• Home
  • »
  • News
  • »
  • trend
  • »
  • ಸತತ ಐದು ಗಂಟೆಗಳ ಕಾಲ ಪ್ರಿಯಕರನ ಜೊತೆ ಲೈಂಗಿಕ ಕ್ರಿಯೆ: ನಂತರ ಆಕೆಗೆ ಆಗಿದ್ದೇನು ಗೊತ್ತಾ?

ಸತತ ಐದು ಗಂಟೆಗಳ ಕಾಲ ಪ್ರಿಯಕರನ ಜೊತೆ ಲೈಂಗಿಕ ಕ್ರಿಯೆ: ನಂತರ ಆಕೆಗೆ ಆಗಿದ್ದೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಕೆಯ ಜೊತೆಗಾರ ಎಷ್ಟೇ ತಡೆದರೂ ಆಕೆ ಮಾತ್ರ ಮಾದಕ ವಸ್ತು ಸೇವನೆ ನಿಲ್ಲಿಸಲಿಲ್ಲ. ಕೊನೆಗೆ ಆತನಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮಹಿಳೆ ಪ್ರಚೋದಿಸಿದ್ದಾಳೆ. ನಿರಂತರವಾಗಿ ಐದು ಗಂಟೆಗಳ ಕಾಲ ಇಬ್ಬರೂ ಸಮ್ಮಿಲನ ನಡೆಸಿದ್ದಾರೆ.

  • Share this:

    ಎಲ್ಲ ವಿಚಾರಕ್ಕೂ ಒಂದು ಮಿತಿ ಎಂಬುದು ಇರುತ್ತದೆ. ಅತಿಯಾದರೆ ಅಮೃತವೂ ವಿಷ ಅಂದ ಹಾಗೆ, ಕೆಲವು ವಿಷ್ಯಗಳ ಮೇಲೆ ನಮಗೆ ಹಿಡಿತ ಇರಬೇಕು, ಅದರಲ್ಲೂ ಸೆಕ್ಸ್ ವಿಷಯ ಬಂದಾಗ ಆದಷ್ಟು ಎಚ್ಚರದಿಂದಿರಬೇಕು. ಅತಿಯಾದ ಲೈಂಗಿಕಾಸಕ್ತಿ ಕೊಡ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಲೈಂಗಿಕ ಕ್ರಿಯೆ ಆರೋಗ್ಯಕ್ಕೆ ಉತ್ತಮ ಎನ್ನುವುದು ನಿಜ. ಆದರೆ ರುಚಿಯಾಗಿದೆ ಎಂದು ಉಪ್ಪನ್ನೇ ಹೆಚ್ಚು ತಿಂದರೆ ಹೊಸ ಹೊಸ ಖಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅದೇ ರೀತಿ ಸೆಕ್ಸ್ ಕೂಡ. ಆಕೆಯ ವಯಸ್ಸು 32 ವರ್ಷ. ಪ್ರಿಯಕರನ ಜೊತೆ ಆಕೆ ಹೋಟೆಲ್​ ರೂಮ್ ಮಾಡಿದ್ದಳು. ಮಿತಿ ಮೀರಿ ಡ್ರಗ್ ಸೇವನೆ ಮಾಡಿದ್ದಳು. ಅದೇ ಅಮಲಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 5 ಗಂಟೆಗಳ ಕಾಲ ನಿರಂತರವಾಗಿ ಲೈಂಗಿಕ ಪ್ರಕ್ರಿಯೆ ನಡೆಸಿದ್ದಾಳೆ! ಕೊನೆಗೆ ಹೃದಯಾಘಾತದಿಂದ ಮಹಿಳೆ ಮೃತಪಟ್ಟಿದ್ದಾಳೆ.


    ಹೌದು, ಹೀಗೊಂದು ಘಟನೆ ನಡೆದಿರುವುದು ಕೊಲಂಬಿಯಾದಲ್ಲಿ. ಮಹಿಳೆ ಸಾಯುವುದಕ್ಕೂ ಮೊದಲು ಹೋಟೆಲ್ ಒಂದರಲ್ಲಿ ರೂಮ್ ಮಾಡಿ ಉಳಿದುಕೊಂಡಿದ್ದಳು. ಆಕೆಯ ಜೊತೆಗಾರ ಎಷ್ಟೇ ತಡೆದರೂ ಆಕೆ ಮಾತ್ರ ಮಾದಕ ವಸ್ತು ಸೇವನೆ ನಿಲ್ಲಿಸಲಿಲ್ಲ. ಕೊನೆಗೆ ಆತನಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮಹಿಳೆ ಪ್ರಚೋದಿಸಿದ್ದಾಳೆ. ನಿರಂತರವಾಗಿ ಐದು ಗಂಟೆಗಳ ಕಾಲ ಇಬ್ಬರೂ ಸಮ್ಮಿಲನ ನಡೆಸಿದ್ದಾರೆ.


    ಹೆಸರಾಂತ ಸೋಫಾ ಅಂಗಡಿಯಲ್ಲೇ ಹಸ್ತ ಮೈಥುನ ಮಾಡಿಕೊಂಡ ಯುವತಿ; ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್


    ಇದ್ದಕ್ಕಿಂದಂತೆ ಮಹಿಳೆಗೆ ಹೃದಯಾಘಾತವಾಗಿತ್ತು. ಆಕೆ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಗೆ ತೆರಳಿದ್ದಳು. ಹೋಟೆಲ್​ನಲ್ಲಿ ತುರ್ತು ಸೇವೆಗೆ ಮನವಿ ಮಾಡಲಾಯಿತಾದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ನಂತರ ಹೋಟೆಲ್ ಸಿಬ್ಬಂದಿಗಳ ಸಹಾಯದಿಂದಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.


    ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಕೊನೆ ಉಸಿರೆಳೆದಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಐದು ಗಂಟೆ ನಿರಂತರವಾಗಿ ಸೆಕ್ಸ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆಕೆಯನ್ನು ಎಲ್ಲರೂ ‘ದಿ ಬೀಸ್ಟ್​’ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು ಎನ್ನಲಾಗಿದೆ. ಮಹಿಳೆಯ ನಿಜವಾದ ಹೆಸರು ಇನ್ನೂ ಬೆಳಕಿಗೆ ಬಂದಿಲ್ಲ.


    "ಇದೊಂದು ವಿಚಿತ್ರ ಪ್ರಕರಣ. ಮಾದಕ ವಸ್ತು ಸೇವನೆ ಮಾಡಿ 5 ಗಂಟೆ ಕಾಲ ನಿರಂತರವಾಗಿ ಸೆಕ್ಸ್ ಮಾಡಿದ್ದಾರೆ ಎಂದರೆ ಅಚ್ಚರಿ ಪಡಲೇಬೇಕು. ಇದು ಸಹಜ ಸಾವೋ ಅಥವಾ ಇದರ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ," ಎಂದು ಪೊಲೀಸರು ತಿಳಿಸಿದ್ದಾರೆ.


    ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು​ ಇಲ್ಲಿವೆ ಟಿಪ್ಸ್


    ಒಬ್ಬ ಮನುಷ್ಯನಿಗೆ ಊಟ, ನಿದ್ದೆ, ವಿಶ್ರಾಂತಿ, ಸಕ್ಸ್ ಇವುಗಳು ಮೂಲಭೂತ ಅವಶ್ಯಕತೆಗಳೆಂದರೆ ತಪ್ಪಲ್ಲ. ಇವುಗಳೆಲ್ಲವನ್ನು ಅವಶ್ಯಕತೆಗೆ ತಕ್ಕಷ್ಟು ಮಾಡಿದರೆ ನಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಯಾಗುವುದುಲ್ಲ. ಇವುಗಳನ್ನು ಹಿತ ಮಿತವಾಗಿ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಆದರೆ ಇದೇ ಚಟುವಟಿಕೆಗಳು ಅತಿಯಾದರೆ ನಮ್ಮ ಬದುಕಿಗೆ ಕುತ್ತು ಬರುತ್ತದೆ.

    Published by:Vinay Bhat
    First published: