ಇತ್ತೀಚಿನ ದಿನಗಳಲ್ಲಿ ಕೆಲವು ಜನರು ಪಬ್ಲಿಸಿಟಿ (Publicity) ಮತ್ತು ಪ್ವಾಪುಲ್ಯಾರಿಟಿಯನ್ನು (Popularity) ತುಂಬಾನೇ ಇಷ್ಟ ಪಡ್ತಾರೆ. ಅದಕ್ಕೆ ಸರಿಯಾಗಿ ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ಗಳು ಅಂತಹವರಿಗೆ ತುಂಬಾನೇ ಅವಕಾಶಗಳನ್ನು ನೀಡ್ತಾಯಿದೆ. ಇಂದು ಸಣ್ಣ ಸಣ್ಣ ವಿಚಾರಗಳೂ ಸಹ ಅತಿ ವೇಗವಾಗಿ ವೈರಲ್ (Viral) ಆಗುತ್ತದೆ. ಕೆಲವೊಂದು ನೋಡುಗರರನ್ನು ಆಕರ್ಷಿಸಿದರೆ ಇನ್ನೂ ಕೆಲವು ಜಾಗೃತಿ ಮೂಡಿಸುತ್ತದೆ. ಮತ್ತೆ ಕೆಲವು ನೋಡುಗರನ್ನು ಎಂಟರ್ಟೈನ್ (Entertainment) ಮಾಡುತ್ತದೆ. ಇದೀಗ ಅಂತಹದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೈದ್ರಾಬಾದಿನ (Hyderabad) ಮೆಟ್ರೋದಲ್ಲಿ (Metro) ಹುಡುಗಿಯೊಬ್ಬಳು ರೀಲ್ಸ್ ಡ್ಯಾನ್ಸ್ (Reels Dance) ಮಾಡಿದ್ದು. ಈ ವೀಡಿಯೋ ವೈರಲ್ (Viral Video) ಆಗುತ್ತಿದೆ.
ಇನ್ಸ್ಟ್ರಗ್ರಾಂ ರೀಲ್ಸ್ ಗಾಗಿ ಮೆಟ್ರೋದಲ್ಲಿ ಡ್ಯಾನ್ಸ್ ಮಾಡಿದ ಹುಡುಗಿ
ತನ್ನ ಸ್ನೇಹಿತರ ಜೊತೆಗೆ ಹೈದ್ರಾಬಾದ್ ಮೆಟ್ರೋಗೆ ಬಂದಿದ್ದ ಮೆರೂನ್ ಟಾಪ್ ಮತ್ತು ಜೀನ್ಸ್ ಧರಿಸಿದ್ದ ಯುವತಿಯೊಬ್ಬಳು ಮೆಟ್ರೋದ ಒಳಗೆ ಪ್ರಯಾಣಿಕರ ಮುಂದೆಯೇ ರೀಲ್ಸ್ ಮಅಡಿದ್ದಾಳೆ. ಅವಳು ಒಂದು ತಮಿಳು ಹಾಡಿಗೆ ರೀಲ್ಸ್ ಡ್ಯಾನ್ಸ್ ಮಾಡಿದ್ದಾಳೆ. ಮತ್ತು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral Photo: ಹೊಟ್ಟೆ ತೋರಿಸಿ ದುಡ್ಡು ಮಾಡ್ತಾಳೆ ಈ ಮಹಿಳೆ! ಎಂಥಾ ಕಾಲ ಬಂತಪ್ಪಾ!
Dear Hyderabad Metro Rail @hmrgov @ltmhyd
I still don't understand on what charges you filed a case against her.
Instead, you could use this video to promote Metro with caption "Hyderabad Metro, Entertainment Plus Safety, Avoid Traffic, Now Travel in Metro"
Think Differently pic.twitter.com/18uiV9JyNY
— Krish Raj Murari (@KrishRajMurari) July 20, 2022
ಇನ್ನೊಬ್ಬ ಬಳಕೆದಾರರು "ನಾನು ಚೀನಾದಲ್ಲಿದ್ದಾಗ, ಹಳೆಯ ಜನರು ಸಂಗೀತದೊಂದಿಗೆ ಫುಟ್‌ಪಾತ್‌ನಲ್ಲಿ ನೃತ್ಯ ಮಾಡುವುದನ್ನು ನಾನು ನೋಡಿದೆ. ಹಾಗೆಯೇ ಈ ವೀಡಿಯೋ ನೋಡಲು ತುಂಬಾ ಆಹ್ಲಾದಕರವಾಗಿದೆ." ಎಂದು ಹೇಳಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕೆಂಬ ಕಾರಣಕ್ಕಾಗಿ ಈ ರೀತಿಯಾದ ಹುಚ್ಚಾಟ ಮಾಡುತ್ತಾರೆ ಎಂದರು.
ಮೆಟ್ರೋ ಅಧಿಕಾರಿಗಳಿಗೆ ವೀಡಿಯೋ ಟ್ಯಾಗ್ ಮಾಡಿದ ನೆಟ್ಟಿಗರು
ಟ್ವಿಟರ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡ ನೆಟ್ಟಿಗರು ಹೈದ್ರಬಾದಿನ ಮೆಟ್ರೋ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಮೆಟ್ರೋದಲ್ಲಿ ಇಂತಹ ಕ್ರಮಗಳನ್ನು ಏಕೆ ಅನುಮತಿಸಲಾಗಿದೆ ಎಂದು ವೀಡಿಯೊಗಳನ್ನು ನೋಡಿದ ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ. ಇದು ಯಾವ ರೀತಿಯ ತೊಂದರೆ? ಮೆಟ್ರೋ ರೈಲುಗಳಲ್ಲಿ ಹೀಗಾಗುತ್ತಿರುವುದು ನಿಮಗೆ ಸರಿಯೇ? ನೀವು ಹೈದರಾಬಾದ್ ಮೆಟ್ರೋ ನಿಲ್ದಾಣಗಳನ್ನು ಪಿಕ್ನಿಕ್ ಪ್ರದೇಶಗಳು ಮತ್ತು ನೃತ್ಯ ವೇದಿಕೆಗಳಾಗಿ ಪರಿವರ್ತಿಸಿದ್ದೀರಾ? ಎಂದು ಆಕ್ರೋಶಗೊಂಡ ನೆಟ್ಟಿಗರು ಇದರ ಕುರಿತು ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಪ್ರತಿಕ್ರಿಯಿಸಿದ ಹೈದ್ರಾಬಾದ್ ಮೆಟ್ರೋ ಅಧಿಕಾರಿಗಳು
ನೆಟ್ಟಿಗರ ಆಕ್ರೋಶಗೊಂಡ ಕಮೆಂಟ್ಗಳನ್ನು ಗಮನಿಸಿದ ಮೆಟ್ರೋ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದ್ದಾರೆ. ವರದಿಯ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯಾಗಿ ವರ್ತಿಸಿದ ಹುಡುಗಿಯ ವಿರುದ್ದ ದಂಡ ವಿಧಿಸಲು ಹೈದರಬಾದ್ ಮೇಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: Kareena In Traffic Light: ಟ್ರಾಫಿಕ್ ಲೈಟ್ನಲ್ಲಿ ಕರೀನಾ! ಬಾಲಿವುಡ್ ಚೆಲುವೆಗೆ ವಾಹನ ಸವಾರರು ಫಿದಾ
ಈ ರೀತಿಯಾಗಿ ಸಾರ್ವಜನಿಕ ವಲಯದಲ್ಲಿ ಜನರ ವರ್ತನೆಯು ಹೀಗೆಯೇ ಮುಂದುವರಿದರೆ ಇದು ಸಂಸ್ಕೃತಿ, ಸಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ಈ ರೀತಿಯಾದ ವರ್ತನೆಗಳು ಅಲ್ಲಿನ ನೀತಿ ನಿಯಮಗಳಿಗೂ ವಿರುದ್ಧವಾಗಿದೆ. ಯಾರೊಬ್ಬರಿಗೂ ಇನ್ನೊಬ್ಬರಿಗೆ ತೊಂದರೆ ಕೊಡುವಂತಹ ಅಧಿಕಾರವಿಲ್ಲ. ಈ ರೀತಿ ಮಾಡಿದ್ದಲ್ಲಿ ಅವರ ವಿರುದ್ಧ ಜನ ದೂರು ಸಲ್ಲಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ