ಪ್ರೀತಿ ಪ್ರೇಮ ಅನ್ನೋದು ಕಾಮನ್ (Common) ಬಿಡಿ. ಒಂದು ಕಾಲದಲ್ಲಿ ಮನೆಯಲ್ಲಿ ನೋಡಿದ ಹುಡುಗನನ್ನೇ ಮದುವೆ ಅಗುವ ಸಂಪ್ರದಾಯವಿತ್ತು. ಆದರೆ, ಇಂದಿನ ಕಾಲದಲ್ಲಿ ಲವ್ ಮ್ಯಾರೇಜ್ ಅನ್ನೋದು ಕಾಮನ್ ಆಗಿದೆ. ಒಂದೇ ಜಾತಿ, ಧರ್ಮ ಇದ್ರೆ ಮಾತ್ರ ಕೆಲವು ಮನೆಗಳಲ್ಲಿ ಈ ಲರವ್ ಮ್ಯಾರೇಜ್ (Marriage) ಒಪ್ಪಿಕೊಳ್ಳುತ್ತಾರೆ. ಇಲ್ಲಾಂದ್ರೆ ಲವ್ಗೆ ಎಳ್ಳು ನೀರೇ ಗತಿ ಬಿಡಿ. ಇನ್ನು ಕೆಲವೊಂದಷ್ಟು ಪೇರ್ ಇರುತ್ತೆ. ಪ್ರೀತಿ ಮಾಡೋಕೆ ಇಷ್ಟ ಇಲ್ಲ ಅಂದ್ರೂ ತುಂಬಾ ಫೋರ್ಸ್ ಮಾಡ್ತಾರೆ, ಹಿಂದೆ ಹಿಂದೆ ಬರ್ತಾರೆ ಹೀಗೆಲ್ಲಾ ಅದೆಷ್ಟೋ ಉದಾಹರಣೆಗಲೂ ನಮ್ಮ ಸಮಾಜದಲ್ಲಿ ಸಿಗುತ್ತದೆ. ಟ್ರೈಯಾಂಗಲ್ ಲವ್ ಸ್ಟೋರಿಯನ್ನು (Love Story) ಕೇಳಿದ್ದೀರಾ? ಹುಡುಗ ಹುಡುಗಿ ಒಬ್ಬರೂ ಲವ್ ಮಾಡ್ತಾ ಇರ್ತಾರೆ, ಆದರೆ ಮಧ್ಯದಲ್ಲಿ ಇನ್ನೊಂದು ಹುಡುಗ ಎಂಟ್ರಿ ಅಥವಾ ಹುಡುಗಿ ಎಂಟ್ರಿ ಕೊಡೋದು, ಲವ್ಗೆ ಕಲ್ಲು ಹಾಕೋ ಕೆಲಸ ಅಂತ ಹೇಳಬಹುದು.
ಇದೀಗ ಇಂತಹದ್ದೇ ಒಂದು ಘಟನೆ ನಡೆದಿದೆ. ಅಮೆರಿಕದ ನಗರದಲ್ಲಿ ನಡೆದಿರುವ ಈ ಘಟನೆ ಸ್ವಲ್ಪ ಹಳೆಯದು. ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿನ ವ್ಯಕ್ತಿಯೊಬ್ಬ ಮೊದಲ ನೋಟದಲ್ಲೇ ಒಂದು ಹುಡುಗಿಯನ್ನು ಪ್ರೀತಿಸಿದನು. ಆದರೆ ಹುಡುಗಿ ತನಗೆ ಬಾಯ್ ಫ್ರೆಂಡ್ ಇದ್ದಾನೆ ಎಂದು ನಿರಾಕರಿಸಿದ್ದಾಳೆ. ಇದಾದ ನಂತರ ಆ ವ್ಯಕ್ತಿ ಹುಡುಗಿಯ ಲವರ್ನನ್ನು ಕೊಲ್ಲಲು ಸಂಚು ರೂಪಿಸಿದ್ದ. ಅದಕ್ಕಾಗಿ ಬಾಲಕಿಯ ಗೆಳೆಯನ ಮೇಲೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಆ ಹುಡುಗನ ಫ್ರೆಂಡ್ಸ್ ಸಣ್ಣ ಬಾಂಬ್ ಅನ್ನು ರಚಿಸಿದರು.
ಆ ಹುಡುಗಿಗೆ ಇಷ್ಟ ಇಲ್ಲ ಅಂದ್ರೂ ಕೂಡ ಈ ಹುಡುಗ ಕೆಟ್ಟ ಕೆಲಸ ಮಾಡಲು ಮುಂದಾಗುತ್ತಾನೆ. ಈ ಕೆಲಸ ಮಾಡುವಾಗ ಒಂದು ಚೂರು ಭಯ ಪಡೋದೇ ಇಲ್ಲ. ಧೈರ್ಯವಾಗಿ ಬಾಂಬ್ ತಯಾರಿಸುತ್ತಾರೆ.
ಇದನ್ನೂ ಓದಿ: ಜಸ್ಟ್ 200 ರೂಪಾಯಿಗೆ ಸಿಕ್ತಾರೆ ಮಿಯಾ ಕಲೀಫಾ, ಸನ್ನಿ ಲಿಯೋನ್! ಇಲ್ಲಿ ಹೋದವ್ರು ಮಿಸ್ ಮಾಡೋದೆ ಇಲ್ಲ
ಹುಡುಗ ಈ ಬಾಂಬ್ ಅನ್ನು ಉಡುಗೊರೆಯಾಗಿ ಪ್ಯಾಕ್ ಮಾಡಿದ್ದಾನೆ. ಇದಾದ ಬಳಿಕ ಹುಡುಗಿಯ ಬಾಯ್ ಫ್ರೆಂಡ್ ಮನೆಗೆ ತಲುಪಿಸಲಾಗಿತ್ತು. ಪ್ಯಾಕೆಟ್ ತೆರೆದ ಕೂಡಲೇ ಅದು ಸ್ಫೋಟಗೊಂಡು ಪ್ರೇಮಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೊಂದೆಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಆ ಹುಡುಗ ಒಬ್ಬನೇ ಇದ್ದ. ಹೀಗಾಗಿ ಈ ಅಪಘಾತವನ್ನು ತಪ್ಪಿಸಲೈ ಯಾರಿಂದಲೂ ಸಾಧ್ಯವಾಗಿಲ್ಲ. ಹೀಗಾಗಿ ಈ ಅವಘಡ ನಡೆದಿದೆ. ಆನ್ಲೈನ್ ಬಂದ ಗಿಫ್ಟ್ ನೋಡಿ ಆತ ಕೂಡ ಒಮ್ಮೆ ಶಾಕ್ ಆಗಿದ್ದಾನೆ. ಆದರೆ, ತನ್ನ ಪ್ರೇಯಸಿಯಿಂದಲೇ ಸರ್ಪ್ರೈಸ್ ಗಿಫ್ಟ್ ಬಂದಿರಬಹುದೆಂದು ಓಪನ್ ಮಾಡಿದ್ದಾನೆ.
ಈ ಯುವತಿಗೂ ಇದೆಲ್ಲದರ ಬಗ್ಗೆ ತಿಳಿದಿರಲಿಲ್ಲ. ಆ ಬಳಿಕ ಯುವತಿಯ ಹೇಳಿಕೆ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ಸ್ವದೇಶಿಯಿಂದ ಬಾಂಬ್‌ಗಳನ್ನು ತಯಾರಿಸಿದ್ದರು ಎಂದು ಹೇಳಲಾಗಿದೆ.
ಅದಕ್ಕಾಗಿ ಹಲವೆಡೆ ತನಿಖೆ ನಡೆಸಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿದ್ದರು. ಬಾಂಬ್ ಸ್ಫೋಟದ ಸ್ವಲ್ಪ ಸಮಯದ ನಂತರ ಆರೋಪಿಯನ್ನು ಗುರುತಿಸಲಾಗಿದೆ ಮತ್ತು ಆತನನ್ನು ಬಂಧನ ಮಾಡಲಾಗಿದೆ.
ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಸ್ಪೋಟಗೊಂಡ ಹುಡುಗ ಚೇತರಿಸಿಕೊಳ್ಳುತ್ತಾ ಇದ್ದಾನೆ. ಈ ರೀತಿಯ ಘಟನೆಗಳನ್ನು ಕೇಳ್ತಾ ಇದ್ರೆ ಯಾರಿಗಾದ್ರೂ ಭಯ ಆಗದೇ ಇರದು ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ