗಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ