• Home
  • »
  • News
  • »
  • trend
  • »
  • Viral Video: ಈ ಪೋರಿಯ ಧೈರ್ಯ ಕಂಡು ನೆಟ್ಟಿಗರು ಸುಸ್ತು: ದೈತ್ಯ ಹೆಬ್ಬಾವಿನ ಜೊತೆ ಬಾಲಕಿಯ ಆಟ

Viral Video: ಈ ಪೋರಿಯ ಧೈರ್ಯ ಕಂಡು ನೆಟ್ಟಿಗರು ಸುಸ್ತು: ದೈತ್ಯ ಹೆಬ್ಬಾವಿನ ಜೊತೆ ಬಾಲಕಿಯ ಆಟ

ಬಾಲಕಿಯ ವಿಡಿಯೋ

ಬಾಲಕಿಯ ವಿಡಿಯೋ

ಸುಮಾರು ಏಳರಿಂದ ಎಂಟು ವರ್ಷದ ಅರಿಯಾನಾ ಎಂಬ ಬಾಲಕಿ ಹೆಬ್ಬಾವಿನ (Carpet Python) ಜೊತೆ ಆಟವಾಡುತ್ತಿರುವ ವಿಡಿಯೋ ನೋಡುಗರ ಹೃದಯ ಬಡಿತವನ್ನು ಹೆಚ್ಚು ಮಾಡುತ್ತಿದೆ. ಹೆಬ್ಬಾವು ಮುಂದಕ್ಕೆ ಹೋಗ್ತಿದ್ದರೂ ಬಾಲಕಿ ಅದನ್ನು ಹಿಡಿದು ಎಳೆಯುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು.

  • Share this:

ಹಾವುಗಳಂದ್ರೆ (Snakes) ಯಾರಿಗೆ ಭಯ ಇಲ್ಲ ಹೇಳಿ. ಅವುಗಳ ಬಗ್ಗೆ ಎಷ್ಟೇ ಮಾತನಾಡಿದ್ರೂ ಎದುರಿಗೆ ಬಂದ್ರೆ ಕಿಲೋ ಮೀಟರ್ ಗಟ್ಟಲೇ ದೂರ ಓಡುತ್ತೇವೆ. ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಾವುಗಳ ವಿಡಿಯೋ(Snake Videos)ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಜನರು ಭಯಪಡುತ್ತಲೇ ವಿಡಿಯೋ(Viral Video)ಗಳನ್ನು ನೋಡುತ್ತಾರೆ. ಇನ್ನೂ ಹಾವುಗಳ ರಕ್ಷಣೆ ಮಾಡುವ ವಿಡಿಯೋಗಳು (Snake Rescue Video) ಹೆಚ್ಚು ಸದ್ದು ಮಾಡುತ್ತವೆ. ಕೆಲವು ವರ್ಷಗಳ ಹಿಂದೆ ದೈತ್ಯ ನಾಗರಹಾವು ನೀರು ಕುಡಿಯುವ ವಿಶ್ವ ಮಟ್ಟದಲ್ಲಿ ವೈರಲ್ ಆಗಿತ್ತು. ಇದೀಗ ಎದೆ ಝಲ್ ಅನ್ನಿಸೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ವಿಡಿಯೋ ನೋಡಿದವರು ಅರೇ ಈ ಹುಡುಗಿ ಏನ್ ಮಾಡ್ತಿದ್ದಾಳೆ ಎಂದು ಉದ್ಘಾರ ತೆಗೆದಿದ್ದಾಳೆ.


ಸುಮಾರು ಏಳರಿಂದ ಎಂಟು ವರ್ಷದ ಅರಿಯಾನಾ ಎಂಬ ಬಾಲಕಿ ಹೆಬ್ಬಾವಿನ (Carpet Python) ಜೊತೆ ಆಟವಾಡುತ್ತಿರುವ ವಿಡಿಯೋ ನೋಡುಗರ ಹೃದಯ ಬಡಿತವನ್ನು ಹೆಚ್ಚು ಮಾಡುತ್ತಿದೆ. ಹೆಬ್ಬಾವು ಮುಂದಕ್ಕೆ ಹೋಗ್ತಿದ್ದರೂ ಬಾಲಕಿ ಅದನ್ನು ಹಿಡಿದು ಎಳೆಯುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು.


ಈ ವಿಡಿಯೋವನ್ನು snakemasterexotics ಎಂಬ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದುವರೆಗೂ ವಿಡಿಯೋ 5 ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದ್ದು, 44 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.


ಇದನ್ನೂ ಓದಿ:   Viral News: ಒಂದು ಹಾವು ಭಾರತದಿಂದ ಇಂಗ್ಲೆಂಡ್​ಗೆ ಹಡಗಿನಲ್ಲಿ ಹೋಗಿಬಿಟ್ಟಿದೆ, ಅದ್ರ ಪ್ರಯಾಣದ ಕತೆಯೇ ರೋಚಕ!


ಇನ್ನು ವಿಡಿಯೋ ನೋಡಿದ ನೆಟ್ಟಿಗರ ಆಶ್ಚರ್ಯ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ. ಬಾಲಕಿಯ ಧೈರ್ಯಕ್ಕೆ ನಮ್ಮದೊಂದು ಸಲಾಮ್. ಬಾಲಕಿಗೆ ಮನೆಯಲ್ಲಿ ಸರೀಸೃಪಗಳ ಬಗ್ಗೆ ಮಾಹಿತಿ ನೀಡಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

View this post on Instagram


A post shared by Ariana (@snakemasterexotics)

ಸ್ನೇಕ್ ಅಲ್ಲ, ಇದು ಕೇಕ್...ತಿನ್ನೋಕೆ ಭಾರೀ ಧೈರ್ಯ ಬೇಕಂತೆ!


ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ. ನೋಡಲು ಹಾವಿನಂತೆ ಕಾಣುವ ಕೇಕ್ ಕಂಡವರು ಒಂದು ಕ್ಷಣ ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ಮೊದಲಿಗೆ ಹಳದಿ ಮತ್ತು ಬಿಳಿ ಮಿಶ್ರಿತ ಹಾವು ಮುದುಡಿಕೊಂಡಿ ಕುಳಿತಂತೆ ಕಾಣುತ್ತದೆ. ಕ್ಷಣಾರ್ಧದಲ್ಲಿ ಈ ಹಾವನ್ನು ಚಾಕುವಿನಿಂದ ಕತ್ತರಿಸಲಾಗುತ್ತದೆ. ರಿಯಾಲಿಸ್ಟಿಕ್ ಹಾವಿನ ಕೇಕ್ ಎಂದು ವಿಡಿಯೋ ಕ್ಯಾಪ್ಷನ್ ನಲ್ಲಿ ಬರೆಯಲಾಗಿದೆ, ವಿಡಿಯೋ ನೋಡಿ ಅಚ್ಚರಿಗೆ ಒಳಗಾಗಿರುವ ಜನರು ಕಮೆಂಟ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ


ಮೊದಲಿಗೆ ಕೇಕ್ ತಂದಿದ್ದರೆ  ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು. ಇದೀಗ ಹುಟ್ಟು ಹಬ್ಬದ ಆಚರಣೆ ವಿಭಿನ್ನವಾಗಿದೆ. ಹುಟ್ಟು ಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಯ ಇಷ್ಟವಾದ ವಸ್ತುವಿನ ರೂಪದಲ್ಲಿ ಕೇಕ್ ತಯಾರಿಸಲಾಗುತ್ತದೆ, ಕೆಲವರು ಫೋಟೋ ಕೇಕ್ ಸಹ ಆರ್ಡರ್ ಮಾಡುತ್ತಾರೆ, ಹೀಗಾಗಿ ಬರ್ತ್ ಡೇ ಪಾರ್ಟಿಗಳು ವಿಶೇಷ ಪಡೆದುಕೊಳ್ಳುತ್ತವೆ. ಅಂತಹ ಬರ್ತ್ ಡೇ ವಿಡಿಯೋ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ಕೇಕ್ ಪಾರ್ಲರ್ ಗಳು ವಿಶೇಷವಾಗಿಯೇ ಇಂತಹ ಕೇಕ್ ಸಿದ್ಧಪಡಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಈ ಹಿಂದೆ ಹಾವಿನ ಕೇಕ್ ವಿಡಿಯೋಗಳು ವೈರಲ್ ಆಗಿದ್ದವು.
ಕೋಬ್ರಾ ವೈನ್, ಸ್ನೇಕ್ ಬಿರಿಯಾನಿ!


ಹಂಗ್​​ ರೆಸ್ಟೋರೆಂಟ್​​: ಹಾವುಗಳಿಂದ ಆಹಾರವನ್ನು ಸಿದ್ಧಪಡಿಸುವ ಈ ರೆಸ್ಟೋರೆಂಟ್​​ ಹೆಸರು ಹಂಗ್​. ಇದು ವಿಯೆಟ್ನಾಂ ಹನೋಯ್​​ನಿಂದ 5 ಕಿಲೋ ಮೀಟರ್​​​ ದೂರದಲಿರುವ ಲೇ ಮತ್​​ ಸ್ನೇಕ್​ ವಿಲೇಜ್​ನಲ್ಲಿದೆ.


ಹಲವಾರು ತಲೆಮಾರುಗಳಿಂದ ಲೇ ಮತ್​​ ಪಟ್ಟಣದಲ್ಲಿ ಹಾವು ಹಿಡಿಯುವುದು, ಹೊಡೆಯುವುದು, ಅದರಿಂದ ಆಹಾರ ತಯಾರಿಸುವುದು ಅಲ್ಲಿನ ಜನರು ರೂಢಿಸಿಕೊಂಡು ಬಂದಿದ್ದಾರೆ. ಇಲ್ಲಿ ಹಾವನ್ನು ಹುಡುಕಿ ಹಿಡಿಯುವುದು ಮಾತ್ರವಲ್ಲ, ಫಾರ್ಮ್​ನಲ್ಲಿ ಹಾವನ್ನು ಸಾಕುತ್ತಾರೆ.


ಇದನ್ನೂ ಓದಿ:  Viral News: ಹೀಗೂ ಉಂಟೇ..? ಹಾವು ಓಡಿಸೋಕೆ ಹೋಗಿ 13 ಕೋಟಿ ಮೌಲ್ಯದ ಮನೆಗೆ ಬೆಂಕಿ ಹಚ್ಚಿದ ಭೂಪ


ಅಲ್ಲಿನ ಜನರ ಪ್ರಕಾರ ಹಾವನ್ನು ಸೇವಿಸುದರಿಂದ ಪುರುಷರ ಬಲ ಹಾಗೂ ವೀರ್ಯ ವೃದ್ಧಿಸುತ್ತದೆಯಂತೆ. ಹಾಗಾಗಿ ಲೇ ಮತ್​ ಪಟ್ಟಣದಲ್ಲಿರುವ ಎಲ್ಲಾ ರೆಸ್ಟೋರೆಂಟ್​ಗಳ ಮೆನುವಿನಲ್ಲಿ ಹಾವುಗಳಿಂದ ಸಿದ್ಧ ಪಡಿಸಿದ ಖಾದ್ಯಗಳು ಇರುತ್ತವೆ.

Published by:Mahmadrafik K
First published: