• Home
  • »
  • News
  • »
  • trend
  • »
  • Viral Video: 30 ವರ್ಷದ ನಂತರ ವಿಮಾನದಲ್ಲಿ ಭೇಟಿಯಾದ ಟೀಚರ್!

Viral Video: 30 ವರ್ಷದ ನಂತರ ವಿಮಾನದಲ್ಲಿ ಭೇಟಿಯಾದ ಟೀಚರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ವರ್ಷಗಳ ನಂತರ ನಾವು ನಮ್ಮ ಊರಿಗೆ ಹೋದಾಗ ಅಲ್ಲಿ ನಮಗೆ ಅಕ್ಷರ ಕಲಿಸಿದ ಶಿಕ್ಷಕರು ಎಲ್ಲಾದರೂ ಸಿಕ್ಕರೆ, ಥಟ್ಟನೆ ನಿಂತು ಅವರಿಗೆ ನಮಸ್ಕರಿಸಿ ಅವರಿಗೆ ನಮ್ಮ ನೆನಪು ಮಾಡಿಕೊಡಲು ಪ್ರಯತ್ನಿಸುತ್ತೇವೆ

  • Share this:

ಸಾಮಾನ್ಯವಾಗಿ ನಮಗೆ ನಮ್ಮ ಬಾಲ್ಯದಲ್ಲಿ (Childhood) ಕಲಿತ ಶಾಲೆ, ಇದ್ದ ಊರು, ಜೊತೆ ಆಟವಾಡಿದ ಸ್ನೇಹಿತರು ಮತ್ತು ನಮ್ಮನ್ನು ಅಕ್ಷರ ಲೋಕಕ್ಕೆ ಪರಿಚಯ ಮಾಡಿಕೊಟ್ಟ ಶಾಲೆಯ (School) ಶಿಕ್ಷಕರು ಯಾವುದು ಮರೆಯಲು ಸಾಧ್ಯವೇ ಆಗುವುದಿಲ್ಲ. ತುಂಬಾ ಸೂಕ್ಷ್ಮ ವಿಚಾರಗಳು ನಮ್ಮ ನೆನಪಿಗೆ ಬಾರದಿದ್ದರೂ ಸಹ ಶಾಲೆ ಹೇಗಿತ್ತು? ನಮ್ಮ ಮೇಷ್ಟ್ರು ಹೇಗಿದ್ದರು, ನಮ್ಮನ್ನು ತುಂಬಾನೇ ಇಷ್ಟ ಪಡುತ್ತಿದ್ದ ಶಿಕ್ಷಕ ಮತ್ತು ಶಿಕ್ಷಕಿಯ (Teacher) ಹೆಸರು ನಮಗೆ ನೆನಪಿನಲ್ಲಿರುತ್ತದೆ (Memory) ಅಂತ ಹೇಳಬಹುದು.


ಈಗಲೂ ಅನೇಕ ವರ್ಷಗಳ ನಂತರ ನಾವು ನಮ್ಮ ಊರಿಗೆ ಹೋದಾಗ ಅಲ್ಲಿ ನಮಗೆ ಅಕ್ಷರ ಕಲಿಸಿದ ಶಿಕ್ಷಕರು ಎಲ್ಲಾದರೂ ಸಿಕ್ಕರೆ, ಥಟ್ಟನೆ ನಿಂತು ಅವರಿಗೆ ನಮಸ್ಕರಿಸಿ ಅವರಿಗೆ ನಮ್ಮ ನೆನಪು ಮಾಡಿಕೊಡಲು ಪ್ರಯತ್ನಿಸುತ್ತೇವೆ. ಈ ಗುರು ಶಿಷ್ಯರ ಬಾಂಧವ್ಯ ಮಾತ್ರ ತುಂಬಾನೇ ಖುಷಿ ಕೊಡುವ ವಿಚಾರ ಅಂತ ಹೇಳಬಹುದು. ಅದರಲ್ಲೂ ನಾವು ಯಾವುದೋ ಒಂದು ಕೆಲಸದಲ್ಲಿದ್ದು, ಅಲ್ಲಿಗೆ ನಮ್ಮ ನೆಚ್ಚಿನ ಶಿಕ್ಷಕರು ಬಂದರೆ ಎಷ್ಟೊಂದು ಖುಷಿ ಆಗುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ.


30 ವರ್ಷಗಳ ನಂತರ ನೆಚ್ಚಿನ ಶಿಕ್ಷಕಿಯನ್ನು ಭೇಟಿಯಾದ ಫ್ಲೈಟ್ ಅಟೆಂಡೆಂಟ್!


ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿಯೂ ಸಹ ಇಂತಹದೇ ಘಟನೆ ನಡೆದಿದೆ ನೋಡಿ. ಈ ವೀಡಿಯೋದಲ್ಲಿ, ಭಾವುಕಳಾದ ಫ್ಲೈಟ್ ಅಟೆಂಡೆಂಟ್ ತನ್ನ ಶಾಲಾ ಶಿಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು.


"ನಿನ್ನೆ ನಾವು YYZ/LAX (ವೈವೈಝಡ್ / ಲ್ಯಾಕ್ಸ್) ನಿಂದ ನಮ್ಮ ವಿಮಾನವನ್ನು ಹತ್ತಿದ್ದಾಗ ನಮ್ಮ ವೆಸ್ಟ್‌ಜೆಟ್ ಸಿಎಸ್ಎಗಳಲ್ಲಿ ಒಬ್ಬರು ಮತ್ತು ಅವರ ಶಿಕ್ಷಕಿಯ ನಡುವಿನ ಈ ಭೇಟಿಯನ್ನು ನೋಡಲು ನಮಗೆ ತುಂಬಾನೇ ಸಂತೋಷವಾಯಿತು. ಅದೂ ಅಂತರರಾಷ್ಟ್ರೀಯ ಶಿಕ್ಷಕರ ದಿನದಂದು.. ಈ ಕ್ಷಣವನ್ನು ನಮ್ಮ ಸಿಬ್ಬಂದಿ, ಅತಿಥಿ ಮತ್ತು ಓ'ಕಾನ್ನೆಲ್ ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಲೋರಾ ಅವರಿಗೆ ತುಂಬಾನೇ ಧನ್ಯವಾದಗಳು" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.


ವೀಡಿಯೋ ಹೇಗೆ ಶುರುವಾಗುತ್ತೆ ನೋಡಿ..




ಈ ವೀಡಿಯೋವನ್ನು ಕಿಯೋನಾ ಥ್ರಾಶರ್ ಎಂಬ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಫ್ಲೈಟ್ ಅಟೆಂಡೆಂಟ್ ಲೋರಿ ವಿಮಾನದ ಮೈಕ್ರೊಫೋನ್ ನಲ್ಲಿ ಮಾತನಾಡುತ್ತಾಳೆ ಮತ್ತು ಶಾಲೆಯಲ್ಲಿ ಕಲಿಸಿದ ಒ'ಕಾನ್ನೆಲ್ ಗೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾಳೆ. "ಇಂದು ರಾಷ್ಟ್ರೀಯ ಶಿಕ್ಷಕರ ದಿನ ಆದ್ದರಿಂದ ನಾವು ನಮ್ಮ ಇಡೀ ಜೀವನದಲ್ಲಿ ಪಡೆದ ನೆಚ್ಚಿನ ಶಿಕ್ಷಕರನ್ನು ಗುರುತಿಸಬೇಕು. ನಾನು ಈಗ ಭಾವುಕಳಾಗಲಿದ್ದೇನೆ, ಆದರೆ ಇಂದು ನಾನು 1990 ರ ನನ್ನ ಶಿಕ್ಷಕಿ ಒ'ಕಾನ್ನೆಲ್ ಅವರನ್ನು ವಿಮಾನದಲ್ಲಿರುವುದನ್ನು ನೋಡಿದೆ" ಎಂದು ಅವರು ಹೇಳಿದರು.


ಇದನ್ನೂ ಓದಿ: Cheat In Exams: ಪರೀಕ್ಷೆಯಲ್ಲಿ ಪಾಸಾಗಲು ಹೀಗೂ ಕಾಪಿ ಹೊಡಿತಾರಾ!


ಸ್ವಲ್ಪ ಸಮಯದ ನಂತರ, ಎಲ್ಲಾ ಪ್ರಯಾಣಿಕರು ಅವಳಿಗಾಗಿ ಜೋರಾಗಿ ಚಪ್ಪಾಳೆಯನ್ನು ನೀಡುವುದನ್ನು ಕಾಣಬಹುದು. ಭಾವುಕರಾದ ಫ್ಲೈಟ್ ಅಟೆಂಡೆಂಟ್ ಮುಂದುವರಿಸಿ "ಅವರು ಎಂದಿಗೂ ನನ್ನ ನೆಚ್ಚಿನ ಶಿಕ್ಷಕಿ ಮತ್ತು ನಾನು 1990 ರಿಂದ ಅವರನ್ನು ನೋಡಿಲ್ಲ. ಇವರು ನನ್ನನ್ನು ಷೇಕ್ಸ್‌ಪಿಯರ್ ನನ್ನು ಇಷ್ಟಪಡುವಂತೆ ಮಾಡಿದರು, ನನ್ನನ್ನು ಪಿಯಾನೋ ನುಡಿಸುವಂತೆ ಮಾಡಿದರು, ಎಲ್ಲದಕ್ಕೂ ಧನ್ಯವಾದಗಳು ಒ'ಕಾನೆಲ್. ನಾನು ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇನೆ" ಎಂದು ಹೇಳಿದರು. ನಂತರ ಲೋರಿ ತನ್ನ ಶಿಕ್ಷಕಿಯ ಬಳಿ ಹೋಗಿ ತಬ್ಬಿಕೊಂಡರು.


ಇದನ್ನೂ ಓದಿ: ಚಂದ್ರ ರೂಪಗೊಂಡಿದ್ದು ಗಂಟೆಗಳಲ್ಲಿ, ಶತಮಾನಗಳ ಅವಧಿಯಲಲ್ಲ ಅಂದ್ರೆ ನಂಬ್ತೀರಾ?


ವೀಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ..


75 ಸೆಕೆಂಡುಗಳ ಈ ಕ್ಲಿಪ್ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 965 ಕಾಮೆಂಟ್ ಗಳನ್ನು ಸಹ ಗಳಿಸಿದೆ. ಅನೇಕ ಇಂಟರ್ನೆಟ್ ಬಳಕೆದಾರರು ತಮ್ಮ ಶಿಕ್ಷಕರನ್ನು ಮತ್ತು ಅವರು ತಮ್ಮ ಜೀವನವನ್ನು ಹೇಗೆ ರೂಪಿಸಿದ್ದಾರೆ ಎಂಬುದನ್ನು ನೆನಪಿಸಿಕೊಂಡರು.


"ವೀಡಿಯೋ ತುಂಬಾ ಸುಂದರವಾಗಿದೆ, ನನ್ನ ಶಿಕ್ಷಕರನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಹೈಸ್ಕೂಲ್ ಇಂಗ್ಲಿಷ್ ಶಿಕ್ಷಕಿ ಜೇನ್ ಸೈಬರ್ಗ್ ಅವರು ನನ್ನ ನೆಚ್ಚಿನ ಶಿಕ್ಷಕಿ. ಅವರು ನನಗೆ ಬರೆಯಲು, ಸಾಹಿತ್ಯ ಮತ್ತು ರಂಗಭೂಮಿಯನ್ನು ಪ್ರೀತಿಸಲು ಕಲಿಸಿದರು"ಎಂದು ಬಳಕೆದಾರರೊಬ್ಬರು ಹೇಳಿದರು.

First published: