ಕೈಗಳಿಲ್ಲದಿದ್ದರೂ ಬರವಣಿಗೆಯ ಮೂಲಕ ಅಭೂತಪೂರ್ವ ಸಾಧನೆ ಮಾಡಿದಳು

ಪ್ರತಿ ವರ್ಷದಂತೆ ಈ ಬಾರಿಯು ರೀಜನಲ್​ ಕ್ಯಾಥೋಲಿಕ್​ ಸ್ಕೂಲ್​ ಆಯೋಜಿಸಿದ ಪ್ರಿಂಟ್​ ರೈಟಿಂಗ್​ ಮತ್ತು ಸ್ಕ್ರಿಪ್ಟ್​ ವಿಭಾಗದಲ್ಲಿ ಬರವಣಿಗೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಸಾರಾ ಭಾಗವಹಿಸಿ ಕರ್ಸಿವ್​ ರೈಟಿಂಗ್​ ವಿಭಾಗದಲ್ಲಿ 2019ರ ನಿಕೊಲಾಸ್​ ಮ್ಯಾಕ್ಸಿಮ್​ ಅವಾರ್ಡ್​ ಗೆದ್ದಿದ್ದಾರೆ.

news18
Updated:April 22, 2019, 6:52 PM IST
ಕೈಗಳಿಲ್ಲದಿದ್ದರೂ ಬರವಣಿಗೆಯ ಮೂಲಕ ಅಭೂತಪೂರ್ವ ಸಾಧನೆ ಮಾಡಿದಳು
ಸಾರಾ ಹೈನೆಸ್ಲಿ
  • News18
  • Last Updated: April 22, 2019, 6:52 PM IST
  • Share this:
ಕೈಗಳಿದ್ದು ಸಾಧನೆ ಮಾಡದವರೇ ಹೆಚ್ಚು, ಆದರೆ ಕೈಗಳೇ ಇಲ್ಲದ 10 ವರ್ಷದ ಬಾಲಕಿಯೊಬ್ಬಳು ಬರವಣಿಗೆಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದು, ಇದೀಗ ಮುಂಗೈಗಳಿಲ್ಲದ ಬಾಲಕಿಗೆ ಸಾಧನೆ ವಿಶ್ವದಾದ್ಯಂತ ಗಮನ ಸೆಳೆದಿದೆ.

ಅಮೆರಿಕಾ ಮೆರಿಲ್ಯಾಂಡ್​ ಈ ಬಾಲಕಿಯ ಹೆಸರು ಸಾರಾ ಹೈನೆಸ್ಲಿ. ಹುಟ್ಟುತ್ತಲೇ ಮುಂಗೈಗಳಿಲ್ಲದೆ ಜನಿಸಿರುವ ಈ ಪುಟ್ಟ ಬಾಲಕಿ ಮೇರಿಲ್ಯಾಂಡ್​ನಲ್ಲಿರುವ ಸೆಂಟ್​ ಜಾನ್ಸ್​ ರೀಜನಲ್​ ಕ್ಯಾಥೋಲಿಕ್​ ಸ್ಕೂಲ್​ನಲ್ಲಿ ಮೂರನೇ ತರಗತಿ ಓದುತ್ತಿದ್ದಾಳೆ.

ಪ್ರತಿ ವರ್ಷದಂತೆ ಈ ಬಾರಿಯು ರೀಜನಲ್​ ಕ್ಯಾಥೋಲಿಕ್​ ಸ್ಕೂಲ್​ ಆಯೋಜಿಸಿದ ಪ್ರಿಂಟ್​ ರೈಟಿಂಗ್​ ಮತ್ತು ಸ್ಕ್ರಿಪ್ಟ್​ ವಿಭಾಗದಲ್ಲಿ ಬರವಣಿಗೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಸಾರಾ ಭಾಗವಹಿಸಿ ಕರ್ಸಿವ್​ ರೈಟಿಂಗ್​ ವಿಭಾಗದಲ್ಲಿ 2019ರ ನಿಕೊಲಾಸ್​ ಮ್ಯಾಕ್ಸಿಮ್​ ಅವಾರ್ಡ್​ ಗೆದ್ದಿದ್ದಾರೆ.

ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್​ಗೆ ಆಘಾತ ಕೊಟ್ಟ ಭಾರತದ ಕವೀಂದರ್ಸಾರಾಗೆ ಮುಂಗೈಗಳಿಲ್ಲದಿದ್ದರೂ ಆಕೆ ಕೃತಕ ಕೈಗಳನ್ನು ಎಂದಿಗೂ ಬಳಸಿಲ್ಲ. ಕೆಲವೊಮ್ಮೆ ಕತ್ತರಿಯಿಂದ ಪೇಪರ್​ ಕತ್ತರಿಸುವಾಗ ಆಕೆಗೆ ಸುಲಭವಾಗುವ ಸಾಧನವನ್ನು ನೀಡಿದರೆ ಆಕೆ ನಿರಾಕರಿಸಿತ್ತಾಳೆ. ನಾನು ಈ ಕೆಲಸವನ್ನು ಮಾಡಬಲ್ಲೆ ಎಂದು ಅದಕ್ಕೆ ಬೇಕಾದ ಮಾರ್ಗವನ್ನು ಆಕೆಯೇ ಕಂಡುಕೊಳ್ಳುತ್ತಾಳೆ ಎಂದು ಸಾರಾಳ ತಾಯಿ ಕ್ಯಾಥ್ರಿನ್​ ಹೇಳುತ್ತಾರೆ.

ಸಾರಾ ಬರವಣಿಗೆ ಮಾತ್ರವಲ್ಲ, ಚಿತ್ರ ಬಿಡಿಸೋದ ಹಾಗೂ ಕ್ರಾಫ್ಟ್​ ಕೂಡ ಮಾಡುತ್ತಾಳೆ ಮತ್ತು ಇಂಗ್ಲಿಷ್​ ಹಾಗೂ ಮ್ಯಾಂಡರಿನ್​ ಭಾಷೆಯಲ್ಲಿ ಬರೆಯುತ್ತಾಳೆ ಎಂದು ಸಾರಾ ಶಿಕ್ಷಕಿ ಚೆರಿಲ್​ ಹೇಳಿದ್ದಾರೆ.ಇನ್ನೂ ಸಾರಾ ಬರೆಯುವಾಗ ಎರಡು ಮುಂಗೈಗಳ ಮಧ್ಯೆ ಪೆನ್ಸಿಲ್​ ಹಿಡಿದುಕೊಂಡು ಬರೆಯುತ್ತಾಳೆ. ಕರ್ಸಿವ್​ ಬರೆಯೋದು ಅಂದರೆ ನನಗೆ ಕಲಾಕೃತಿ ರಚಿಸಿದ ಅನುಭವ ಆಗುತ್ತದೆ ಎನ್ನುತ್ತಾಳೆ ಸಾರಾ.

First published:April 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ