ಮಕ್ಕಳ (Children) ಪ್ರತಿಯೊಂದು ಮಾತು, ಆಟಗಳು ನೋಡೋಕೆ ಚೆಂದ. ಸುಮಾರು ನಾಲ್ಕರಿಂದ ಐದು ವರ್ಷದೊಳಗಿನ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋದವರಿಗೆ ಅವುಗಳ ಕೇಳುವ ಪ್ರಶ್ನೆ(Children Question)ಗಳಿಗೆ ಉತ್ತರ ಹೇಳಿ ಸಾಕಾಗಿರುತ್ತದೆ. ಕಾರಣ ಆ ಮಕ್ಕಳಿಗೆ ತಾನು ಕಾಣುವ ಪ್ರತಿಯೊಂದು ವಸ್ತು ಹೊಸದಾಗಿರುತ್ತದೆ. ಈಗೇನಿದ್ರೂ ಡಿಜಿಟಲ್ ದುನಿಯಾ(Digital Dunia), ಮನೆಗಳಲ್ಲಿ ದೊಡ್ಡ ದೊಡ್ಡ ಟಿವಿ(Television)ಗಳ ಮೂಲಕವೇ ಮಕ್ಕಳು ಅರ್ಧ ಜಗತ್ತಿನ ಮಾಹಿತಿ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಟಿವಿಯಲ್ಲಿ ಕಾಣುವ ದೃಶ್ಯಗಳು (Video Clips) ನಿಜ ಅಂತ ಹೆದರಿಕೊಂಡು ಕಣ್ಣೀರು ಹಾಕುತ್ತವೆ. ಪುಟ್ಟ ಬಾಲಕಿ(Girl)ಯೊಬ್ಬಳು ಮೊದಲ ಬಾರಿಗೆ ಟಿವಿಯಲ್ಲಿ ಡೈನೋಸಾರ್ (Dinosaurs) ನೋಡಿ ನೀಡಿರುವ ರಿಯಾಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಕ್ಕಳ ಆಟ, ಮೀಮ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿರುತ್ತವೆ. ಮಕ್ಕಳ ಕ್ಯೂಟ್ ವಿಡಿಯೋಗಳನ್ನು ನೆಟ್ಟಿಗರು ಹೆಚ್ಚು ಇಷ್ಟಪಡುತ್ತಾರೆ. ಇದೀಗ ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿಗೆ ಟಿವಿಯಲ್ಲಿ ಡೈನೋಸಾರ್ ನೋಡಿದ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗುತ್ತಿದೆ. ನೆಟ್ಟಿಗರು ಮುದ್ದು ಕಮೆಂಟ್ ಗಳ ಮೂಲಕ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಟಿವಿಯಲ್ಲಿ ಜುರಾಸಿ ಪಾರ್ಕ್ ನೋಡುತ್ತಿದ್ದ ಬಾಲಕಿ
ಎರಡು ವರ್ಷದ ಬಾಲಕಿ ಟಿವಿಯಲ್ಲಿ ಜುರಾಸಿಕ್ ಪಾರ್ಕ್ ಚಿತ್ರ ನೋಡುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಚಿತ್ರದಲ್ಲಿ ದೊಡ್ಡ ಗಾತ್ರದ ಡೈನೋಸಾರ್ ಗಳು ಬರುತ್ತಿದ್ದಂತೆ ಬಾಲಕಿ ಹೆದರುತ್ತಾ ತನ್ನೆರಡು ಕೈಗಳನ್ನು ಬಾಯಿ ಮೇಲೆ ಇರಿಸಿದ್ದಾಳೆ. ಡೈನೋಸಾರ್ ನೋಡಿ ಹೆದರಿದ್ರೂ ಚಿತ್ರ ನೋಡುತ್ತಲೇ ಇದ್ದಳು.
ವಿಡಿಯೋ ಹಂಚಿಕೊಂಡ ಮಗುವಿನ ತಂದೆ
ಕೊನೆಗೆ ಡೈನೋಸಾರ್ ಗಳು ಮುಂದೆ ಬಂದಂತೆ ಕಾಣುತ್ತಿದ್ದಂತೆಯೇ ಟಿವಿ ನೋಡೋದನ್ನು ನಿಲ್ಲಿಸಿ ಕಿರುಚುತ್ತಾ ಒಳಗೆ ಓಡಿ ಹೋಗಿದ್ದಾಳೆ. ಈ ವಿಡಿಯೋವನ್ನು ಸಬ್ರೆಡಿಟ್ ಆರ್/ಮೇಡ್ ಮೀ ಸ್ಮೈಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನನ್ನ ಎರಡು ವರ್ಷದ ಮಗಳು ಮೊದಲು ಡೈನೋಸಾರ್ ನೋಡಿದ ಪ್ರತಿಕ್ರಿಯೆ ಎಂಬ ಸಾಲುಗಳನ್ನು ಬರೆದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಸದ್ಯ ಈ ವಿಡಿಯೋ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ. ಮಗು ನೋಡ ನೋಡುತ್ತಿದಂತೆ ಆಶ್ಚರ್ಯಚಕಿತಳಾಗಿ ಚಿತ್ರ ನೋಡುವ ದೃಶ್ಯಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: Viral Video: ಹೋಳಿ ಹುಚ್ಚಾಟ, ಚಾಲಕನಿಗೆ ವಾಟರ್ ಬಲೂನ್ ಹೊಡೆದಿದ್ದಕ್ಕೆ ಪಲ್ಟಿಯಾದ ಆಟೋ
ನೆಟ್ಟಿಗರಿಂದ ಸಲಹೆ ರೂಪದ ಕಮೆಂಟ್
ಈ ವಿಡಿಯೋ ತುಂಬಾ ಕ್ಯೂಟ್ ಆಗಿದೆ. ಆಕೆಯ ಇಡೀ ಚಿತ್ರವನ್ನು ತೋರಿಸಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮಕ್ಕಳಿಗೆ ಪೋಷಕರು ಈ ರೀತಿಯ ಸಿನಿಮಾ ತೋರಿಸುವಾಗ ಜೊತೆಯಲ್ಲಿರೋದು ಉತ್ತಮ. ಇದು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಸಲಹೆ ಸಹ ನೀಡಿದ್ದಾರೆ.
ಸೋದರಿಯರ ಈ ವಿಡಿಯೋ ನೋಡ್ತಿದ್ದಂತೆ ತಮ್ಮ ಬಾಲ್ಯ ನೆನಪು ಮಾಡಿಕೊಂಡ ನೆಟ್ಟಿಗರು
ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾ(Social Media)ದಲ್ಲಿ ಸೋದರಿಯರ ಪುಟ್ಟ ಕ್ಯೂಟ್ (Sister Cute video) ವಿಡಿಯೋ ನೋಡುಗರ ಹೃದಯಕ್ಕೆ ಹತ್ತಿರವಾಗಿದೆ. ವಿಡಿಯೋ (Viral video) ನೋಡುತ್ತಿದ್ದಲೇ ತಮ್ಮ ಬಾಲ್ಯದ (Childhood Memory) ಬುತ್ತಿ ಬಿಚ್ಚಿಡುತ್ತಿದ್ದಾರೆ.
Good News Movement ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸೋದರಿಯರ ಕ್ಯೂಟ್ ವಿಡಿಯೋ ಹಂಚಿಕೊಳ್ಳಲಾಗಿದೆ. ತನ್ನ ತಂಗಿಗೆ ಸೈಕಲ್ ಕಲಿಸಲು ಅಕ್ಕ ಸಹಾಯ ಮಾಡೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: I Hate‘Puttu’, ಅಮ್ಮ ಮಾಡೋ ಬ್ರೇಕ್ಫಾಸ್ಟ್ ಬಗ್ಗೆ ಪರೀಕ್ಷೆಯಲ್ಲಿ ಪ್ರಬಂಧವನ್ನೇ ಬರೆದ ಬಾಲಕ
ಕ್ಯೂಟ್ ವಿಡಿಯೋದಲ್ಲಿ ಏನಿದೆ?
ತಂಗಿಗೆ ಸೈಕಲ್ ಏರಲು ಅಕ್ಕ ಆಕೆ ಮೆಟ್ಟಿಲು ಆಗುತ್ತಾಳೆ. ಸೈಕಲ್ ಮೇಲೆರಲು ತಂಗಿಗೆ ಸಾಧ್ಯವಾಗಲ್ಲ. ಹಾಗಾಗಿ ಆಕೆ ಕೆಳಗೆ ಬಾಗುತ್ತಾಳೆ. ಆಗ ತಂಗಿ ಸೈಕಲ್ ಮೇಲೆ ಏರಿ ಕುಳಿತುಕೊಳ್ಳುತ್ತಾಳೆ. ನಂತರ ಮೇಲೆಳುವ ಅಕ್ಕ ಹಿಂದೆ ಸೈಕಲ್ ಹಿಡಿದು ನಿಲ್ಲುತ್ತಾಳೆ. ಇಬ್ಬರ ಮಿನಿ ಸೈಕಲ್ ಸವಾರಿ ಕಂಡ ನೆಟ್ಟಿಗರ ಹೃದಯ ಕರಗಿದೆ.
ಅಕ್ಕ ಎಂದಿಗೂ ತನ್ನ ತಂಗಿಯನ್ನು ಬಿಟ್ಟು ಕೊಡುವದಿಲ್ಲ ಎಂದ ಸಾಲುಗಳ ಜೊತೆ ಈ ವಿಡಿಯೋವನ್ನು ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಯಾವುದೇ ಕಲ್ಮಶ ಇಲ್ಲದ ಎರಡು ಜೀವಗಳು ಹೇಗೆ ಇರುತ್ತವೆ ಎಂಬುದಕ್ಕೆ ಈ ವಿಡಿಯೋ ಉದಾಹರಣೆ ಎಂದು ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ