ನಿಮಗೆಲ್ಲಾ ಸೈಕಲ್ (Bicycle) ಸವಾರಿ ಅಂದ್ರೆ ಇಷ್ಟನಾ? ಸಣ್ಣವರಿದ್ದಾಗ ಅಣ್ಣ, ಅಕ್ಕನ ಜೊತೆಯಲ್ಲಿ ಸೈಕಲ್ನಲ್ಲಿ ಹೋಗುತ್ತಾ ಇದ್ರಾ? ಇಲ್ಲಾಂದ್ರೆ ನಿಮ್ಮ ಮನೆಗೆ ಹಾಲನ್ನು ಮಾರಿಕೊಂಡು ಬರುವವನ ಸೈಕಲ್ನ್ನ ನೋಡ್ತಾ ಇದ್ರಾ? ಸೈಕಲ್ ಹೊಡೆದರೆ ಉದ್ದ ಆಗ್ತೀವಿ ಅಂತ ಎಡಬಿಡದೇ ಸೈಕಲ್ನ ನೀವು ಸಣ್ಣವರಿದ್ದಾಗ ಹೊಡೆದಿದ್ದೀರಾ? ಈ ಸೈಕಲ್ ಸವಾರಿಯಿಂದ ನಮ್ಮ ಆರೋಗ್ಯ (Health) ನಿಜಕ್ಕೂ ಚೆನ್ನಾಗಿ ಇರುತ್ತದೆ. ಅಂದ್ರೆ ಚೇತರಿಸಿಕೊಳ್ಳುತ್ತದೆ. ಇನ್ನು ಸೈಕಲ್ನಲ್ಲಿ ಸಾಹಸ ಮಾಡುವ ಅದೆಷ್ಟೋ ಉದಾಹರಣೆಗಳನ್ನು (Example) ನಾವು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇರುವಂತಹ ಸುದ್ದಿ ಇದೀಗ ಇಂತಹದ್ದೇ ಒಂದು ಸೈಕಲ್ ಸವಾರಿಯ ಬಗ್ಗೆಯೇ!
ಅದೆಷ್ಟೋ ಜನರು ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡೋದ್ರಲ್ಲಿ ನಿಪುಣರಾಗಿರುತ್ತಾರೆ. ಇನ್ನೂ ಕೆಲವೊಬ್ಬರಿಗೆ ಸ್ಕಿಪ್ಪಿಂಗ್ ಮಾಡಬೇಕೆಂಬ ಆಸೆ ಇರುತ್ತೆ ಆದ್ರೆ ಮಾಡಲು ತುಂಬಾ ಭಯವಿರುತ್ತದೆ. ಇದರಿಂದ ಹಿಂಜರಿಯುತ್ತಾ ಇರುತ್ತಾರೆ. ನಿಜಕ್ಕೂ ಈ ಸೈಕ್ಲಿಗ್, ಸ್ಕಿಪ್ಪಿಂಗ್ಗಳೆಲ್ಲಾ ರಾಷ್ಟ್ರೀಯ ಮಟ್ಟದ ಆಟಗಳು ಅಂತನೇ ಹೇಳಬಹುದು.
ಇವುಗಳೆಲ್ಲವೂ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ತನಕ ಆಡುವಂತಹ ಆಟಗಳು ಆಗಿವೆ. ನಾನಾ ರೀತಿಯ ಶೈಲಿಯಲ್ಲಿ ಸ್ಕಿಪ್ಪಿಂಗ್ಗಳನ್ನು ಹಲವಾರು ಜನರು ಮಾಡುತ್ತಾರೆ ಮತ್ತು ಸೈಕ್ಲಿಂಗ್ ಕೂಡ. ಇದು ಸಾಮಾನ್ಯ ಜನರ ಗುಂಪಾದರೆ ಇನ್ನು ಅಂಗವಿಕಲರಿಗಾಗಿಯೇ ಪ್ರತ್ಯೇಕ ಗುಂಪು ಇರುತ್ತದೆ.
ಇದನ್ನೂ ಓದಿ: ಈ ಮೀನಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ, ಇದರ ರೇಟ್ ಬರೋಬ್ಬರಿ 2 ಕೋಟಿ ರೂಪಾಯಿ!
ಇವರಿಗಾಗಿಯೇ ಹಲವಾರು ಆಟಗಳು ಮೀಸಲಿಡಲಾಗಿದೆ. ಅವರೂ ಕೂಡ ನಾವೇನು ಯಾರಿಗಿಂತನೂ ಕಮ್ಮಿ ಇಲ್ಲ ಎಂಬಂತೆ ಹಲವಾರು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ನಿಜಕ್ಕೂ ಇದು ನಮ್ಮನ್ನು ತುಂಬಾ ಮೋಟಿವೇಟ್ ಮಾಡುತ್ತದೆ ಅಂತನೇ ಹೇಳಬಹುದು. ಇದೀಗ ಸಾಮಾನ್ಯ ಜನರ ಗುಂಪಿಗೆ ಬರೋಣ. ಇಲ್ಲಿ ಓರ್ವ ಹುಡುಗಿ ಸೈಕಲ್ ಓಡಿಸುವುದು ವಿಡಿಯೋ ವೈರಲ್ ಆಗಿದೆ. ಅರೆ! ಸೈಕಲ್ ಓಡಿಸುವುದಿ ಕಾಮನ್ ಅಲ್ವಾ, ಇದ್ರಲ್ಲಿ ಏನಿದೆ ವಿಶೇಷ ಅಂತ ನಿಮಗೆ ಅನಿಸ್ತಾ ಇದ್ಯಾ? ಇಲ್ಲಿದೆ ನೋಡಿ ಇದ್ರ ಸ್ಪೆಷಲ್!
ಏನಿದು ವೈರಲ್ ವಿಡಿಯೋ!
ಓರ್ವ ಹುಡುಗಿ 2023 ಅಂತ ಒಂದು ಬೋರ್ಡ್ನಲ್ಲಿ ಬರೆದುಕೊಂಡು ತನ್ನ ಕುತ್ತಿಗೆಗೆ ನೇತುಹಾಕಿಕೊಂಡಿದ್ದಾರೆ. ತದನಂತರ ಈಕೆ ಸೈಕಲ್ ಸವಾರಿ ಮಾಡ್ತಾ ಇದ್ದಾರೆ. ಮಾಮೂಲಾಗಿ ಸೈಕಲ್ ಸವಾರಿ ಮಾಡಿದ್ರೆ ಬಹುಶಃ ಇಷ್ಟು ಸುದ್ಧಿ ಆಗ್ತಾ ಇರ್ಲಿಲ್ಲ.
ಈಕೆ ಎರಡೂ ಕೈಗಳನ್ನು ಬಿಟ್ಟು ಸೈಕಲ್ಅನ್ನು ವೇಗವಾಗಿ ಓಡಿಸುತ್ತಾ ಇದ್ದಾರೆ. ಇದರ ಜೊತೆಗೆ ಸೈಕ್ಲಿಂಗ್ ಮತ್ತು ಸ್ಕಿಪ್ಪಿಂಗ್ ಕೂಡ ಮಾಡುತ್ತಾ, ಸ್ಟಂಟ್ ಜೊತೆಗೆ ಸೈಕಲ್ ಸವಾರಿ ಮಾಡಿದ್ದಾರೆ. ಅದು ಕೂಡ ಮಟಮಟ ಬಿಸಿಲಿನಲ್ಲಿ ಕಣ್ಣು ಕುಕ್ಕುತ್ತಿರುವ ಸೂರ್ಯನ ಬೆಳಕಿನಲ್ಲಿ ಹೋಗುತ್ತಾ ಇದ್ದಾರೆ.
ಈ ಸೂಪರ್ ಬೈಸಿಕಲ್ ಸವಾರಿಯನ್ನು ನೀವು ಮಾಡ್ತೀರಾ ಅಂದ್ರೆ ಹಲವು ತರಬೇತಿ, ಅಭ್ಯಾಸಗಳು ಬೇಕೇಬೇಕು. ಭಾರತೀಯಳಾದ ಈಕೆ ಸಖತ್ ಸ್ಟಂಟ್ ಮಾಡುವ ಹುಡುಗಿ ಅಂತಾನೇ ಹೇಳಬಹುದು. ಅದೂ ಅಲ್ಲದೇ ಬಾಯಲ್ಲಿ ಯಾವುದೋ ಹಾಡನ್ನು ಕೂಡ ಹೇಳುತ್ತಾ ಇದ್ದಾರೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ