• Home
 • »
 • News
 • »
 • trend
 • »
 • Nora Fatehi: ನೋರಾ ಫತೇಹಿಯಂತೆ ರಸ್ತೆ ನಡುವಿನಲ್ಲಿ ದಿಲ್ಬರ್​ ಹಾಡಿಗೆ ಹೆಜ್ಜೆ ಹಾಕಿದ ಯುವತಿ! ವಿಡಿಯೋ ಇಲ್ಲಿದೆ

Nora Fatehi: ನೋರಾ ಫತೇಹಿಯಂತೆ ರಸ್ತೆ ನಡುವಿನಲ್ಲಿ ದಿಲ್ಬರ್​ ಹಾಡಿಗೆ ಹೆಜ್ಜೆ ಹಾಕಿದ ಯುವತಿ! ವಿಡಿಯೋ ಇಲ್ಲಿದೆ

ರಸ್ತೆ ನಡುವಿನಲ್ಲಿ ಹುಡುಗಿಯ ಡ್ಯಾನ್ಸ್​

ರಸ್ತೆ ನಡುವಿನಲ್ಲಿ ಹುಡುಗಿಯ ಡ್ಯಾನ್ಸ್​

ಸದ್ಯ ಸಾಮಾಜಿಕ ಜಾಲತಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲೂ ಕೆಲವರು ಹುಡುಗಿಯ ಡ್ಯಾನ್ಸ್​ ನೋಡಿ ಕಾಮೆಂಟ್​ ಬರೆಯುತ್ತಿದ್ದಾರೆ. ಅದರಲ್ಲೊಬ್ಬ ‘‘ಗಟ್ಸ್​ ಲೆವೆಲ್​- ಪ್ರೊ ಮ್ಯಾಕ್ಸ್​​‘‘ ಎಂದು ಕಾಮೆಂಟ್​ ಬರೆದಿದ್ದಾನೆ.

 • Share this:

  ನೋರಾ ಫತೇಹಿ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಬಾಲಿವುಡ್ (Bollywood)​ ಮಂದಿಗೆ ಮಾತ್ರವಲ್ಲ, ಬಹುತೇಕ ಭಾರತೀಯರಿಗೆ ನೋರಾ ಫತೇಹಿ ಬಗ್ಗೆ ಗೊತ್ತೇ ಇದೆ. ಅದರಲ್ಲೂ ಅವರು ಸೊಂಟ ಬಳುಕಿಸಿದ ಹಾಡಿನ ಬಗ್ಗೆ ತಿಳಿದೇ ಇದೆ. ಹಾಗಾಗಿ ನೋರಾ ಫತೇಹಿ (Nora Fatehi) ಅಂದ್ರೆ ಪಡ್ಡೆ ಹುಡುಗರಿಗೆ ಅಚ್ಚು ಮೆಚ್ಚು. ಆದರೆ ವಿಚಾರ ಅದಲ್ಲ. ಇಲ್ಲೊಬ್ಬಳು ಹುಡುಗಿ (Girl) ಯಾರಿಗೂ ಹಿಂಜರಿಯದೆ ನೋರಾ ಫತೇಹಿ ಡ್ಯಾನ್ಸ್​ (Dance) ಮಾಡಿರುವ ಡಿಲ್ಬರ್ (Dilbar)​ ಹಾಡಿಗೆ ಸೊಂಟ ಬಳುಕಿಸಿದ್ದಾಳೆ. ಆದರೆ ಹುಡುಗಿ ರಸ್ತೆ ನಡುವಿನಲ್ಲೇ ಡ್ಯಾನ್ಸ್​ ಮಾಡಿದ್ದಾಳೆ. ಈ ವಿಡಿಯೋ (Video) ಒಮ್ಮೆ ನೋಡಿ


  ಸದ್ಯ ಹುಡುಗಿಯ ವಿಡಿಯೋ ವೈರಲ್​ ಆಗಿದೆ. ಅನೇಕರು ಹುಡುಗಿಯ ವಿಡಿಯೋ ನೋಡಿ ಸಂತಸ ಪಟ್ಟಿದ್ದಾರೆ. ಮಜಾ ಸಂಗತಿ ಎಂದರೆ ಹುಡುಗಿ ದಿಲ್ಬರ್​ ಹಾಡಿದೆ ನೃತ್ಯ ಮಾಡಿತ್ತಿರುವುದನ್ನು ಕಂಡಂತೆ, ಹಿಂಭಾಗದಲ್ಲಿ ರಿಕ್ಷಾ ಡ್ರೈವರ್​ ಒಬ್ಬ ಅದೇ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ ಈ ವಿಡಿಯೀ ಸಾಮಾಜಿಕ ಜಾಲತಾಣದಲ್ಲಿ ಬೈರಲ್ ಆಗಿದೆ. ಅನೇಕರು ಈ ವಿಡಿಯೋ ಕಂಡು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.


  ಸದ್ಯ ಸಾಮಾಜಿಕ ಜಾಲತಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲೂ ಕೆಲವರು ಹುಡುಗಿಯ ಡ್ಯಾನ್ಸ್​ ನೋಡಿ ಕಾಮೆಂಟ್​ ಬರೆಯುತ್ತಿದ್ದಾರೆ. ಅದರಲ್ಲೊಬ್ಬ ‘‘ಗಟ್ಸ್​ ಲೆವೆಲ್​- ಪ್ರೊ ಮ್ಯಾಕ್ಸ್​​‘‘ ಎಂದು ಕಾಮೆಂಟ್​ ಬರೆದಿದ್ದಾನೆ. ಆಕೆಯ ಡ್ಯಾನ್ಸ್​ಗಿಂತ ಆತನ ಡ್ಯಾನ್ಸ್​​ ಎಲ್ಲವನ್ನು ಮೀರಿಸಿದೆ ಎಂದು ಮತ್ತೊಬ್ಬ ಕಾಮೆಂಟ್​ ಬರೆದ್ದಾನೆ.


  ಇದನ್ನೂ ಓದಿ: Heart Health: ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ  ಇದನ್ನೂ ಓದಿ: Zomato: ಲೇಟಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಎತ್ತಿದ ಗ್ರಾಹಕ, ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು!


  ಮಗದೊಬ್ಬ, ಹುಡುಗಿಯ ಡ್ಯಾನ್ಸ್​ ನೋಡಿ, ಆಕೆ ಯಾಕೆ ಬರಿಗಾಲಿನಲ್ಲಿ ನೃತ್ಯ ಮಾಡುತ್ತಿದ್ದಾಳೆ ಎಂದು ಕಾಮೆಂಟ್​ ಮಾಡಿದ್ದಾನೆ. ಸದ್ಯ ಹುಡುಗಿಯ ವಿಡಿಯೋ ವೈರಲ್​ ಆಗುತ್ತಿದೆ.


  CarterX: ವಿಮಾನ ಪ್ರಯಾಣಿಕರು ಲಗೇಜ್​ ಕೊಂಡೊಯ್ಯುವ ಟೆನ್ಷನ್​ ಬಿಟ್ಟುಬಿಡಿ! ಯಾಕಂದ್ರೆ ಕಾರ್ಟರ್​ಎಕ್ಸ್​ ನಿಮಗೆ ಸಹಾಯ ಮಾಡುತ್ತೆ ನೋಡಿ


  ವಿಮಾನದಲ್ಲಿ ಪ್ರಯಾಣಿಸುವವರಿಗೆ ದೊಡ್ಡ ತಲೆನೋವೆಂದರೆ ಲಗೇಜ್​ಗೆ ಕಾಯುವುದು. ಅದರಲ್ಲೂ ಕೆಲವೊಮ್ಮೆ ದೂರ ಪ್ರಯಾಣ ಮಾಡುವ ವೇಳೆ ಲಗೇಜ್ (baggage) ಕಾಯಬೇಕಾದ ಪರಿಸ್ಥಿತಿ ನಿಮಾರ್ಣವಾಗುತ್ತದೆ​. ಈ ವರ್ಷದ ಆರಂಭದಲ್ಲಿ, ಚೆನ್ನೈ (Chennai) ವಿಮಾನ ನಿಲ್ದಾಣಕ್ಕೆ ಆಗಮಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಲಗೇಜ್ ಪಡೆಯಲು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಆದರೆ ಪ್ರಯಾಣಿಕರ ಸಂಕಷ್ಟವನ್ನು ಅರಿತುಕೊಂಡು ಬೆಂಗಳೂರು ಮೂಳದ ಸ್ಟಾರ್ಟ್​ಅಪ್​ ಕಾರ್ಟರ್​​​ಎಕ್ಸ್ (CarterX)​​​ ಇದರ ನಿರ್ವಾಹಣೆಯನ್ನು ಮಾಡಲು ಮುಂದಾಗಿದೆ.


  2030 ರ ವೇಳೆಗೆ ಭಾರತವು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ವಿಮಾನ ಪ್ರಯಾಣಿಕರ ಮಾರುಕಟ್ಟೆಯಾಗಿ ಹೊರಹೊಮ್ಮುವ ನಿರೀಕ್ಷೆಯನ್ನು ಹೊಂದಿದೆ. ಆದರೆ ಲಗೇಜ್​ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಆದರೆ ಬೆಂಗಳೂರು ಮೂಲದ ಕಾರ್ಟರ್​​​ಎಕ್ಸ್​ ಈ ಸಮಸ್ಯೆಯನ್ನು ಹೋಗಲಾಡಿಸಲಿದೆ.  ಇದನ್ನೂ ಓದಿ: Kawasaki W175 Launch: ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಕವಾಸಕಿ W175 ಬೈಕ್​! ರೆಟ್ರೋ ರೈಡರ್​ಗಳಿಗೆ ಹೇಳಿ ಮಾಡಿಸಿದಂತಿದೆ


  ಹರ್ಷ ವರ್ಧನ್​ ಅವರೊಂದಿಗೆ ಸಾಫ್ಟ್‌ವೇರ್, ನಿರ್ಮಾಣ ಮತ್ತು ಹೂಡಿಕೆಯಲ್ಲಿ 14 ವರ್ಷಗಳ ಅನುಭವದೊಂದಿಗೆ ಬರುವ ರಮ್ಯಾ ರೆಡ್ಡಿ ಕೈಜೋಡಿಸಿಕೊಂಡು ಈ ಸಂಸ್ತೇಯನ್ನು ಮುನ್ನಡೆಸುತ್ತಿದ್ದಾರೆ.

   ಏನಿದು ಕಾರ್ಟರ್​​​ಎಕ್ಸ್​​?

  ಅಂದಹಾಗೆಯೇ, ಕಾರ್ಟರ್​​​ಎಕ್ಸ್​​ ಭಾರತದಾದ್ಯಂತ ವಿಮಾನ ಪ್ರಯಾಣಿಕರಿಗೆ ನಿರ್ಮಾಣವಾದ ಬ್ಯಾಗೇಜ್ ಅಸಿಸ್ಟೆಂಟ್ ಸ್ಟಾರ್ಟ್ಅಪ್ ಆಗಿದೆ. ಇದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸಹಾಯ ಮತ್ತು ಬಾಗಿಲಿನಿಂದ ವಿಮಾನ ನಿಲ್ದಾಣಕ್ಕೆ ಪಿಕ್ ಮತ್ತು ಡ್ರಾಪ್ ಬ್ಯಾಗೇಜ್ ಸೇವೆಗಳಂತಹ ಸೇವೆಯನ್ನು ನೀಡುತ್ತದೆ.


  ಕಾರ್ಟರ್​​​ಎಕ್ಸ್​​​ ವಿಮಾನ ಪ್ರಯಾಣಿಕರ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಿಮಾನ ನಿಲ್ದಾಣವನ್ನು ಪ್ರವೇಶಿಸಲು/ನಿರ್ಗಮಿಸಲು ದೀರ್ಘ ನಡಿಗೆಗಳು, ಕೌಂಟರ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.


  ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನ ಎಲ್ಲಾ ಟರ್ಮಿನಲ್‌ಗಳಲ್ಲಿ ಸಂಪೂರ್ಣ ಡಿಜಿಟಲ್ ಸೇವೆಯನ್ನು ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ.


  ಇನ್ನು ಕಾರ್ಟರ್​​​ಎಕ್ಸ್​​​ ಬ್ಯಾಗೇಜ್ ಅನ್ನು ತ್ವರಿತವಾಗಿ ಎತ್ತಿಕೊಂಡು ಮೊದಲ ಮೈಲಿನಿಂದ ಕೊನೆಯ ಮೈಲಿವರೆಗೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ. ಅಧಿಸೂಚನೆ ಮತ್ತು ಟ್ರ್ಯಾಕಿಂಗ್‌ ಸೇವೆಯ ಮೂಲಕ ಸಾಗಿಸಲಾಗುತ್ತದೆ.


  ಅಂದಹಾಗೆಯೇ ಈ ಸ್ಟಾರ್ಟ್ಅಪ್​ ಪಿಕ್ ಅಪ್ ಮತ್ತು ಡೆಲಿವರಿಗಾಗಿ 24x7 ಸ್ಲಾಟ್ ಆಧಾರಿತ ಸೇವೆಯನ್ನು ನೀಡುತ್ತದೆ. ಅದರ ಇತರ ಸೇವೆಗಳಲ್ಲಿ ಟ್ಯಾಂಪರ್-ಸ್ಪಷ್ಟ ಪ್ಯಾಕಿಂಗ್, ಪೂರಕ ವಿಮೆ, 24x7 ಬೆಂಬಲ ಮತ್ತು ಉಚಿತ ಕ್ಯಾನ್ಸಲ್​ ಮಾಡುವ ಆಯ್ಕೆಯನ್ನು ಒಳಗೊಂಡಿದೆ.


  ಪ್ರಸ್ತುತ ಕಾರ್ಟರ್​​​ಎಕ್ಸ್​ನಲ್ಲಿ 34 ಜನರ ತಂಡವು ನಾಲ್ಕು ವಿಮಾನ ನಿಲ್ದಾಣಗಳಲ್ಲಿ 24x7 ಸೇವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


  ಪ್ರಸ್ತುತ ವಿಮಾನ ಪ್ರಯಾಣಿಕರಿಗೆ ಮತ್ತು ಲಗೇಶ್​ ಕೊಂಡೊಯ್ಯುವ ತಲೆನೋವು ಇರುವವರಿಗೆ ಈ ಸೇವೆಯು ಸಹಾಯಕ್ಕೆ ಬರುತ್ತದೆ. ಅದರಲ್ಲೂ ಪ್ರಸ್ತುತತೆಗೆ ಇದು ತುಂಬಾ ಸಹಕಾರಿಯಾಗಿದೆ. ಬಹುತೇಕರು ಲಗೇಜ್​ ಕೊಂಡೊಯ್ಯಲು ಮತ್ತು ಪ್ರಯಾಣಿಸುವ ಸಮಯದಲ್ಲಿ ಇಂತಹ ತಲೆನೋವಿನಿಂದ ಬಳಲುತ್ತಿರುತ್ತಾರೆ. ಅದರೆ ಕಾರ್ಟರ್​​​ಎಕ್ಸ್​​​ ಇದನೆಲ್ಲಾ ಮೀರಿ ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಸಹಾಯ ಮಾಡುತ್ತಿದೆ.  Published by:Harshith AS
  First published: